Saturday, July 12, 2025

Janaspandhan News

HomeGeneral Newsಗಸ್ತು ತಿರುಗುತ್ತಿದ್ದಾಗ SUV ಡಿಕ್ಕಿ : ಮಹಿಳಾ ಪೊಲೀಸ್ ಸಾವು, 2 ಜನರಿಗೆ ಗಾಯ.!
spot_img
spot_img

ಗಸ್ತು ತಿರುಗುತ್ತಿದ್ದಾಗ SUV ಡಿಕ್ಕಿ : ಮಹಿಳಾ ಪೊಲೀಸ್ ಸಾವು, 2 ಜನರಿಗೆ ಗಾಯ.!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ರಾತ್ರಿ ಗಸ್ತು ತಿರುಗುತ್ತಿದ್ದ ವೇಳೆ ಸ್ಕಾರ್ಪಿಯೋ ಎಸ್‌ಯುವಿ (SUV) ಒಂದು ಮೂವರಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳಾ ಪೊಲೀಸ್‌ ಕಾನ್ಸ್‌ಟೇಬಲ್‌ ಸಾವಿಗೀಡಾಗಿದ್ದು, ಇಬ್ಬರಿಗೆ ಗಾಯಗಳಾದ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

ಬುಧವಾರ ಮಧ್ಯರಾತ್ರಿ ನಿಯಮಿತ ವಾಹನ ತಪಾಸಣೆ ಕಾರ್ಯಾಚರಣೆಯ ಸಮಯದಲ್ಲಿ ಸ್ಕಾರ್ಪಿಯೋ ಎಸ್‌ಯುವಿ (SUV) ಮೂವರು ಪೊಲೀಸ್ ಸಿಬ್ಬಂದಿಯ ಮೇಲೆ ಹರಿದಿದ್ದು, ಒಬ್ಬ ಮಹಿಳಾ ಕಾನ್ಸ್‌ಟೇಬಲ್‌ ಮತ್ತು ಇಬ್ಬರು ಇನ್ಸ್‌ಪೆಕ್ಟರ್‌ಗಳು ಗಾಯಗೊಂಡಿದ್ದರು.

ಇದನ್ನು ಓದಿ : Sciatica : ಬೆನ್ನುಮೂಳೆಯಿಂದ ಪಾದಗಳವರೆಗೆ ಹರಡುವ ಈ ರೋಗ ಅಸಹನೀಯ ನೋವು ತರುತ್ತದೆ.

ದುರ್ದೈವಶಾತ್‌ ಸ್ಕಾರ್ಪಿಯೋ ಎಸ್‌ಯುವಿ (SUV) ರಭಸವಾಗಿ ಗುದ್ದಿದ ಏಟಿಗೆ ಇಂದು ಬೆಳಿಗ್ಗೆ ಮಹಿಳಾ ಕಾನ್ಸ್‌ಟೇಬಲ್‌ ಸಾವನ್ನಪ್ಪಿದ್ದರೆ, ಗಾಯಗೊಂಡಿರುವ ಇತರ ಇಬ್ಬರು ಅಧಿಕಾರಿಗಳ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ.

ಪಾಟ್ನಾದ ಶ್ರೀಕೃಷ್ಣ ಪುರಿ ಪ್ರದೇಶದ ಬಳಿಯ ಅಟಲ್ ಪಾತ್‌ನಲ್ಲಿ ಈ ಘಟನೆ ನಡೆದಿದ್ದು, ಚೆಕ್‌ಪೋಸ್ಟ್‌ನಲ್ಲಿ ಕಪ್ಪು ಬಣ್ಣದ ಸ್ಕಾರ್ಪಿಯೋ (SUV) ಪೊಲೀಸ್ ಬ್ಯಾರಿಕೇಡ್‌ಗಳನ್ನು ಡಿಕ್ಕಿ ಹೊಡೆದು ಪೊಲೀಸ್ ಸಿಬ್ಬಂದಿಗೆ ಡಿಕ್ಕಿ ಹೊಡೆದಿದೆ.

ಇದನ್ನು ಓದಿ : Kiss : ವಾಕಿಂಗ್ ಮಾಡೋ ಹೆಣ್ಮಕ್ಕಳಿಗೆ ಮುತ್ತಿಟ್ಟು ಎಸ್ಕೇಪ್ ಅಗುತ್ತಿದ್ದ ಕಾಮುಕ ಅರೆಸ್ಟ್.!

ಅಪಘಾತ ನಡೆಯುತ್ತಿದಂತೆಯೇ ಸ್ಥಳದಿಂದ ಪರಾರಿಯಾಗಿದ್ದ SUV ಚಾಲಕನನ್ನು ಇಂದು ಬಂಧಿಸುವಲ್ಲಿ ಪೊಲೀಸರು  ಯಶಸ್ವಿಯಾಗಿದ್ದಾರೆ. ಬಂಧಿತ ಚಾಲಕನನ್ನು ನಿಖಿಲ್ ಎಂದು ಗುರುತಿಸಲಾಗಿದೆ. ಭೂ ಕಂದಾಯ ಅಧಿಕಾರಿಯ ಪುತ್ರನಾದ ನಿಖಿಲ್‌, ಈ ಹಿಂದೆ ಅತಿ ವೇಗದ ಚಾಲನೆಗಾಗಿ ದಂಡ ವಿಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಬಗ್ಗೆ ತಿಳಿಯುತ್ತಿದಂತೆಯೇ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು ಮತ್ತು ಗಾಯಗೊಂಡ ಅಧಿಕಾರಿಗಳನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಇದನ್ನು ಓದಿ : Mangli : ಗಾಯಕಿ ಮಂಗ್ಲಿಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ಗಾಂಜಾ ಮತ್ತು ವಿದೇಶಿ ಮದ್ಯ.!

ಶ್ರೀಕೃಷ್ಣ ಪುರಿ ಪೊಲೀಸ್ ಠಾಣೆಯಲ್ಲಿ ನಿಯೋಜಿತರಾಗಿದ್ದ ಮೂವರು ಭದ್ರತಾ ಸಿಬ್ಬಂದಿ ಅಟಲ್ ಪಥ್‌ನಲ್ಲಿ ವಾಹನಗಳನ್ನು ಪರಿಶೀಲಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಭದ್ರತಾ ಸಿಬ್ಬಂದಿ ಕಾರೊಂದನ್ನು ಪರಿಶೀಲಿಸುತ್ತಿದ್ದಾಗ, ವೇಗವಾಗಿ ಬಂದ ಸ್ಕಾರ್ಪಿಯೋ ಎಸ್‌ಯುವಿ (SUV) ಕಾರು ಹಿಂಭಾಗದಿಂದ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಿಬ್ಬಂದಿಗೆ ಗಾಯಗಳಾಗಿದವು. ಅಪಘಾತದ ನಂತರ ಕಾರಿನ ಚಾಲಕ ತಕ್ಷಣ ಸ್ಥಳದಿಂದ ಪರಾರಿಯಾಗುವಲ್ಲಿ ಯಶಸ್ವಿಯಾದ ಎಂದು ಪಾಟ್ನಾ ಪೊಲೀಸ್ ಅಧಿಕಾರಿ ಅವಕಾಶ್ ಕುಮಾರ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

Scorpio SUV accident video :

MECL : ಮಿನಿರಲ್ ಎಪ್ಲೋರೇಷನ್ & ಕನ್ಸಲ್ಟೆನ್ಸಿ ಲಿಮಿಟೆಡ್‌ನಲ್ಲಿ ಉದ್ಯೋಗವಕಾಶ.!

ಜನಸ್ಪಂದನ ನ್ಯೂಸ್‌, ನೌಕರಿ : ಮಿನಿರಲ್ ಎಪ್ಲೋರೇಷನ್ & ಕನ್ಸಲ್ಟ್ಅನ್ಸಿ ಲಿಮಿಟೆಡ್ (MECL) ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

ಇದನ್ನು ಓದಿ : ಮಾಮೂಲಿ ವಸೂಲಿ : PSI ಸೇರಿ 2 ಜನ ಲೋಕಾಯುಕ್ತ ಬಲೆಗೆ.!
MECL ನೇಮಕಾತಿ – 2025 :
ಹುದ್ದೆಗಳ ಮಾಹಿತಿ :
  • ಇಲಾಖೆ ಹೆಸರು : ಮಿನಿರಲ್ ಎಪ್ಲೋರೇಷನ್ & ಕನ್ಸಲ್ಟೆನ್ಸಿ ಲಿಮಿಟೆಡ್ (MECL).
  • ಹುದ್ದೆಗಳ ಸಂಖ್ಯೆ : 108.
  • ಹುದ್ದೆಗಳ ಹೆಸರು : ಸಹಾಯಕ, ಕಿರಿಯ ಚಾಲಕ ಸೇರಿ ವಿವಿಧ ಹುದ್ದೆಗಳು.
  • ಉದ್ಯೋಗ ಸ್ಥಳ : ಅಖಿಲ ಭಾರತ.
  • ಅಪ್ಲಿಕೇಶನ್ ಮೋಡ್ : Online ಮೋಡ್.
ಇದನ್ನು ಓದಿ : Austria : ಶಾಲೆಯಲ್ಲಿ ಮಾಜಿ ವಿದ್ಯಾರ್ಥಿಯಿಂದ ಗುಂಡಿನ ದಾಳಿ ; 10 ಜನ ಬಲಿ.!
ಹುದ್ದೆಗಳ ಹೆಸರು ಮತ್ತು ಸಂಖ್ಯೆ :

Post Name

No of Posts

Accountant

6

Hindi Translator

1

Technician (Survey & Draftsman)

15

Technician (Sampling)

2

Technician (Laboratory)

3

Assistant (Materials)

16
Assistant (Accounts)

10

Stenographer (English)

4

Assistant (Hindi)

1

Electrician

1

Machinist

5

Technician (Drilling)

12

Mechanic

1

Mechanic & Operator (Drilling)

25
Junior Driver

6

ಇದನ್ನು ಓದಿ : Mangli : ಗಾಯಕಿ ಮಂಗ್ಲಿಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ಗಾಂಜಾ ಮತ್ತು ವಿದೇಶಿ ಮದ್ಯ.!
ವೇತನ ಶ್ರೇಣಿ :
  • MECL ಯ ಅಧಿಕೃತ ಅಧಿಸೂಚನೆಗಳ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.19,600/- ರಿಂದ ರೂ.55,900/– ರವರೆಗೆ ಸಂಬಳ ನೀಡಲಾಗುವುದು.
ವಯೋಮಿತಿ :
  • MECL ಯ  ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಗರಿಷ್ಠ 30 (as on 20-May-2025.) ವಯೋಮಿತಿ ಹೊಂದಿರಬೇಕು.
ವಯೋಮಿತಿ ಸಡಿಲಿಕೆ :
  • OBC (NCL) ಅಭ್ಯರ್ಥಿಗಳು : 03 ವರ್ಷ.
  • SC/ST ಅಭ್ಯರ್ಥಿಗಳು : 05 ವರ್ಷ.
  • PWD (General) ಅಭ್ಯರ್ಥಿಗಳು : 10 ವರ್ಷ.
  • PWD (OBC-NCL) ಅಭ್ಯರ್ಥಿಗಳು : 13 ವರ್ಷ.
  • PWD (SC/ST) ಅಭ್ಯರ್ಥಿಗಳು : 15 ವರ್ಷ.
ಇದನ್ನು ಓದಿ : Suspend : ಹಣಕ್ಕೆ ಬೇಡಿಕೆಯಿಟ್ಟ ಆರೋಪ ; ಪಿಎಸ್ಐ ಸಸ್ಪೆಂಡ್.!
ಅರ್ಜಿ ಶುಲ್ಕ :
  • SC/ST/PwD/Ex-Serviceman/Departmental ಅಭ್ಯರ್ಥಿಗಳು : ಯಾವುದೇ ಶುಲ್ಕ ಇಲ್ಲ.
  • General/OBC/EWS ಅಭ್ಯರ್ಥಿಗಳು : ರೂ.500/-
  • Mode of Payment : Online
ವಿದ್ಯಾರ್ಹತೆ :
  • MECL ಯ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು SSLC, ITI, B.Com, B.Sc, ಪದವಿ ಅಥವಾ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
ಆಯ್ಕೆ ವಿಧಾನ :
  • ಲಿಖಿತ ಪರೀಕ್ಷೆ ಮತ್ತು ಸಂದರ್ಶನ (Written test and interview).
  • ದಾಖಲೆ ಪರಿಶೀಲನೆ (ಕೌಶಲ್ಯ ಪರೀಕ್ಷೆ – ವ್ಯಾಪಾರ ಪರೀಕ್ಷೆ)
ಇದನ್ನು ಓದಿ : Kidney stones : ಕಿಡ್ನಿ ಸ್ಟೋನ್ ಸಮಸ್ಯೆಯೇ.? ಹಾಗಾದ್ರೆ ಕುಡಿಯಿರಿ ಈ 1 ವಿಶೇಷ ಜ್ಯೂಸ್.!
ಅರ್ಜಿ ಸಲ್ಲಿಸುವುದು ಹೇಗೆ?
  • ಕೆಳಗಿನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಸೂಚನೆಯನ್ನು ಪಾಲಿಸಿ.
  • ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ.
  • ಕೆಳಗಿನ ಆನ್‌ಲೈನ್ ಅಪ್ಲಿಕೇಶನ್‌ಗಳ Linkನ್ನು ಕ್ಲಿಕ್ ಮಾಡಿ.
  • ಕೊಟ್ಟಿರುವ Formನ್ನು ಸರಿಯಾಗಿ ಭರ್ತಿ ಮಾಡಿ.
  • ಅರ್ಜಿ ಶುಲ್ಕದ ಪಾವತಿ (ವಿನಂತಿಸಿದರೆ ಮಾತ್ರ)
  • ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.
  • ಮತ್ತೊಮ್ಮೆ ಪರಿಶೀಲಿಸಿ ಮತ್ತು Formನ್ನು ಸಲ್ಲಿಸಿ.
  • ಕೊನೆಯದಾಗಿ ಸಲ್ಲಿಸಿದ ಅರ್ಜಿಯನ್ನು ಮುದ್ರಿಸಲು (Print) ಮರೆಯಬೇಡಿ.
ಪ್ರಮುಖ ದಿನಾಂಕಗಳು :
  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 14-Jun-2025.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-Jul-2025.
ಇದನ್ನು ಓದಿ : ತಾಯಿಗೆ ವಿಡಿಯೋ crazy : ಸಮುದ್ರದ ಅಲೆಗಳ ಮುಂದೆ ನಿಂತ ಬಾಲಕಿ ; ಮುಂದೆನಾಯ್ತು.?
ಪ್ರಮುಖ ಲಿಂಕ್‌ಗಳು :

Disclaimer : The above given information is available On online, candidates should check it properly before applying. This is for information only.

- Advertisement -
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments