ಕೈ-ಕಾಲು ತೊಳೆಯಲು ನದಿಗೆ ತೆರಳಿದ್ದ 12 ವರ್ಷದ ಬಾಲಕ: ಚಿಕ್ಕಪ್ಪನ ಕಣ್ಣೆದುರೇ ಎಳೆದೊಯ್ದು ಬಲಿ ಪಡೆದ ಮೊಸಳೆ.

ಚಿಕ್ಕಪ್ಪನ ಕಣ್ಣೆದುರೇ ಎಳೆದೊಯ್ದು ಬಲಿ ಪಡೆದ ಮೊಸಳೆ.

ಬಹ್ರೈಚ್ (ಉತ್ತರ ಪ್ರದೇಶ) : ಕೈ-ಕಾಲು ತೊಳೆಯಲು ತೆರಳಿದ್ದ 12 ವರ್ಷದ ಬಾಲಕನ ಮೇಲೆ ಮೊಸಳೆ ದಾಳಿ ನಡೆಸಿ ಎಳೆದೊಯ್ದು ಬಲಿ ಪಡೆದಿರುವ ಘಟನೆ ಉತ್ತರ ಪ್ರದೇಶದ ಬಹ್ರೈಚ್ (Bahraich) ಜಿಲ್ಲೆಯಲ್ಲಿ ನಡೆದಿದ್ದು, ಘಟನೆ ವೇಳೆ ಚಿಕ್ಕಪ್ಪ ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗದೆ ದುರ್ಘಟನೆ ನಡೆದಿದೆ.

12 ವರ್ಷದ ಸುನೀಲ್ ಎಂಬ ಬಾಲಕ ಕೆಲಸ ಮುಗಿಸಿದ ಬಳಿಕ ಕೈ-ಕಾಲು ತೊಳೆಯಲು ನದಿಗೆ ತೆರಳಿದ್ದ ವೇಳೆ ಮೊಸಳೆಯೊಂದು ಎಳೆದೊಯ್ದು ಕೊಂದಿರುವ ಹೃದಯವಿದ್ರಾವಕ ಘಟನೆಯೊಂದು ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ನಡೆದಿದ್ದು, ಘಟನೆ ನಡೆದು ಹಲವು ಗಂಟೆಗಳ ಬಳಿಕ ಬಾಲಕನ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಇನ್ನು ಘಟನೆ ವೇಳೆ ಬಾಲಕನನ್ನು ರಕ್ಷಿಸಲು ಆತನ ಚಿಕ್ಕಪ್ಪ ಶಕ್ತಿಮೀರಿ ಪ್ರಯತ್ನಿಸಿದರೂ ದುರ್ದೈವಶಾತ್ ಫಲಕಾರಿಯಾಗಲಿಲ್ಲ. ಹಲವು ಗಂಟೆಗಳ ತೀವ್ರ ಶೋಧ ಕಾರ್ಯದ ಬಳಿಕ ಬಾಲಕನ ಮೃತದೇಹ ಪತ್ತೆಯಾಗಿದ್ದು, ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಬಲಿ ಪಡೆದ ಮೊಸಳೆ :

ಮಾಹಿತಿಯ ಪ್ರಕಾರ, ಬಾಲಕ ತನ್ನ ಚಿಕ್ಕಪ್ಪ ಉದಯರಾಜ್ ಸಿಂಗ್ ಅವರೊಂದಿಗೆ ಘಾಘ್ರಾ ನದಿ (Ghaghra River) ಸಮೀಪದ ಕೃಷಿ ಜಮೀನಿಗೆ ಕೆಲಸದ ನಿಮಿತ್ತ ತೆರಳಿದ್ದನು. ಜಮೀನಿನಲ್ಲಿ ಭತ್ತದ ನಾಟಿ ಕೆಲಸ ಮುಗಿಸಿದ ಬಳಿಕ ಘಾಘ್ರಾ ನದಿ ತೀರದಲ್ಲಿ ಕೈ-ಕಾಲು ತೊಳೆಯಲು ತೆರಳಿದ್ದಾನೆ.

ಇದನ್ನು ಓದಿ : ನಿಮ್ಮ ಕರುಳಿನ ಆರೋಗ್ಯ ಸುಧಾರಿಸಬೇಕೇ? ಹಾಗಾದರೆ ಈ 10 ಸೂಪರ್‌ಫುಡ್‌ಗಳನ್ನು ಆಹಾರದಲ್ಲಿ ಸೇರಿಸಲೇಬೇಕು.!

ಬಾಲಕನ ಬರುವಿಕೆಗಾಗಿಯೇ ನೀರಿನಲ್ಲಿ ಹೊಂಚು ಹಾಕಿ ಕುಳಿತಂತಿದ್ದ ಮೊಸಳೆ ಏಕಾಏಕಿ ದಾಳಿ ನಡೆಸಿ ಬಾಲಕನನ್ನು ತನ್ನ ದವಡೆಯಲ್ಲಿ ಬಿಗಿಯಾಗಿ ಹಿಡಿದುಕೊಂಡು ಬಿಟ್ಟಿದೆ.

ರಕ್ಷಿಸಲು ಹರಸಾಹಸ ಪಟ್ಟ ಚಿಕ್ಕಪ್ಪ :

ಈ ವೇಳೆ ಮೊಸಳೆಯ ಬಿಗಿಯಾದ ಹಿಡಿತದ ಪರಿಣಾಮ ನೋವಿನಂದ ಬಾಲಕ ಕಿರುಚಾಡಿದ್ದಾನೆ. ಬಾಲಕನ ಕಿರುಚಾಟ ಕೇಳಿ ತಕ್ಷಣ ಸ್ಥಳಕ್ಕೆ ಓಡಿಬಂದ ಉದಯರಾಜ್ ಸಿಂಗ್, ಮೊಸಳೆಯ ದವಡೆಯಿಂದ ಬಾಲಕನನ್ನು ಬಿಡಿಸಲು ಪ್ರಯತ್ನಿಸಿದ್ದಾರೆ.

ಆದರೆ ಮೊಸಳೆ ತನ್ನ ಹಿಡಿತವನ್ನು ಸಡಿಲಿಸದೆ ಬಾಲಕನನ್ನು ನದಿಯೊಳಗೆ ಎಳೆದುಕೊಂಡು ಹೋಗಿದೆ. ಕಣ್ಣೆದುರೇ ಈ ದುರಂತ ಸಂಭವಿಸುತ್ತಿದ್ದರೂ ಬಾಲಕನನ್ನು ರಕ್ಷಿಸಲು ಸಾಧ್ಯವಾಗದೇ ಚಿಕ್ಕಪ್ಪ ಅಸಹಾಯಕರಾಗಿ ನಿಂತಿರುವುದು ಸ್ಥಳೀಯರನ್ನು ಮರುಗುವಂತೆ ಮಾಡಿದೆ.

ಹಲವು ಗಂಟೆಗಳ ಶೋಧದ ಬಳಿಕ ಮೃತದೇಹ ಪತ್ತೆ :

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಬಹ್ರೈಚ್ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಜಂಟಿ ಶೋಧ ಕಾರ್ಯ ಆರಂಭಿಸಿದರು. ನದಿಯಲ್ಲಿ ಬಲೆ ಬೀಸಿ ಮತ್ತು ವಿವಿಧ ವಿಧಾನಗಳಲ್ಲಿ ಹುಡುಕಾಟ ನಡೆಸಿದರೂ ಆರಂಭದಲ್ಲಿ ಯಾವುದೇ ಸುಳಿವು ಸಿಗಲಿಲ್ಲ.

ಈ ಸುದ್ದಿಯನ್ನು ಓದಿ : ಚಲಿಸುತ್ತಿದ್ದ ಬಸ್‌ನಲ್ಲಿ ಯುವತಿಯರಿಗೆ ಲೈಂಗಿಕ ಕಿರುಕುಳ; ಧೈರ್ಯದಿಂದ ಕಾಮುಕನಿಗೆ ಪಾಠ ಕಲಿಸಿದ ಯುವತಿ, ವಿಡಿಯೋ ವೈರಲ್.!

ಬಳಿಕ ಹಲವು ಗಂಟೆಗಳ ಕಾರ್ಯಾಚರಣೆಯ ನಂತರ ಬಾಲಕನ ಮೃತದೇಹ ಪತ್ತೆಯಾಗಿದ್ದು, ಸದ್ಯ ಪೊಲೀಸರು ಘಟನೆಯನ್ನು ದೃಢಪಡಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಬಲಿ ಪಡೆದ ಮೊಸಳೆಯ ವಿಡಿಯೋ :

Courtesy : Social Media / Twitter

ಗ್ರಾಮಸ್ಥರಲ್ಲಿ ಆತಂಕ ಹೆಚ್ಚಳ :

ಘಾಘ್ರಾ ನದಿ ತೀರ ಪ್ರದೇಶಗಳಲ್ಲಿ ಮೊಸಳೆಗಳ ಸಂಚಾರ ಹೊಸದೇನಲ್ಲ. ಈ ಹಿಂದೆಯೂ ಇಂತಹ ದಾಳಿಗಳ ಘಟನೆಗಳು ವರದಿಯಾಗಿದ್ದರೂ, ಇದೀಗ ಮತ್ತೆ ಬಾಲಕನೊಬ್ಬ ಬಲಿಯಾಗಿರುವುದು ಸ್ಥಳೀಯ ನಿವಾಸಿಗಳ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ನದಿ ತೀರದ ಪ್ರದೇಶಗಳಿಗೆ ತೆರಳುವ ವೇಳೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಸೂಚನೆ ನೀಡಿದೆ. ಜೊತೆಗೆ ಮೊಸಳೆಗಳ ಚಲನವಲನದ ಮೇಲೆ ನಿಗಾ ವಹಿಸಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ


Disclaimer: ಈ ಬಲಿ ಪಡೆದ ಮೊಸಳೆ ವರದಿಯು ಲಭ್ಯವಿರುವ ಮಾಹಿತಿ ಹಾಗೂ ಸಂಬಂಧಿತ ಅಧಿಕಾರಿಗಳ ಪ್ರಾಥಮಿಕ ವಿವರಗಳನ್ನು ಆಧರಿಸಿ ಸಿದ್ಧಪಡಿಸಲಾಗಿದೆ. ತನಿಖೆ ಮುಂದುವರಿದಿರುವುದರಿಂದ ಹೆಚ್ಚಿನ ಅಧಿಕೃತ ಮಾಹಿತಿ ಲಭ್ಯವಾದಂತೆ ವಿವರಗಳಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top