ನಾದಿಯಾ (ಪಶ್ಚಿಮ ಬಂಗಾಳ) : ಅಜ್ಜಿಯ ಅಂತಿಮ ಸಂಸ್ಕಾರದ ವೇಳೆ 30 ವರ್ಷದ ಮೊಮ್ಮಗ ಉರಿಯುತ್ತಿದ್ದ ವಿದ್ಯುತ್ ಚಿತಾಗಾರದೊಳಗೆ ಹಾರಿದ ಆಘಾತಕಾರಿ ಘಟನೆಯೊಂದು “ಪಶ್ಚಿಮ ಬಂಗಾಳದ ಚಿತಾಗಾರ”ಯೊಂದರಲ್ಲಿ ನಡೆದಿದೆ. ಕ್ಷಣಾರ್ಧದಲ್ಲಿ ನಡೆದ ಈ ಘಟನೆ ಅಲ್ಲಿದ್ದವರಲ್ಲಿ ತೀವ್ರ ಆತಂಕ ಮೂಡಿಸಿದ್ದು, ಸಿಬ್ಬಂದಿ ಮತ್ತು ಸಾರ್ವಜನಿಕರ ಸಮಯಪ್ರಜ್ಞೆಯಿಂದ ಯುವಕನ ಜೀವ ಉಳಿದಿದೆ.
ಕುಟುಂಬದ ಸದಸ್ಯರ ಅಗಲಿಕೆಯನ್ನು ಸಹಿಸಿಕೊಳ್ಳಲಾಗದೆ ಭಾವನಾತ್ಮಕವಾಗಿ ಕುಸಿದ ವ್ಯಕ್ತಿಯೊಬ್ಬರು ಅಜ್ಜಿಯ ಅಂತಿಮ ಸಂಸ್ಕಾರದ ವೇಳೆ ಉರಿಯುತ್ತಿದ್ದ ವಿದ್ಯುತ್ ಚಿತಾಗಾರದ ಕುಲುಮೆಯೊಳಗೆ ಹಾರಿದ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ನಬದ್ವೀಪ್ ಚಿತಾಗಾರದಲ್ಲಿ ನಡೆದಿದೆ.
ಗಾಯಗೊಂಡ ಯುವಕನನ್ನು 30 ವರ್ಷದ ಇಂದ್ರಜಿತ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಸದ್ಯ ಅವರು ಗಂಭೀರ ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ಅಜ್ಜಿಯ ಅಂತಿಮ ಸಂಸ್ಕಾರಕ್ಕೆ ಆಗಮಿಸಿದ್ದ ಕುಟುಂಬ :
ಮಾಹಿತಿಯ ಪ್ರಕಾರ, ಗೇಡೆ ಗಡಿ ಪ್ರದೇಶದ ನಿವಾಸಿಯಾಗಿದ್ದ ವೃದ್ಧೆಯೊಬ್ಬರು ನಿಧನರಾಗಿದ್ದರು. ಅವರ ಅಂತಿಮ ಸಂಸ್ಕಾರ ನೆರವೇರಿಸಲು ಕುಟುಂಬಸ್ಥರು ನಾದಿಯಾ ಜಿಲ್ಲೆಯ ನಬದ್ವೀಪ್ ಚಿತಾಗಾರಕ್ಕೆ ಆಗಮಿಸಿದ್ದರು.
ಇದನ್ನು ಓದಿ : ಕಿಂಗ್ ಕೋಬ್ರಾಗೆ ಸವಾಲು ಹಾಕಿದ ಬೆಕ್ಕು; ಹೆಡೆ ಎತ್ತಿ ದಾಳಿ ಮಾಡಿದ ವಿಷಕಾರಿ ಹಾವು, ಗೆದ್ದವರ್ಯಾರು? ವಿಡಿಯೋ ನೋಡಿ.!
ಈ ವೇಳೆ ಧಾರ್ಮಿಕ ವಿಧಿವಿಧಾನಗಳು ಪೂರ್ಣಗೊಂಡ ಬಳಿಕ ಚಿತಾಗಾರದ ಸಿಬ್ಬಂದಿ ಮೃತದೇಹವನ್ನು ವಿದ್ಯುತ್ ಚಿತಾಗಾರದ ಕುಲುಮೆಯೊಳಗೆ ಇರಿಸಿ ಅಂತಿಮ ಪ್ರಕ್ರಿಯೆ ನಡೆಸಲು ಪ್ರಾರಂಭಿಸಿದ್ದಾರೆ.
ಈ ವೇಳೆ ಅಜ್ಜಿಯ ಅಗಲಿಕೆಯಿಂದ ತೀವ್ರ ಮಾನಸಿಕ ಆಘಾತಕ್ಕೊಳಗಾಗಿದ್ದ ಮೊಮ್ಮಗ ಇಂದ್ರಜಿತ್ ಬಿಸ್ವಾಸ್ ಭಾವೋದ್ವೇಗವನ್ನು ನಿಯಂತ್ರಿಸಿಕೊಳ್ಳಲಾಗದೆ ಇದ್ದಕ್ಕಿದ್ದಂತೆ ಉರಿಯುತ್ತಿದ್ದ ವಿದ್ಯುತ್ ಕುಲುಮೆಯೊಳಗೆ ಧುಮುಕಿದ್ದಾರೆ. ಈ ಅನಿರೀಕ್ಷಿತ ಘಟನೆಯಿಂದ ಅಲ್ಲಿದ್ದ ಕುಟುಂಬಸ್ಥರು, ಸಾರ್ವಜನಿಕರು ಮತ್ತು ಸಿಬ್ಬಂದಿ ಕೆಲ ಕ್ಷಣಗಳ ಕಾಲ ದಿಗ್ಭ್ರಾಂತರಾಗಿದ್ದರು.
ಸಮಯಪ್ರಜ್ಞೆಯಿಂದ ಜೀವ ಉಳಿಸಿದ ಸಿಬ್ಬಂದಿ :
ಯುವಕ ಕುಲುಮೆಯೊಳಗೆ ಹಾರುತ್ತಿದ್ದಂತೆಯೇ ಚಿತಾಗಾರದ ಸಿಬ್ಬಂದಿ ಹಾಗೂ ಸ್ಥಳದಲ್ಲಿದ್ದ ಕೆಲವರು ಕೂಡಲೇ ಆತನನ್ನು ಯಾವುದೇ ವಿಳಂಬ ಮಾಡದೆ ಮತ್ತು ಅಪಾಯವನ್ನು ಲೆಕ್ಕಿಸದೆ ಕೆಲವೇ ಸೆಕೆಂಡುಗಳಲ್ಲಿ ಯುವಕನನ್ನು ಹೊರಗೆ ಎಳೆದು ರಕ್ಷಿಸುವಲ್ಲಿ ಯಶಸ್ವಿಯಾದರು.
ಘಟನೆಯ ವೇಳೆ ಒಂದೇ ಒಂದು ಸೆಕೆಂಡ್‌ಗಳ ಕಾಳ ತಡವಾಗಿದ್ದರೆ ಮತ್ತೊಂದು ದುರಂತ ಸಂಭವಿಸುವ ಸಾಧ್ಯತೆ ಇತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸಿಬ್ಬಂದಿಯ ತಕ್ಷಣದ ಸ್ಪಂದನೆಯಿಂದ ಯುವಕನ ಜೀವ ಉಳಿದಿದ್ದರೂ, ಯುವಕನ ದೇಹದ ಹಲವು ಭಾಗಗಳಿಗೆ ತೀವ್ರ ಸುಟ್ಟ ಗಾಯಗಳಾಗಿವೆ.
ಈ ಸುದ್ದಿಯನ್ನು ಓದಿ : Belagavi DCC Bank ನೇಮಕಾತಿ: SSLC, ಪದವೀಧರರಿಗೆ ಬ್ಯಾಂಕ್ ಉದ್ಯೋಗದ ಭರ್ಜರಿ ಅವಕಾಶ.!
ಉರಿಯುತ್ತಿದ್ದ ಚಿತಾಗಾರದೊಳಗೆ ಹಾರಿದ ಮೊಮ್ಮಗ ವಿಡಿಯೋ ಇಲ್ಲಿದೇ
ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ :
ಗಾಯಗೊಂಡ ಇಂದ್ರಜಿತ್ ಬಿಸ್ವಾಸ್ ಅವರನ್ನು ಕೂಡಲೇ ನಬದ್ವೀಪ್ ಸ್ಟೇಟ್ ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರ ಪ್ರಕಾರ, ಅವರ ದೇಹದ ಹಲವು ಭಾಗಗಳಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದು, ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಅಗತ್ಯ ವೈದ್ಯಕೀಯ ಚಿಕಿತ್ಸೆ ಮುಂದುವರಿದಿದೆ.
ಘಟನೆಯಿಂದ ಬೆಚ್ಚಿಬಿದ್ದ ಸಾರ್ವಜನಿಕರು :
ಈ ಘಟನೆ ಚಿತಾಗಾರದಲ್ಲಿ ನೆರೆದಿದ್ದ ಎಲ್ಲರನ್ನೂ ಬೆಚ್ಚಿಬೀಳುವಂತೆ ಮಾಡಿದೆ. ಕ್ಷಣಾರ್ಧದಲ್ಲಿ ನಡೆದ ಈ ಬೆಳವಣಿಗೆಯಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಂತಿಮ ಸಂಸ್ಕಾರಕ್ಕೆ ಬಂದಿದ್ದವರು ಯುವಕನನ್ನು ರಕ್ಷಿಸಲು ಸಿಬ್ಬಂದಿ ತೋರಿದ ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಅಜ್ಜಿಯ ನಿಧನದಿಂದ ಉಂಟಾದ ತೀವ್ರ ಮಾನಸಿಕ ಆಘಾತವೇ ಈ ದುರ್ಘಟನೆಗೆ ಕಾರಣವಾಗಿರಬಹುದು ಎನ್ನಲಾಗಿದೆ. ಆದರೆ ಘಟನೆಯ ಕುರಿತು ಸ್ಥಳೀಯ ಅಧಿಕಾರಿಗಳು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ
Disclaimer: ತೀವ್ರ ದುಃಖ, ಮಾನಸಿಕ ಒತ್ತಡ ಅಥವಾ ಭಾವನಾತ್ಮಕ ಆಘಾತವನ್ನು ಒಬ್ಬರೇ ಎದುರಿಸಲು ಪ್ರಯತ್ನಿಸಬೇಡಿ. ಅಂತಹ ಸಂದರ್ಭಗಳಲ್ಲಿ ಕುಟುಂಬದವರು, ಆತ್ಮೀಯರು ಅಥವಾ ಮಾನಸಿಕ ಆರೋಗ್ಯ ತಜ್ಞರ ನೆರವು ಪಡೆಯುವುದು ಅತ್ಯಂತ ಮುಖ್ಯ. ಸಮಯೋಚಿತ ಸಹಾಯವು ಜೀವ ಉಳಿಸಬಹುದು.








