ಜನಸ್ಪಂದನ ನ್ಯೂಸ್, ಬೆಂಗಳೂರು : ಮಾಟ-ಮಂತ್ರ (Witchcraft) ದ ಹೆಸರಲ್ಲಿ ಮಹಿಳೆಯೋರ್ವಳ ಬೆತ್ತಲೆ ವಿಡಿಯೋ ಮಾಡಿ, ಬ್ಲ್ಯಾಕ್‌ಮೇಲ್ ಮಾಡುತ್ತಿದ ಆರೋಪದ ಮೇಲೆ ಅರ್ಚಕನೋರ್ವನನ್ನು ಪೊಲೀಸರು ಅರೆಸ್ಟ್ ಮಾಡಿದ ವರದಿಯೊಂದು ಬಂದಿದೆ.
ಪೊಲೀಸರು ಬಂಧಿಸಿರುವ ವ್ಯಕ್ತಿಯನ್ನು ಕೇರಳದ (Kerala) ದೇವಸ್ಥಾನದ (temple) ಅರ್ಚಕ ಅರುಣ್ ಎಂದು ಹೇಳಲಾಗುತ್ತಿದೆ. ಅರ್ಚಕ ಬೆಂಗಳೂರಿನ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿ ಮತ್ತು ಬೆತ್ತಲೆ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್ ಮಾಡಿದ ಆರೋಪದಲ್ಲಿ ಪೊಲೀಸರು ಅರೆಸ್ಟ ಮಾಡಿದ್ದಾರೆ.
Witchcraft :
ಮತ್ತೊಬ್ಬ ಆರೋಪಿಯಾದ ಮುಖ್ಯ ಅರ್ಚಕ ಉನ್ನಿ ದಾಮೋದರನ್ ಪರಾರಿಯಾಗಿದ್ದು, ಆತನಿಗಾಗಿ ಬೆಂಗಳೂರಿನ ಬೆಳ್ಳಂದೂರು ಪೊಲೀಸರು ಶೋಧ ಆರಂಭಿಸಿದ್ದಾರೆ. ಆರೋಪಿಗಳಿಬ್ಬರು ಪೂಜೆ ಮಾಡಿಸಲೆಂದು ಕೇರಳದ ದೇವಸ್ಥಾನಕ್ಕೆ ತೆರಳಿದ್ದ ಮಹಿಳೆಗೆ ಮಾಟ ಮಾಂತ್ರ (Witchcraft) ದ ಬೆದರಿಕೆಯೊಡ್ಡಿ ಈ ಹೀನ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನು ಓದಿ : Indrayani : ನದಿಯ ಸೇತುವೆ ಕುಸಿದು 15 ರಿಂದ 20 ಪ್ರವಾಸಿಗರು ನೀರುಪಾಲು.!
ಮಹಿಳೆಯೋರ್ವಳು ತನ್ನ ಕೌಟುಂಬಿಕ ಸಮಸ್ಯೆಯ ಪರಿಹಾರಕ್ಕಾಗಿ ಕೇರಳದ ದೇವಸ್ಥಾನಕ್ಕೆ ಪೂಜೆ ಮಾಡಿಸಲೆಂದು ತೆರಳಿದ್ದಳು. ಅಲ್ಲಿ ಈ ಆರೋಪಿಗಳ ಪರಿಚಯವಾಗಿದ್ದು, ಅವರು ನಿಮ್ಮ ಮೇಲೆ ಮಾಟ-ಮಂತ್ರ (Witchcraft) ಪ್ರಯೋಗವಾಗಿದೆ . ಅದನ್ನು (Witchcraft) ಹೋಗಲಾಡಿಸಲು ಪೂಜೆ ಮಾಡಬೇಕೆಂದೇಳಿ ಮೊಬೈಲ್ ಸಂಖ್ಯೆಯನ್ನು ಅರುಣ್ ಪಡೆದುಕೊಂಡಿದ್ದಾನೆ.
ಮಹಿಳೆ ಬೆಂಗಳೂರಿಗೆ ಬಂದ ನಂತರ, ಅರ್ಚಕ ವಾಟ್ಸ್ಆಯಪ್ ವಿಡಿಯೋ ಕಾಲ್ನಲ್ಲಿ ಮಾಟ ಮಂತ್ರ (Witchcraft) ಕಡಿಮೆಯಾಗಲು ನಗ್ನಳಾಗುವಂತೆ ಮಹಿಳೆಗೆ ಬಲವಂತ ಮಾಡಿದ್ದಾನೆ. ಆದರೆ ಸಂತ್ರಸ್ತೆ ಒಪ್ಪಿದಿರುವ ಕಾರಣ ಕೋಪಗೊಂಡಿದ್ದ ಆತ, ಮಕ್ಕಳ ಮೇಲೆ ಮಾಟ ಮಂತ್ರ (Witchcraft) ಮಾಡುತ್ತೇನೆ ಎಂದು ಬೆದರಿಕೆ ಹಾಕಿದ ಪರಿಣಾಮ ಮಹಿಳೆ ನಗ್ನಳಾಗಿದ್ದಾರೆ.
ಇದನ್ನು ಓದಿ : Breakfast : ಬೆಳಗ್ಗೆ ನೀವು ಉಪಾಹಾರ ಸೇವಿಸದೇ ಇರ್ತೀರಾ.? ಈ ಸುದ್ದಿ ಓದಿ.!
ಈ ವಿಡಿಯೋ ಇಟ್ಟುಕೊಂಡು ಮಹಿಳೆಗೆ ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸಿದ್ದಾರೆ. ಅಲ್ಲದೆ ಧಾರ್ಮಿಕ ಕ್ರಿಯೆ ಇದೆ ಎಂದು ಬಲವಂತವಾಗಿ ಕಾರಿನಲ್ಲಿ ಕಾಡಿಗೆ ಕರೆದುಕೊಂಡು ಹೋಗಿ ಅಸಭ್ಯವಾಗಿ ವರ್ತಿಸಿದಲ್ಲದೆ, ಅತ್ಯಾಚಾರಕ್ಕೆ ಮುಂದಾಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿ ಬೆಂಗಳೂರಿಗೆ ವಾಪಸಾದ ಮಹಿಳೆ ನಂತರ ಬೆಳ್ಳಂದೂರು ಠಾಣೆಗೆ ದೂರು ನೀಡಿದ್ದಾರೆ. ಬಂಧಿತನ ವಿರುದ್ಧ ಪ್ರಕರಣ ದಾಖಲಿಕೊಂಡ ಪೊಲೀಸರು ಓರ್ವನನ್ನು ಬಂಧಿಸಿದ್ದು, ತಲೆಮರೆಸಿಕೊಂಡ ಇನ್ನೊರ್ವನಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.
Breakfast : ಬೆಳಗ್ಗೆ ನೀವು ಉಪಾಹಾರ ಸೇವಿಸದೇ ಇರ್ತೀರಾ.? ಈ ಸುದ್ದಿ ಓದಿ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಬೆಳಗ್ಗೆ ನಾವು ಉಪಾಹಾರ (Breakfast) ಸೇವಿಸಿದರೆ ಹೊಟ್ಟೆಗೆ ಖುಷಿಯಾಗುತ್ತದೆ ಮತ್ತು ನಮ್ಮ ದೇಹದ ಎಲ್ಲಾ ಅಂಗಾಂಗಗಳು ಚೆನ್ನಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ಆದರೆ ಈ ಖಾಲಿ ಹೊಟ್ಟೆಗೆ ಕೊಡುವ ಆಹಾರ ಹೇಗಿರಬೇಕು.? ಬೆಳಗ್ಗೆ ನೀವು ಉಪಾಹಾರ (Breakfast) ಸೇವಿಸದೇ ಇದ್ರೆ ಏನಾಗುತ್ತೇ.? ಈ ಸುದ್ದಿ ಓದಿ.
ಇನ್ನೂ ಪ್ರತಿ ದಿನ ಬೆಳಗ್ಗೆ ಬ್ರೇಕ್ ಫಾಸ್ಟ್ (Breakfast) ಬದಲಿಗೆ ಕೇವಲ ನೀರು ಕುಡಿದು ಸುಮ್ಮನಿದ್ದರೆ ನಡೆಯುತ್ತದೆಯೇ.? ಬೆಳಗಿನ ಸಮಯದಲ್ಲಿ ತಿಂಡಿ ತಿನ್ನುವುದು ಅವಶ್ಯಕವೇ.?
ಇದನ್ನು ಓದಿ : Central Bank : ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 4500 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ನೀವೇನಾದ್ರು, ಒಂದು ವೇಳೆ ಬೆಳಗ್ಗೆ ತಿಂಡಿ (Breakfast) ತಿನ್ನದೇ ಬಿಟ್ಟರೆ ಏನಾಗುತ್ತದೆ.? ಇರಲಿ ಬಿಡು ಮಧ್ಯಾಹ್ನ ಒಂದೇ ಸಾರಿ ಊಟ ಮಾಡಿದರಾಯ್ತು ಅಂತ ಪ್ರತಿದಿನ ಇದೇ ಅಭ್ಯಾಸ ಮಾಡಿಕೊಂಡು ಮುಂದುವರೆದರೆ ಏನಾಗುತ್ತದೆ.?
ನೀವೇನಾದ್ರು ಈ ರೀತಿ ಕೆಟ್ಟ ಅಭ್ಯಾಸ ರೂಢಿಸಿಕೊಂಡರೆ ಅನಾರೋಗ್ಯಕ್ಕೆ ತುತ್ತಾಗೋದು ಗ್ಯಾರಂಟಿ.!
ಸಮತೋಲನವಾದ ಆಹಾರ ಸೇವಿಸಿದರೆ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಎಲ್ಲಾ ಬಗೆಯ ಪೌಷ್ಟಿಕಾಂಶಗಳು ಸುಲಭವಾಗಿ ಸಿಗುತ್ತವೆ. ಹೀಗಾಗಿ ನಾವು ಆರೋಗ್ಯವಂತರಾಗಿರಬಹುದು.
ಇದನ್ನು ಓದಿ : Helicopter crash : ಪೈಲಟ್ ಸೇರಿ 6 ಮಂದಿ ಸಾವು.!
ಬೆಳಗ್ಗೆ ತಿಂಡಿ (Breakfast) ತಿನ್ನದೇ ಇದ್ರೆ ಏನಾಗುತ್ತೇ.?
ಬೆಳಗ್ಗೆ ತಿಂಡಿ (Breakfast) ತಿನ್ನುವುದನ್ನು ಬಿಡುವುದರಿಂದ ಇವೆಲ್ಲವೂ ನಮಗೆ ಮಿಸ್ ಆಗುತ್ತವೆ. ಇದರಿಂದ ನಮ್ಮ ಶುಗರ್ ಲೆವೆಲ್ ತುಂಬಾ ಕಡಿಮೆಯಾಗಿ ಬಿಡುತ್ತದೆ. ಸಂಶೋಧನೆ ಹೇಳುವಂತೆ ಶುಗರ್ ಇಲ್ಲದೇ ಇರುವವರಿಗೂ ಕೂಡ ಇದರಿಂದ ಸಕ್ಕರೆ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ.
ಬೆಳಗಿನ ಸಮಯದ ಬ್ರೇಕ್ ಫಾಸ್ಟ್ (Breakfast) ನಿರಂತರವಾಗಿ ಮಿಸ್ ಮಾಡುವವರಲ್ಲಿ ಮಾನಸಿಕವಾಗಿ ಹಲವಾರು ಬದಲಾವಣೆಗಳು ಉಂಟಾಗುತ್ತವೆ.
ಇದನ್ನು ಓದಿ : Sex racket case : ಇಬ್ಬರು ಪೊಲೀಸರ ಬಂಧನ.?
ಇದು ನಮ್ಮ ಬ್ಲಡ್ ಶುಗರ್ ಲೆವೆಲ್ ಅನ್ನು ಕಡಿಮೆ ಮಾಡು ವುದು ಮಾತ್ರವಲ್ಲದೆ ಇಡೀ ದಿನ ಮಾನಸಿಕ ಬದಲಾವಣೆ ಗಳನ್ನು ತರುತ್ತದೆ. ಮೆದುಳಿನ ಕಾರ್ಯ ಚಟುವಟಿಕೆಯ ಮೇಲೆ ಕೂಡ ಅಡ್ಡ ಪರಿಣಾಮ ಬೀರುತ್ತದೆ.
ಹಲವರು ತೂಕ ಹೆಚ್ಚಾಗುತ್ತದೆ ಎಂದು ಬೆಳಗ್ಗೆ ತಿಂಡಿ ತಿನ್ನುವುದೆ ಇಲ್ಲ. ಆದರೆ ನಿಮ್ಮ ದೇಹವು ಈಗಾಗಲೇ ರಾತ್ರಿಯಿಡೀ ಹಸಿವಿನಿಂದ ಬಳಲುತ್ತಿರುತ್ತದೆ. ಆದ ಕಾರಣ ಬೆಳಗ್ಗೆಯೂ ಆಹಾರ ತ್ಯಜಿಸಿದಾಗ, ದೇಹವು ಸಕ್ಕರೆ ಮತ್ತು ಕೊಬ್ಬಿನ ಆಹಾರಕ್ಕಾಗಿ ಹಂಬಲಿಸಲು ಪ್ರಾರಂಭಿಸುತ್ತದೆ.
ಜಾಸ್ತಿ ಹಸಿವು ಉಂಟಾದಾಗ, ನೀವು ಸೇವಿಸುವ ಕ್ಯಾಲೊರಿಗಳ ಸಂಖ್ಯೆಯನ್ನು ಗಮನಿಸದೆ ನೀವು ಕಂಡುಕೊಂಡದ್ದನ್ನು ತಿನ್ನುವ ಸಾಧ್ಯತೆ ಹೆಚ್ಚು. ಆದ್ದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಇದನ್ನು ಓದಿ : BSF : ಸಹೋದ್ಯೋಗಿಯಿಂದ ಬಿಎಸ್‌ಎಫ್ ಯೋಧನ ಹತ್ಯೆ.!
ಬೆಳಗಿನ ಸಮಯ ಉಪಹಾರ (Breakfast) ಸೇವಿಸುವುದರಿಂದ ಕೂದಲು ಕಿರುಚೀಲಗಳ ಬೆಳವಣಿಗೆಗೆ ಸಹಾಯವಾಗುತ್ತದೆ. ವಿಮರ್ಶಾತ್ಮಕವಾಗಿ ಕಡಿಮೆ ಮಟ್ಟದ ಪ್ರೋಟೀನ್ ಹೊಂದಿರುವ ಆಹಾರ ಸೇವಿಸುವುದರಿಂದ ದೇಹದಲ್ಲಿ ಕೆರಾಟಿನ್ ಮಟ್ಟಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.
ಕೆರಾಟಿನ್ ಒಂದು ಪ್ರಮುಖ ಅಂಶವಾಗಿದ್ದು ಅದು ಕೂದಲು ಉದುರುವಿಕೆಯನ್ನು ಪ್ರಚೋದಿಸುತ್ತದೆ. ಕೂದಲಿನ ಬೆಳವಣಿಗೆಯನ್ನು ನಿಲ್ಲಿಸುತ್ತದೆ. ಆದ್ದರಿಂದ, ಕೂದಲು ಉದುರುವುದನ್ನು ತಪ್ಪಿಸಲು ನೀವು ಪ್ರೋಟೀನ್‌ನಲ್ಲಿ ಸಮೃದ್ಧವಾಗಿರುವ ಆರೋಗ್ಯಕರ ಉಪಹಾರವನ್ನು ಪ್ರತಿದಿನ ಸೇವಿಸುವುದು ಒಳ್ಳೆಯದು.
ಬೆಳಗ್ಗಿನ ಉಪಹಾರ (Breakfast) ಬಿಡುವುದರಿಂದ ಚಯಾಪಚಯ ಕ್ರಿಯೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ನಮ್ಮ ದೇಹವು ಬೆಳಿಗ್ಗೆ ಕಾರ್ಯನಿರ್ವಹಿಸಲು ಶಕ್ತಿ ಅಗತ್ಯವಿದೆ. ಹಾಗಾಗಿ ದಿನದ ಮೊದಲ ಆಹಾರ ಬಿಟ್ಟುಬಿಟ್ಟರೆ, ಅದು ಚಯಾಪಚಯ (Metabolism) ಚಟುವಟಿಕೆಯನ್ನು ತಡೆಯುತ್ತದೆ ಹಾಗೂ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.
ಇದನ್ನು ಓದಿ : Indrayani : ನದಿಯ ಸೇತುವೆ ಕುಸಿದು 15 ರಿಂದ 20 ಪ್ರವಾಸಿಗರು ನೀರುಪಾಲು.!
ಬೆಳಗಿನ ಉಪಾಹಾರ (Breakfast) ವು ತೀವ್ರವಾದ, ದೀರ್ಘಕಾಲದ ಅಥವಾ ಹಸ್ತಕ್ಷೇಪದ ಅಧ್ಯಯನಗಳ ಮೂಲಕ ವರ್ಧಿತ ಗಮನ ಮತ್ತು ಅರಿವಿನ ಕಾರ್ಯಕ್ಕೆ ಲಿಂಕ್‌ಗಳನ್ನು ಸಹ ಪ್ರದರ್ಶಿಸಿದೆ. ಬೆಳಗಿನ ಉಪಾಹಾರವು ಅರಿವಿನ ಕಾರ್ಯವನ್ನು ಬೆಂಬಲಿಸುತ್ತದೆ. ಇದು ಏಕಾಗ್ರತೆ, ಸ್ಮರಣಶಕ್ತಿ ಮತ್ತು ಸಮಸ್ಯೆ-ಪರಿಹರಿಸುವ ಸಾಮರ್ಥ್ಯಗಳನ್ನು ಸುಧಾರಿಸುತ್ತದೆ, ಕೆಲಸದಲ್ಲಿ ಅಥವಾ ಶಾಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸುಲಭವಾಗುತ್ತದೆ.
ಬೆಳಿಗ್ಗೆ ತಿಂಡಿ (Breakfast) ಮಾಡುವ ಸಮಯ :
ಸಾಮಾನ್ಯವಾಗಿ ಬೆಳಿಗ್ಗೆ 7 ಗಂಟೆಗೆ ನಿಮ್ಮ ಉಪಹಾರವನ್ನು ತಿನ್ನಲು ಸೂಚಿಸಲಾಗುತ್ತದೆ.
ಬೆಚ್ಚಗಿನ ಉಪಹಾರಗಳಾದ ರಾಗಿ ರೊಟ್ಟಿ, ಬೆಚ್ಚಗಿನ ಓಟ್ ಮೀಲ್, ಗಂಜಿ ಅಥವಾ ಬೇಯಿಸಿದ ಮೊಟ್ಟೆಗಳಂತಹ ಬೆಚ್ಚಗಿನ ಉಪಹಾರಗಳು ಸುಲಭವಾಗಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.