HomeGeneral Newsಮಡಿಕೇರಿ: ಚಲಿಸುತ್ತಿದ್ದ ಬಸ್‌ನಲ್ಲೇ ಚಾಲಕನಿಗೆ ಹೃದಯಾಘಾತ; ಸಮಯಪ್ರಜ್ಞೆಯಿಂದ ಪ್ರಯಾಣಿಕರ ಪ್ರಾಣ ಉಳಿಸಿದ ಡ್ರೈವರ್.
spot_img
spot_img

ಮಡಿಕೇರಿ: ಚಲಿಸುತ್ತಿದ್ದ ಬಸ್‌ನಲ್ಲೇ ಚಾಲಕನಿಗೆ ಹೃದಯಾಘಾತ; ಸಮಯಪ್ರಜ್ಞೆಯಿಂದ ಪ್ರಯಾಣಿಕರ ಪ್ರಾಣ ಉಳಿಸಿದ ಡ್ರೈವರ್.

ಜನಸ್ಪಂದನ ನ್ಯೂಸ್‌, ಮಡಿಕೇರಿ : ಮಡಿಕೇರಿ (Madikeri) ಸಮೀಪ ಭಾರೀ ಅನಾಹುತವೊಂದು ತಪ್ಪಿದ ಘಟನೆ ನಡೆದಿದೆ. ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್‌ (Private Bus) ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ (Heart Attack) ಸಂಭವಿಸಿದ್ದು, ಆದರೂ ಆತ ಧೈರ್ಯ ಕಳೆದುಕೊಳ್ಳದೆ ಬಸ್‌ನ್ನು ರಸ್ತೆ ಬದಿಗೆ ಇಳಿಸಿ ಹಲವರ ಪ್ರಾಣ ಉಳಿಸಿದ್ದಾನೆ.

ಈ ಘಟನೆ ಇಂದು ಮುಂಜಾನೆ ತಾಳತ್ ಮನೆ ಪ್ರದೇಶದ ಬಳಿ ನಡೆದಿದೆ. ಬೆಂಗಳೂರಿನಿಂದ ಹೊರಟಿದ್ದ ಬಸ್ ಮಡಿಕೇರಿ ಭಾಗ ತಲುಪುತ್ತಿದ್ದಂತೆಯೇ ಚಾಲಕ ಅಸ್ವಸ್ಥಗೊಂಡಿದ್ದಾನೆ.

ಚಾಲಕನಿಗೆ ಹೃದಯಾಘಾತ ; ಸಮಯಪ್ರಜ್ಞೆಯಿಂದ ಉಳಿದ ಪ್ರಯಾಣಿಕರ ಪ್ರಾಣ :

ಚಾಲಕನಿಗೆ ಹೃದಯಾಘಾತದ ನಡುವೆಯೂ ಬಸ್ ನಿಯಂತ್ರಣ ತಪ್ಪದಂತೆ ನೋಡಿಕೊಂಡ ಚಾಲಕ, ವಾಹನವನ್ನು ರಸ್ತೆ ಬದಿಗೆ ಚರಂಡಿಯತ್ತ ಇಳಿಸಿದ್ದಾನೆ. ಪರಿಣಾಮ ಬಸ್ ವಾಲಿಕೊಂಡು ನಿಂತಿದ್ದರೂ, ದೊಡ್ಡ ಅನಾಹುತ ತಪ್ಪಿದೆ.

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದವರು ಕೆಲಕಾಲ ಆತಂಕಗೊಂಡಿದ್ದರು. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ. ಚಾಲಕನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಸ್ತೆ ಬದಿಯಲ್ಲಿ ಬಸ್ ನಿಂತಿದ್ದರಿಂದ ಹೆದ್ದಾರಿ ಸಂಚಾರಕ್ಕೂ ಹೆಚ್ಚಿನ ತೊಂದರೆ ಉಂಟಾಗಿಲ್ಲ. ಬಳಿಕ ಪ್ರಯಾಣಿಕರಿಗೆ ಪರ್ಯಾಯ ವಾಹನಗಳ ವ್ಯವಸ್ಥೆ ಮಾಡಲಾಗಿದೆ.

ಇದನ್ನು ಓದಿ : ತುಪ್ಪ ತಿಂದರೆ ಕೊಲೆಸ್ಟ್ರಾಲ್ ಹೆಚ್ಚುತ್ತಾ? ಈ ಬಗ್ಗೆ ವಿಜ್ಞಾನ ಏನು ಹೇಳುತ್ತೆ?

ಈ ಘಟನೆ ಚಾಲಕರ ಆರೋಗ್ಯ ತಪಾಸಣೆಯ ಅಗತ್ಯತೆ ಹಾಗೂ ದೀರ್ಘ ಪ್ರಯಾಣದ ವೇಳೆ ಮುನ್ನೆಚ್ಚರಿಕೆಯ ಮಹತ್ವವನ್ನು ಮತ್ತೆ ನೆನಪಿಸಿದೆ.

“ಹೃದಯಾಘಾತ” (Heart Attack) :

ಹೃದಯಕ್ಕೆ (Heart) ರಕ್ತ ಪೂರೈಸುವ ನರಗಳಲ್ಲಿ ತಡೆ ಉಂಟಾದಾಗ ಸಂಭವಿಸುವ ಗಂಭೀರ ಸ್ಥಿತಿಯನ್ನು “ಹೃದಯಾಘಾತ” (Heart Attack) ಎಂದು ಕರೆಯಲಾಗುತ್ತದೆ.

ಎದೆನೋವು, ಉಸಿರಾಟದ ತೊಂದರೆ, ಬೆವರು, ತಲೆಸುತ್ತು ಮತ್ತು ಎಡಗೈ ನೋವು ಇದರ ಸಾಮಾನ್ಯ ಲಕ್ಷಣಗಳಾಗಿವೆ. ಅಧಿಕ ರಕ್ತದೊತ್ತಡ, ಧೂಮಪಾನ, ಒತ್ತಡ, ಮಧುಮೇಹ ಮತ್ತು ಅಸ್ವಸ್ಥ ಜೀವನಶೈಲಿ ಹೃದಯಾಘಾತದ ಅಪಾಯವನ್ನು ಹೆಚ್ಚಿಸಬಹುದು.

ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆತರೆ ಪ್ರಾಣಾಪಾಯ ತಪ್ಪಿಸಬಹುದಾದ್ದರಿಂದ ಲಕ್ಷಣ ಕಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ.

ವಾಹನ ಚಲಾಯಿಸುವಾಗ ಹೃದಯಾಘಾತವಾಗರೆ ಏನು ಮಾಡಬೇಕು :

  • ವಾಹನ ಚಲಾಯಿಸುವಾಗ ಹೃದಯಾಘಾತ (Heart Attack) ಲಕ್ಷಣಗಳು ಕಾಣಿಸಿಕೊಂಡರೆ ಮೊದಲಿಗೆ ಗಾಬರಿಯಾಗದೇ ತಕ್ಷಣ ವಾಹನದ ವೇಗ ಕಡಿಮೆ ಮಾಡಿ ಸುರಕ್ಷಿತವಾಗಿ ರಸ್ತೆ ಬದಿಗೆ ನಿಲ್ಲಿಸಬೇಕು.
  • ಎದೆನೋವು, ಉಸಿರಾಟದ ತೊಂದರೆ, ಅತಿಯಾದ ಬೆವರು ಅಥವಾ ತಲೆಸುತ್ತು ಕಂಡುಬಂದರೆ ತಕ್ಷಣ ಸಹಾಯಕ್ಕಾಗಿ ಸುತ್ತಮುತ್ತಲಿನವರಿಗೆ ಮಾಹಿತಿ ನೀಡುವುದು ಮುಖ್ಯ.
  • ಸಾಧ್ಯವಾದರೆ ತುರ್ತು ವೈದ್ಯಕೀಯ ಸೇವೆ (Emergency Service) ಅಥವಾ ಆಂಬುಲೆನ್ಸ್‌ಗೆ ಕರೆ ಮಾಡಬೇಕು.

ಇಂದಿನ ಎಲ್ಲಾ ತಾಜಾ ಸುದ್ದಿಗಳನ್ನು ಇಲ್ಲಿ ಓದಿ

  • ಒಬ್ಬರೇ ಇದ್ದರೆ ವಾಹನವನ್ನು ಮುಂದುವರಿಸಿ ಚಲಾಯಿಸಲು ಪ್ರಯತ್ನಿಸಬಾರದು, ಇದರಿಂದ ದೊಡ್ಡ ಅಪಘಾತ ಸಂಭವಿಸಬಹುದು.
  • ವೈದ್ಯರು ಸೂಚಿಸಿದ್ದರೆ ಮಾತ್ರ ಆಸ್ಪಿರಿನ್‌ (Aspirin) ಸೇವಿಸಬಹುದು. ನಿಯಮಿತ ಆರೋಗ್ಯ ತಪಾಸಣೆ ಹಾಗೂ ಹೃದಯ ಸಮಸ್ಯೆಗಳ ಬಗ್ಗೆ ಮುಂಚಿತ ಎಚ್ಚರಿಕೆ ವಹಿಸುವುದು ಇಂತಹ ಅಪಾಯಗಳನ್ನು ಕಡಿಮೆ ಮಾಡುತ್ತದೆ.

Disclaimer: ಈ ಸುದ್ದಿ (ಚಾಲಕನಿಗೆ ಹೃದಯಾಘಾತ) ಲಭ್ಯ ಮಾಹಿತಿಗಳು ಮತ್ತು ಸ್ಥಳೀಯ ಮೂಲಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ತನಿಖೆ ಅಥವಾ ವೈದ್ಯಕೀಯ ವರದಿ ಬಳಿಕ ಹೆಚ್ಚಿನ ಮಾಹಿತಿ ಬದಲಾಗುವ ಸಾಧ್ಯತೆ ಇದೆ.

Janaspandhan News
Janaspandhan Newshttp://WWW.janaspandhan.com
Janaspandana News is a digital news platform that reports crime and local news from Karnataka.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments