Saturday, June 14, 2025

Janaspandhan News

HomeGeneral NewsSuspend : ಹಣಕ್ಕೆ ಬೇಡಿಕೆಯಿಟ್ಟ ಆರೋಪ ; ಪಿಎಸ್ಐ ಸಸ್ಪೆಂಡ್.!
spot_img
spot_img

Suspend : ಹಣಕ್ಕೆ ಬೇಡಿಕೆಯಿಟ್ಟ ಆರೋಪ ; ಪಿಎಸ್ಐ ಸಸ್ಪೆಂಡ್.!

ಜನಸ್ಪಂದನ ನ್ಯೂಸ್, ದ.ಕ : ಹಣಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ವಿಟ್ಲ ಪೊಲೀಸ್ ಠಾಣೆಯ ಪಿಎಸ್ಐ ಓರ್ವರನ್ನು ಅಮಾನತು (Suspend) ಮಾಡಲಾಗಿದೆ.

ಅಕ್ರಮ ಜುಗಾರಿ ಅಡ್ಡೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಬೈಕ್ ವಶಪಡಿಸಿಕೊಂಡು, ನಂತರ ಹಣಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಪಿಎಸ್ಐ ಅವರನ್ನು ಕರ್ತವ್ಯದಿಂದ ಅಮಾನತು (Suspend) ಮಾಡಲಾಗಿದೆ.

ಇದನ್ನು ಓದಿ : Austria : ಶಾಲೆಯಲ್ಲಿ ಮಾಜಿ ವಿದ್ಯಾರ್ಥಿಯಿಂದ ಗುಂಡಿನ ದಾಳಿ ; 10 ಜನ ಬಲಿ.!

ವಿಟ್ಲ ಪೊಲೀಸ್ ಠಾಣೆಯ ಪಿಎಸ್ಐ ಕೌಶಿಕ್ ಬಿ.ಸಿ. ಎಂಬುವವರೆ ಹಣಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಅಮಾನತು (Suspend) ಆದ ಪಿಎಸ್ಐ.

ಅಕ್ರಮ ಜುಗಾರಿ ಅಡ್ಡೆ ಮೇಲೆ ಮೇ 8, 2025 ರಂದು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಅಮಾನತು (Suspend) ಆದೇಶ ಮೇ 12, 2025 ರಂದು ಹೊರಬಿದ್ದಿದೆ.

ಇದನ್ನು ಓದಿ : Sciatica : ಬೆನ್ನುಮೂಳೆಯಿಂದ ಪಾದಗಳವರೆಗೆ ಹರಡುವ ಈ ರೋಗ ಅಸಹನೀಯ ನೋವು ತರುತ್ತದೆ.

ಅಕ್ರಮ ಜುಗಾರಿ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಮೇ 8, 2025 ರಂದು ಪಿಎಸ್ಐ ಕೌಶಿಕ್ ಬಿ.ಸಿ. ಅವರು ಸಿಬ್ಬಂದಿಯೊಂದಿಗೆ ಅಡ್ಡೆ ಮೇಲೆ ದಾಳಿ ನಡೆಸಿದ್ದರು.

ದಾಳಿ ವೇಳೆ ಜುಗಾರಿ ಆಟದಲ್ಲಿ ತೊಡಗಿದ್ದ ಯಾರೂ ಸ್ಥಳದಲ್ಲಿ ಪತ್ತೆಯಾಗಿರಲಿಲ್ಲ, ಆದರೆ ಘಟನಾ ಸ್ಥಳದಲ್ಲಿ ಒಂದು ಮೋಟಾರು ಸೈಕಲ್ ಪತ್ತೆಯಾಗಿತ್ತು.

ಇದನ್ನು ಓದಿ : Video : ಕಂಠಪೂರ್ತಿ ಕುಡಿದು ಜನನಿಬಿಡ ರಸ್ತೆಯಲ್ಲಿ ಯುವತಿಯ ಡೊಂಬರಾಟ.!

ಕಾನೂನಾತ್ಮಕ ಕ್ರಮ ಜರುಗಿಸಬೇಕಾಗಿದ್ದ ಪಿಎಸ್ಐ ಅವರು, ಬೈಕ್ ಮಾಲಕನಿಗೆ ಕರೆ ಮಾಡಿ ಠಾಣೆಗೆ ಬರುವಂತೆ ತಿಳಿಸಿದ್ದಾರೆ.

ಬೈಕ್ ಬಿಡುಗಡೆಗೆ ಮೂರನೇ ವ್ಯಕ್ತಿಯ ಮೂಲಕ ಬೈಕ್ ಮಾಲೀಕನಿಗೆ ಹಣದ ಬೇಡಿಕೆಯಿಟ್ಟಿದ್ದು, ಅದರ ಸಂಭಾಷಣೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು.

