ಜನಸ್ಪಂದನ ನ್ಯೂಸ್, ಡೆಸ್ಕ್ : ಕಾಲೇಜ್ ಕ್ಲಾಸ್ ಬಿಟ್ಟು, ನಡುಬೀದಿಯಲ್ಲಿ ವಿದ್ಯಾರ್ಥಿಗಳಿಬ್ಬರು ರೋಮ್ಯಾನ್ಸ್ (romance) ಆಗ್ ಲವ್ ಕ್ಲಾಸ್‌ಗೆ ಹಾಜರಾದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Love Is Blind ಅಂತ ಹೇಳಿ ನಡು ಬೀದಿಯಲ್ಲಿ ರೋಮ್ಯಾನ್ಸ್ (romance) ಮಾಡಲು ಮುಂದಾದರೆ ಏನಾಗುತ್ತದೆ ಅಂತ ಈ ವಿಡಿಯೋ ನೋಡಿದರೆ ತಿಳಿಯುತ್ತೆ. ಯಾವುದು ಎಲ್ಲಿ.? ಯಾವಾಗ.? ಎಂಬ ಪರಿಜ್ಞಾನ ಇಲ್ಲದಿದರೇ ಮಾನ ಮರ್ಯಾದಿ ಮೂರು ಕಾಸಿಗೆ ಹರಾಜ್ ಹಾಕಬೇಕಾಗುತ್ತೆ.
ಇದನ್ನು ಓದಿ : Kidney stones : ಕಿಡ್ನಿ ಸ್ಟೋನ್ ಸಮಸ್ಯೆಯೇ.? ಹಾಗಾದ್ರೆ ಕುಡಿಯಿರಿ ಈ 1 ವಿಶೇಷ ಜ್ಯೂಸ್.!
ಈ ಮಾನ ಮರ್ಯಾದಿ ಅಂತ ಇದ್ದೋರು ಹೀಗೆಲ್ಲಾ ನಡುಬೀದಿಯಲ್ಲಿ ರೋಮ್ಯಾನ್ಸ್ (romance) ಮಾಡೋದಿಲ್ಲ ಬಿಡಿ ಅಂತ ತಾವು ಅನ್ನುತ್ತಿದ್ದರೆ ಅದು ಅಷ್ಟೆ ನಿಜ.
ಈ ಪ್ರೀತಿಯಲ್ಲಿ ಬಿದ್ದವರಿಗೆ ಬಾಹ್ಯ ಪ್ರಪಂಚದ ಪರಿಜ್ಞಾನವೇ ಇಲ್ಲದೇ ತಮ್ಮದೇ ಲೋಕದಲ್ಲಿ ವಿಹರಿಸುತ್ತಾರೆ ಎಂದು ಹೇಳುವುದನ್ನು ನೀವು ಕೇಳಿರಬಹುದು. ಜೊತೆಗೆ ನಮ್ಮ ಸುತ್ತಮುತ್ತಲಿನಲ್ಲಿ ನಡೆಯುವ ಕೆಲವು ಘಟನೆಗಳನ್ನು ನೋಡಿದಾಗ ಈ ಮಾತು ನಿಜವೆನಿಸುತ್ತದೆ.
ಇದನ್ನು ಓದಿ : ಗಸ್ತು ತಿರುಗುತ್ತಿದ್ದಾಗ SUV ಡಿಕ್ಕಿ : ಮಹಿಳಾ ಪೊಲೀಸ್ ಸಾವು, 2 ಜನರಿಗೆ ಗಾಯ.!
ಕಳೆದ ಕೆಲ ದಿನಗಳ ಹಿಂದೆ ಮೆಟ್ರೋ ನಿಲ್ದಾಣದಲ್ಲಿಯೇ ಪ್ರೇಮಿಗಳಿಬ್ಬರು ರೋಮ್ಯಾನ್ಸ್ (romance) ಮಾಡೋ ವಿಡಿಯೋ ವೈರಲ್ ಆಗಿತ್ತು. ಅಷ್ಟೆ ಏಕೆ ಚಲಿಸುವ ಬೈಕ್ ಒಂದರಲ್ಲಿ ಯುವಕ ಯುವತಿಯರು ಸಾರ್ವಜನಿಕ ರಸ್ತೆಯಲ್ಲಿಯೇ ರೋಮ್ಯಾನ್ಸ್ (romance) ಮಾಡೋ ವಿಡಿಯೋ ಕೂಡ ವೈರಲ್ ಆಗಿದ್ದು ತಮಗೆ ಗೊತ್ತೇ ಇದೆ.
ಇಷ್ಟಾದರೂ ಸಹ ಆಗಾಗ ಈ ರೀತಿಯ ಅಸಭ್ಯವಾಗಿ ವರ್ತಿಸುವ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಇದೀಗ ಮತ್ತೇ ಪ್ರೇಮಿಗಳಿಬ್ಬರ ಅತಿರೇಕದ ವರ್ತನೆಯ (romance) ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ವಿದ್ಯಾರ್ಥಿಗಳು ಕಾಲೇಜ್ ಬಂಕ್ ಮಾಡಿ ನಡುಬೀದಿಯಲ್ಲೇ ರೋಮ್ಯಾನ್ಸ್ (romance) ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಇದನ್ನು ಓದಿ : Ahmedabad : 243 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಅಪಘಾತ.!
ವಿಡಿಯೋದಲ್ಲೇನಿದೆ.?
ಈ ವಿಡಿಯೋದಲ್ಲಿ ಕಾಲೇಜ್ ಬಂಕ್ ಮಾಡಿ ನಡುರಸ್ತೆಯಲ್ಲಿಯೇ ಯುವಕ-ಯುವತಿ ರೊಮ್ಯಾನ್ಸ್ ಮಾಡುತ್ತಿರುವುದನ್ನು ಕಾಣಬಹುದು. ವಿದ್ಯಾರ್ಥಿಗಳು ಕಿರಿದಾದ ಜನಸಂದಣಿಯಿಲ್ಲದ ಪ್ರದೇಶದಲ್ಲಿರುವ ಬೀದಿ ತಮ್ಮ ರೋಮ್ಯಾನ್ಸ್ (romance) ಗೆ ಹೇಳಿ ಮಾಡಿದಿಸಿದ ಸ್ಥಳವೆಂದು ಆಯ್ದುಕೊಂಡಿರಬಹುದು.
ವೈರಲ್ ವಿಡಿಯೋದಲ್ಲಿಯ ಯುವಕ (ವಿದ್ಯಾರ್ಥಿ) ಗೆಳತಿ (ವಿದ್ಯಾರ್ಥಿನಿ) ಯನ್ನು ಅಪ್ಪಿ ಮುದ್ದಾಡಿಕೊಳ್ಳುತ್ತಿರುವುದನ್ನು ಕಾಣಬಹುದು. ಹಾಗೇಯೆ ಅಪ್ಪಿಕೊಳ್ಳುತ್ತ ಯುವಕನು ಯುವತಿಯನ್ನು ಎತ್ತಿಕೊಂಡು ತಿರುಗಿಸುತ್ತಾನೆ. ಈ ದೃಶ್ಯವನ್ನು ಸ್ಥಳೀಯ ನಿವಾಆಸಯೊಬ್ಬರು ಮೊಬೈನ್‌ನಲ್ಲಿ ರಿಕಾರ್ಡ್ ಮಾಡಿಕೊಂಡಿದ್ದಾರೆ.
ಇದನ್ನು ಓದಿ : Accident : ಅಥಣಿ ಬಳಿ ಭೀಕರ ಅಪಘಾತಕ್ಕೆ 3 ಜನರ ಸಾವು.!
ಸದ್ಯ ವಿಡಿಯೋವನ್ನು @manojsh28986262 ಎಂಬ ʼಎಕ್ಸ್ʼ ಖಾತೆಯಲ್ಲಿ ಜೂನ್ 2 ರಂದು ಹಂಚಿಕೊಂಡಿದ್ದು, ಇಲ್ಲಿಯವರೆಗೆ 381.4K, Views ಪಡೆದುಕೊಂಡಿದೆ. ಅದರಲ್ಲಿ “सड़क छाप आशिकों ने मोहल्ले की गलियों को ही इन्होंने पिकनिक पार्क बना दिया !!” ಎಂದು ಬರೆದುಕೊಂಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣ (social media) ದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಖಾರವಾಗಿಯೇ ಕಾಮೆಂಟ್ ಮಾಡಿ ಪ್ರೇಮಿಗಳ ಚಳಿ ಬಿಡಿಸಿದ್ದಾರೆ.
ಇದನ್ನು ಓದಿ : ನಿಮಗಿದು ಗೊತ್ತೇ.? non-stick pan ನಲ್ಲಿ ಅಡುಗೆ ಮಾಡಿದರೆ ಎಷ್ಟೊಂದು ಹಾನಿ.!
Romance Video ಇಲ್ಲಿದೆ ನೋಡಿ :
सड़क छाप आशिकों ने मोहल्ले की गलियों को ही इन्होंने पिकनिक पार्क बना दिया !!
कॉलेज का गोल मरकर एक्स्ट्रा क्लास का होमवर्क वाला वर्क पूरा कर रहे हैं !!
मोहल्ले में रहने वाले ने वीडियो बनाकर सोशल मीडिया पर कर दिया वायरल !!#ViralVideo #Soshalmidia pic.twitter.com/NuATaLwCax
— MANOJ SHARMA LUCKNOW UP🇮🇳🇮🇳🇮🇳 (@ManojSh28986262) June 2, 2025
Accident : ಅಥಣಿ ಬಳಿ ಭೀಕರ ಅಪಘಾತಕ್ಕೆ 3 ಜನರ ಸಾವು.!
ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ ಜಿಲ್ಲೆಯ ಅಥಣಿಯ ಬಣಜವಾಡ ಕಾಲೇಜು ಬಳಿಯ ವಿಜಯಪುರ-ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತ (Accident) ದಲ್ಲಿ ಮೂವರು ಬಲಿಯಾಗಿದ್ದಾರೆ. ಗುರುವಾರ ತಡ ರಾತ್ರಿ ಈ ದುರ್ಘಟನೆ (Accident) ಸಂಭವಿಸಿದೆ.
ಕೊಲ್ಲಾಪುರ (Kolhapur) ಜಿಲ್ಲೆ ಶಿರೋಳ ತಾಲೂಕು ಗಣೇಶವಾಡಿ ಗ್ರಾಮದ ಮಹೇಶ್ ಸುಭಾಷ್ ಗಾತಾಡೆ (30), ಶಿರೋಳ ತಾಲೂಕು ಪುಡವಾಡ (Pudawad) ಗ್ರಾಮದ ಶಿವಂ ಯುವರಾಜ್ ಚವಾಣ್ (24) ಮತ್ತು ಸಾಂಗ್ಲಿ ಜಿಲ್ಲೆ ಮಿರಜ್ ತಾಲೂಕಿನ ಕವಲಾಪುರ ಗ್ರಾಮದ ಸಚಿನ್ ವಿಲಾಸ್ ಮಾಳಿ (42) ಅಪಘಾತ (Accident) ನಡೆದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದನ್ನು ಓದಿ : Suspend : ಹಣಕ್ಕೆ ಬೇಡಿಕೆಯಿಟ್ಟ ಆರೋಪ ; ಪಿಎಸ್ಐ ಸಸ್ಪೆಂಡ್.!
ಮೊದಲಿಗೆ ಕಾಗವಾಡ (Kagawad) ಕಡೆಯಿಂದ ಕೆಂಪು ಇಟ್ಟಿಗೆ ಸಾಗಿಸುತ್ತಿದ್ದ ಲಾರಿ ಮತ್ತು ಅಥಣಿಯಿಂದ ಕಾಗವಾಡಕ್ಕೆ ತೆರಳುತ್ತಿದ್ದ ಪಿಕಪ್ ವಾಹನದ ನಡುವೆ ಅಪಘಾತ (Accident) ವಾಗಿದೆ. ಗಾಯಗೊಂಡ ಚಾಲಕ ಮತ್ತು ಕ್ಲೀನರ್ ಸಹಾಯಕ್ಕೆ ಬೇಡಿಕೊಳ್ಳುತ್ತಿದ್ದರು.
ಇದನ್ನು ಗಮನಿಸಿದ ಸ್ಕಾರ್ಪಿಯೋ (Scorpio) ಚಾಲಕ ತನ್ನ ವಾಹನವನ್ನು ಬದಿಗೆ ಸರಿಸಿ ಅವರನ್ನು ರಕ್ಷಿಸಲು ಮುಂದಾದಾಗ ಅಥಣಿ ಕಡೆಯಿಂದ ಬಂದ ಇನೋವಾ (Innova) ಕಾರು ನೇರವಾಗಿ ರಕ್ಷಿಸಲು ಮುಂದಾದ ವ್ಯಕ್ತಿಗೆ ಡಿಕ್ಕಿ ಹೊಡೆದು ಈ ಘಟನೆ (Accident) ಸಂಭವಿಸಿದೆ.
ಇದನ್ನು ಓದಿ : Ahmedabad : 243 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಅಪಘಾತ.!
ದುರ್ಘಟನೆ (Accident) ಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು ಅಥಣಿಯ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಲಾರಿ, ಪಿಕಪ್ ವಾಹನ, ಇನೋವಾ ಮತ್ತು ಸ್ಕಾರ್ಪಿಯೋ ನಡುವೆ ಈ ಅಪಘಾತ (Accident) ಸಂಭವಿಸಿದೆ.
ಇನೋವಾದಲ್ಲಿದ್ದ ಇಬ್ಬರೂ ಸೇರಿ ಒಟ್ಟು ಮೂವರು ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ. ಮೊದಲು ಅಪಘಾತವಾಗಿದ್ದ ಲಾರಿ ಹಾಗೂ ಪಿಕಪ್ ವಾಹನದ ಚಾಲಕ, ಕ್ಲೀನರ್ಗಳು ಗಾಯಾಳುಗಳಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರೆದಿದೆ.