Saturday, July 12, 2025

Janaspandhan News

HomeHealth & Fitnessಈ ಲಕ್ಷಣಗಳಿದ್ದರೆ ದೇಹದಲ್ಲಿ ಕೆಟ್ಟ Cholesterol ಹೆಚ್ಚಾಗಿದೆ ಅಂತನೇ ಅರ್ಥ.!
spot_img
spot_img

ಈ ಲಕ್ಷಣಗಳಿದ್ದರೆ ದೇಹದಲ್ಲಿ ಕೆಟ್ಟ Cholesterol ಹೆಚ್ಚಾಗಿದೆ ಅಂತನೇ ಅರ್ಥ.!

- Advertisement -

ಜನಸ್ಪಂದನ ನ್ಯೂಸ್‌, ಆರೋಗ್ಯ : ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (Cholesterol) ಹೆಚ್ಚಾದಾಗ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಕೈಯಲ್ಲಿ ಮರಗಟ್ಟುವಿಕೆ, ಕಾಲುಗಳಲ್ಲಿ ನೋವು, ಎದೆ ನೋವು, ವಾಕರಿಕೆ, ದೃಷ್ಟಿ ಮಂದವಾಗುವುದು, ಕಪ್ಪು ಕಲೆಗಳು, ಕಣ್ಣುಗಳಲ್ಲಿ ನೋವು ಮತ್ತು ಕಣ್ಣುಗಳ ಸುತ್ತಲಿನ ಚರ್ಮ ಹಳದಿ ಬಣ್ಣಕ್ಕೆ ತಿರುಗುವುದು ಸೇರಿದಂತೆ ಇತರೆ ಲಕ್ಷಣಗಳು ಕಾಣಿಸಿಕೊಂಡರೆ ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (Cholesterol) ಹೆಚ್ಚಾಗಿದೆ ಅಂತನೇ ಅರ್ಥ.!

ಸಾಮಾನ್ಯವಾಗಿ ಕೆಟ್ಟ ಜೀವನಶೈಲಿ ಮತ್ತು ನಮ್ಮ ಆಹಾರ ಪದ್ಧತಿಯಿಂದ ಈ ಕೆಟ್ಟ ಕೊಲೆಸ್ಟ್ರಾಲ್ (Cholesterol) ನಮ್ಮ ದೇಹದಲ್ಲಿ ಹೆಚ್ಚಾಗುತ್ತಿದ್ದು, ಹೀಗಾಗಿ ನಮ್ಮ ಆಹಾರ ಪದ್ದತಿ ಮತ್ತು ಜೀವನ ಶೈಲಿ ಬದಲಾಯಿಸಿಕೊಳ್ಳುವ ಮೂಲಕ ಹೆಚ್ಚಾಗುತ್ತಿರುವ ಈ ಕೆಟ್ಟ ಕೊಲೆಸ್ಟ್ರಾಲ್‌ನ್ನ ನಿಯಂತ್ರಿಸಬಹುದು.

ಇದನ್ನು ಓದಿ : Breakfast : ಬೆಳಗ್ಗೆ ನೀವು ಉಪಾಹಾರ ಸೇವಿಸದೇ ಇರ್ತೀರಾ.? ಈ ಸುದ್ದಿ ಓದಿ.!

ರಕ್ತ ಪರಿಚಲನೆ ಸುಧಾರಿಸಲು ಮತ್ತು ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ವೈದ್ಯರು ಔಷಧಿಯನ್ನು ಸೇವಿಸುವಂತೆ ತಮಗೆ ಹೇಳಬಹುದು. ಆದರೆ ಆರಂಭಿಕ ಹಂತದಲ್ಲಿ ನಮ್ಮ ಮನೆಯಲ್ಲಿಯೇ ಸಿಗುವ ಈ ಪದ್ದಾರ್ಥಗಳಿಂದ ಹೆಚ್ಚುತ್ತಿರುವ ಈ ಕೊಲೆಸ್ಟ್ರಾಲ್‌ (Cholesterol) ನ್ನು ನಿಯಂತ್ರಿಸಹುದು.

ನಮ್ಮ ಮನೆಯಲ್ಲಿಯೇ ಸಿಗುವ ಈ 5 ಮನೆಮದ್ದುಗಳನ್ನು ಸೇವಿಸುವ ಮೂಲಕ ರಕ್ತನಾಳಗಳಲ್ಲಿ ಸಂಗ್ರಹವಾದ ಕೆಟ್ಟ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.

ಇದನ್ನು ಓದಿ : Witchcraft : ಮಹಿಳೆಯ ‘ಬೆತ್ತಲೆ ವೀಡಿಯೋ’ ಮಾಡಿ ಬ್ಲ್ಯಾಕ್ ಮೇಲ್ : ಕಾಮುಕ ಅರ್ಚಕ ಅರೆಸ್ಟ್..!
ಕೊಲೆಸ್ಟ್ರಾಲ್‌ ಕಡಿಮೆ ಮಾಡುವ 5 ಮನೆಮದ್ದುಗಳು :
ಕರಿಬೇವು :

ಪ್ರತಿದಿನ ನಮ್ಮ ಅಡುಗೆ ಮನೆಯಲ್ಲಿ ಬಳಸುವ ಕರಿಬೇವು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡುವಲ್ಲಿ ತುಂಬಾ ಪರಿಣಾಮಕಾರಿ. ಕರಿಬೇವಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಉತ್ತಮ ಕೊಲೆಸ್ಟ್ರಾಲ್ (Cholesterol) ನ್ನು ಹೆಚ್ಚಿಸಲು ಅತ್ಯಗತ್ಯ.

ಇನ್ನು ನೀವು ನೀವು ಪ್ರತಿದಿನ ಅಡುಗೆಯಲ್ಲಿ 8-10 ಕರಿಬೇವಿನ ಎಲೆಗಳನ್ನು ಬಳಸುವ ಮೂಲಕ ಉತ್ತಮ ಪ್ರಯೋಜನಗಳನ್ನು ಪಡೆಯಲು ಸಹಕಾರಿ. ಹಾಗೆಯೇ ನೀವು ಅದರ ರಸವನ್ನು ಸಹ ಕುಡಿಯುವ ಮೂಲಕ ಕೊಲೆಸ್ಟ್ರಾಲ್‌ (Cholesterol) ಪ್ರಮಾಣವನ್ನು ಕಡಿಮೆ ಮಾಡಬಹುದು.

ಕೊತ್ತಂಬರಿ ಸೊಪ್ಪು :

ಪ್ರತಿ ಮನೆಯಲ್ಲೂ ಅಡುಗೆಯಲ್ಲಿ ಬಳಸುವ ಸಾಮಾನ್ಯವಾದ ಸೊಪ್ಪು ಈ ಕೊತ್ತಂಬರಿ. ಆದರೆ ಬಹಳಷ್ಟು ಜನಕ್ಕೆ ಈ ಕೊತ್ತಂಬರಿ ಸೊಪ್ಪಿನ ಬಗ್ಗೆ ತಿಳುವಳಿಕೆ ಇರುವುದಿಲ್ಲ. ಈ ಸೊಪ್ಪು ಅಡುಗೆಯ ರುಚಿ ಅಷ್ಟೆ ಹೆಚ್ಚಿಸುವುದಿಲ್ಲ, ಬದಲಿಗೆ ಆರೋಗ್ಯವನ್ನು ಸುಧಾರಿಸುವಲ್ಲಿಯೂ ಬಹಳ ಪ್ರಯೋಜನಕಾರಿಯಾಗಿದೆ.

ಕೊತ್ತಂಬರಿ ಸೊಪ್ಪನ್ನು ನಿಯಮಿತವಾಗಿ ಸೇವಿಸುವುದರಿಂದ, ನೀವು ಹೆಚ್ಚಿನ ಕೊಲೆಸ್ಟ್ರಾಲ್ (Cholesterol) ಸಮಸ್ಯೆಯನ್ನು ಗುಣಪಡಿಸಬಹುದು. ಸಲಾಡ್ ಮೇಲೆ ಸೇರಿಸುವ ಮೂಲಕ ಅಥವಾ ಅದರಿಂದ ಚಟ್ನಿ ಮಾಡುವ ಮೂಲಕ ಕೊತ್ತಂಬರಿ ಸೊಪ್ಪನ್ನು ತಿನ್ನಬಹುದು.

ಇದನ್ನು ಓದಿ : Sheetal : ಕತ್ತು ಸೀಳಿ ಖ್ಯಾತ ಮಾಡೆಲ್ ಹತ್ಯೆ ; ಕಾಲುವೆಯಲ್ಲಿ ಶವ ಪತ್ತೆ.!
ಜಾಮೂನ್/ನೇರಳೆ ಎಲೆಗಳು :

ಇನ್ನು ಕೊಲೆಸ್ಟ್ರಾಲ್‌ ಕಡಿಮೆ ಮಾಡುವಲ್ಲಿ ಈ ಜಾಮೂನ್/ನೇರಳೆ ಎಲೆಗಳು ಮಹತ್ವದ ಪಾತ್ರವಹಿಸುತ್ತವೆ. ಜಾಮೂನ್/ನೇರಳೆ ಎಲೆಗಳು ಉತ್ಕರ್ಷಣ ನಿರೋಧಕಗಳು, ಆಂಥೋಸಯಾನಿನ್‌ಗಳು ಇತ್ಯಾದಿ ಗುಣಗಳನ್ನು ಹೊಂದಿದ್ದು, ಅದು ರಕ್ತನಾಳಗಳಲ್ಲಿ ಸಂಗ್ರಹವಾದ ಕೊಬ್ಬ (Cholesterol) ನ್ನು ಕಡಿಮೆ ಮಾಡಲು ತುಂಬಾ ಸಹಕಾರಿ.

ಈ ನೇರಳೆ ಎಲೆಗಳನ್ನು ಪುಡಿ ರೂಪದಲ್ಲಿ ತಿನ್ನಬಹುದು. ಇಲ್ಲವಾದರೆ ನೀವು ದಿನಕ್ಕೆ 1-2 ಬಾರಿ ಅದರ ಚಹಾ ಅಥವಾ ಕಷಾಯವನ್ನು ತಯಾರಿಸಿ ಕುಡಿಯಬಹುದು.
ಮೆಂತ್ಯ ಎಲೆಗಳು :

ಮೆಂತ್ಯ, ಇದೊಂದು ಸರಳ ತರಕಾರಿ. ಇದರ ಎಲೆಗಳು ಔಷಧೀಯ ಗುಣಗಳನ್ನು ಹೊಂದಿದ್ದು, ದೇಹದಲ್ಲಿ ಸಂಗ್ರಹವಾದ ಕೆಟ್ಟ ಕೊಲೆಸ್ಟ್ರಾಲ್ (Cholesterol) ಮತ್ತು ಟ್ರೈಗ್ಲಿಸರೈಡ್‌ಗಳ ಆರೋಗ್ಯಕರ ಮಟ್ಟಕ್ಕೆ ಸಂಬಂಧಿಸಿವೆ ಎಂದು ಹೇಳಲಾಗುತ್ತಿದೆ.

ಸಾಮಾನ್ಯವಾಗಿ ನೀವು ಮೆಂತ್ಯ ಎಲೆಗಳನ್ನು ತಿನ್ನವ ಮೂಲಕ ನಿಮ್ಮ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಂಟಾಗುವ ಕೊಲೆಸ್ಟ್ರಾಲ್‌ನ್ನು ತಡೆಯಬಹುದು.

ಇದನ್ನು ಓದಿ : Honeytrap-case : ಯುವತಿ, ಪೊಲೀಸ್‌ ಕಾನ್ಸ್‌ಟೇಬಲ್ ಸೇರಿ 5 ಜನರ ಬಂಧನ.!
ತುಳಸಿ ಎಲೆಗಳು :

ಕೊಲೆಸ್ಟ್ರಾಲ್ ಮಟ್ಟವನ್ನು ಸಾಮಾನ್ಯಗೊಳಿಸುವಲ್ಲಿ ತುಳಸಿ ಎಲೆಗಳು ಬಹಳ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ತುಳಸಿ ಎಲೆಗಳು ಚಯಾಪಚಯ ಒತ್ತಡವನ್ನು ಕಡಿಮೆ ಮಾಡಲು ಕೆಲಸ ಮಾಡುತ್ತವೆ.

ಇದು ದೇಹದ ತೂಕ – ಕೊಲೆಸ್ಟ್ರಾಲ್‌ (Cholesterol) ನ್ನು ಕಾಪಾಡಿಕೊಳ್ಳುತ್ತದೆ. ನೀವು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ತಿನ್ನಬಹುದು.

Honeytrap-case : ಯುವತಿ, ಪೊಲೀಸ್‌ ಕಾನ್ಸ್‌ಟೇಬಲ್ ಸೇರಿ 5 ಜನರ ಬಂಧನ.!

ಜನಸ್ಪಂದನ ನ್ಯೂಸ್‌, ಮೈಸೂರು : ಹನಿಟ್ರ್ಯಾಪ್‌ (Honeytrap) ಪ್ರಕರಣಕ್ಕೆ ಸಂಬಂಧಿಸಿದಂತೆ 5 ಜನರನ್ನು ಪೊಲೀಸರು ಬಂಧಿಸಿರುವ ಘಟನೆ ಮೈಸೂರಿನ ಪಿರಿಯಾಪಟ್ಟಣ ತಾಲೂಕಿನಲ್ಲಿ ನಡೆದಿದೆ. ವಿಚಿತ್ರ ಏನೆಂದರೆ ಹನಿಟ್ರ್ಯಾಪ್‌ ಪ್ರಕರಣಕ್ಕೆ ಸ್ವತಃ ಪೊಲೀಸ್ ಪೇದೆಯೇ ಸಾಥ್ ನೀಡಿರುವುದು.

ಹನಿಟ್ರ್ಯಾಪ್‌ (Honeytrap) ಪ್ರಕರಣದಲ್ಲಿ ಪೊಲೀಸ್‌ ಸಾಥ್‌ ನೀಡಿರುವುದು ಸ್ವತಃ ಪೊಲೀಸ್‌ ಇಲಾಖೆಗೆಯೇ ಶಾಕ್ ಆಗಿದ್ದು, ಯುವತಿ ಸೇರಿ ಒಟ್ಟು 5 ಜನರನ್ನು ಬಂಧಿಸಲಾಗಿದ್ದು, ಅದರಲ್ಲಿ ಪೊಲೀಸ್‌ ಸಿಬ್ಬಂದಿ ಕೂಡ ಇದ್ದಾನೆ.

ಇದನ್ನು ಓದಿ : BSF : ಸಹೋದ್ಯೋಗಿಯಿಂದ ಬಿಎಸ್‌ಎಫ್ ಯೋಧನ ಹತ್ಯೆ.!

‌ಕಂಪಲಾಪುರದ ಓರ್ವ ಬಟ್ಟೆ ವ್ಯಾಪಾರಿಯನ್ನು ಈ ಹನಿಟ್ರ್ಯಾಪ್‌ನಲ್ಲಿ ಸಿಲುಕಿಸಿ ಲಕ್ಷಾಂತರ ರೂಪಾಯಿ ಸುಲಿಗೆ ನಡೆಸಲು ಪ್ರಯತ್ನಿಸಲಾಗಿದ್ದು, ಹನಿಟ್ರ್ಯಾಪ್ (Honeytrap) ಪ್ರಕರಣಕ್ಕೆ ಸಂಬಂಧಿಸಿದಂತೆ 5 ಆರೋಪಿಗಳನ್ನು ಬಂಧಿಸಲಾಗಿದೆ.

ಕಂಪಲಾಪುರದ ದಿನೇಶ್ ಕುಮಾರ್ ಎಂಬವರು ತಮ್ಮ ಊರಿನಲ್ಲಿ ಬಟ್ಟೆ ಅಂಗಡಿಯನ್ನು ನಡೆಸುತ್ತಿದ್ದಾರೆ. 3-4 ದಿನಗಳ ಹಿಂದೆ ಅವರ ಅಂಗಡಿಗೆ ಬಂದಿದ್ದ ಯುವತಿಯೊಬ್ಬರು ಬಟ್ಟೆ ಖರೀದಿಯ ನೆಪದಲ್ಲಿ ಪರಿಚಯ ಬೆಳೆಸಿ, ಬಳಿಕ ಮೊಬೈಲ್ ನಂಬರ್ ಪಡೆದು ವಾಟ್ಸಾಪ್ ಚಾಟಿಂಗ್ ಮಾಡುತ್ತಿದ್ದರು.

ಇದನ್ನು ಓದಿ : Breakfast : ಬೆಳಗ್ಗೆ ನೀವು ಉಪಾಹಾರ ಸೇವಿಸದೇ ಇರ್ತೀರಾ.? ಈ ಸುದ್ದಿ ಓದಿ.!

ಕಳೆದ ಜೂನ್‌ 14ರಂದು ಮಧ್ಯಾಹ್ನ ನಮ್ಮ ಮನೆಯಲ್ಲಿ ಯಾರೂ ಇಲ್ಲ, ನೀವೂ ನಾನು ಕಳುಹಿಸುವ ಲೋಕೇಷನ್‌ ಮೂಲಕ ನಮ್ಮ ಚಿಕ್ಕಮ್ಮನ ಮನೆಗೆ ಬನ್ನಿ ಎಂದು ಯುವತಿ, ವ್ಯಾಪಾರಿಯನ್ನು ಮನೆಗೆ ಬರುವಂತೆ ಆಹ್ವಾನ ನೀಡಿದ್ದಾಳೆ.

ಯುವತಿಯ ಮಾತನ್ನು ನಂಬಿದ ವ್ಯಾಪಾರಿ, ಯುವತಿ ಹೇಳಿದ ಸ್ಥಳಕ್ಕೆ ಕಾರಿನಲ್ಲಿ ತೆರಳಿದ್ದಾರೆ. ಮನೆಗೆ ಬಂದ ವ್ಯಾಪಾರಿಯನ್ನು ಆಹ್ವಾನಿಸಿದ ಯುವತಿ ಡೋರ್‌ ಲಾಕ್‌ ಮಾಡಿ ಬರುವುದಾಗಿ ಹೇಳಿ, ಲಾಕ್‌ ಮಾಡದೆ‌ (Honeytrap ಉದ್ದೇಶಕ್ಕಾಗಿ) ಬಂದು ವ್ಯಾಪಾರಿ ಜೊತೆ ಆತ್ಮೀಯವಾಗಿ ಕುಳಿತ್ತಿದ್ದಾಳೆ.

ಇದನ್ನು ಓದಿ : Witchcraft : ಮಹಿಳೆಯ ‘ಬೆತ್ತಲೆ ವೀಡಿಯೋ’ ಮಾಡಿ ಬ್ಲ್ಯಾಕ್ ಮೇಲ್ : ಕಾಮುಕ ಅರ್ಚಕ ಅರೆಸ್ಟ್..!

ಆಗ ಸ್ಥಳಕ್ಕೆ ಅಪರಿಚಿತರಿಬ್ಬರು ಬಂದು ಇಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂಬಂತೆ ದಾಳಿ ನಡೆಸಿ ದಿನೇಶ್ ಅವರನ್ನು ಹಿಗ್ಗಾಮುಗ್ಗ ಥಳಿಸಿ ಅದನ್ನು Honeytrap ಮಾಡಲು ವಿಡಿಯೋ ಶೂಟ್ ಮಾಡಿದ್ದಾರೆ. ಕೆಲ ಸಮಯದ ನಂತರ ಪೊಲೀಸ್‌ ಪೇದೆ (Honeytrap ಗುಂಪಿನ ಸದಸ್ಯ) ಶಿವಣ್ಣ ಅಲಿಯಾಸ್​ ಪಾಪಣ್ಣ, ಇದೇ ರೂಮಿಗೆ ಬಂದು “ನಿನ್ನನ್ನು ಬಿಟ್ಟು ಕಳಿಸಲು ನಾವು ಇವರೊಂದಿಗೆ ಮಾತನಾಡುತ್ತೇವೆ” ಎಂದು ದಿನೇಶ್​ ಕುಮಾರ್ ಅವರಿಗೆ ನಂಬಿಸಿ, 10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.”

ಆಗ ವ್ಯಾಪಾರಿ ದಿನೇಶ್ ಅವರು ತಮ್ಮ ಸಹೋದರನಿಗೆ 10 ಲಕ್ಷ ರೂ. ಹಣವನ್ನು ತಾನು ಹೇಳುವ ಸ್ಥಳಕ್ಕೆ ಬರುವಂತೆ ಹೇಳಿದ್ದಾರೆ. ಆದರೆ ದಿನೇಶ್‌ ಅವರ ಮಾತಿನಿಂದ ಸಂಶಯಗೊಂಡು ಹಣವನ್ನು ತೆಗೆದುಕೊಂಡು ಹೋಗುವ ಮುನ್ನ ದಿನೇಶನ ಸಹೋದರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದನ್ನು ಓದಿ : Sheetal : ಕತ್ತು ಸೀಳಿ ಖ್ಯಾತ ಮಾಡೆಲ್ ಹತ್ಯೆ ; ಕಾಲುವೆಯಲ್ಲಿ ಶವ ಪತ್ತೆ.!

ತಮ್ಮ ಚಾಲಾಕಿ ಕೆಲಸ ಪೊಲೀಸರಿಗೆ ತಿಳಿದ ಹನಿಟ್ಯ್ರಾಪ್‌ ಗ್ಯಾಂಗ್‌ ವ್ಯಾಪಾರಿ ದಿನೇಶ್‌ ಕುಮಾರ ಅವರನ್ನು ಬಿಟ್ಟು ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಪಿರಿಯಾಪಟ್ಟಣ ಪೊಲೀಸರು ಪೊಲೀಸ್‌, ಯುವತಿ ಸೇರಿ 5 ಜನರನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

- Advertisement -
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments