ಮದುವೆಯಾದ ಬಳಿಕವೂ ಒಂಟಿಯಾಗಿ ಬದುಕುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಳ; ಕರ್ನಾಟಕ ಸೇರಿ 5 ರಾಜ್ಯಗಳ ಶಾಕಿಂಗ್ ವರದಿ ಬಹಿರಂಗ.

ಮದುವೆಯಾದ ಬಳಿಕವೂ ಒಂಟಿಯಾಗಿ ಬದುಕುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಳ

ನವದೆಹಲಿ: ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಮದುವೆಯಾದ ಬಳಿಕವೂ ಒಂಟಿಯಾಗಿ ಬದುಕುತ್ತಿರುವ ಮಹಿಳೆಯರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ ಶಾಕಿಂಗ್ ವರದಿಯೊಂದು ಬಹಿರಂಗವಾಗಿದೆ. ವಿಶೇಷವಾಗಿ ಅದು ದಕ್ಷಿಣ ಭಾರತದ ರಾಜ್ಯಗಳಲ್ಲಿ ಈ ಪ್ರಮಾಣ ರಾಷ್ಟ್ರದ ಸರಾಸರಿಗಿಂತ ಗಮನಾರ್ಹವಾಗಿ ಹೆಚ್ಚಿರುವುದು ಚರ್ಚೆಗೆ ಕಾರಣವಾಗಿದೆ.

ದೇಶದ ಸಾಮಾಜಿಕ ವ್ಯವಸ್ಥೆಯಲ್ಲಿ ಕುಟುಂಬ ಸಂಬಂಧಗಳು ಮಹತ್ವದ ಸ್ಥಾನ ಹೊಂದಿದ್ದರೂ, ಇತ್ತೀಚಿನ ವರ್ಷಗಳಲ್ಲಿ ವಿಚ್ಛೇದನ, ದಾಂಪತ್ಯ ಕಲಹ ಹಾಗೂ ವೈಯಕ್ತಿಕ ಕಾರಣಗಳಿಂದ ಜೊತೆಗಾರನಿಲ್ಲದೆ ಒಂಟಿಯಾಗಿ ಬದುಕುತ್ತಿರುವ ಮಹಿಳೆಯರ ಸಂಖ್ಯೆ ಕೆಲವು ರಾಜ್ಯಗಳಲ್ಲಿ ವೇಗವಾಗಿ ಹೆಚ್ಚುತ್ತಿರುವುದು ಹೊಸ ಸಮೀಕ್ಷೆಯಿಂದ ಬಹಿರಂಗವಾಗಿದೆ.

ಒಂಟಿಯಾಗಿ ಬದುಕುತ್ತಿರುವ ಮಹಿಳೆಯರ ಸಂಖ್ಯೆ :

ತಮಿಳುನಾಡು ಮೊದಲ ಸ್ಥಾನ :

ಇತ್ತೀಚೆಗೆ ಪ್ರಕಟವಾದ ಸ್ಯಾಂಪಲ್ ರಿಜಿಸ್ಟ್ರೇಷನ್ ಸಿಸ್ಟಮ್ (SRS) Report 2024 ಪ್ರಕಾರ, ದೇಶದಲ್ಲೇ ಹೆಚ್ಚು ಪ್ರಮಾಣದಲ್ಲಿ ಒಂಟಿಯಾಗಿ ಬದುಕುತ್ತಿರುವ ಮಹಿಳೆಯರನ್ನು ಹೊಂದಿರುವ ರಾಜ್ಯವಾಗಿ ತಮಿಳುನಾಡು ಮೊದಲ ಸ್ಥಾನದಲ್ಲಿದೆ.

ಈ ಆರೋಗ್ಯ ಸುದ್ದಿ ಓದಿ : ನಿಮ್ಮ ಕಾಲಿನ ಬೆರಳುಗಳ ಮೇಲೆ ಕೂದಲು ಇವೆಯೇ? ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!

ತಮಿಳುನಾಡಿನಲ್ಲಿ ಒಟ್ಟು ಮಹಿಳೆಯರಲ್ಲಿ ಶೇ 11.6ರಷ್ಟು ಮಹಿಳೆಯರು ಜೀವನ ಸಂಗಾತಿಯಿಂದ ದೂರವಾಗಿ ಅಥವಾ ಒಂಟಿಯಾಗಿ ಬದುಕುತ್ತಿರುವುದು ದಾಖಲಾಗಿದೆ.

ಮೂರನೇ ಸ್ಥಾನದಲ್ಲಿ ಕರ್ನಾಟಕ :

ಈ ಪಟ್ಟಿಯಲ್ಲಿ ಕೇರಳ ಎರಡನೇ ಸ್ಥಾನದಲ್ಲಿದ್ದು, ಅಲ್ಲಿ ಶೇ 10.4ರಷ್ಟು ಮಹಿಳೆಯರು ಒಂಟಿ ಜೀವನ ನಡೆಸುತ್ತಿದ್ದಾರೆ. ಮೂರನೇ ಸ್ಥಾನದಲ್ಲಿ ಕರ್ನಾಟಕ ಇದ್ದು, ರಾಜ್ಯದಲ್ಲಿ ಶೇ 8.6ರಷ್ಟು ಮಹಿಳೆಯರು ಪತಿ ಅಥವಾ ಜೀವನ ಸಂಗಾತಿಯಿಂದ ದೂರವಾಗಿ ಪ್ರತ್ಯೇಕವಾಗಿ ಬದುಕುತ್ತಿದ್ದಾರೆ ಎಂದು ವರದಿ ಹೇಳಿದೆ.

ದಕ್ಷಿಣ ಭಾರತದ ಇತರ ರಾಜ್ಯಗಳಾದ ಆಂದ್ರ ಪ್ರದೇಶನಲ್ಲಿ ಸಹ ಶೇ 8.6ರಷ್ಟು ಹಾಗೂ ತೆಲಂಗಾಣದಲ್ಲಿ ಶೇ 7.6ರಷ್ಟು ಮಹಿಳೆಯರು ಇದೇ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇದರಿಂದ ದಕ್ಷಿಣ ಭಾರತದಲ್ಲಿ ಸಾಮಾಜಿಕ ಮತ್ತು ಕುಟುಂಬ ವ್ಯವಸ್ಥೆಯ ಬದಲಾವಣೆಗಳು ವೇಗವಾಗಿ ನಡೆಯುತ್ತಿರುವುದು ಸ್ಪಷ್ಟವಾಗಿದೆ.

ಶೇ. 11ರಿಂದ ಶೇ. 11.6ಕ್ಕೆ ಏರಿಕೆ :

2023ರ ವರದಿಯೊಂದಿಗೆ ಹೋಲಿಕೆ ಮಾಡಿದರೆ, ತಮಿಳುನಾಡಿನಲ್ಲಿ ಈ ಪ್ರಮಾಣ ಶೇ. 11ರಿಂದ ಶೇ. 11.6ಕ್ಕೆ ಏರಿಕೆಯಾಗಿದೆ. ಕೇರಳದಲ್ಲೂ ಶೇ 10.3ರಿಂದ 10.4ಕ್ಕೆ ಸಣ್ಣ ಮಟ್ಟಿನ ಏರಿಕೆ ಕಂಡುಬಂದಿದೆ. ಆದರೆ ದಕ್ಷಿಣದ ಉಳಿದ ಕೆಲವು ರಾಜ್ಯಗಳಲ್ಲಿ ಒಂಟಿಯಾಗಿ ಬದುಕುವ ಮಹಿಳೆಯರ ಪ್ರಮಾಣ ಸ್ವಲ್ಪ ಇಳಿಕೆಯಾಗಿದೆ.

ಈ ಸುದ್ದಿಯನ್ನು ಓದಿ : 10ನೇ, 12ನೇ, ಡಿಪ್ಲೊಮಾ ಹಾಗೂ ಪದವೀಧರರಿಗೆ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಉದ್ಯೋಗಾವಕಾಶ.

ರಾಷ್ಟ್ರೀಯ ಮಟ್ಟದಲ್ಲಿ ನೋಡಿದರೆ, ಭಾರತದಲ್ಲಿ ಒಂಟಿ ಮಹಿಳೆಯರ ಸರಾಸರಿ ಪ್ರಮಾಣ ಶೇ. 5.4 ಮಾತ್ರವಾಗಿದೆ. ಇದು 2023ರಲ್ಲಿ ದಾಖಲಾಗಿದ್ದ ಶೇ. 5.6ಕ್ಕಿಂತ ಕಡಿಮೆ ಎನ್ನುವುದು ಗಮನಾರ್ಹ. ಇದೇ ಸಮಯದಲ್ಲಿ ಪುರುಷರ ಒಂಟಿತನದ ಪ್ರಮಾಣ ಕೇವಲ ಶೇ 1.6 ಮಾತ್ರ ದಾಖಲಾಗಿದೆ.

ಬಿಹಾರ್‌ನಲ್ಲಿ ಕೇವಲ ಶೇ. 2ರಷ್ಟು :

ಇನ್ನೊಂದೆಡೆ ಬಿಹಾರ್‌ನಲ್ಲಿ ಅತ್ಯಂತ ಕಡಿಮೆ ಪ್ರಮಾಣ ಅಂದರೆ ಶೇ. 2ರಷ್ಟು ಮಹಿಳೆಯರು ಮಾತ್ರ ಒಂಟಿಯಾಗಿ ಬದುಕುತ್ತಿದ್ದಾರೆ. ಉಳಿದಂತೆ ಮಹಾರಾಷ್ಟ್ರ (6%), ಮಧ್ಯ ಪ್ರದೇಶ (5.5%), ಉತ್ತರಖಂಡ ಮತ್ತು ಪಶ್ಚಿಮ್‌ ಬಂಗಾಳ (ತಲಾ 5.6%) ಹಾಗೂ ಉತ್ತರ ಪ್ರದೇಶನಲ್ಲಿ ಶೇ 3.1ರಷ್ಟು ಮಹಿಳೆಯರು ಒಂಟಿಯಾಗಿ ಜೀವನ ನಡೆಸುತ್ತಿರುವುದು ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ಸಾಮಾಜಿಕ ಬದಲಾವಣೆಗಳು, ಆರ್ಥಿಕ ಸ್ವಾವಲಂಬನೆ, ವೈಯಕ್ತಿಕ ಆಯ್ಕೆಗಳು ಹಾಗೂ ಕುಟುಂಬ ವ್ಯವಸ್ಥೆಯ ಪರಿವರ್ತನೆಗಳು ಇಂತಹ ಅಂಕಿ-ಅಂಶಗಳ ಹಿಂದೆ ಪ್ರಮುಖ ಕಾರಣಗಳಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಂಪಾದಕೀಯ :

ಮದುವೆಯಾದ ಬಳಿಕ ದೀರ್ಘಕಾಲ ಒಂಟಿಯಾಗಿ ಬದುಕುವುದು ಕೆಲವರಲ್ಲಿ ಮಾನಸಿಕ ಒತ್ತಡ, ಆತಂಕ ಮತ್ತು ಖಿನ್ನತೆ ಸಮಸ್ಯೆಗಳನ್ನು ಹೆಚ್ಚಿಸಬಹುದು ಎಂದು ತಜ್ಞರು ಹೇಳುತ್ತಾರೆ. ಕುಟುಂಬದ ಭಾವನಾತ್ಮಕ ಬೆಂಬಲ ಇಲ್ಲದಿದ್ದಾಗ ಏಕಾಂಗಿ ಜೀವನವು ಸಾಮಾಜಿಕ ಸಂಪರ್ಕವನ್ನು ಕಡಿಮೆ ಮಾಡಬಹುದು.

ಇದನ್ನು ಓದಿ : ಮಗುವನ್ನು ಲಗೇಜ್‌ನಂತೆ ಬೈಕ್‌ನ ಸೈಡ್‌ ಬ್ಯಾಗ್‌ನಲ್ಲಿ ಕೂರಿಸಿ ಬೈಕ್‌ ಸವಾರಿ ಮಾಡಿದ ತಂದೆ; ಫೋಟೋ ವೈರಲ್.

ಕೆಲ ಸಂದರ್ಭಗಳಲ್ಲಿ ಇದು ಆರೋಗ್ಯ ಸಮಸ್ಯೆಗಳು, ಆತ್ಮವಿಶ್ವಾಸ ಕುಸಿತ ಹಾಗೂ ನಿರ್ಧಾರ ಸಾಮರ್ಥ್ಯಕ್ಕೆ ಪರಿಣಾಮ ಬೀರುವ ಸಾಧ್ಯತೆಯೂ ಇರುತ್ತದೆ.

ಸಮಾಜದಲ್ಲಿ ಕುಟುಂಬ ವ್ಯವಸ್ಥೆಯ ಬದಲಾವಣೆಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಮಾನಸಿಕ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವುದು ಅಗತ್ಯವಾಗಿದೆ. ಸಮತೋಲನಯುತ ಸಾಮಾಜಿಕ ಮತ್ತು ಕುಟುಂಬ ಸಂಬಂಧಗಳು ವ್ಯಕ್ತಿಯ ಉತ್ತಮ ಬದುಕಿಗೆ ಬಹಳ ಮುಖ್ಯವಾಗಿವೆ.

ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ


Disclaimer: ಒಂಟಿಯಾಗಿ ಬದುಕುತ್ತಿರುವ ಮಹಿಳೆಯರ ಸಂಖ್ಯೆಯ ಈ ಲೇಖನವು ಸಾರ್ವಜನಿಕವಾಗಿ ಲಭ್ಯವಿರುವ ಸಮೀಕ್ಷಾ ವರದಿಗಳು ಮತ್ತು ಅಂಕಿ-ಅಂಶಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಇಲ್ಲಿ ನೀಡಿರುವ ಮಾಹಿತಿ ಯಾವುದೇ ಸಮುದಾಯ ಅಥವಾ ವೈಯಕ್ತಿಕ ಜೀವನಶೈಲಿಯನ್ನು ಟೀಕಿಸುವ ಉದ್ದೇಶ ಹೊಂದಿರುವುದಿಲ್ಲ.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top