ಬೆಂಗಳೂರು : ಚಲಿಸುತ್ತಿದ್ದ ಶಾಲಾ ವ್ಯಾನ್ ಹಿಂಬಾಗಿಲು ಏಕಾಏಕಿ ಓಪನ್ ಆದ ಪರಿಣಾಮ ಐವರು ಮಕ್ಕಳು ದಿಢೀರ್ ಅಂತ ರಸ್ತೆಗೆ ಬಿದ್ದ ಆತಂಕಕಾರಿ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದ್ದು, ಶಾಲಾ ವಾಹನಗಳಲ್ಲಿ ಮಕ್ಕಳ ಸುರಕ್ಷತೆಯ ಕುರಿತು ಪೋಷಕರು ಕಳವಳ ವ್ಯಕ್ತಪಡಿಸಿದ್ದಾರೆ.
ಶಾಲಾ ಮಕ್ಕಳ ಸುರಕ್ಷತೆ ಕುರಿತಂತೆ ಮತ್ತೊಮ್ಮೆ ಗಂಭೀರ ಪ್ರಶ್ನೆ ಹುಟ್ಟಿಸುವಂತಹ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಖಾಸಗಿ ಶಾಲೆಯ ವ್ಯಾನ್‌ನಲ್ಲಿ ಶಾಲೆಗೆ ತೆರಳುತ್ತಿದ್ದ ವೇಳೆ ವಾಹನದ ಹಿಂಬಾಗಿಲು ಚಲಿಸುತ್ತಿರುವಾಗಲೇ ಏಕಾಏಕಿ ತೆರೆದುಕೊಂಡ ಪರಿಣಾಮ ನೇರವಾಗಿ ರಸ್ತೆಗೆ ಬಿದ್ದ 5 ಮಕ್ಕಳು ಗಾಯಗೊಂಡಿದ್ದಾರೆ.
ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದ್ದು, ಇಬ್ಬರು ಮಕ್ಕಳು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಪ್ರಸ್ತೂತ ಇನ್ನುಳಿದ ಮೂವರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆ ಬೆಂಗಳೂರು ನಗರದ ಕೆ.ಆರ್. ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಗಾಯತ್ರಿ ಲೇಔಟ್ ಸಮೀಪ ನಡೆದಿದ್ದು, ಘಟನೆಯ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಸಾರ್ವಜನಿಕರಲ್ಲಿ ತೀವ್ರ ಆತಂಕ ವ್ಯಕ್ತವಾಗಿದೆ.
ರಸ್ತೆಗೆ ಬಿದ್ದ 5 ಮಕ್ಕಳು, ವಿಡಿಯೋ :
FIVE SCHOOLCHILDREN THROWN OUT OF MOVING VAN IN BENGALURU
Five schoolchildren fell onto the road after the rear door of a moving school van suddenly opened near Gayathri Layout in KR Pura, Bengaluru
Fortunately, no vehicle was approaching from behind. Traffic police have seized… pic.twitter.com/5MCzTuDmuy
— Nabila Jamal (@nabilajamal_) June 26, 2026
Courtesy : Social Media / Twitter
ಪೊಲೀಸರು ನೀಡಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಮಕ್ಕಳು ಪ್ರತಿದಿನದಂತೆ ಬೆಳಗಿನ ಸಮಯದಲ್ಲಿ ಶಾಲಾ ವ್ಯಾನ್ ಮೂಲಕ ಶಾಲೆಗೆ ತೆರಳುತ್ತಿದ್ದರು. ಇದೇ ವೇಳೆ ಗಾಯತ್ರಿ ಲೇಔಟ್ ರಸ್ತೆಯಲ್ಲಿ ವ್ಯಾನ್ ಸಂಚರಿಸುತ್ತಿದ್ದಾಗ ಅದರ ಹಿಂಭಾಗದ ಬಾಗಿಲು ಅನಿರೀಕ್ಷಿತವಾಗಿ ತೆರೆದುಕೊಂಡಿದೆ.
ಈ ಸುದ್ದಿಯನ್ನು ಓದಿ : 10ನೇ, 12ನೇ, ಡಿಪ್ಲೊಮಾ ಹಾಗೂ ಪದವೀಧರರಿಗೆ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಉದ್ಯೋಗಾವಕಾಶ.
ಹೀಗೆ ಏಕಾಏಕಿ ವಾಹನದ ಬಾಗಿಲು ತೆರೆದ ಪರಿಣಾಮ ವಾಹನದಲ್ಲಿದ್ದ ಐವರು ಮಕ್ಕಳು ಸಮತೋಲನ ಕಳೆದುಕೊಂಡು ರಸ್ತೆಯ ಮೇಲೆ ಬಿದ್ದಿದ್ದಾರೆ. ಹೀಗೆ ರಸ್ತೆಗೆ ಬಿದ್ದ 5 ಮಕ್ಕಳು ಸ್ಥಳೀಯರ ಹಾಗೂ ದಾರಿಹೋಕರು ತಕ್ಷಣವೇ ಸ್ಪಂದಿಸಿದ ಪರಿಣಾಮ ಸುರಕ್ಷಿತವಾಗಿ ಉಳಿದಿದ್ದಾರೆ.
ಪ್ರಾಣಾಪಾಯದಿಂದ ಪಾರು :
ಗಾಯಗೊಂಡ ಮೂವರು ವಿದ್ಯಾರ್ಥಿಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಸದ್ಯ ರಸ್ತೆಗೆ ಬಿದ್ದ 5 ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಈ ನಡುವೆ ವಾಹನದ ಬಾಗಿಲು ಹೇಗೆ ತೆರೆದುಕೊಂಡಿತು? ಚಾಲಕನ ನಿರ್ಲಕ್ಷ್ಯ ಇದೆಯೇ? ಅಥವಾ ವಾಹನದಲ್ಲಿ ತಾಂತ್ರಿಕ ದೋಷ ಉಂಟಾಗಿದೆಯೇ? ಎಂಬ ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಶಾಲಾ ವಾಹನಗಳಲ್ಲಿ ಕಡ್ಡಾಯವಾಗಿರುವ ಸುರಕ್ಷಿತ ಡೋರ್ ಲಾಕ್ ವ್ಯವಸ್ಥೆ, ನಿಯಮಿತ ಫಿಟ್‌ನೆಸ್ ತಪಾಸಣೆ ಸೇರಿದಂತೆ ಹಲವು ಅಂಶಗಳನ್ನು ಪರಿಶೀಲಿಸಲು ಸಂಬಂಧಿತ ವ್ಯಾನ್ ಅನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನು ಓದಿ : ಮತ್ತೇ ಕಣ್ಣು ಮುಚ್ಚಾಲೆ ಆಡುತ್ತಿರುವ ನೈಋತ್ಯ ಮುಂಗಾರು; ಆತಂಕಕಾರಿ ಸೂಚನೆ ನೀಡಿದ ಉಪಗ್ರಹ ಚಿತ್ರಗಳು.
ಈ ಘಟನೆ ಕರ್ನಾಟಕದಲ್ಲಿ ಶಾಲಾ ಸಾರಿಗೆ ವಾಹನಗಳ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕಾದ ಅಗತ್ಯವನ್ನು ಮತ್ತೆ ನೆನಪಿಸಿದೆ. ಮಕ್ಕಳ ಸುರಕ್ಷತೆ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯ ಸಹಿಸಲಾಗದು ಎಂದು ಪೋಷಕರು ಹಾಗೂ ಸಾರ್ವಜನಿಕರು ಸಾರಿಗೆ ಇಲಾಖೆಗೆ ಒತ್ತಾಯಿಸಿದ್ದಾರೆ.
ಸಂಪಾದಕೀಯ :
ಶಾಲಾ ವಾಹನ (School Van) ಗಳಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಲಾಗದ ವಿಷಯ. ಬೆಂಗಳೂರಿನಲ್ಲಿ ನಡೆದ ಈ ಘಟನೆ, ಶಾಲಾ ವ್ಯಾನ್‌ಗಳ ಫಿಟ್‌ನೆಸ್ ಹಾಗೂ ಸುರಕ್ಷತಾ ನಿಯಮಗಳನ್ನು ಎಷ್ಟು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂಬ ಗಂಭೀರ ಪ್ರಶ್ನೆಯನ್ನು ಮತ್ತೆ ಮುಂದಿಟ್ಟಿದೆ.
ಸಣ್ಣದೊಂದು ತಾಂತ್ರಿಕ ದೋಷ ಅಥವಾ ಚಾಲಕರ ನಿರ್ಲಕ್ಷ್ಯದಿಂದ ಅಮಾಯಕ ಮಕ್ಕಳ ಜೀವವೇ ಅಪಾಯಕ್ಕೆ ಸಿಲುಕಬಹುದು.
ಶಾಲಾ ಆಡಳಿತ ಮಂಡಳಿ ಮತ್ತು ವಾಹನ ಮಾಲೀಕರು ನಿಯಮಿತ ತಪಾಸಣೆಗೆ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯವಾಗಿದೆ. ಪೋಷಕರು ಕೂಡ ಮಕ್ಕಳನ್ನು ಕಳುಹಿಸುವ ವಾಹನಗಳ ಸುರಕ್ಷತಾ ವ್ಯವಸ್ಥೆಯ ಬಗ್ಗೆ ಜಾಗೃತರಾಗಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಮತ್ತು ಸಾರಿಗೆ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.
ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ







