Saturday, July 12, 2025

Janaspandhan News

HomeGeneral NewsSex racket case : ಇಬ್ಬರು ಪೊಲೀಸರ ಬಂಧನ.?
spot_img
spot_img

Sex racket case : ಇಬ್ಬರು ಪೊಲೀಸರ ಬಂಧನ.?

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸೆಕ್ಸ್‌ ರಾಕೆಟ್‌ ಪ್ರಕರಣಕ್ಕೆ (Sex racket case) ಸಂಬಂಧಿಸಿದಂತೆ ಇಬ್ಬರು ಪೊಲೀಸ್‌ರನ್ನು ಬಂಧಿಸಿರುವ ವರದಿಯೊಂದು ಕೋಝಿಕೋಡ್‌ನ ಮಲಪರಂಬನಿಂದ ಬಂದಿದೆ.

ಬಂಧಿತ Sex racket ನ ಆರೋಪಿಗಳನ್ನು ಶೈಜಿತ್ ಮತ್ತು ಸನಿತ್ ಎಂದು ತಿಳಿದು ಬಂದಿದ್ದು, ಈ ಇಬ್ಬರೂ ಪೊಲೀಸ್ ಚಾಲಕರಾಗಿದ್ದು, ಅವರನ್ನು ಅಮಾನತುಗೊಳಿಸಲಾಗಿದೆ ಎಂದು ವರದಿಯಾಗಿದೆ. 

ಮಲಪರಂಬ ಸೆಕ್ಸ್ ರಾಕೆಟ್ (Sex racket) ಕೇಂದ್ರದಿಂದ ದಿನನಿತ್ಯದ ಆದಾಯ ಒಂದು ಲಕ್ಷ ರೂ. ಕೇಂದ್ರದ ಕ್ಯಾಷಿಯರ್ ಮತ್ತು ಮ್ಯಾನೇಜರ್ ಬಿಂದು ಅವರ ಕೈಗೆ ತಲುಪುತ್ತಿತ್ತು. ಆ ಹಣ ನೇರವಾಗಿ ಅದನ್ನು ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳ ಖಾತೆಗಳಿಗೆ ಹೋಗುತ್ತಿತ್ತು ಎಂದು ಆರೋಪಿಸಲಾಗುತ್ತಿದೆ.

ಇದನ್ನು ಓದಿ : ಗಸ್ತು ತಿರುಗುತ್ತಿದ್ದಾಗ SUV ಡಿಕ್ಕಿ : ಮಹಿಳಾ ಪೊಲೀಸ್ ಸಾವು, 2 ಜನರಿಗೆ ಗಾಯ.!

ಈ Sex racket ಪ್ರಕರಣದ ಆರೋಪಿಗಳಾದ ಶೈಜಿತ್ ಮತ್ತು ಸನಿತ್, ಪೊಲೀಸ್ ಜಿಲ್ಲಾ ಕೇಂದ್ರದ ಚಾಲಕರು. ಇವರು ಪರಾರಿಯಾಗಿರುವ ಹಿನ್ನಲೆಯಲ್ಲಿ ಇಬ್ಬರಿಗಾಗಿ ಲುಕೌಟ್ ನೋಟಿಸ್ ಜಾರಿ ಮಾಡಲಾಗಿತ್ತು. ಅಲ್ಲದೆ ಅವರ ಮೊಬೈಲ್ ಫೋನ್‌ಗಳು ಸಹ ಸ್ವಿಚ್ ಆಫ್ ಆಗಿವೆ.

ಇಬ್ಬರು ಪೊಲೀಸರ ಖಾತೆಗಳಿಗೆ Sex racket ನಿಂದ ಈಗಾಗಲೇ ಲಕ್ಷಾಂತರ ರೂಪಾಯಿಗಳು ತಲುಪಿವೆ ಎಂದು ತನಿಖೆಯಿಂದ ತಿಳಿದುಬಂದಿದೆ. Sex racket ನಿಂದ ಬಂದ ಆದಾಯದಲ್ಲಿ ಮಹಿಳೆಯರಿಗೆ ಸ್ವಲ್ಪ ಮೊತ್ತವನ್ನು ಮಾತ್ರ ನೀಡಲಾಗಿದೆ. ಉಳಿದ ಮೊತ್ತವನ್ನು ಶೈಜಿತ್ ಮತ್ತು ಸನಿತ್ ಹಂಚಿಕೊಂಡಿದ್ದಾರೆ. ಆದಾಗ್ಯೂ, ಈ ಬಗ್ಗೆ ಯಾವುದೇ ದೃಢೀಕರಣವಿಲ್ಲ. ಪೊಲೀಸರು ಈ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.

ಈ ಮಧ್ಯೆ, Sex racket ನ ಕಳಂಕಿತ ಪೊಲೀಸರನ್ನು ಬಂಧಿಸದಿರುವುದಕ್ಕಾಗಿ ಟೀಕೆಗಳು ಕೇಳಿಬರುತ್ತಿದ್ದು, ಅವರು ತಪ್ಪಿಸಿಕೊಳ್ಳಲು ಬಂಧನ ವಿಳಂಬವಾಗುತ್ತಿದೆ ಎಂದು ಆರೋಪಿಸಲಾಗಿದೆ.

ಇದನ್ನು ಓದಿ : Accident : ಅಥಣಿ ಬಳಿ ಭೀಕರ ಅಪಘಾತಕ್ಕೆ 3 ಜನರ ಸಾವು.!

ಆರೋಪಿಗಳನ್ನು ಕೋಝಿಕ್ಕೋಡ್‌ನ ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಲ್ಲಿಸಲಾದ ಆರೋಪಪಟ್ಟಿಯಲ್ಲಿ 10 ಮತ್ತು 11 ನೇ ಆರೋಪಿಗಳನ್ನಾಗಿ ನೇಮಿಸಲಾಗಿದೆ.

ಜೂನ್ 6 ರಂದು ಕೋಝಿಕ್ಕೋಡ್ ನಗರದ ಹೃದಯ ಭಾಗದಲ್ಲಿರುವ ಮಲಪರಂಬ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ದಿಢೀರ್ ತಪಾಸಣೆಯ ಸಂದರ್ಭದಲ್ಲಿ ಶಂಕಿತ ಅಂತರ್ ಜಿಲ್ಲಾ ಲೈಂಗಿಕ ಜಾಲ (Sex racket) ಬಯಲಾಯಿತು. (ಏಜೇನ್ಸಿಸ್)‌

Central Bank : ಸೆಂಟ್ರಲ್ ಬ್ಯಾಂಕ್ ಆಫ್‌ ಇಂಡಿಯಾದಲ್ಲಿ 4500 ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಜನಸ್ಪಂದನ ನ್ಯೂಸ್‌, ನೌಕರಿ : ಸೆಂಟ್ರಲ್ ಬ್ಯಾಂಕ್ (Central Bank) ಆಫ್‌ ಇಂಡಿಯಾದಲ್ಲಿ ಖಾಲಿ ಇರುವ 4,500 (ಅಪ್ರೆಂಟಿಸ್) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ (Central Bank Of India ದ Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

ಇದನ್ನು ಓದಿ : Kidney stones : ಕಿಡ್ನಿ ಸ್ಟೋನ್ ಸಮಸ್ಯೆಯೇ.? ಹಾಗಾದ್ರೆ ಕುಡಿಯಿರಿ ಈ 1 ವಿಶೇಷ ಜ್ಯೂಸ್.!

ಅಪ್ರೆಂಟಿಸ್ ಕಾಯಿದೆ- 196 ರ ಅಡಿಯಲ್ಲಿ ಮತ್ತು ಅಪ್ರೆಂಟಿಸ್‌ಶಿಪ್ ನೀತಿಯ ಪ್ರಕಾರ ಅರ್ಹ ಅಭ್ಯರ್ಥಿಗಳಿಂದ ಸೆಂಟ್ರಲ್ ಬ್ಯಾಂಕ್ (Central Bank) ಆಫ್‌ ಇಂಡಿಯಾದಲ್ಲಿ 4500 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೇಂದ್ರ ಉನ್ನತ ಶಿಕ್ಷಣ ಸಚಿವಾಲಯದ ಸಹಭಾಗಿತ್ವದಲ್ಲಿ ಬ್ಯಾಂಕ್ ಈ ಅಪ್ರೆಂಟಿಸ್‌ಶಿಪ್ ನೀಡುತ್ತಿದೆ.

Central Bank ನೇಮಕಾತಿ ವಿವರಗಳು :
  • ಸಂಸ್ಥೆ ಹೆಸರು : ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (Central Bank) .
  • ಒಟ್ಟು ಹುದ್ದೆಗಳ ಸಂಖ್ಯೆ : 4500.
  • ಹುದ್ದೆಗಳ ಹೆಸರು : ಅಪ್ರೆಂಟಿಸ್.
  • ಉದ್ಯೋಗ ಸ್ಥಳ : ಭಾರತಾದ್ಯಂತ.
ಇದನ್ನು ಓದಿ : Ahmedabad : 243 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಅಪಘಾತ.!
ಹುದ್ದೆಗಳ ಪ್ರಕಾರ :
  • ಬ್ಯಾಂಕಿನ ವಿವಿಧ ಶಾಖೆಗಳಲ್ಲಿ ತರಬೇತಿ ಪಡೆದ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ.
ವೇತನ ಶ್ರೇಣಿ :
  • ಈ ಹುದ್ದೆಗಳಿಗೆ ಆಯ್ಕೆಯದ ಅಭ್ಯಾರ್ಥಿಗಳಿಗೆ ರೂ. 15,000/- ಪ್ರತಿ ತಿಂಗಳು ಬ್ಯಾಂಕಿನ (Central Bank) ನಿಯಮಾವಳಿಯಂತೆ ವೇತನ ನೀಡಲಾಗುವುದು.
ಇದನ್ನು ಓದಿ : MECL : ಮಿನಿರಲ್ ಎಪ್ಲೋರೇಷನ್ & ಕನ್ಸಲ್ಟೆನ್ಸಿ ಲಿಮಿಟೆಡ್‌ನಲ್ಲಿ ಉದ್ಯೋಗವಕಾಶ.!
ಶೈಕ್ಷಣಿಕ ವಿದ್ಯಾರ್ಹತೆ :
  • ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ (Degree) ಪೂರ್ಣಗೊಳಿಸಿರಬೇಕು. ಯಾವುದೇ ವಿಭಾಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ವಯೋಮಿತಿ : (07-06-2025 ಕ್ಕೆ)
  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿವ ಅಭ್ಯರ್ಥಿಯ ಕನಿಷ್ಠ ವರ್ಷ : 20 ವರ್ಷ.
  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿವ ಅಭ್ಯರ್ಥಿಯ ಗರಿಷ್ಠ ವರ್ಷ :  28 ವರ್ಷ.
ಇದನ್ನು ಓದಿ : ಗಸ್ತು ತಿರುಗುತ್ತಿದ್ದಾಗ SUV ಡಿಕ್ಕಿ : ಮಹಿಳಾ ಪೊಲೀಸ್ ಸಾವು, 2 ಜನರಿಗೆ ಗಾಯ.!
ವಯೋಮಿತಿ ಸಡಿಲಿಕೆ :
  • ಒಬಿಸಿ ಅಭ್ಯರ್ಥಿಗಳಿಗೆ : 03 ವರ್ಷ.
  • SC/ST ಅಭ್ಯರ್ಥಿಗಳಿಗೆ : 05 ವರ್ಷ.
  • ವಿಕಲಚೇತನ ಅಭ್ಯರ್ಥಿಗಳಿಗೆ : 
  • ಯುಆರ್ : 10 ವರ್ಷ.
  • OBC : 13 ವರ್ಷ.
  • SC/ST : 15 ವರ್ಷ.
ಇದನ್ನು ಓದಿ : Accident : ಅಥಣಿ ಬಳಿ ಭೀಕರ ಅಪಘಾತಕ್ಕೆ 3 ಜನರ ಸಾವು.!
ಅರ್ಜಿ ಶುಲ್ಕ :
  • ವಿಕಲಚೇತನ (PwBD) ಅಭ್ಯರ್ಥಿಗಳು : ರೂ. 400/-
  • SC/ST/Women/EWS ಅಭ್ಯರ್ಥಿಗಳು : ರೂ. 600/-
  • OBC ಅಭ್ಯರ್ಥಿಗಳು : ರೂ. 800/-
ಶುಲ್ಕ ಪಾವತಿ ವಿಧಾನ :
  • ಆನ್‌ಲೈನ್ (Online) ಮೂಲಕ ಶುಲ್ಕ ಪಾವತಿ ಮಾಡಲು ಅವಕಾಶವಿದೆ.
ಆಯ್ಕೆ ವಿಧಾನ :
  • ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ:
  • Online test : ಬ್ಯಾಂಕಿಂಗ್ ಜ್ಞಾನ, ಸಾಮಾನ್ಯ ಅರಿವು, ಸಂಖ್ಯಾತ್ಮಕ ನಿರ್ಣಯ, ಅಂಕಗಣಿತ, ಇಂಗ್ಲೀಷ್ ಸೇರಿದಂತೆ ವಿಷಯಗಳನ್ನು ಒಳಗೊಂಡಂತೆ ಪರೀಕ್ಷೆ ನಡೆಸಲಾಗುತ್ತದೆ.
  • Local language test : ಅಭ್ಯರ್ಥಿಗಳು ಆಯ್ಕೆ ಮಾಡಿದ ರಾಜ್ಯದ ಪ್ರಕಾರ ಸ್ಥಳೀಯ ಭಾಷೆಯಲ್ಲಿ ನೈಪುಣ್ಯದ ಪರೀಕ್ಷೆ ನಡೆಯಲಿದೆ.
ಇದನ್ನು ಓದಿ : Romance : ಕಾಲೇಜ್ ಕ್ಲಾಸ್ ಬಿಟ್ಟು, ನಡುಬೀದಿಯಲ್ಲಿ ವಿದ್ಯಾರ್ಥಿಗಳ ಲವ್ ಕ್ಲಾಸ್.!
ಅರ್ಜಿ ಸಲ್ಲಿಸುವ ವಿಧಾನ :
  • ಅಧಿಕೃತ (Central Bank Of India) ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
  • ಅರ್ಜಿ ಸಲ್ಲಿಸಲು ಮೊದಲು ನಿಮ್ಮ Email ID, Mobile Number, ಶೈಕ್ಷಣಿಕ ದಾಖಲೆಗಳನ್ನು ಸಿದ್ಧಪಡಿಸಿ.
  • Online ಅರ್ಜಿ ಸಲ್ಲಿಕೆ ಲಿಂಕ್‌ನಲ್ಲಿ ಅರ್ಜಿ ನಮೂನೆ ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು Upload ಮಾಡಿ ಹಾಗೂ ಫೋಟೋ ಸೈನ್ ಮಾಡಿ.
  • ಅರ್ಜಿ ಶುಲ್ಕವನ್ನು ಪಾವತಿಸಿ.
  • ಅರ್ಜಿ ಸಲ್ಲಿಸಿ ಮತ್ತು ನಿಮ್ಮ Application ಸಂಖ್ಯೆಯನ್ನು ಉಳಿಸಿಟ್ಟುಕೊಳ್ಳಲು ಪ್ರಿಂಟ್‌ (Print) ತೆಗೆದುಟ್ಟುಕೊಳ್ಳಿ.
ಪ್ರಮುಖ ದಿನಾಂಕಗಳು :
  • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : ಜೂನ್ 07, 2025.
  • ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಜೂನ್ 23, 2025.
  • ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ : ಜೂನ್ 25, 2025.
  • ಆನ್‌ಲೈನ್ ಪರೀಕ್ಷೆ (approximate) : ಜುಲೈ 03, 2025.
ಇದನ್ನು ಓದಿ : Greens : ಅರೆ ನೀವು ತಿಂದಿರಾ? ಈ 1 ಸೊಪ್ಪಿನ ಆರೋಗ್ಯದ ರಹಸ್ಯಗಳು ಇಗೋ ಇಲ್ಲಿವೆ!
ಕರ್ನಾಟಕದಲ್ಲಿ ಹುದ್ದೆಗಳು ಎಲ್ಲಲ್ಲಿ?

ಬೆಂಗಳೂರು ಗ್ರಾಮಾಂತರ-3, ಬೆಂಗಳೂರು ನಗರ-37, ಚಾಮರಾಜನಗರ-1, ಚಿಕ್ಕಬಳ್ಳಾಪುರ-3, ಚಿಕ್ಕಮಗಳೂರು-1, ಹಾಸನ-3, ಕೊಡಗು-3, ಕೋಲಾರ-1, ಮಂಡ್ಯ-2, ಮೈಸೂರು-4, ರಾಮನಗರ-2, ತುಮಕೂರು-1, ಬಾಗಲಕೋಟೆ-4, ಬಳ್ಳಾರಿ-2, ಬೆಳಗಾವಿ-3, ಬೀದರ್-1, ಚಿತ್ರದುರ್ಗ-1, ದಕ್ಷಿಣ ಕನ್ನಡ-3, ದೇವನಗೆರೆ-3, ದಾರವಾಡ-4. ಗದಗ-2, ಹಾವೇರಿ-3, ಕಲಬುರಗಿ-2, ಕೊಪ್ಪಳ-2, ರಾಯಚೂರು-3, ಶಿವಮೊಗ್ಗ-1,ಉಡುಪಿ-2, ಉತ್ತರ ಕನ್ನಡ-4, ವಿಜಯನಗರ-1, ವಿಜಯಪುರ-3, ಯಾದಗಿರಿ-2

ಪ್ರಮುಖ ಲಿಂಕ್‌ಗಳು :

Disclaimer : The above given information is available On online, candidates should check it properly before applying. This is for information only.

- Advertisement -
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments