ಬೆಂಗಳೂರಿನಲ್ಲಿ ರಸ್ತೆಯಲ್ಲೇ ಚಾಕುವಿನಿಂದ ಪತ್ನಿ ಕೊಲೆಗೆ ಯತ್ನ: ಸಾರ್ವಜನಿಕರಿಂದ ಧರ್ಮದೇಟು.

ಬೆಂಗಳೂರಿನಲ್ಲಿ ರಸ್ತೆಯಲ್ಲೇ ಚಾಕುವಿನಿಂದ ಪತ್ನಿ ಕೊಲೆಗೆ ಯತ್ನ

ಜನಸ್ಪಂದನ ನ್ಯೂಸ್‌, ಬೆಂಗಳೂರು : ಹಾಡಹಗಲೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪತಿಯೋರ್ವ ರಸ್ತೆಯಲ್ಲೇ ಚಾಕುವಿನಿಂದ ಪತ್ನಿ ಕೊಲೆಗೆ ಯತ್ನ ಮಾಡಿರುವ ಘಟನೆ ನಡೆದಿದ್ದು, ಈ ವೇಳೆ ಸಾರ್ವಜನಿಕರು ‌ಪತಿಗೆ ಧರ್ಮದೇಟು ನೀಡಿದ್ದಾರೆ. ಸದ್ಯ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಬೆಂಗಳೂರು (Bengaluru) ನಗರದ ದಾಸನಪುರ ಪ್ರದೇಶದಲ್ಲಿ ಹಾಡಹಗಲೇ ನಡೆದ ಭಯಾನಕ ಘಟನೆ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ಪತ್ನಿಯ ನಡತೆಯ ಮೇಲೆ ಅನುಮಾನಗೊಂಡ ಪತಿಯೊಬ್ಬ, ರಸ್ತೆಯಲ್ಲೇ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದೆ.

ಪತ್ನಿ ಕೊಲೆಗೆ ಯತ್ನ ನಡೆಸುತ್ತಿರುವ ವೇಳೆ ವಾಹನ ಸವಾರರು ಮತ್ತು ಪಾದಚಾರಿಗಳು ಸಮಯಪ್ರಜ್ಞೆಯಿಂದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಪಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮೂಲತಃ ಬಿಹಾರ್‌ (Bihar) ಮೂಲದ ದಂಪತಿಗಳಾದ ಸೋನಾಲಿ ಮತ್ತು ಸಂಜಯ್ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದು ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಇಬ್ಬರಿಗೂ ಇದು ಎರಡನೇ ವಿವಾಹವಾಗಿತ್ತು ಎಂದು ತಿಳಿದುಬಂದಿದೆ.

ಸಂಜಯ್ ಮದ್ಯಪಾನ ಮಾಡಿ ಪತ್ನಿಗೆ ಪದೇ ಪದೇ ಕಿರುಕುಳ ನೀಡುತ್ತಿದ್ದ ಕಾರಣ, ಸೋನಾಲಿ ಪ್ರತ್ಯೇಕವಾಗಿ ವಾಸಿಸುವ ನಿರ್ಧಾರ ಮಾಡಿದ್ದರು ಎಂದು ಹೇಳಲಾಗಿದೆ. ಪತ್ನಿಯ ಈ ನಿರ್ಧಾರದಿಂದ ಕೋಪಗೊಂಡ ಸಂಜಯ್ ಈ ರೀತಿಯ ಹೇಯ್‌ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ.

ವಿಡಿಯೋದಲ್ಲೇನಿದೆ :

ವಿಡಿಯೋದಲ್ಲಿ ಓರ್ವ ವ್ಯಕ್ತಿ ಬೈಕ್‌ನಲ್ಲಿ ಬರುತ್ತಿರಬೇಕಾದರೆ ಒಬ್ಬ ಮೆಹಿಳೆ ಎದುರಾಗುತ್ತಾಳೆ. ಅವಳನ್ನು ನೋಡಿದ್ದೇ ತಡ ಸ್ಥಳದಲ್ಲಿಯೇ ಬೈಕ್‌ ನಿಲ್ಲಿಸಿ ರಸ್ತೆಯಲ್ಲೇ ಜಗಳ ಆರಂಭಿಸಿದ್ದಾನೆ. ವಾಗ್ವಾದ ತಾರಕಕ್ಕೇರಿದ ವೇಳೆ ತಕ್ಷಣವೇ ತನ್ನ ಬಳಿಯಿದ್ದ ಚಾಕು ತೆಗೆದು ಪತ್ನಿಯ ಕುತ್ತಿಗೆಯ ಬಳಿ ಹಿಡಿದು ಹಲ್ಲೆ ನಡೆಸಲು ಮುಂದಾಗಿದ್ದಾನೆ.

ಇದನ್ನು ಓದಿ : ರೈಲು ಹಳಿ ದಾಟುವ ವೇಳೆ ಭೀಕರ ದುರಂತ: ಇಬ್ಬರು ಮಹಿಳೆಯರು ರೈಲಿನಡಿಗೆ ಸಿಲುಕಿ ಸಾವು, ವಿಡಿಯೋ ವೈರಲ್.

ಪತಿಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪತ್ನಿ ಪ್ರಯತ್ನಿಸುತ್ತಿದಂತೆಯೇ ಪಕ್ಕದಲ್ಲಿಯೇ ಇದ್ದ ಯುವಕನೋರ್ವ ಅವನ್ನು ಹೊಡೆದು ಬಿಡಿಸಲು ಪ್ರಯತ್ನಿಸುತ್ತಾನೆ. ಆದರೆ ಧ್ಯರ್ಯ ಸಾಲದೆ ಹಿಂದೆ ಸರಿಯುತ್ತಾನೆ. ಅದೇ ವೇಳೆ ಬೈಕ್‌ನಲ್ಲಿ ಬಂದ ವ್ಯಕ್ತಿ ಕೂಡಲೇ ಹಲ್ಲೆಕೋರನಿಂದ ಮಹಿಳೆಯನ್ನು ರಕ್ಷಿಸಲು ಮುಂದಾಗುತ್ತಾನೆ.

ಅದಾಗಲೇ ಸಾರ್ವಜನಿಕರಲ್ಲರೂ ಕೂಡಿ ಹಲ್ಲೆಕೊರ ಪತಿಯನ್ನು ಚನ್ನಾಗಿ ಥಳಿಸುತ್ತಾರೆ. ಸಾರ್ವಜನಿಕರು ಆರೋಪಿ ಕೈಯಿಂದ ಚಾಕು ಕಸಿದುಕೊಂಡು ಆತನಿಗೆ ಧರ್ಮದೇಟು ನೀಡಿ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಲ್ಲೆಯ ದೃಶ್ಯ ಸ್ಥಳದಲ್ಲಿದ್ದ CCTV ಯಲ್ಲಿ ದಾಖಲಾಗಿದೆ.

ಚಾಕುವಿನಿಂದ ಪತ್ನಿ ಕೊಲೆಗೆ ಯತ್ನ, ವಿಡಿಯೋ :

Courtesy : Social Media / Twitter

ರಸ್ತೆಯಲ್ಲೇ ಚಾಕುವಿನಿಂದ ಪತ್ನಿ ಕೊಲೆಗೆ ಯತ್ನದ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಈ ಸಂಬಂಧ ಠಾಣೆಯಲ್ಲಿ ಎನ್‌ಸಿಆರ್ (NCR) ದಾಖಲಾಗಿದ್ದು, ದಂಪತಿಗಳಿಗೆ ಕೌನ್ಸೆಲಿಂಗ್ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಕೌಟುಂಬಿಕ ಹಿಂಸಾಚಾರ ಪ್ರಕರಣಗಳ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದು, ಇಂತಹ ಪ್ರಕರಣಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಎನ್‌ಸಿಆರ್ (NCR) :

ಎನ್‌ಸಿಆರ್ (NCR – Non Cognizable Report) ಎಂದರೆ ಗಂಭೀರವಲ್ಲದ ಪ್ರಕರಣಗಳಿಗೆ ಪೊಲೀಸರು ದಾಖಲಿಸುವ ವರದಿ. ಇಂತಹ ಪ್ರಕರಣಗಳಲ್ಲಿ ತಕ್ಷಣವೇ ಬಂಧನ ಮಾಡುವ ಅಧಿಕಾರ ಪೊಲೀಸರಿಗೆ ಇರುವುದಿಲ್ಲ.

ಸಾಮಾನ್ಯ ಜಗಳ, ಸಣ್ಣ ಮಟ್ಟದ ಬೆದರಿಕೆ, ನಿಂದನೆ ಅಥವಾ ಕೌಟುಂಬಿಕ ಕಲಹಗಳಂತಹ ಪ್ರಕರಣಗಳು NCR ಅಡಿಯಲ್ಲಿ ದಾಖಲಾಗುತ್ತವೆ. ಇಂತಹ ಪ್ರಕರಣಗಳಲ್ಲಿ ಮುಂದಿನ ತನಿಖೆ ಅಥವಾ ಕ್ರಮ ಕೈಗೊಳ್ಳಲು ನ್ಯಾಯಾಲಯದ ಅನುಮತಿ ಅಗತ್ಯವಾಗಬಹುದು.

ಪ್ರಮುಖ ಸುದ್ದಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ

NCR ದಾಖಲಾದ ಬಳಿಕ ಪೊಲೀಸರು ಇಬ್ಬರಿಗೂ ಕೌನ್ಸೆಲಿಂಗ್ ಅಥವಾ ಎಚ್ಚರಿಕೆ ನೀಡುವ ಕ್ರಮ ಕೈಗೊಳ್ಳುತ್ತಾರೆ.


Disclaimer: ಈ ಸುದ್ದಿ (ಬೆಂಗಳೂರಿನಲ್ಲಿ ರಸ್ತೆಯಲ್ಲೇ ಚಾಕುವಿನಿಂದ ಪತ್ನಿ ಕೊಲೆಗೆ ಯತ್ನ) ಲಭ್ಯ ಮಾಹಿತಿಗಳು ಮತ್ತು ಪೊಲೀಸ್ ಮೂಲಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಅಧಿಕೃತ ಮಾಹಿತಿ ಬಳಿಕ ಬದಲಾಗುವ ಸಾಧ್ಯತೆ ಇದೆ.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top