ಇದನ್ನು ಓದಿ : Kiss : ವಾಕಿಂಗ್ ಮಾಡೋ ಹೆಣ್ಮಕ್ಕಳಿಗೆ ಮುತ್ತಿಟ್ಟು ಎಸ್ಕೇಪ್ ಅಗುತ್ತಿದ್ದ ಕಾಮುಕ ಅರೆಸ್ಟ್.!

ಈ ಕುರಿತು ಇಲಾಖಾ ಮಟ್ಟದಲ್ಲಿ ತನಿಖೆ ನಡೆದಿದ್ದು, ಆರೋಪದ ಸತ್ಯಾಸತ್ಯತೆ ದೃಢಪಟ್ಟ ಹಿನ್ನೆಲೆಯಲ್ಲಿ ಪಿಎಸ್ಐ ಕೌಶಿಕ್ ಬಿ.ಸಿ. ಅವರನ್ನು ಇಲಾಖಾ ಶಿಸ್ತು ಕ್ರಮ ಬಾಕಿಯಿರುವಂತೆ ಕರ್ತವ್ಯದಿಂದ ಅಮಾನತು (Suspend) ಗೊಳಿಸಿ ಜಿಲ್ಲಾ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ.

Mangli : ಗಾಯಕಿ ಮಂಗ್ಲಿಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ಗಾಂಜಾ ಮತ್ತು ವಿದೇಶಿ ಮದ್ಯ.!

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಜನಪ್ರಿಯ ಗಾಯಕಿ ಮಂಗ್ಲಿ (Mangli) ಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ವಿದೇಶಿ ಮದ್ಯ ಹಾಗೂ ಗಾಂಜಾ ಸಿಕ್ಕಿದೆ ಎಂದು ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಗಾಯಕಿ ಮಂಗ್ಲಿ ವಿರುದ್ಧ ಪ್ರಕರಣ ದಾಖಲಾಗಿದೆ.

ಗಾಯಕಿ ಮಂಗ್ಲಿ ಕನ್ನಡ ಹಾಗೂ ತೆಲುಗು (Kannada & Telagu) ಸೇರಿ ಹಲವು ಸಿನಿಮಾಗಳಲ್ಲಿ ಸೂಪರ್‌ ಹಿಟ್ ಹಾಡುಗಳಿಗೆ ಧ್ವನಿಯಾಗಿರುವ ಗಾಯಕಿ ಮಂಗ್ಲಿ (Mangli) ಗೆ ಪೊಲೀಸರು ಬಿಗ್‌ ಶಾಕ್‌ (Shock) ಕೊಟ್ಟಿದ್ದಾರೆ. ಸಿನಿಮಾ ಹಾಗೂ ತೆಲುಗಿನ ಜಾನಪದ ಗಾಯಕಿ ಮಂಗ್ಲಿ (Mangli) ರೆಸಾರ್ಟ್ ಒಂದರಲ್ಲಿ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಪಾರ್ಟಿಯನ್ನು ನೀಡಿದ್ದರು. ಈ ವೇಳೆ ಪೊಲೀಸರು ಮಾಹಿತಿ ಆಧಾರ ಮೇಲೆ ದಾಳಿ ನಡೆಸಿದ್ದು, ಆ ಪಾರ್ಟಿಯಲ್ಲಿ ವಿದೇಶಿ ಮದ್ಯ ಹಾಗೂ ಗಾಂಜಾ ಸಿಕ್ಕಿದೆ.

ಇದನ್ನು ಓದಿ : Bagalkot : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗವಕಾಶ.!

ಹೈದ್ರಾಬಾದ್‌ನ ಚೆವೆಲ್ಲಾದ ರೆಸಾರ್ಟ್‌ ಒಂದರಲ್ಲಿ ನಡೆದ ಜನಪ್ರಿಯ ಗಾಯಕಿ ಮಂಗ್ಲಿ (Mangli) ಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ವಿದೇಶಿ ಮದ್ಯ ಮತ್ತು ಗಾಂಜಾ ಪತ್ತೆಯಾಗಿದ್ದು, ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ವರದಿಗಳ ಪ್ರಕಾರ, ನಿನ್ನೆ ರಾತ್ರಿ ಚೆವೆಲ್ಲಾ ಪೊಲೀಸರು, ತ್ರಿಪುರಾ ರೆಸಾರ್ಟ್‌ನಲ್ಲಿ ಮಂಗ್ಲಿ (Mangli) ಯ ಹುಟ್ಟುಹಬ್ಬದ ಪಾರ್ಟಿಯ ಸಂದರ್ಭದಲ್ಲಿ ದಾಳಿ ನಡೆಸಿದ್ದಾರೆ.

ಇದನ್ನು ಓದಿ : Sciatica : ಬೆನ್ನುಮೂಳೆಯಿಂದ ಪಾದಗಳವರೆಗೆ ಹರಡುವ ಈ ರೋಗ ಅಸಹನೀಯ ನೋವು ತರುತ್ತದೆ.

ಈ ಪಾರ್ಟಿಯಲ್ಲಿ ಸುಮಾರು 50 ಮಂದಿ ಭಾಗಿಯಾಗಿದ್ದರೆಂದು ತಿಳಿದು ಬಂದಿದ್ದು, ಅಕ್ರಮವಾಗಿ ವಿದೇಶಿ ಮದ್ಯವನ್ನು ನೀಡಲಾಗಿತ್ತು ಮತ್ತು ಕೆಲ ವ್ಯಕ್ತಿಗಳು ಗಾಂಜಾ (ಗಾಂಜಾ) ಸೇವಿಸಿದ್ದಕ್ಕಾಗಿ ಸಿಕ್ಕಿಬಿದ್ದಿದ್ದಾರೆ.

ಪೊಲೀಸರ ಪೂರ್ವಾನುಮತಿ ಪಡೆಯದೆ ಪಾರ್ಟಿ ಆಯೋಜಿಸಿದ್ದಕ್ಕಾಗಿ ಮತ್ತು ಅಬಕಾರಿ ಇಲಾಖೆಯಿಂದ ಅನುಮತಿ ಪಡೆಯದೆ ಕಾರ್ಯಕ್ರಮದಲ್ಲಿ ಮದ್ಯ ಸೇವಿಸಿದ್ದಕ್ಕಾಗಿ ಮಂಗ್ಲಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಇದನ್ನು ಓದಿ : Austria : ಶಾಲೆಯಲ್ಲಿ ಮಾಜಿ ವಿದ್ಯಾರ್ಥಿಯಿಂದ ಗುಂಡಿನ ದಾಳಿ ; 10 ಜನ ಬಲಿ.!

ಅಗತ್ಯ ಅನುಮತಿಗಳಿಲ್ಲದೆ ಕಾರ್ಯಕ್ರಮಕ್ಕೆ ಅವಕಾಶ ನೀಡಿದ್ದಕ್ಕಾಗಿ ರೆಸಾರ್ಟ್‌ನ ಜನರಲ್ ಮ್ಯಾನೇಜರ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.

ಗಾಯಕ ದಿವಿ ಮತ್ತು ಗೀತರಚನೆಕಾರ ಕಸರ್ಲಾ ಶ್ಯಾಮ್‌ರಂತಹ ಉದ್ಯಮದ ಪ್ರಸಿದ್ಧ ವ್ಯಕ್ತಿಗಳು ಸೇರಿದಂತೆ ಮಂಗ್ಲಿ (Mangli) ಯ ಸ್ನೇಹಿತರು ಪಾರ್ಟಿಯಲ್ಲಿ ಭಾಗವಹಿಸಿದ್ದರು. ಅವರನ್ನೂ ಸಹ ನಿಗಾದಲ್ಲಿ ಇರಿಸಲಾಗಿದ್ದು, ಈ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಪೊಲೀಸರು ಅವರಿಗೆ ನೋಟಿಸ್ ನೀಡುವ ನಿರೀಕ್ಷೆಯಿದೆ.

ಇದನ್ನು ಓದಿ : ಮಾಮೂಲಿ ವಸೂಲಿ : PSI ಸೇರಿ 2 ಜನ ಲೋಕಾಯುಕ್ತ ಬಲೆಗೆ.!

ದಾಳಿಯ ಸಮಯದಲ್ಲಿ, ಪಾರ್ಟಿಯಲ್ಲಿ 48 ಜನರ ಮೇಲೆ ಗಾಂಜಾ ಪರೀಕ್ಷೆಗಳನ್ನು ನಡೆಸಿದ್ದು, ಅದರಲ್ಲಿ 9 ಜನರಿಗೆ ಪಾಸಿಟಿವ್ ಬಂದಿದೆ ಎಂದು ಹೇಳಲಾಗುತ್ತಿದ್ದು, ಪಾರ್ಟಿಯಲ್ಲಿ ಮಾದಕ ದ್ರವ್ಯ ಸೇವನೆಯ ಪ್ರಮಾಣವನ್ನು ಪರಿಶೀಲಿಸಲು ತನಿಖೆ ನಡೆಯುತ್ತಿದೆ. (ಏಜೇನ್ಸಿಸ್)

spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments