Saturday, July 12, 2025

Janaspandhan News

HomeGeneral NewsBSF : ಸಹೋದ್ಯೋಗಿಯಿಂದ ಬಿಎಸ್‌ಎಫ್ ಯೋಧನ ಹತ್ಯೆ.!
spot_img
spot_img

BSF : ಸಹೋದ್ಯೋಗಿಯಿಂದ ಬಿಎಸ್‌ಎಫ್ ಯೋಧನ ಹತ್ಯೆ.!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಮುರ್ಷಿದಾಬಾದ್ ಜಿಲ್ಲೆಯ ಶಂಶೇರ್‌ಗಂಜ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕರ್ತವ್ಯದಲ್ಲಿದ್ದ ವೇಳೆ ಗಡಿ ಭದ್ರತಾ ಪಡೆ (BSF) ಕಾನ್‌ಸ್ಟೆಬಲ್ ಓರ್ವರ ಮೇಲೆ  ಸಹ ಜವಾನನೊಬ್ಬ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ.

ರಾಜಸ್ಥಾನದ ಆರೋಪಿ ಎಸ್‌ಕೆ ಮಿಶ್ರಾ, ಬಿಎಸ್‌ಎಫ್‌ (BSF) ನ 119 ನೇ ಬೆಟಾಲಿಯನ್‌ನಲ್ಲಿ ನಿಯೋಜಿತರಾಗಿದ್ದು, ಅವರು ತಮ್ಮ ಐಎನ್‌ಎಸ್‌ಎಎಸ್ ರೈಫಲ್‌ನಿಂದ ರಾತ್ರಿ 10.30 ರ ಸುಮಾರಿಗೆ 13 ಸುತ್ತು ಗುಂಡು ಹಾರಿಸಿದ್ದಾರೆ.

ಇದನ್ನು ಓದಿ : ಗಸ್ತು ತಿರುಗುತ್ತಿದ್ದಾಗ SUV ಡಿಕ್ಕಿ : ಮಹಿಳಾ ಪೊಲೀಸ್ ಸಾವು, 2 ಜನರಿಗೆ ಗಾಯ.!

ಆರೋಪಿ ಮಿಶ್ರಾ ಐಎನ್‌ಎಸ್‌ಎಎಸ್ ರೈಫಲ್‌ನಿಂದ ಹಾರಿಸಿದ 13 ಸುತ್ತು ಗುಂಡುಗಳಲ್ಲಿ ಕನಿಷ್ಠ ಐದು ಗುಂಡುಗಳು ಅವರ BSF ಸಹೋದ್ಯೋಗಿ ರತನ್ ಲಾಲ್ ಸಿಂಗ್ (38) ಗೆ ತಗುಲಿ ಮಾರಣಾಂತಿಕ ಗಾಯಗಳನ್ನುಂಟು ಮಾಡಿದ್ದವು.

ಶಾಂತಿ ಕಾಪಾಡಲು ಮತ್ತು ನಾಗರಿಕರನ್ನು ರಕ್ಷಿಸಲು ಕೋಲ್ಕತ್ತಾ ಹೈಕೋರ್ಟ್ ನೀಡಿದ ಆದೇಶದ ಮೇರೆಗೆ ಈ ಇಬ್ಬರು ಬಿಎಸ್‌ಎಫ್ ‌(BSF) ಯೋಧರನ್ನು ಹಿಂಸಾಚಾರ ಪೀಡಿತ ಸ್ಥಳದಲ್ಲಿ ನಿಯೋಜಿಸಲಾಗಿತ್ತು ಎಂದು ಬಿಎಸ್‌ಎಫ್ ಮೂಲಗಳ ಪ್ರಕಾರ ತಿಳಿದು ಬಂದಿದೆ.

ಇದನ್ನು ಓದಿ : Romance : ಕಾಲೇಜ್ ಕ್ಲಾಸ್ ಬಿಟ್ಟು, ನಡುಬೀದಿಯಲ್ಲಿ ವಿದ್ಯಾರ್ಥಿಗಳ ಲವ್ ಕ್ಲಾಸ್.!

ಮೊದಲು ಅನುಪ್ನಗರ ಆಸ್ಪತ್ರೆಗೆ ತನ್ ಲಾಲ್ ಸಿಂಗ್ ಕರೆದೊಯ್ಯಲಾಯಿತು, ಆ ನಂತರ ಅವರ ಸ್ಥಿತಿ ಗಂಭೀರವಾದ ಹಿನ್ನಲೆಯಲ್ಲಿ ಜಂಗಿಪುರ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತದರೂ ಸಹ ದುರ್ದೈವಶಾತ್ ಅವರು ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ.

ಇನ್ನು ರೈಫಲ್‌ನಿಂದ 13 ಸುತ್ತು ಗುಂಡು ಹಾರಿಸಿದ್ದ ಆರೋಪಿ ಎಸ್.ಕೆ. ಮಿಶ್ರಾ ಸ್ಥಳದಿಂದ ಪರಾರಿಯಾಗಿದ್ದ. ಆದರೆ, ಪೊಲೀಸರು ಮಾತ್ರ ರಾತ್ರಿ ಅವರನ್ನು ಪತ್ತೆಹಚ್ಚಿ ಬಂದೂಕಿನ ಸಮೇತ ಬಂಧಿಸಿದ್ದಾರೆ.

ಇದನ್ನು ಓದಿ : Helicopter crash : ಪೈಲಟ್​ ಸೇರಿ 6 ಮಂದಿ ಸಾವು.!

ಆರೋಪಿ ಎಸ್.ಕೆ. ಮಿಶ್ರಾ ವಿರುದ್ಧ ಔಪಚಾರಿಕ ಎಫ್‌ಐಆರ್ ದಾಖಲಿಸಲಾಗಿದ್ದು, ಇಂದು ಜಂಗಿಪುರ ನ್ಯಾಯಾಲಯದ ಮುಂದೆ ಹಾಜರುಪಡಿಸುವ ನಿರೀಕ್ಷೆಯಿದೆ. ಘಟನೆಯನ್ನು ಬಿಎಸ್‌ಎಫ್ (BSF) ಅಧಿಕಾರಿಗಳು  ದೃಢಪಡಿಸಿದ್ದಾರೆ.

ಈ ಮಧ್ಯೆ ಐಎನ್‌ಎಸ್‌ಎಎಸ್ ರೈಫಲ್‌ನಿಂದ ಹಾರಿಸಲಾದ ಗುಂಡುಗಳು ಉದ್ದೇಶಪೂರ್ವಕವೋ ಅಥವಾ ಆಕಸ್ಮಿಕವೋ ಎಂಬುವುದರ ಬಗ್ಗೆ ತಿಳಿದು ಬಂದಿಲ್ಲ. ಘಟನೆಯ ಸಮಯದಲ್ಲಿ ಇಬ್ಬರೂ ಯೋಧರು ಮದ್ಯದ ಮದ್ಯದ ಅಮಲಿನಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.

Greens : ಅರೆ ನೀವು ತಿಂದಿರಾ? ಈ 1 ಸೊಪ್ಪಿನ ಆರೋಗ್ಯದ ರಹಸ್ಯಗಳು ಇಗೋ ಇಲ್ಲಿವೆ!

ಜನಸ್ಪಂದನ ನ್ಯೂಸ್, ಡೆಸ್ಕ್ : ನಾವು ನಮ್ಮ ಆರೋಗ್ಯವನ್ನು ಉತ್ತಮವಾಗಿಡಲು ದವಸ, ಧಾನ್ಯ, ಸೊಪ್ಪು (Greens), ಹಣ್ಣುಗಳ ಜೊತೆಗೆ ಹಸಿರು ತರಕಾರಿಗಳನ್ನು ಸಹ ಸೇರಿಸಬೇಕಾಗುತ್ತದೆ. ಅದರಲ್ಲಿಯೂ ಚಳಿಗಾಲದಲ್ಲಿ (winter) ಹೆಚ್ಚಾಗಿ ದೊರಕುವ ಈ ಸೊಪ್ಪನ್ನು (Greens) ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ.

ಹೌದು, ಮೆಂತ್ಯ ಸೊಪ್ಪಿನಲ್ಲಿ ಪೊಟಾಷಿಯಂ, ಮ್ಯಾಂಗನೀಸ್, ಕ್ಯಾಲ್ಸಿಯಂ (Calcium), ವಿಟಮಿನ್ ಎ, ವಿಟಮಿನ್ ಸಿ, ಸೆಲೆನಿಯಂ, ವಿಟಮಿನ್ ಸಿ ಯಂತಹ ಪೋಷಕಾಂಶಗಳು ಕಂಡುಬರುತ್ತವೆ.

ಇದನ್ನು ಓದಿ : Suspend : ಹಣಕ್ಕೆ ಬೇಡಿಕೆಯಿಟ್ಟ ಆರೋಪ ; ಪಿಎಸ್ಐ ಸಸ್ಪೆಂಡ್.!

ಕೂದಲನ್ನು ಆರೋಗ್ಯಕರವಾಗಿಡಲು ಮೆಂತ್ಯ ಸೊಪ್ಪು (Fenugreek) ಸಹಾಯ ಮಾಡುವುದು. ಮೆಂತ್ಯದಲ್ಲಿರುವ ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಸಾರಜನಕವು ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ. ಇನ್ನೂ ಈ ಸೊಪ್ಪನ್ನು (Greens) ಜಗಿದು ತಿನ್ನುವುದರಿಂದ (By chewing and eating) ಕೂದಲುಗಳು ಬಲಗೊಳ್ಳುತ್ತವೆ.

ಚಳಿಗಾಲ ಬಂತೆಂದರೆ ಸಾಕು ಅನೇಕ ಜನರಿಗೆ ಜೀರ್ಣಕ್ರಿಯೆಯ ಸಮಸ್ಯೆ (Digestive problem) ಪೀಡಿಸಲು‌ ಶುರುವಾಗುತ್ತದೆ. ಅಂಥವರಿಗೆ ಮೆಂತ್ಯ ಸೊಪ್ಪು (Greens) ಪ್ರಯೋಜನಕಾರಿ.

ಇದನ್ನು ಓದಿ : Mangli : ಗಾಯಕಿ ಮಂಗ್ಲಿಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ಗಾಂಜಾ ಮತ್ತು ವಿದೇಶಿ ಮದ್ಯ.!

ಮೆಂತ್ಯ ಸೊಪ್ಪು (Greens) ಉತ್ತಮ ಪ್ರಮಾಣದ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳನ್ನು (Fiber and antioxidants) ಹೊಂದಿದೆ.

ಗ್ಯಾಸ್, ಮಲಬದ್ಧತೆ ಮತ್ತು ಅಜೀರ್ಣದಿಂದ ಬಳಲುತ್ತಿರುವ ಜನರಲ್ಲಿ ಜೀರ್ಣಕಾರಿ ಸಮಸ್ಯೆಗಳನ್ನು ಕಡಿಮೆ ಮಾಡಲು ಈ ಸೊಪ್ಪು (Greens) ಸಹಾಯ ಮಾಡುತ್ತದೆ.

ಇದನ್ನು ಓದಿ : Kidney stones : ಕಿಡ್ನಿ ಸ್ಟೋನ್ ಸಮಸ್ಯೆಯೇ.? ಹಾಗಾದ್ರೆ ಕುಡಿಯಿರಿ ಈ 1 ವಿಶೇಷ ಜ್ಯೂಸ್.!

ಅನಾದಿ ಕಾಲದಿಂದಲೂ ನಮ್ಮ ಹಿರಿಯರು, ಪಂಡಿತರು ಮೆಂತ್ಯ ಎಲೆಗಳನ್ನು ಮಧುಮೇಹ ಮತ್ತು ಮೂತ್ರಪಿಂಡದ ಕಾಯಿಲೆಗಳಿಗೆ (Kidney disease) ಚಿಕಿತ್ಸೆ ನೀಡಲು ಬಳಸುತ್ತಿದ್ದಾರೆ.

ಈ ಸೊಪ್ಪನ್ನು ನಿಯಮಿತವಾಗಿ ಸೇವಿಸುತ್ತಾ ಬಂದ್ರೆ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ (Consuming it regularly will strengthen the immune system). ಇದರಿಂದಾಗಿ ನೆಗಡಿ, ಶೀತದಂತಹ ಅಪಾಯ ಕಡಿಮೆಯಾಗುತ್ತದೆ.

ಇದನ್ನು ಓದಿ : Ahmedabad : 243 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಅಪಘಾತ.!

ಮೆಂತ್ಯ ಸೊಪ್ಪು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಮೆಂತ್ಯ ಸೊಪ್ಪಿನಲ್ಲಿ ಅಮೈನೋ ಆಮ್ಲಗಳಿದ್ದು (Amino acid), ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.

- Advertisement -
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments