Saturday, July 12, 2025

Janaspandhan News

HomeCrime NewsPune : ಪಿಕ್ ಅಪ್ ವಾಹನಕ್ಕೆ ಕಾರೊಂದು ಡಿಕ್ಕಿ ; 8 ಸಾವು.!
spot_img
spot_img

Pune : ಪಿಕ್ ಅಪ್ ವಾಹನಕ್ಕೆ ಕಾರೊಂದು ಡಿಕ್ಕಿ ; 8 ಸಾವು.!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಪಿಕ್-ಅಪ್ ವಾಹನಕ್ಕೆ ಸ್ವಿಪ್ಟ್ ಡಿಜೈರ್ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ‌ ಸ್ಥಳದಲ್ಲಿಯೇ ಎಂಟು ಮಂದಿ ದುರ್ಮರಣ ಹೊಂದಿರುವ ಘಟನೆ ಮಹಾರಾಷ್ಟ್ರದ ಪುಣೆ (Pune) ಬಳಿ ಬುಧವಾರ ರಾತ್ರಿ ಸಂಭವಿಸಿದೆ.

ರಾತ್ರಿ 7-15ರ ಸುಮಾರಿಗೆ ಪುಣೆ (Pune) ಜಿಲ್ಲೆಯ ಜೆಜೂರಿ-ಮೋರ್ಗಾಂವ್ ರಸ್ತೆಯಲ್ಲಿ ಈ ದುರ್ಘಟನೆ ನಡೆದಿರುವ ಬಗ್ಗೆ ತಿಳಿದು ಬಂದಿದೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಜೆಜೂರಿ-ಮೋರ್ಗಾಂವ್ ರಸ್ತೆಯಲ್ಲಿ ವೇಗವಾವಾಗಿ ಬಂದ ಕಾರೊಂದು ಪಿಕ್-ಅಪ್ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಪಿಕ್-ಅಪ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ವಾಹನದಲ್ಲಿದ್ದವರನ್ನು ಸೇರಿಸಿ ಒಟ್ಟು 8 ಜನರು ಸಾವನ್ನಪ್ಪಿದ್ದಾರೆ. ಇನ್ನು ಈ ಘಟನೆಯಲ್ಲಿ ಇತರ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ : Rape : ಬಾಯ್‌ ಫ್ರೆಂಡ್ ಜೊತೆಯಲ್ಲಿದ್ದ ಯುವತಿ ಮೇಲೆ 10 ಯುವಕರಿಂದ ಅತ್ಯಾಚಾರ.!

ಪುಣೆ (Pune) ಗ್ರಾಮಾಂತರ ಪೊಲೀಸ್ ಅಧೀಕ್ಷಕ ಸಂದೀಪ್ ಸಿಂಗ್ ಗಿಲ್ ಅವರ ಹೇಳಿಕೆ ಪ್ರಕಾರ, ಮಹಿಳೆಯರು ಸೇರಿ ಒಟ್ಟು ಜನರು ಸಾವನ್ನಪ್ಪಿದ್ದಾರೆ. ಪಿಕ್ ಅಪ್ ವಾಹನದ ಚಾಲಕ, ಕಾರಿನಲ್ಲಿದ್ದ ನಾಲ್ವರು ಪುರುಷರು ಮತ್ತು ಮಹಿಳೆ ಹಾಗೂ ಪಿಕ್ ಅಪ್ ವಾಹನದ ಬಳಿ ನಿಂತಿದ್ದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಗೊತ್ತಾಗಿದೆ.

ಪಿಕ್ ಅಪ್ ವಾಹನವೊಂದು ಹೋತೆಲ್‌ ಬಳಿ ನಿಂತಿದೆ. ಈ ವೇಳೆ ಕಾರೊಂದು Pune ಸಮೀಪದ ಜೆಜೂರಿ ಕಡೆಯಿಂದ ವೇಗವಾಗಿ ಬಂದು ನಿಂತಿದ್ದ ಈ ಪಿಕ್ ಅಪ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಕಾರ್‌ ಹೊಡೆದ ರಭಸದ ಡಿಕ್ಕಿಗೆ ಕಾರಿನಲ್ಲಿದ್ದ ಮಹಿಳೆ ಸೇರಿ ಐವರು ಸಾವಿಗೀಡಾಗಿದ್ದರೆ, ಇತ್ತ ಪಿಕ್ ಅಪ್ ವಾಹನ ಚಾಲಕ, ಹೋಟೆಲ್ ಮಾಲೀಕ ಮತ್ತು ಓರ್ವ ಕಾರ್ಮಿಕ ಮೃತರಾಗಿದ್ದಾರೆ.

ಇದನ್ನು ಓದಿ : Snake : ತನಗೆ ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ವ್ಯಕ್ಯಿ.!

ಇನ್ನುಳಿದಂತೆ ಇಬ್ಬರು ಮಕ್ಕಳು ಮತ್ತು ಮಹಿಳೆ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ.

ಇನ್ನು ದುರ್ಘಟನೆಯ ವಿಷಯ ತಿಳಿಯುತ್ತಿದಂತೆಯೇ ಸೃಳಕ್ಕಾಗಮಿಸಿದ ಜೆಜುರಿ (Near Pune) ಪೊಲೀಸ್‌ ನೆರೆವಿಗೆ ಮುಂದಾಗಿದ್ದಾರೆ. ಹಾಗೆಯೇ ಅಪಘಾತಕ್ಕೆ ನಿಖರವಾದ ಕಾರಣ ತಿಳಿಯಲು ಪೊಲೀಸ್ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ರಾತ್ರಿ ಈ 6 ಲಕ್ಷಣಗಳು ಕಂಡು ಬರುತ್ತಿವೆಯೇ.? Kidney ಫೇಲ್ಯೂರ್ ಆಗುವ ಮುನ್ಸೂಚನೆ.!

ಜನಸ್ಪಂದನ ನ್ಯೂಸ್, ಆರೋಗ್ಯ : ರಾತ್ರಿ ಮಲಗಿದಾಗ ಈ 6 ಲಕ್ಷಣಗಳು ಕಂಡು ಬಂದರೆ ಅದು ಕಿಡ್ನಿ (Kidney) ಫೇಲ್ಯೂರ್ ಆಗುವ ಮುನ್ಸೂಚನೆ.!

ದಿನಪೂರ್ತಿ ದುಡಿದು ಬಂದ ವ್ಯಕ್ತಿಗೆ ರಾತ್ರಿ ಹಾಯಾಗಿ ನಿದ್ರೆ ಬಂದರೆ ದಣಿದ ದೇಹಕ್ಕೆ ನೆಮ್ಮದಿ ಸಿಗುತ್ತದೆ. ಈ ನೆಮ್ಮದಿ ನಿದ್ರೆ ಮರುದಿನ ದೇಹವು ಚೈತನ್ಯವಾಗಿರಿಲು ಸಹಾರಿಯಾಗುತ್ತದೆ.

ದಿನಪೂರ್ತಿ ದುಡಿದು ಬಂದವರಿಗೆ ರಾತ್ರಿ ಒಳ್ಳೆ ನಿದ್ರೆ (Sleep) ಬರದಿದ್ದರೆ ಆರೋಗ್ಯ (Health) ಹಾಳಾಗುತ್ತೆ. ಈ ನಿದ್ದೆಯು ಮುಂದೆ ಬರುವ ದೊಡ್ಡ ಗಂಭೀರ ಆರೋಗ್ಯ ಕಾಯಿಲೆಗಳ ಬಗ್ಗೆ ಸೂಚನೆ ನೀಡುತ್ತದೆ.

ಇದನ್ನು ಓದಿ : ಈ ಲಕ್ಷಣಗಳಿದ್ದರೆ ದೇಹದಲ್ಲಿ ಕೆಟ್ಟ Cholesterol ಹೆಚ್ಚಾಗಿದೆ ಅಂತನೇ ಅರ್ಥ.!

ಇಲ್ಲಿ ನಿದ್ದೆಯ ಬಗ್ಗೆ ಏಕೆ ಹೇಳುತ್ತಿದ್ದೇವೆಂದರೆ, ನಾವು ಎಷ್ಟು ಚನ್ನಾಗಿ ನಿದ್ರಿಸುತ್ತೇವೆ ಅನ್ನೋದರ ಮೇಲೆ ನಮ್ಮ ಆರೋಗ್ಯ ನಿರ್ಧಾರವಾಗುತ್ತೇ. ರಾತ್ರಿ ಮಲಗಿದಾಗ ಈ ನಿದ್ರೆಗೆ ಪದೆ ಪದೆ ಅಡಚಣೆ ಉಂಟಾದರೆ ನಿದ್ರೆ ಸರಿಯಾಗಿ ಆಗೋದಿಲ್ಲ.

ಇನ್ನು ಈ ನಿದ್ರೆಗೆ ಅಡಚಣೆ ಉಂಟಾಗಲು ಅನೇಕ ಕಾರಣಗಳಿರಬಹುದು. ಅವುಗಳಲ್ಲಿ ಇದೊಂದು ಸಹ ಕಾರಣವಾಗಬಹುದು.

ನಮ್ಮ ದೇಹದಲ್ಲಿ ಉಂಟಾಗುವ ಕಶ್ಮಲಗಳನ್ನು ಹೊರ ಹಾಕಿ ದೇಹವನ್ನು ಸ್ವಚ್ಛವಾಗಿಡಲು ವಿಸರ್ಜನೆ ಮಹತ್ವದ ಪಾತ್ರವಹಿಸುತ್ತದೆ. ಅದು ಮೂತ್ರ ವಿಸರ್ಜನೆ ಇರಬಹುದು ಅಥವಾ ಮಲ ವಿಸರ್ಜನೆ ಇರಬಹುದು.

ಇದನ್ನು ಓದಿ : Rape : ಬಾಯ್‌ ಫ್ರೆಂಡ್ ಜೊತೆಯಲ್ಲಿದ್ದ ಯುವತಿ ಮೇಲೆ 10 ಯುವಕರಿಂದ ಅತ್ಯಾಚಾರ.!

“ಕಿಡ್ನಿ(Kidney)” ಇದೊಂದು ನಮ್ಮ ದೇಹದಲ್ಲಿ ಇರುವ ಪ್ರಮುಖ ಅಂಗಗಳಲ್ಲಿ ಇದಿ ಒಂದು. ಇದು ನಮ್ಮ ದೇಹದಲ್ಲಿ ಉಂಟಾಗುವ ಕಶ್ಮಲಗಳನ್ನು ಹೊರಹಾಕಲು ಸದ್ದಿಲ್ಲದೆ ಕೆಲಸ ಮಾಡುತ್ತಲೇ ಇರುತ್ತದೆ.

ಈ ಕಿಡ್ನಿ ಅಥವಾ ಮೂತ್ರಪಿಂಡ (Kidney) ಗಳು ನಮ್ಮ ದೇಹದಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಅದು ರಾತ್ರಿ ಸಮಯದಲ್ಲಿ ಗೋಚರಿಸುತ್ತವೆ.

ಕಿಡ್ನಿ (Kidney) ಗೆ ಸಂಬಂಧಿಸಿದಂತೆ ಈ ರೀತಿಯ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು. ಈಗ ರಾತ್ರಿ ಸಮಯದಲ್ಲಿ ಯಾವ ಯಾವ ಲಕ್ಷಣಗಳು ಕಂಡು ಬಂದಾಗ ನಾವು ಎಚ್ಛೆತ್ತುಕೊಳ್ಳಬೇಕು ಅನ್ನೋದನ್ನು ತಿಳಿಯೋಣ.

ಇದನ್ನು ಓದಿ : Snake : ತನಗೆ ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ವ್ಯಕ್ಯಿ.!

ಕಿಡ್ನಿ (Kidney) ಸರಿಯಾಗಿ ಕಾರ್ಯ ನಿರ್ವಹಿಸದಿದ್ದಾಗ ನಮ್ಮ ದೇಹದಲ್ಲಿ ಕಂಡು ಪ್ರಮುಖ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳಿ.

ಕಾಲುಗಳು ಊದಿಕೊಳ್ಳುವುದು :

ರಾತ್ರಿ ಮಲಗಿದ ವೇಳೆ ಮಧ್ಯದಲ್ಲಿ ಎದ್ದಾಗ ಅಥವಾ ಬೆಳಗ್ಗೆ ಏಳುವಾಗ ಅಥವಾ ನಿಮ್ಮ ಕಾಲುಗಳು ಊದಿಕೊಳ್ಳುತ್ತಿದ್ದರೆ ಜಾಗರೂಕರಾಗಿರಿ.

ಈ ರೀತಿ ಊದಿಕೊಳ್ಳಲು ಕಾರಣ ಏನೆಂದರೆ, ಮೂತ್ರಪಿಂಡ (Kidney) ಗಳು ನಮ್ಮ ದೇಹದಲ್ಲಿ ತುಂಬಿರುವ ನಿರುಪಯುಕ್ತ ನೀರನ್ನು ಸರಿಯಾಗಿ ಹೊರಹಾಕಲು ಸಾಧ್ಯವಾಗದೆ ಇರುವುದು.

ಹೀಗೆ ನಿರುಪಯುಕ್ತ ನೀರು ದೇಹದಲ್ಲಿ ಅದರಲ್ಲಿಯೂ ಕಾಲುಗಳಲ್ಲಿ ಸಂಗ್ರಹವಾಗಲು ಪ್ರಾರಂಭಿಸಿದಾಗ ಕಾಲುಗಳು ಊದಿಕೊಳ್ಳಲು ಆರಂಭಿಸುತ್ತವೆ. ಈ ರೀತಿ ಲಕ್ಷಣ ಕಂಡು ಬರುತ್ತಿದ್ದರೆ ಅದು ಕಿಡ್ನಿ-ಫೇಲ್ಯೂರ್ (Kidney-failure) ಆಗಿರುವ ಸಧ್ಯತೆ ಇರುತ್ತದೆ. ಆದರಿಂದ ಮೊದಲು ವೈದ್ಯರನ್ನು ಸಂಪರ್ಕಿಸಿ.

ಇದನ್ನು ಓದಿ : ದೇಹದ ಈ ಭಾಗದಲ್ಲಿ ನೋವು ಇದೆಯೇ.? ಹಾಗಾದ್ರೆ ಅದು 1 Bone cancer ಇರಬಹುದು.!
ರಾತ್ರಿ ಪದೇ ಪದೇ ಮೂತ್ರ ವಿಸರ್ಜನೆಗೆ ಎದ್ದೇಳುವುದು :

ರಾತ್ರಿ ಮಲಗಿದ ವೇಳೆ ಮೂತ್ರ ವಿಸರ್ಜನೆಗೆ ಪದೇ ಪದೇ ಎದ್ದೇಳುವುದು ಸಾಮಾನ್ಯವಲ್ಲ. ನೀವು ಪ್ರತಿ 2-3 ಗಂಟೆಗಳಿಗೊಮ್ಮೆ ಮೂತ್ರ ವಿಸರ್ಜಿಸಲು ಎದ್ದೇಳುತ್ತಿದ್ದರೆ, ನಿಮ್ಮ ಮೂತ್ರಪಿಂಡಗಳು ತಮ್ಮ ಶೋಧಕ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿವೆ ಎಂಬುದರ ಸ್ಪಷ್ಟ ಸೂಚನೆಯಾಗಿರಬಹುದು.

ಹಾಗಾಗಿ ನೀವೂ ರಾತ್ರಿ ಮಲಗಿದ ವೇಳೆ ಮೂತ್ರ ವಿಸರ್ಜನೆಗೆ ಪದೇ ಪದೇ ಎದ್ದೇಳುತ್ತಿದ್ದರೆ, ಈ ಲಕ್ಷಣ ಕಂಡು ಬಂದಾಗ ಅದನ್ನು ನಿರ್ಲಕ್ಷಿಸಬೇಡಿ.

ಉಸಿರಾಟದ ಸಮಸ್ಯೆ :

ನೀವೂ ರಾತ್ರಿ ಮಲಗಿದ ವೇಳೆ ಉಸಿರಾಟದ ತೊಂದರೆಯನ್ನು ಅನುಭವಿಸುತ್ತಿದ್ದರೆ ಅದು ಕಿಡ್ನಿ (Kidney) ಯ ಸಮಸ್ಯೆ ಇರಬಹುದು. ಸಾಮಾನ್ಯವಾಗಿ ಮೂತ್ರಪಿಂಡಗಳು ತನ್ನ ಕೆಲಸ ಮಾಡಲು ವಿಫಲವಾದಾಗ ದೇಹದಲ್ಲಿ ನಿರುಪಯುಕ್ತ ನೀರು ಸಂಗ್ರಹವಾಗುತ್ತದೆ.

ಈ ನೀರು ಶ್ವಾಸಕೋಶವನ್ನು ತಲುಪಿದ ಪರಿಣಾಮವಾಗಿ ನಿದ್ದೆ ಮಾಡುವಾಗ ಉಸಿರಾಟದ ತೊಂದರೆಯಾಗುವುದು. ಹಾಗಾಗಿ ರಾತ್ರಿ ಮಲಗಿದ ವೇಳೆ ಉಸಿರಾಟಕ್ಕೆ ಸಮಸ್ಯೆಯಾದರೆ ಅದ್ಕಕೆ ಕಿಡ್ನಿ (Kidney) ಯ ಆರೋಗ್ಯ ಹದಗೆಟ್ಟಿರುವುದು ಕಾರಣವಾಗಿರಬಹುದು.

ಇದನ್ನು ಓದಿ : ಪ್ರಿಯಕರನೊಂದಿಗೆ ಹೋಟೆಲ್ Room ನಲ್ಲಿ ಪತ್ನಿಯ ಮೋಜು ; ಪತಿಯ ಆಗಮನ.!
ಚಡಪಡಿಕೆ :

ದಿನವಿಡೀ ದುಡಿದು ಬಂದರು ನೀವು ರಾತ್ರಿ ಮಲುಗಿದ ಮೇಲೆ ಸರಿಯಾಗಿ ನಿದ್ರೆ ಬರದೆ ಚಡಪಡಿಕೆ ಮತ್ತು ಚೆನ್ನಾಗಿ ನಿದ್ರೆ ಮಾಡಲು ಆಗದಿರುವುದು. ಹಾಗೆಯೇ ರಾತ್ರಿ ಪದೇ ಪದೇ ಎಚ್ಚರವಾಗುವುದು ಮೂತ್ರಪಿಂಡ (Kidney) ಕ್ಕೆ ಸಂಬಂಧಿಸಿದ ಸಮಸ್ಯೆಯ ಸಂಕೇತವಾಗಿರಬಹುದು.

ಸ್ನಾಯುಗಳ ಬಿಗಿತ :

ರಾತ್ರಿ ಮಲಗಿದ ಸಮಯದಲ್ಲಿ ಅಂದರೆ ನಿದ್ರೆ ಮಾಡುವ ಸಮಯದಲ್ಲಿ ಆಗಾಗ ಸ್ನಾಯುಗಳು ಬಿಗಿಯಾಗುವುದು ಅಂದರೆ ಜಗ್ಗಿ ಹಿಡಿದಂತೆ ಆಗುವುದು ಅಥವಾ ಹಠಾತ್ ಜರ್ಕ್ ಉಂಟಾಗುವುದು ಅದು ಕೇವಲ ಆಯಾಸವಲ್ಲ.

ಈ ಬೆಳವಣಿಗೆ ಕ್ಯಾಲ್ಸಿಯಂ ಮತ್ತು ಎಲೆಕ್ಟ್ರೋಲೈಟ್ ಅಸಮತೋಲನವನ್ನು ಸೂಚಿಸುತ್ತದೆ, ಇದು ಮೂತ್ರಪಿಂಡ (Kidney) ವೈಫಲ್ಯದಿಂದ ಉಂಟಾಗಬಹುದು.

ತಲೆ ಭಾರ :

ಇನ್ನು ನೀವೂ ರಾತ್ರಿ ಪೂರ್ತಿ ನಿದ್ರೆ ಮಾಡಿದ ನಂತರವೂ ಬೆಳಿಗ್ಗೆ ಎದ್ದ ತಕ್ಷಣ ನಿಮಗೆ ತಲೆ ಭಾರವಾಗಿದಂತೇ ಆಗುವುದು, ನಿರಂತರವಾಗಿ ದಣಿವಾದ ಅನುಭವವಾಗುತ್ತಿದ್ದರೆ ಅಥವಾ ದಿನವಿಡೀ ಆಲಸ್ಯದಿಂದ ಕೂಡಿದ್ದರೆ ಅದು ನಿಮ್ಮ ಮೂತ್ರಪಿಂಡ (Kidney) ಗಳು ನಿಮ್ಮ ದೇಹದಿಂದ ವಿಷವನ್ನು (ನಿರುಪಯುಕ್ತ ನೀರು) ತೆಗೆದುಹಾಕಲು ಅಸಮರ್ಥವಾಗಿದೆ ಎಂದರ್ಥ.

ಈ ಮೇಲಿನ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ ತಡಮಾಡದೇ ನಿಮ್ಮ ವೈದ್ಯರನ್ನು ಭೇಟಿ ಮಾಡಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ತಪ್ಪೇನಿಲ್ಲ.

- Advertisement -
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments