Saturday, July 12, 2025

Janaspandhan News

HomeGeneral NewsIndrayani : ನದಿಯ ಸೇತುವೆ ಕುಸಿದು 15 ರಿಂದ 20 ಪ್ರವಾಸಿಗರು ನೀರುಪಾಲು.!
spot_img
spot_img

Indrayani : ನದಿಯ ಸೇತುವೆ ಕುಸಿದು 15 ರಿಂದ 20 ಪ್ರವಾಸಿಗರು ನೀರುಪಾಲು.!

- Advertisement -

ಜನಸ್ಪಂದನ ನ್ಯೂಸ್, ಡೆಸ್ಕ್‌ :‌ ನದಿಗೆ (Indrayani River) ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆ ಕುಸಿದು 15 ರಿಂದ 20 ಪ್ರವಾಸಿಗರು ನೀರುಪಾಲಾಗಿರುವ ಘಟನೆ ಮಹಾಷ್ಟ್ರದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಭಾನುವಾರ ದಿನವಾದ ಇಂದು (ಜೂ.15) ಮಧ್ಯಾಹ್ನ ಮಹಾರಾಷ್ಟ್ರದ ಪುಣೆಯ ಕುಂದಮಾಲಾ ಗ್ರಾಮದ ಬಳಿ ಇಂದ್ರಾಯಾಣಿ ನದಿ (Indrayani River) ಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಕಬ್ಬಿಣದ ಸೇತುವೆ ಕುಸಿದು 15 ರಿಂದ 20 ಪ್ರವಾಸಿಗರು ನೀರುಪಾಲಾಗಿದ್ದಾರೆಂದು ತಿಳಿದು ಬಂದಿದೆ.

ಇಂದ್ರಾಯಾಣಿ (Indrayani) ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಕಬ್ಬಿಣದ ಸೇತುವೆ ಕುಸಿದು ಬಿದ್ದಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಹಲವರನ್ನು ರಕ್ಷಿಸಲಾಗಿದೆ.

ಇದನ್ನು ಓದಿ : Kidney stones : ಕಿಡ್ನಿ ಸ್ಟೋನ್ ಸಮಸ್ಯೆಯೇ.? ಹಾಗಾದ್ರೆ ಕುಡಿಯಿರಿ ಈ 1 ವಿಶೇಷ ಜ್ಯೂಸ್.!

ಮಹಾರಾಷ್ಟ್ರದ ಪುಣೆಯ ಮಾವಲ್ ತಾಲೂಕಿನಲ್ಲಿರುವ ಕುಂದಮಲ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇಲ್ಲಿ ಪ್ರತಿದಿನ ಮಳೆಗಾಲದಲ್ಲಿ ನೂರಾರು ಜನ ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಈ ಸ್ಥಳದಲ್ಲಿ ಇಂದ್ರಾಯಾಣಿ (Indrayani) ಎಂಬ ನದಿ ಹರಿಯುತ್ತಿದ್ದು, ಈ ನದಿ ದಾಟಲು ಒಂದು ಸೇತುವೆಯನ್ನು ನಿರ್ಮಿಸಲಾಗಿದೆ.

ಇಂದು (ಜೂ.15) ಏಕಾಏಕಿ ಈ ಸೇತುವೆ ಕುಸಿದ ಪರಿಣಾಮವಾಗಿ 25 ರಿಂದ 30 ಜನ ನದಿಯಲ್ಲಿ (Indrayani) ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ದುರ್ಘಟನೆಯಲ್ಲಿ ಕೆಲ ಪ್ರವಾಸಿಗರು ಸಾವನ್ನಪ್ಪಿದ್ದೇರೆ, ಇನ್ನು ಕೆಲವರನ್ನು ರಕ್ಷಿಸಲಾಗಿದೆ.

ದುರ್ಘಟನೆಯ ವಿಷಯ ತಿಳಿಯುತ್ತಿದಂತೆಯೇ ಘಟನಾ ಸ್ಥಳಕ್ಕೆ ತಕ್ಷಣ ಪೊಲೀಸರು ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ದುರ್ಘಟನೆಯಲ್ಲಿ ಎಷ್ಟು ಜನರು ಮೃತಪಟ್ಟಿದ್ದಾರೆ ಎಂಬುವುದು ನಿಖರವಾಗಿ ತಿಳಿದುಬಂದಿಲ್ಲ. ಆದಾಗ್ಯೂ ಈ ಅವಘಡದಲ್ಲಿ 15 ರಿಂದ 20 ಜನರು ನದಿಯಲ್ಲಿ ಕೊಚ್ಚಿಹೋಗಿರುವ ಸಾಧ್ಯತೆಯಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.

ಇದನ್ನು ಓದಿ : Sex racket case : ಇಬ್ಬರು ಪೊಲೀಸರ ಬಂಧನ.?

ಸುಮಾರು 10 ರಿಂದ 15 ಜನರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪಿಂಪ್ರಿ-ಚಿಂಚ್‌ವಾಡ್ ಪೊಲೀಸರು ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ, 6 ಜನರು ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.

ಎನ್‌ಡಿಆರ್‌ಎಫ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಆಗಮಿಸಿವೆ.

ಇಂದ್ರಯಾಣಿ (Indrayani) ನದಿಯ ದುರ್ಘಟನೆಯ ವಿಡಿಯೋ :

BSF : ಸಹೋದ್ಯೋಗಿಯಿಂದ ಬಿಎಸ್‌ಎಫ್ ಯೋಧನ ಹತ್ಯೆ.!

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಮುರ್ಷಿದಾಬಾದ್ ಜಿಲ್ಲೆಯ ಶಂಶೇರ್‌ಗಂಜ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕರ್ತವ್ಯದಲ್ಲಿದ್ದ ವೇಳೆ ಗಡಿ ಭದ್ರತಾ ಪಡೆ (BSF) ಕಾನ್‌ಸ್ಟೆಬಲ್ ಓರ್ವರ ಮೇಲೆ  ಸಹ ಜವಾನನೊಬ್ಬ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ.

ರಾಜಸ್ಥಾನದ ಆರೋಪಿ ಎಸ್‌ಕೆ ಮಿಶ್ರಾ, ಬಿಎಸ್‌ಎಫ್‌ (BSF) ನ 119 ನೇ ಬೆಟಾಲಿಯನ್‌ನಲ್ಲಿ ನಿಯೋಜಿತರಾಗಿದ್ದು, ಅವರು ತಮ್ಮ ಐಎನ್‌ಎಸ್‌ಎಎಸ್ ರೈಫಲ್‌ನಿಂದ ರಾತ್ರಿ 10.30 ರ ಸುಮಾರಿಗೆ 13 ಸುತ್ತು ಗುಂಡು ಹಾರಿಸಿದ್ದಾರೆ.

ಇದನ್ನು ಓದಿ : ಗಸ್ತು ತಿರುಗುತ್ತಿದ್ದಾಗ SUV ಡಿಕ್ಕಿ : ಮಹಿಳಾ ಪೊಲೀಸ್ ಸಾವು, 2 ಜನರಿಗೆ ಗಾಯ.!

ಆರೋಪಿ ಮಿಶ್ರಾ ಐಎನ್‌ಎಸ್‌ಎಎಸ್ ರೈಫಲ್‌ನಿಂದ ಹಾರಿಸಿದ 13 ಸುತ್ತು ಗುಂಡುಗಳಲ್ಲಿ ಕನಿಷ್ಠ ಐದು ಗುಂಡುಗಳು ಅವರ BSF ಸಹೋದ್ಯೋಗಿ ರತನ್ ಲಾಲ್ ಸಿಂಗ್ (38) ಗೆ ತಗುಲಿ ಮಾರಣಾಂತಿಕ ಗಾಯಗಳನ್ನುಂಟು ಮಾಡಿದ್ದವು.

ಶಾಂತಿ ಕಾಪಾಡಲು ಮತ್ತು ನಾಗರಿಕರನ್ನು ರಕ್ಷಿಸಲು ಕೋಲ್ಕತ್ತಾ ಹೈಕೋರ್ಟ್ ನೀಡಿದ ಆದೇಶದ ಮೇರೆಗೆ ಈ ಇಬ್ಬರು ಬಿಎಸ್‌ಎಫ್ ‌(BSF) ಯೋಧರನ್ನು ಹಿಂಸಾಚಾರ ಪೀಡಿತ ಸ್ಥಳದಲ್ಲಿ ನಿಯೋಜಿಸಲಾಗಿತ್ತು ಎಂದು ಬಿಎಸ್‌ಎಫ್ ಮೂಲಗಳ ಪ್ರಕಾರ ತಿಳಿದು ಬಂದಿದೆ.

ಇದನ್ನು ಓದಿ : Romance : ಕಾಲೇಜ್ ಕ್ಲಾಸ್ ಬಿಟ್ಟು, ನಡುಬೀದಿಯಲ್ಲಿ ವಿದ್ಯಾರ್ಥಿಗಳ ಲವ್ ಕ್ಲಾಸ್.!

ಮೊದಲು ಅನುಪ್ನಗರ ಆಸ್ಪತ್ರೆಗೆ ತನ್ ಲಾಲ್ ಸಿಂಗ್ ಕರೆದೊಯ್ಯಲಾಯಿತು, ಆ ನಂತರ ಅವರ ಸ್ಥಿತಿ ಗಂಭೀರವಾದ ಹಿನ್ನಲೆಯಲ್ಲಿ ಜಂಗಿಪುರ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತದರೂ ಸಹ ದುರ್ದೈವಶಾತ್ ಅವರು ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ.

ಇನ್ನು ರೈಫಲ್‌ನಿಂದ 13 ಸುತ್ತು ಗುಂಡು ಹಾರಿಸಿದ್ದ ಆರೋಪಿ ಎಸ್.ಕೆ. ಮಿಶ್ರಾ ಸ್ಥಳದಿಂದ ಪರಾರಿಯಾಗಿದ್ದ. ಆದರೆ, ಪೊಲೀಸರು ಮಾತ್ರ ರಾತ್ರಿ ಅವರನ್ನು ಪತ್ತೆಹಚ್ಚಿ ಬಂದೂಕಿನ ಸಮೇತ ಬಂಧಿಸಿದ್ದಾರೆ.

ಇದನ್ನು ಓದಿ : Helicopter crash : ಪೈಲಟ್​ ಸೇರಿ 6 ಮಂದಿ ಸಾವು.!

ಆರೋಪಿ ಎಸ್.ಕೆ. ಮಿಶ್ರಾ ವಿರುದ್ಧ ಔಪಚಾರಿಕ ಎಫ್‌ಐಆರ್ ದಾಖಲಿಸಲಾಗಿದ್ದು, ಇಂದು ಜಂಗಿಪುರ ನ್ಯಾಯಾಲಯದ ಮುಂದೆ ಹಾಜರುಪಡಿಸುವ ನಿರೀಕ್ಷೆಯಿದೆ. ಘಟನೆಯನ್ನು ಬಿಎಸ್‌ಎಫ್ (BSF) ಅಧಿಕಾರಿಗಳು  ದೃಢಪಡಿಸಿದ್ದಾರೆ.

ಈ ಮಧ್ಯೆ ಐಎನ್‌ಎಸ್‌ಎಎಸ್ ರೈಫಲ್‌ನಿಂದ ಹಾರಿಸಲಾದ ಗುಂಡುಗಳು ಉದ್ದೇಶಪೂರ್ವಕವೋ ಅಥವಾ ಆಕಸ್ಮಿಕವೋ ಎಂಬುವುದರ ಬಗ್ಗೆ ತಿಳಿದು ಬಂದಿಲ್ಲ. ಘಟನೆಯ ಸಮಯದಲ್ಲಿ ಇಬ್ಬರೂ ಯೋಧರು ಮದ್ಯದ ಮದ್ಯದ ಅಮಲಿನಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.

- Advertisement -
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments