ಜನಸ್ಪಂದನ ನ್ಯೂಸ್, ಡೆಸ್ಕ್ : ಜನಪ್ರಿಯ ಗಾಯಕಿ ಮಂಗ್ಲಿ (Mangli) ಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ವಿದೇಶಿ ಮದ್ಯ ಹಾಗೂ ಗಾಂಜಾ ಸಿಕ್ಕಿದೆ ಎಂದು ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಗಾಯಕಿ ಮಂಗ್ಲಿ ವಿರುದ್ಧ ಪ್ರಕರಣ ದಾಖಲಾಗಿದೆ.
ಗಾಯಕಿ ಮಂಗ್ಲಿ ಕನ್ನಡ ಹಾಗೂ ತೆಲುಗು (Kannada & Telagu) ಸೇರಿ ಹಲವು ಸಿನಿಮಾಗಳಲ್ಲಿ ಸೂಪರ್ ಹಿಟ್ ಹಾಡುಗಳಿಗೆ ಧ್ವನಿಯಾಗಿರುವ ಗಾಯಕಿ ಮಂಗ್ಲಿ (Mangli) ಗೆ ಪೊಲೀಸರು ಬಿಗ್ ಶಾಕ್ (Shock) ಕೊಟ್ಟಿದ್ದಾರೆ. ಸಿನಿಮಾ ಹಾಗೂ ತೆಲುಗಿನ ಜಾನಪದ ಗಾಯಕಿ ಮಂಗ್ಲಿ (Mangli) ರೆಸಾರ್ಟ್ ಒಂದರಲ್ಲಿ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಪಾರ್ಟಿಯನ್ನು ನೀಡಿದ್ದರು. ಈ ವೇಳೆ ಪೊಲೀಸರು ಮಾಹಿತಿ ಆಧಾರ ಮೇಲೆ ದಾಳಿ ನಡೆಸಿದ್ದು, ಆ ಪಾರ್ಟಿಯಲ್ಲಿ ವಿದೇಶಿ ಮದ್ಯ ಹಾಗೂ ಗಾಂಜಾ ಸಿಕ್ಕಿದೆ.
ಇದನ್ನು ಓದಿ : Bagalkot : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗವಕಾಶ.!
ಹೈದ್ರಾಬಾದ್‌ನ ಚೆವೆಲ್ಲಾದ ರೆಸಾರ್ಟ್ ಒಂದರಲ್ಲಿ ನಡೆದ ಜನಪ್ರಿಯ ಗಾಯಕಿ ಮಂಗ್ಲಿ (Mangli) ಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ವಿದೇಶಿ ಮದ್ಯ ಮತ್ತು ಗಾಂಜಾ ಪತ್ತೆಯಾಗಿದ್ದು, ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ವರದಿಗಳ ಪ್ರಕಾರ, ನಿನ್ನೆ ರಾತ್ರಿ ಚೆವೆಲ್ಲಾ ಪೊಲೀಸರು, ತ್ರಿಪುರಾ ರೆಸಾರ್ಟ್‌ನಲ್ಲಿ ಮಂಗ್ಲಿ (Mangli) ಯ ಹುಟ್ಟುಹಬ್ಬದ ಪಾರ್ಟಿಯ ಸಂದರ್ಭದಲ್ಲಿ ದಾಳಿ ನಡೆಸಿದ್ದಾರೆ.
ಇದನ್ನು ಓದಿ : Sciatica : ಬೆನ್ನುಮೂಳೆಯಿಂದ ಪಾದಗಳವರೆಗೆ ಹರಡುವ ಈ ರೋಗ ಅಸಹನೀಯ ನೋವು ತರುತ್ತದೆ.
ಈ ಪಾರ್ಟಿಯಲ್ಲಿ ಸುಮಾರು 50 ಮಂದಿ ಭಾಗಿಯಾಗಿದ್ದರೆಂದು ತಿಳಿದು ಬಂದಿದ್ದು, ಅಕ್ರಮವಾಗಿ ವಿದೇಶಿ ಮದ್ಯವನ್ನು ನೀಡಲಾಗಿತ್ತು ಮತ್ತು ಕೆಲ ವ್ಯಕ್ತಿಗಳು ಗಾಂಜಾ (ಗಾಂಜಾ) ಸೇವಿಸಿದ್ದಕ್ಕಾಗಿ ಸಿಕ್ಕಿಬಿದ್ದಿದ್ದಾರೆ.
ಪೊಲೀಸರ ಪೂರ್ವಾನುಮತಿ ಪಡೆಯದೆ ಪಾರ್ಟಿ ಆಯೋಜಿಸಿದ್ದಕ್ಕಾಗಿ ಮತ್ತು ಅಬಕಾರಿ ಇಲಾಖೆಯಿಂದ ಅನುಮತಿ ಪಡೆಯದೆ ಕಾರ್ಯಕ್ರಮದಲ್ಲಿ ಮದ್ಯ ಸೇವಿಸಿದ್ದಕ್ಕಾಗಿ ಮಂಗ್ಲಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇದನ್ನು ಓದಿ : Austria : ಶಾಲೆಯಲ್ಲಿ ಮಾಜಿ ವಿದ್ಯಾರ್ಥಿಯಿಂದ ಗುಂಡಿನ ದಾಳಿ ; 10 ಜನ ಬಲಿ.!
ಅಗತ್ಯ ಅನುಮತಿಗಳಿಲ್ಲದೆ ಕಾರ್ಯಕ್ರಮಕ್ಕೆ ಅವಕಾಶ ನೀಡಿದ್ದಕ್ಕಾಗಿ ರೆಸಾರ್ಟ್‌ನ ಜನರಲ್ ಮ್ಯಾನೇಜರ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಗಾಯಕ ದಿವಿ ಮತ್ತು ಗೀತರಚನೆಕಾರ ಕಸರ್ಲಾ ಶ್ಯಾಮ್‌ರಂತಹ ಉದ್ಯಮದ ಪ್ರಸಿದ್ಧ ವ್ಯಕ್ತಿಗಳು ಸೇರಿದಂತೆ ಮಂಗ್ಲಿ (Mangli) ಯ ಸ್ನೇಹಿತರು ಪಾರ್ಟಿಯಲ್ಲಿ ಭಾಗವಹಿಸಿದ್ದರು. ಅವರನ್ನೂ ಸಹ ನಿಗಾದಲ್ಲಿ ಇರಿಸಲಾಗಿದ್ದು, ಈ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಪೊಲೀಸರು ಅವರಿಗೆ ನೋಟಿಸ್ ನೀಡುವ ನಿರೀಕ್ಷೆಯಿದೆ.
ಇದನ್ನು ಓದಿ : ಮಾಮೂಲಿ ವಸೂಲಿ : PSI ಸೇರಿ 2 ಜನ ಲೋಕಾಯುಕ್ತ ಬಲೆಗೆ.!
ದಾಳಿಯ ಸಮಯದಲ್ಲಿ, ಪಾರ್ಟಿಯಲ್ಲಿ 48 ಜನರ ಮೇಲೆ ಗಾಂಜಾ ಪರೀಕ್ಷೆಗಳನ್ನು ನಡೆಸಿದ್ದು, ಅದರಲ್ಲಿ 9 ಜನರಿಗೆ ಪಾಸಿಟಿವ್ ಬಂದಿದೆ ಎಂದು ಹೇಳಲಾಗುತ್ತಿದ್ದು, ಪಾರ್ಟಿಯಲ್ಲಿ ಮಾದಕ ದ್ರವ್ಯ ಸೇವನೆಯ ಪ್ರಮಾಣವನ್ನು ಪರಿಶೀಲಿಸಲು ತನಿಖೆ ನಡೆಯುತ್ತಿದೆ. (ಏಜೇನ್ಸಿಸ್)
ಮಾಮೂಲಿ ವಸೂಲಿ : PSI ಸೇರಿ 2 ಜನ ಲೋಕಾಯುಕ್ತ ಬಲೆಗೆ.!
ಜನಸ್ಪಂದನ ನ್ಯೂಸ್, ಕೋಲಾರ : ಬಾರ್ ಮಾಲೀಕರಿಂದ 10,000 ರೂ. ಲಂಚ ಪಡೆತುತ್ತಿದ್ದ ವೇಳೆ ಪಿಎಸ್‌ಐ (PSI) ಮತ್ತು ಪೊಲೀಸ್ ಕಾನ್ಸ್‌ಟೇಬಲ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಪೊಲೀಸ್ ಠಾಣೆಯಲ್ಲಿ ತಿಂಗಳ ಮಾಮೂಲಿ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ದಾಳಿ ನಡೆಸಿದ್ದು, ಠಾಣೆಯ ಸಿಬ್ಬಂದಿ ಹಾಗೂ ಪಿಎಸ್‌ಐ (PSI) ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಇದನ್ನು ಓದಿ : Telangana : ನದಿಗೆ ಈಜಲು ತೆರಳಿದ್ದ 10 ಜನರಲ್ಲಿ 6 ಜನರು ನದಿಯ ಪಾಲು.!
ಸ್ಥಳೀಯ ಬಾರ್ ಮಾಲೀಕರಿಂದ ಪ್ರತಿ ತಿಂಗಳು ನಿಯಮಿತವಾಗಿ ಮಾಮೂಲಿ ಹಣ ವಸೂಲಿ ಮಾಡುತ್ತಿದ್ದ ಶಂಕೆಯ ಹಿನ್ನಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಗೂಢಚರ್ಯೆಯಿಂದ ಮಾಹಿತಿಯನ್ನು ಸಂಗ್ರಹಿಸಿದ್ದರು.
ಓರ್ವ ಬಾರ್ ಮಾಲೀಕರಿಂದ ರೂ.10,000 ಲಂಚ ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ಪೇದೆ ಸುರೇಶ್ ತಕ್ಷಣವೇ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಸೋಮವಾರ ನಡೆದಿದೆ.
ಇದನ್ನು ಓದಿ : Kiss : ವಾಕಿಂಗ್ ಮಾಡೋ ಹೆಣ್ಮಕ್ಕಳಿಗೆ ಮುತ್ತಿಟ್ಟು ಎಸ್ಕೇಪ್ ಅಗುತ್ತಿದ್ದ ಕಾಮುಕ ಅರೆಸ್ಟ್.!
ಹಣ ಸಂಗ್ರಹಕ್ಕೆ PSI ಸೂಚನೆ.?
ಪ್ರಾಥಮಿಕ ವಿಚಾರಣೆ ವೇಳೆ ನಂಗಲಿ ಠಾಣೆಯ PSI ಅರ್ಜುನ್ ಗೌಡ ಅವರ ಸೂಚನೆಯ ಮೇರೆಗೆ ಹಣ ವಸೂಲಿ ಮಾಡಲಾಗುತ್ತಿತ್ತು ಎಂಬ ಮಾಹಿತಿಯನ್ನು ಲೋಕಾಯುಕ್ತರ ವಶದಲ್ಲಿರುವ PC ಸುರೇಶ್ ನೀಡಿದ್ದಾರೆ.
ಕೋಲಾರ ಲೋಕಾಯುಕ್ತ ಎಸ್ಪಿ ಧನುಂಜಯ ಕೂಡ ನಂಗಲಿ ಠಾಣೆಗೆ ಆಗಮಿಸಿ ತನಿಖೆಯ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಇದೀಗ ಠಾಣೆಯಲ್ಲಿ ನಡೆಯುತ್ತಿರುವ ತನಿಖೆಯ ನಂತರ ಇನ್ನಷ್ಟು ಅಂಶಗಳು ಬಹಿರಂಗವಾಗುವ ಸಾಧ್ಯತೆ ಇದೆ.