ಜನಸ್ಪಂದನ ನ್ಯೂಸ್, ಡೆಸ್ಕ್ : ರಸ್ತೆಗಳಲ್ಲಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುವ ಘಟನೆಗಳು ಹಲವು ನಗರಗಳಲ್ಲಿ ಹೆಚ್ಚುತ್ತಿರುವುದು ಆತಂಕದ ವಿಚಾರವಾಗಿದೆ.
ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಒಂದು ವಿಡಿಯೋದಲ್ಲಿ, ಕಳ್ಳತನಕ್ಕೆ ಯತ್ನಿಸಿದ ವ್ಯಕ್ತಿಯನ್ನು ನೆರೆಮನೆಯ ಯುವಕನು ಧೈರ್ಯದಿಂದ ಬೆನ್ನಟ್ಟಿ ಹಿಡಿದಿರುವ ಘಟನೆ ಜನರಿಂದ ಮೆಚ್ಚುಗೆಪಡೆಯುತ್ತಿದೆ.
ಸ್ಕೂಟಿಗೆ ಡಿಕ್ಕಿ ಹೊಡೆದು ಕಳ್ಳತನ :
ವೈರಲ್ ಆಗಿರುವ ವಿಡಿಯೋದಲ್ಲಿ, ಯುವತಿಯೊಬ್ಬರು ತಮ್ಮ ಸ್ಕೂಟಿಯಲ್ಲಿ ರಸ್ತೆಯಲ್ಲಿ ಸಾಗುತ್ತಿರುವುದು ಕಾಣಿಸುತ್ತದೆ. ಈ ವೇಳೆ ಹಿಂದಿನಿಂದ ಬೈಕ್‌ನಲ್ಲಿ ಬಂದ ಕಳ್ಳ, ಅಜಾಗರೂಕವಾಗಿ ಸ್ಕೂಟಿಗೆ ಡಿಕ್ಕಿ ಹೊಡೆದು ಯುವತಿಯನ್ನು ಕೆಳಗೆ ಬೀಳಿಸುತ್ತಾನೆ.
ಡಿಕ್ಕಿಯ ಪರಿಣಾಮವಾಗಿ ಸ್ಕೂಟಿ ಮತ್ತು ಬೈಕ್ ಎರಡೂ ರಸ್ತೆಗೆ ಉರುಳುತ್ತವೆ. ಆದರೆ ಕೆಲವೇ ಕ್ಷಣಗಳಲ್ಲಿ ಎದ್ದು ನಿಂತ ಕಳ್ಳ, ಕೆಳಗೆ ಬಿದ್ದಿದ್ದ ಯುವತಿಯ ಕುತ್ತಿಗೆಯಲ್ಲಿದ್ದ ಚೈನ್ಅನ್ನು ಕಿತ್ತುಕೊಂಡು ಅಲ್ಲಿಂದ ಪರಾರಿಯಾಗಲು ಯತ್ನಿಸುತ್ತಾನೆ.
ಘಟನೆಯ ಸಮಯದಲ್ಲಿ ಯುವತಿಯ ಕಿರುಚಾಟ ಕೇಳಿ ಸಮೀಪದ ಮನೆಯಿಂದ ಮಹಿಳೆ ಮತ್ತು ಯುವಕನೊಬ್ಬ ಹೊರಗೆ ಓಡಿ ಬರುತ್ತಾನೆ. ಪರಿಸ್ಥಿತಿ ಅರಿತ ತಕ್ಷಣವೇ ಯುವಕ ಕಳ್ಳನನ್ನು ಬೆನ್ನಟ್ಟಿ ಓಡುತ್ತಾನೆ.
ಕಳ್ಳನ ದುರುದೃಷ್ಟವೂ ಅಥವಾ ಯುವತಿಯ ಸುದೈವವೋ ಇದೇ ವೇಳೆ ಕಳ್ಳನ ಬೈಕ್ ಕೈ ಕೊಟ್ಟಿದೆ. ಹೀಗಾಗಿ ಕೆಲವೇ ಕ್ಷಣಗಳಲ್ಲಿ ಕಳ್ಳನ ಬೈಕ್ ಅನ್ನು ಅಡ್ಡಗಟ್ಟಿ ಸರ ಕದ್ದ ಕಳ್ಳನನ್ನುನಿಲ್ಲಿಸಲು ಯುವಕ ಯಶಸ್ವಿಯಾಗುತ್ತಾನೆ.
ಬಳಿಕ ಸುತ್ತಮುತ್ತಲಿನ ನಿವಾಸಿಗಳು ಕೂಡ ಸ್ಥಳಕ್ಕೆ ಆಗಮಿಸಿ ಕಳ್ಳನನ್ನು ಹಿಡಿಯಲು ಸಹಕರಿಸುತ್ತಾರೆ. ಈ ಧೈರ್ಯ ಮತ್ತು ತಕ್ಷಣದ ಪ್ರತಿಕ್ರಿಯೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆ ಯುವಕನಿಗೆ ಹಲವರು ಶಹಬ್ಬಾಶ್ ಹೇಳುತ್ತಿದ್ದಾರೆ.
ಸರ ಕದ್ದ ಕಳ್ಳನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ :
ಈ ಘಟನೆಗೆ ಸಂಬಂಧಿಸಿದ ವಿಡಿಯೋ ಈಗ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡುತ್ತಿದೆ. ಹಲವರು ಈ ವಿಡಿಯೋವನ್ನು ಹಂಚಿಕೊಳ್ಳುತ್ತಾ, ಅಪರಾಧವನ್ನು ತಡೆಯಲು ನಾಗರಿಕರು ತೋರಿದ ಧೈರ್ಯವನ್ನು ಪ್ರಶಂಸಿಸುತ್ತಿದ್ದಾರೆ.
ಇದೇ ವೇಳೆ, ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಮತ್ತೊಮ್ಮೆ ಚರ್ಚೆ ಶುರುವಾಗಿದೆ. ಇಂತಹ ಘಟನೆಗಳನ್ನು ತಡೆಯಲು ಕಾನೂನು ವ್ಯವಸ್ಥೆಯ ಜೊತೆಗೆ ಸಾರ್ವಜನಿಕ ಜಾಗೃತಿಯೂ ಅಗತ್ಯವೆಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಸ್ಕೂಟಿಗೆ ಡಿಕ್ಕಿ ಹೊಡೆದು ಸರ ಕದ್ದ ಕಳ್ಳನ ವೈರಲ್ ವಿಡಿಯೋ :
चेन स्नैचिंग की कोशिश के दौरान एक युवती ने मदद के लिए आवाज़ लगाई, तो एक बहादुर पड़ोसी तुरंत संदिग्ध के पीछे दौड़ा, उसे पकड़ लिया और पुलिस के हवाले कर दिया।
अगर आपके आसपास ऐसा कुछ होता, तो क्या आप भी इस युवक की तरह आगे बढ़कर मदद करते? 🤔 pic.twitter.com/jucnkpJu5F
ಈ ವೈರಲ್ ವಿಡಿಯೋ ಒಂದು ಕಡೆ ಅಪರಾಧದ ಭೀತಿ ತೋರಿಸಿದರೆ, ಮತ್ತೊಂದೆಡೆ ಸಾಮಾನ್ಯ ನಾಗರಿಕರ ಧೈರ್ಯ ಮತ್ತು ತಕ್ಷಣದ ಪ್ರತಿಕ್ರಿಯೆ ಹೇಗೆ ಅಪರಾಧಿಯನ್ನು ಹಿಡಿಯಲು ಸಹಾಯ ಮಾಡಬಹುದು ಎಂಬುದಕ್ಕೂ ಉದಾಹರಣೆಯಾಗಿದೆ.
Disclaimer: ಈ ಸುದ್ದಿಯಲ್ಲಿ (ಸರ ಕದ್ದ ಕಳ್ಳ) ಉಲ್ಲೇಖಿಸಿರುವ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಮತ್ತು ಲಭ್ಯವಿರುವ ವರದಿಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಘಟನೆಗೆ ಸಂಬಂಧಿಸಿದ ಅಧಿಕೃತ ಮಾಹಿತಿ ಅಥವಾ ತನಿಖೆಯ ವಿವರಗಳು ನಂತರ ಬದಲಾಗುವ ಸಾಧ್ಯತೆ ಇದೆ.