Saturday, July 12, 2025

Janaspandhan News

HomeCrime NewsAccident : ಅಥಣಿ ಬಳಿ ಭೀಕರ ಅಪಘಾತಕ್ಕೆ 3 ಜನರ ಸಾವು.!
spot_img
spot_img

Accident : ಅಥಣಿ ಬಳಿ ಭೀಕರ ಅಪಘಾತಕ್ಕೆ 3 ಜನರ ಸಾವು.!

- Advertisement -

ಜನಸ್ಪಂದನ ನ್ಯೂಸ್‌, ಬೆಳಗಾವಿ : ಬೆಳಗಾವಿ ಜಿಲ್ಲೆಯ ಅಥಣಿಯ ಬಣಜವಾಡ ಕಾಲೇಜು ಬಳಿಯ ವಿಜಯಪುರ-ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತ (Accident) ದಲ್ಲಿ ಮೂವರು ಬಲಿಯಾಗಿದ್ದಾರೆ. ಗುರುವಾರ ತಡ ರಾತ್ರಿ ಈ ದುರ್ಘಟನೆ (Accident) ಸಂಭವಿಸಿದೆ.

ಕೊಲ್ಲಾಪುರ (Kolhapur) ಜಿಲ್ಲೆ ಶಿರೋಳ ತಾಲೂಕು ಗಣೇಶವಾಡಿ ಗ್ರಾಮದ ಮಹೇಶ್ ಸುಭಾಷ್ ಗಾತಾಡೆ (30), ಶಿರೋಳ ತಾಲೂಕು ಪುಡವಾಡ (Pudawad) ಗ್ರಾಮದ ಶಿವಂ ಯುವರಾಜ್ ಚವಾಣ್ (24) ಮತ್ತು ಸಾಂಗ್ಲಿ ಜಿಲ್ಲೆ ಮಿರಜ್ ತಾಲೂಕಿನ ಕವಲಾಪುರ ಗ್ರಾಮದ ಸಚಿನ್ ವಿಲಾಸ್ ಮಾಳಿ (42) ಅಪಘಾತ (Accident) ನಡೆದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನು ಓದಿ : Suspend : ಹಣಕ್ಕೆ ಬೇಡಿಕೆಯಿಟ್ಟ ಆರೋಪ ; ಪಿಎಸ್ಐ ಸಸ್ಪೆಂಡ್.!

ಮೊದಲಿಗೆ ಕಾಗವಾಡ (Kagawad) ಕಡೆಯಿಂದ ಕೆಂಪು ಇಟ್ಟಿಗೆ ಸಾಗಿಸುತ್ತಿದ್ದ ಲಾರಿ ಮತ್ತು ಅಥಣಿಯಿಂದ ಕಾಗವಾಡಕ್ಕೆ ತೆರಳುತ್ತಿದ್ದ ಪಿಕಪ್ ವಾಹನದ ನಡುವೆ ಅಪಘಾತ (Accident) ವಾಗಿದೆ. ಗಾಯಗೊಂಡ ಚಾಲಕ ಮತ್ತು ಕ್ಲೀನರ್ ಸಹಾಯಕ್ಕೆ ಬೇಡಿಕೊಳ್ಳುತ್ತಿದ್ದರು.

ಇದನ್ನು ಗಮನಿಸಿದ ಸ್ಕಾರ್ಪಿಯೋ (Scorpio) ಚಾಲಕ ತನ್ನ ವಾಹನವನ್ನು ಬದಿಗೆ ಸರಿಸಿ ಅವರನ್ನು ರಕ್ಷಿಸಲು ಮುಂದಾದಾಗ ಅಥಣಿ ಕಡೆಯಿಂದ ಬಂದ ಇನೋವಾ (Innova) ಕಾರು ನೇರವಾಗಿ ರಕ್ಷಿಸಲು ಮುಂದಾದ ವ್ಯಕ್ತಿಗೆ ಡಿಕ್ಕಿ ಹೊಡೆದು ಈ ಘಟನೆ (Accident) ಸಂಭವಿಸಿದೆ.

ಇದನ್ನು ಓದಿ : Ahmedabad : 243 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಅಪಘಾತ.!

ದುರ್ಘಟನೆ (Accident) ಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು ಅಥಣಿಯ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಲಾರಿ, ಪಿಕಪ್ ವಾಹನ, ಇನೋವಾ ಮತ್ತು ಸ್ಕಾರ್ಪಿಯೋ ನಡುವೆ ಈ ಅಪಘಾತ (Accident) ಸಂಭವಿಸಿದೆ.

ಇನೋವಾದಲ್ಲಿದ್ದ ಇಬ್ಬರೂ ಸೇರಿ ಒಟ್ಟು ಮೂವರು ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ. ಮೊದಲು ಅಪಘಾತವಾಗಿದ್ದ ಲಾರಿ ಹಾಗೂ ಪಿಕಪ್ ವಾಹನದ ಚಾಲಕ, ಕ್ಲೀನರ್​ಗಳು ಗಾಯಾಳುಗಳಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರೆದಿದೆ.

ನಿಮಗಿದು ಗೊತ್ತೇ.? non-stick pan ನಲ್ಲಿ ಅಡುಗೆ ಮಾಡಿದರೆ ಎಷ್ಟೊಂದು ಹಾನಿ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಈಗಂತೂ ಎಲ್ಲರ ಅಡುಗೆ ಮನೆಯಲ್ಲಿ ನಾನ್​-ಸ್ಟಿಕ್ ಪ್ಯಾನ್​ (non-stick pan) ಕಡ್ಡಾಯವಾಗಿ ಇದ್ದೆ ಇರುತ್ತೆ. ಅದರಲ್ಲಿ ನಿಮ್ಮ ಅಡುಗೆ ಮಾಡುವುದರಿಂದ ನಿಮಗೆ ಖುಷಿಯಾಗುತ್ತದೆ. ಆದ್ರೆ ನೆನಪಿರಲಿ ನಿಮ್ಮ ಅಡುಗೆ ಮನೆಯಲ್ಲಿರುವ ನಾನ್ ಸ್ಟಿಕ್ ಪ್ಯಾನ್​ ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ.

ಕೆಲವು ದಿನಗಳ ಹಿಂದೆ 267 ಜನರಲ್ಲಿ ಪಾಲಿಮರ್ ಫ್ಯೂಮ್ ಫೀವರ್ ಅನ್ನೋ ಅಪರೂಪದ ಕಾಯಿಲೆ ಕಾಣಿಸಿಕೊಂಡಿದೆ ಎಂದು ಅಮೆರಿಕದ ಪಾಯ್ಸನ್ ಸೆಂಟರ್ ವರದಿ ಮಾಡಿದೆ.

ಇದನ್ನು ಓದಿ : Suspend : ಹಣಕ್ಕೆ ಬೇಡಿಕೆಯಿಟ್ಟ ಆರೋಪ ; ಪಿಎಸ್ಐ ಸಸ್ಪೆಂಡ್.!

ಇದಕ್ಕೆ ಕಾರಣ ಬಿಸಿಯಾದ ನಾನ್​ ಸ್ಟಿಕ್ ಪ್ಯಾನ್​ (non-stick pan) ನಿಂದ ಆಚೆ ಬರುವ ಹೊಗೆ ಕಾರಣ ಎಂದು ಹೇಳಲಾಗುತ್ತಿದೆ. ಅದರ ಹೊಗೆಯನ್ನು ಸೇವಿಸಿದ ಮಹಿಳೆಯರಲ್ಲಿ ಈ ರೀತಿಯ ಒಂದು ಜ್ವರ ಕಾಣಿಸಿಕೊಂಡಿದೆ.

ಇನ್ನೂ ಪ್ಯಾನ್ (non-stick pan) ಬಿಸಿಯಿಂದಾಗಿ ಹೊಗೆ ಮೂಲಕ ಹೊರ ಬರುವ ವಿಷಕಾರಿ ಹೊಗೆಯನ್ನು ಸೇವಿಸುವುದರಿಂದ ಉಸಿರಾಟದಲ್ಲಿ ತೊಂದರೆ, ಕಫಾ, ತಲೆನೋವು, ತಲೆ ಸುತ್ತುವುದು, ಸುಸ್ತು, ವಾಂತಿಯಂತಹ ಆರೋಗ್ಯ ಸಮಸ್ಯೆಗಳು ಕಾಡುತ್ತವೆ ಎಂದು ಫರಿದಾಬಾದ್​ಬನ ಏಷಿಯಾ ಆಸ್ಪತ್ರೆಯ ವೈದ್ಯರಾದ ಸಂತೋಷ್ ಕುಮಾರ್ ಅಗ್ರವಾಲ್ ಹೇಳಿದ್ದಾರೆ.

ನಾನ್‌ಸ್ಟಿಕ್ ಪ್ಯಾನ್‌ (non-stick pan) ನಲ್ಲಿ ತರಹೇವಾರಿ ಅಡುಗೆ ಮಾಡ್ತಿದ್ರೆ ಹುಷಾರ್‌, ಯುಎಸ್‌ನಲ್ಲಿ ಈ ಪಾತ್ರೆಯಿಂದ ಸಂಭವಿಸಬಹುದಾದ ರೋಗಗಳು ಹೆಚ್ಚಾಗಿವೆ ಎಂದು ವರದಿಯಾಗಿವೆ.

ಇದನ್ನು ಓದಿ : Mangli : ಗಾಯಕಿ ಮಂಗ್ಲಿಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ಗಾಂಜಾ ಮತ್ತು ವಿದೇಶಿ ಮದ್ಯ.!

ವರದಿಯನುಸಾರ ಪಾಲಿಮರ್ ಫ್ಯೂಮ್ ಜ್ವರ ಎಂದೂ ಕರೆಯಲ್ಪಡುವ ಟೆಫ್ಲಾನ್ ಜ್ವರದಿಂದಾಗಿ ಕಳೆದ ವರ್ಷ 250 ಕ್ಕೂ ಹೆಚ್ಚು ಅಮೇರಿಕನ್ನರು ಆಸ್ಪತ್ರೆ ಪಾಲಾಗಿದ್ದರು. ಈ ವರ್ಷವೂ ಈ ಜ್ವರ ಸದ್ದು ಮಾಡ್ತಿದೆ ಎಂದು ವರದಿಗಳು ತಿಳಿಸಿವೆ.

ಏನಿದು ಟೆಫ್ಲಾನ್ ಜ್ವರ?

ಈ ಜ್ವರವು ಇದು ಟೆಫ್ಲಾನ್ ಕುಕ್‌ವೇರ್‌ನಿಂದ ಬರುವುದು. ಈ ಪಾತ್ರೆಯನ್ನು ಸರಿಯಾಗಿ ಬಳಸದಿದ್ದಾಗ ಈ ಜ್ವರ ಬರುವ ಸಾಧ್ಯತೆ ಇದೆ. ನಾನ್‌ ಸ್ಟಿಕ್ ಕುಕ್‌ವೇರ್ (non-stick pan) ನ್ನು ಅತಿಯಾಗಿ ಬಿಸಿ ಮಾಡುವುದು ಅಥವಾ ಪ್ಯಾನ್‌ಗಳನ್ನು ಸ್ಕ್ರಾಚಿಂಗ್ ಮಾಡುವುದರಿಂದ ಹೊರಬರುವ ಲೇಪನದಲ್ಲಿನ ರಾಸಾಯನಿಕಗಳು ಬಿಸಿಯಾದ ಮೇಲೆ ವಿಷಕಾರ ಹೊಗೆಯನ್ನು ಬಿಡುಗಡೆ ಮಾಡುತ್ತವೆ. ಈ ಕಾರಣದಿಂದ ಜ್ವರ ಬರುತ್ತದೆ.

ಅಲ್ಲದೇ ನಾನ್‌ಸ್ಟಿಕ್ ಪ್ಯಾನ್‌ (non-stick pan) ನಿಂದ ಬರುವ ಈ ರೋಗವು ತಲೆನೋವು, ಮೈ-ಕೈ ನೋವು, ಜ್ವರ, ಶೀತ ಮತ್ತು ನಡುಕದಂತಹ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಟೆಫ್ಲಾನ್ ಜ್ವರದ ಲಕ್ಷಣಗಳು ತಕ್ಷಣವೇ ಇಲ್ಲಾ, ಸ್ವಲ್ಪ ಸಮಯದ ನಂತರ ಬೆಳೆಯಬಹುದು.

ಇದನ್ನು ಓದಿ : Kidney stones : ಕಿಡ್ನಿ ಸ್ಟೋನ್ ಸಮಸ್ಯೆಯೇ.? ಹಾಗಾದ್ರೆ ಕುಡಿಯಿರಿ ಈ 1 ವಿಶೇಷ ಜ್ಯೂಸ್.!

ತಜ್ಞರು ಕೂಡ, ಪ್ಯಾನ್‌ ಬಿಸಿ ಮಾಡಿದಾಗ ಅದರಿಂದ ಬರುವ ಹೊಗೆಯು ದೇಹ ಸೇರಿದಾಗ ಶ್ವಾಸಕೋಶದಲ್ಲಿನ ಕಿರಿಕಿರಿಯು ಜ್ವರದಂತಹ ಲಕ್ಷಣಗಳಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.

ಟೆಫ್ಲಾನ್ ಎಂದರೇನು?

ಪಾಲಿಟೆಟ್ರಾಫ್ಲೋರೋಎಥಿಲೀನ್ ಎಂದು ಕರೆಯಲ್ಪಡುವ ಟೆಫ್ಲಾನ್ ಕಾರ್ಬನ್ ಮತ್ತು ಫ್ಲೋರಿನ್ ಅನ್ನು ಹೊಂದಿರುವ ಸಿಂಥೆಟಿಕ್ ರಾಸಾಯನಿಕವಾಗಿದೆ. ಇದು ಪ್ರತಿಕ್ರಿಯಾತ್ಮಕವಲ್ಲದ, ನಾನ್ ಸ್ಟಿಕ್ ಮತ್ತು ಮೃದುವಾದ ಲೇಪನವನ್ನು ಮೇಲ್ಮೈಗೆ ಒದಗಿಸುತ್ತದೆ. ಇದರಿಂದ ಆಹಾರ ತಳ ಹಿಡಿಯದೇ ಸುಲಭವಾಗಿ ಅಡುಗೆ ಮಾಡಬಹುದು.

ಸಾಮಾನ್ಯವಾಗಿ ನಾವು ಟೆಫ್ಲಾನ್ ಎಂದು ಕರೆಯಲ್ಪಡುವ ಪಾಲಿಟೆಟ್ರಾಫ್ಲೋರೋ ಎಥಿಲೀನ್ (PTFE) ವಸ್ತುವಿನಿಂದ ಲೇಪಿತವಾದ ನಾನ್‌ಸ್ಟಿಕ್ ಪ್ಯಾನ್‌ನಲ್ಲಿ ಅಡುಗೆ ಮಾಡುವುದರೆ ಅದು ಸುರಕ್ಷಿತ.

ಇದನ್ನು ಓದಿ : Ahmedabad : 243 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಅಪಘಾತ.!

ನಾನ್‌ ಸ್ಟಿಕ್ ಪ್ಯಾನ್ (non-stick pan) ನ್ನು 500 ಡಿಗ್ರಿ ಫ್ಯಾರನ್‌ ಹೀಟ್‌ಗಿಂತ ಹೆಚ್ಚಿನ ತಾಪಮಾನದಲ್ಲಿ ಬಿಸಿ ಮಾಡಿದಾಗ, ಕೆಲವು ನಾನ್‌ಸ್ಟಿಕ್ ಪ್ಯಾನ್‌ಗಳ ಮೇಲಿನ ಲೇಪನವು ಹದಗೆಡಲು ಪ್ರಾರಂಭಿಸಬಹುದು.

ಆಕ್ಸಿಡೀಕೃತ, ಫ್ಲೋರಿನೇಟೆಡ್ ಪದಾರ್ಥಗಳ ಸಂಕೀರ್ಣ ಮಿಶ್ರಣವನ್ನು ಗಾಳಿಯಲ್ಲಿ ಬಿಡುಗಡೆ ಮಾಡಬಹುದು. ಈ ಹಾನಿಕಾರಕ ಪದಾರ್ಥಗಳನ್ನು ಹೊಗೆಯ ರೂಪದಲ್ಲಿ ಉಸಿರಾಡುವುದರಿಂದ ಈ ರೀತಿಯ ಅಸ್ವಸ್ಥತೆ ಸಂಭವಿಸಬಹುದು.

ನಾನ್‌ಸ್ಟಿಕ್ ಪ್ಯಾನ್‌ (non-stick pan)ಗಳು ಕಡಿಮೆ ಸಮಯದಲ್ಲಿ ಬೇಗ ಬಿಸಿಯಾಗಬಹುದು, ಆದ್ದರಿಂದ ನಾನ್‌ಸ್ಟಿಕ್ ಪ್ಯಾನ್‌ಗಳನ್ನು ಪೂರ್ವಭಾವಿಯಾಗಿ ಕಾಯಿಸುವುದನ್ನು ನಿಲ್ಲಿಸಿ. ಟೆಫ್ಲಾನ್ ಪ್ಯಾನ್ ಅನ್ನು ಹೆಚ್ಚಿನ ತಾಪಮಾನಕ್ಕೆ ಬಿಸಿ ಮಾಡುವುದನ್ನು ತಪ್ಪಿಸಬೇಕು. ಯಾವಾಗಲೂ ಎಣ್ಣೆ, ತುಪ್ಪ, ಬೆಣ್ಣೆ ಇಂತವುಗಳನ್ನು ಹಾಕಿ ಬಿಸಿ ಮಾಡಬೇಕು.

ಇದನ್ನು ಓದಿ : ಗಸ್ತು ತಿರುಗುತ್ತಿದ್ದಾಗ SUV ಡಿಕ್ಕಿ : ಮಹಿಳಾ ಪೊಲೀಸ್ ಸಾವು, 2 ಜನರಿಗೆ ಗಾಯ.!

ಇನ್ನೂ ಈ ಪ್ಯಾನ್‌ ಅನ್ನು ಹೆಚ್ಚು ಬಿಸಿ ಮಾಡಿ ಅಡುಗೆ ಮಾಡುತ್ತಾರೋ, ಅವರು ಈ ಹೊಗೆಯನ್ನು ತೆಗೆದುಕೊಳ್ಳುವ ಮೂಲಕ ಜ್ವರ ತರಹದ ಕಾಯಿಲೆಗಳ ಅಪಾಯಕ್ಕೆ ಒಳಗಾಗುತ್ತಾರೆ.

ತಾಮ್ರ, ಕಬ್ಬಿಣ, ಅಲ್ಯೂಮಿನಿಯಂ ಮತ್ತು ತವರ ಸೇರಿದಂತೆ ಈ ರೀತಿಯ ಲೋಹವನ್ನು ಬೆಸುಗೆ ಹಾಕುವ ಕೆಲಸಗಾರರಿಗೂ ಇದರ ಅಪಾಯ ಹೆಚ್ಚು. ಈ ಕೆಟ್ಟ ಪರಿಣಾಮಗಳನ್ನು ತಡೆಗಟ್ಟಲು ಸರಿಯಾದ ರಕ್ಷಣಾ ಸಾಧನಗಳನ್ನು ಇವರು ಬಳಸಬೇಕು.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

- Advertisement -
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments