Saturday, July 12, 2025

Janaspandhan News

HomeHealth & Fitnessದೇಹದ ಈ ಭಾಗದಲ್ಲಿ ನೋವು ಇದೆಯೇ.? ಹಾಗಾದ್ರೆ ಅದು 1 Bone cancer ಇರಬಹುದು.!
spot_img
spot_img

ದೇಹದ ಈ ಭಾಗದಲ್ಲಿ ನೋವು ಇದೆಯೇ.? ಹಾಗಾದ್ರೆ ಅದು 1 Bone cancer ಇರಬಹುದು.!

- Advertisement -

ಜನಸ್ಪಂದನ ನ್ಯೂಸ್, ಆರೋಗ್ಯ : ನಿಮ್ಮ ದೇಹದ ಈ ಭಾಗದಲ್ಲಿ ನೋವು ಇದೆಯೇ.? ಹಾಗಾದ್ರೆ ಅದು ಮೂಳೆ ಕ್ಯಾನ್ಸರ್‌ (Bone cancer) ಇರಬಹುದು.! ಒಮ್ಮೆ ಪರೀಕ್ಷಿಕೊಳ್ಳೋದು ಒಳಿತು.

ಈ ಮೂಳೆ ಕ್ಯಾನ್ಸರ್ (Bone cancer)ಅನೋದು ತುಂಬಾ ಅಪರೂಪದ ಕಾಯಿಲೆ. ಆದರೆ ಗಂಭೀರ ಸ್ಥಿತಿಯದಾಗಿರುತ್ತೇ.

ಅದನ್ನು ಸಮಯಕ್ಕೆ ಸರಿಯಾಗಿ ಗುರುತಿಸಿ ಚಿಕಿತ್ಸೆ ಪಡೆದುಕೊಳ್ಳೋದು ಒಳಿತು. ಏಕೆಂದರೆ ಈ ನೋವು ಕ್ರಮೇಣ ಅಸ್ವಸ್ಥತೆಯ ರೂಪದಲ್ಲಿ ಗಂಭೀರ ರೂಪವನ್ನು ಪಡೆಯಬಹುದು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಈ ಕ್ಯಾನ್ಸರ್ (Bone cancer) ದೇಹದ ಇತರ ಭಾಗಗಳಿಗೂ ಹರಡಬಹುದು.

ಇದನ್ನು ಓದಿ : ಈ ಲಕ್ಷಣಗಳಿದ್ದರೆ ದೇಹದಲ್ಲಿ ಕೆಟ್ಟ Cholesterol ಹೆಚ್ಚಾಗಿದೆ ಅಂತನೇ ಅರ್ಥ.!
ಮೂಳೆ ಕ್ಯಾನ್ಸರ್‌ (Bone cancer) ನ ಲಕ್ಷಣಗಳ ಬಗ್ಗೆ ತಿಳಿಯಿರಿ :

* ನಿರಂತರ ಮೂಳೆ ನೋವು :

ನಿರಂತರ ಮೂಳೆ ನೋವು, ಮೂಳೆ ಕ್ಯಾನ್ಸರ್‌ (Bone cancer)ನ ಅತ್ಯಂತ ಸಾಮಾನ್ಯ ಮತ್ತು ಮೊದಲ ಲಕ್ಷಣವಾಗಿರುತ್ತೆ.

ವ್ಯಾಯಾಮದ ಸಮಯದಲ್ಲಿ ಮಾತ್ರ ಈ ನೋವು ಪ್ರಾರಂಭದಲ್ಲಿ ಕಾಣುತ್ತಿದ್ದು, ಕಾಲಕ್ರಮೇಣ ಈ ನೋವು ನಿರಂತರ ಮತ್ತು ರಾತ್ರಿಯಲ್ಲಿ ಕೆಟ್ಟದಾಗಬಹುದು.

ತೊಡೆ, ಮೊಣಕಾಲ ಅಥವಾ ಭುಜದ ಮೂಳೆಯಂತಹ ಉದ್ದನೆಯ ಮೂಳೆಗಳಲ್ಲಿ ಈ ನೋವು ಹೆಚ್ಚಾಗಿ ಪ್ರಾರಂಭವಾಗುತ್ತದೆ. ಆದರೆ ಈ ನೋವು ದೇಹದ ಯಾವುದೇ ಭಾಗದಲ್ಲಿ ಸಂಭವಿಸಬಹುದು.

* ದುರ್ಬಲಗೊಳ್ಳುವ ಮೂಳೆಗಳು :

  • ಮೂಳೆ ನೋವಿನ ಸಂದರ್ಭದಲ್ಲಿ ಊತವೂ ಕೆಲವು ಸಲ ಕಂಡುಬರುತ್ತದೆ.
  • ಊತ, ಕೆಂಪು ಅಥವಾ ಶಾಖದ ಅನುಭವವು ಕ್ಯಾನ್ಸರ್ ಪೀಡಿತ ಪ್ರದೇಶದ ಸುತ್ತಲೂ ಕಂಡುಬರುತ್ತದೆ.
  • ಮೂಳೆ ದುರ್ಬಲಗೊಂಡು ಯಾವುದೇ ಗಂಭೀರ ಗಾಯವಿಲ್ಲದೆಯೂ ಮೂಳೆ ಮುರಿತಗಳಿಗೆ ಕಾರಣವಾಗಬಹುದು.
  • ಈ ರೋಗವು ಮಗುವಿನಲ್ಲಿ ಕಂಡು ಬಂದರೆ, ಮಗುವಿನ ಎತ್ತರವು ಬೆಳೆಯುವುದನ್ನ ನಿಲ್ಲಿಸಿದ್ದರೆ ಇದು ಕೂಡ ಇದರ ಒಂದು ಲಕ್ಷಣವಾಗಿರಬಹುದು.
ಇದನ್ನು ಓದಿ : Rape : ಬಾಯ್‌ ಫ್ರೆಂಡ್ ಜೊತೆಯಲ್ಲಿದ್ದ ಯುವತಿ ಮೇಲೆ 10 ಯುವಕರಿಂದ ಅತ್ಯಾಚಾರ.!

* ಆಯಾಸ-ತೂಕ ಇಳಿಕೆ :

  • ಸಾಮಾನ್ಯವಾಗಿ ಆಯಾಸ, ತೂಕ ಇಳಿಕೆ, ಜ್ವರ ಮತ್ತು ರಾತ್ರಿ ಬೆವರುವಿಕೆ ಸೇರಿದಂತೆ ಮುಂತಾದ ಲಕ್ಷಣಗಳು ಮೂಳೆ ಕ್ಯಾನ್ಸರ್‌ (Bone cancer) ನಿಂದ ಬಳಲುತ್ತಿರುವ ವ್ಯಕ್ತಿಯಲ್ಲಿ ಕಂಡುಬರಬಹುದು.
  • ಈ ಲಕ್ಷಣಗಳು ಯಾವುದೇ ವ್ಯಕ್ತಿಯಲ್ಲಿ ಸ್ಪಷ್ಟ ಕಾರಣವಿಲ್ಲದೆ ಕಾಣಿಸಿಕೊಂಡರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು.
ಜಾಗರೂಕತೆ :

ಈಗಾಗಲೇ ಬೇರೆ ಯಾವುದೇ ರೀತಿಯ ಕ್ಯಾನ್ಸರ್ (ಸ್ತನ, ಶ್ವಾಸಕೋಶ, ಪ್ರಾಸ್ಟೇಟ್ ಇತ್ಯಾದಿ) ಒಬ್ಬ ವ್ಯಕ್ತಿಗೆ ಇದ್ದರೆ ಆ ಕ್ಯಾನ್ಸರ್ ದೇಹದ ಇತರ ಭಾಗಗಳಿಗೆ, ವಿಶೇಷವಾಗಿ ಮೂಳೆಗಳಿಗೆ ಹರಡುವ ಸಾಧ್ಯತೆ ಇರುತ್ತದೆ.

ಈ ರೀತಿಯ ಪರಿಸ್ಥಿತಿಯಲ್ಲಿ ಆ ವ್ಯಕ್ತಿಯ ಮೂಳೆಗಳಲ್ಲಿ ನೋವು ಅಥವಾ ಊತದಂತಹ ಯಾವುದೇ ಹೊಸ ಸಮಸ್ಯೆ ಇದ್ದರೆ ತಕ್ಷಣವೇ ತಜ್ಞರನ್ನು ಸಂಪರ್ಕಿಸಬೇಕು.

ಇದನ್ನು ಓದಿ : RRB : ರೈಲ್ವೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗವಕಾಶ ; 6,374 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಮೂಳೆ ಕ್ಯಾನ್ಸರ್ (Bone cancer) ಗುರುತಿಸುವುದು ಹೇಗೆ.?

ಮೂಳೆ ಕ್ಯಾನ್ಸರ್ ಅನ್ನು ಪತ್ತೆಹಚ್ಚಲು X-Ray, MRI, City scan, Bone scan ಮತ್ತು ಬಯಾಪ್ಸಿ (Biopsy) ಯಂತಹ ಪರೀಕ್ಷೆಗಳನ್ನು ಮಾಡಲಾಗುತ್ತದೆ.

ಈ ರೋಗವನ್ನು ಮೊದಲೇ ಪತ್ತೆಹಚ್ಚಿದರೆ, ಚಿಕಿತ್ಸೆಯು ಯಶಸ್ವಿಯಾಗುವ ಸಾಧ್ಯತೆಗಳು ತುಂಬಾ ಹೆಚ್ಚು.

ಇದರ ಚಿಕಿತ್ಸೆಯಲ್ಲಿ ಕಿಮೊಥೆರಪಿ, ವಿಕಿರಣ ಮತ್ತು ಶಸ್ತ್ರಚಿಕಿತ್ಸೆ (Chemotherapy, radiation and surgery) ಒಳಗೊಂಡಿರಬಹುದು.

ಒಂದು ವೇಳೆ ಯಾರಿಗಾದರೂ ಮೂಳೆಗಳಲ್ಲಿ ಯಾವುದೇ ಅಸಾಮಾನ್ಯ ನೋವು ಅಥವಾ ಊತವು ಕಂಡು ಬಂದರೆ ಖಂಡಿತಾ ನಿರ್ಲಕ್ಷಿಸಬೇಡಿ. ವಿಶೇಷವಾಗಿ ಅದು ನಿರಂತರವಾಗಿ ಅಥವಾ ಕಾಲಾನಂತರದಲ್ಲಿ ಹೆಚ್ಚಾಗುತ್ತಿದ್ದರೆ.

ನೆನಪಿಡಿ :

ಸಮಯೋಚಿತ ರೋಗನಿರ್ಣಯ ಮತ್ತು ಚಿಕಿತ್ಸೆಯು ಈ ಮಾರಕ ರೋಗ (Bone cancer) ವನ್ನು ತಡೆಯಬಹುದು ಮತ್ತು ಬೇಗನೆ ಮಾಡಿದರೆ ಚಿಕಿತ್ಸೆಯು ಉತ್ತಮವಾಗಿರುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

Breakfast : ಬೆಳಗ್ಗೆ ನೀವು ಉಪಾಹಾರ ಸೇವಿಸದೇ ಇರ್ತೀರಾ.? ಈ ಸುದ್ದಿ ಓದಿ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಬೆಳಗ್ಗೆ ನಾವು ಉಪಾಹಾರ (Breakfast) ಸೇವಿಸಿದರೆ ಹೊಟ್ಟೆಗೆ ಖುಷಿಯಾಗುತ್ತದೆ ಮತ್ತು ನಮ್ಮ ದೇಹದ ಎಲ್ಲಾ ಅಂಗಾಂಗಗಳು ಚೆನ್ನಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ಆದರೆ ಈ ಖಾಲಿ ಹೊಟ್ಟೆಗೆ ಕೊಡುವ ಆಹಾರ ಹೇಗಿರಬೇಕು.? ಬೆಳಗ್ಗೆ ನೀವು ಉಪಾಹಾರ (Breakfast) ಸೇವಿಸದೇ ಇದ್ರೆ ಏನಾಗುತ್ತೇ.? ಈ ಸುದ್ದಿ ಓದಿ.

ಇನ್ನೂ ಪ್ರತಿ ದಿನ ಬೆಳಗ್ಗೆ ಬ್ರೇಕ್ ಫಾಸ್ಟ್ (Breakfast) ಬದಲಿಗೆ ಕೇವಲ ನೀರು ಕುಡಿದು ಸುಮ್ಮನಿದ್ದರೆ ನಡೆಯುತ್ತದೆಯೇ.? ಬೆಳಗಿನ ಸಮಯದಲ್ಲಿ ತಿಂಡಿ ತಿನ್ನುವುದು ಅವಶ್ಯಕವೇ.?

ಇದನ್ನು ಓದಿ : Central Bank : ಸೆಂಟ್ರಲ್ ಬ್ಯಾಂಕ್ ಆಫ್‌ ಇಂಡಿಯಾದಲ್ಲಿ 4500 ಹುದ್ದೆಗಳಿಗೆ ಅರ್ಜಿ ಆಹ್ವಾನ.!

ನೀವೇನಾದ್ರು, ಒಂದು ವೇಳೆ ಬೆಳಗ್ಗೆ ತಿಂಡಿ (Breakfast) ತಿನ್ನದೇ ಬಿಟ್ಟರೆ ಏನಾಗುತ್ತದೆ.? ಇರಲಿ ಬಿಡು ಮಧ್ಯಾಹ್ನ ಒಂದೇ ಸಾರಿ ಊಟ ಮಾಡಿದರಾಯ್ತು ಅಂತ ಪ್ರತಿದಿನ ಇದೇ ಅಭ್ಯಾಸ ಮಾಡಿಕೊಂಡು ಮುಂದುವರೆದರೆ ಏನಾಗುತ್ತದೆ.?

ನೀವೇನಾದ್ರು ಈ ರೀತಿ ಕೆಟ್ಟ ಅಭ್ಯಾಸ ರೂಢಿಸಿಕೊಂಡರೆ ಅನಾರೋಗ್ಯಕ್ಕೆ ತುತ್ತಾಗೋದು ಗ್ಯಾರಂಟಿ.!

ಸಮತೋಲನವಾದ ಆಹಾರ ಸೇವಿಸಿದರೆ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಎಲ್ಲಾ ಬಗೆಯ ಪೌಷ್ಟಿಕಾಂಶಗಳು ಸುಲಭವಾಗಿ ಸಿಗುತ್ತವೆ. ಹೀಗಾಗಿ ನಾವು ಆರೋಗ್ಯವಂತರಾಗಿರಬಹುದು.

ಇದನ್ನು ಓದಿ : Helicopter crash : ಪೈಲಟ್​ ಸೇರಿ 6 ಮಂದಿ ಸಾವು.!
ಬೆಳಗ್ಗೆ ತಿಂಡಿ (Breakfast) ತಿನ್ನದೇ ಇದ್ರೆ ಏನಾಗುತ್ತೇ.?

ಬೆಳಗ್ಗೆ ತಿಂಡಿ (Breakfast) ತಿನ್ನುವುದನ್ನು ಬಿಡುವುದರಿಂದ ಇವೆಲ್ಲವೂ ನಮಗೆ ಮಿಸ್ ಆಗುತ್ತವೆ. ಇದರಿಂದ ನಮ್ಮ ಶುಗರ್ ಲೆವೆಲ್ ತುಂಬಾ ಕಡಿಮೆಯಾಗಿ ಬಿಡುತ್ತದೆ. ಸಂಶೋಧನೆ ಹೇಳುವಂತೆ ಶುಗರ್ ಇಲ್ಲದೇ ಇರುವವರಿಗೂ ಕೂಡ ಇದರಿಂದ ಸಕ್ಕರೆ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ.

ಬೆಳಗಿನ ಸಮಯದ ಬ್ರೇಕ್ ಫಾಸ್ಟ್ (Breakfast) ನಿರಂತರವಾಗಿ ಮಿಸ್ ಮಾಡುವವರಲ್ಲಿ ಮಾನಸಿಕವಾಗಿ ಹಲವಾರು ಬದಲಾವಣೆಗಳು ಉಂಟಾಗುತ್ತವೆ.

ಇದನ್ನು ಓದಿ : Sex racket case : ಇಬ್ಬರು ಪೊಲೀಸರ ಬಂಧನ.?

ಇದು ನಮ್ಮ ಬ್ಲಡ್ ಶುಗರ್ ಲೆವೆಲ್ ಅನ್ನು ಕಡಿಮೆ ಮಾಡು ವುದು ಮಾತ್ರವಲ್ಲದೆ ಇಡೀ ದಿನ ಮಾನಸಿಕ ಬದಲಾವಣೆ ಗಳನ್ನು ತರುತ್ತದೆ. ಮೆದುಳಿನ ಕಾರ್ಯ ಚಟುವಟಿಕೆಯ ಮೇಲೆ ಕೂಡ ಅಡ್ಡ ಪರಿಣಾಮ ಬೀರುತ್ತದೆ.

ಹಲವರು ತೂಕ ಹೆಚ್ಚಾಗುತ್ತದೆ ಎಂದು ಬೆಳಗ್ಗೆ ತಿಂಡಿ ತಿನ್ನುವುದೆ ಇಲ್ಲ. ಆದರೆ ನಿಮ್ಮ ದೇಹವು ಈಗಾಗಲೇ ರಾತ್ರಿಯಿಡೀ ಹಸಿವಿನಿಂದ ಬಳಲುತ್ತಿರುತ್ತದೆ. ಆದ ಕಾರಣ ಬೆಳಗ್ಗೆಯೂ ಆಹಾರ ತ್ಯಜಿಸಿದಾಗ, ದೇಹವು ಸಕ್ಕರೆ ಮತ್ತು ಕೊಬ್ಬಿನ ಆಹಾರಕ್ಕಾಗಿ ಹಂಬಲಿಸಲು ಪ್ರಾರಂಭಿಸುತ್ತದೆ.

ಜಾಸ್ತಿ ಹಸಿವು ಉಂಟಾದಾಗ, ನೀವು ಸೇವಿಸುವ ಕ್ಯಾಲೊರಿಗಳ ಸಂಖ್ಯೆಯನ್ನು ಗಮನಿಸದೆ ನೀವು ಕಂಡುಕೊಂಡದ್ದನ್ನು ತಿನ್ನುವ ಸಾಧ್ಯತೆ ಹೆಚ್ಚು. ಆದ್ದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಇದನ್ನು ಓದಿ : BSF : ಸಹೋದ್ಯೋಗಿಯಿಂದ ಬಿಎಸ್‌ಎಫ್ ಯೋಧನ ಹತ್ಯೆ.!

ಬೆಳಗಿನ ಸಮಯ ಉಪಹಾರ (Breakfast) ಸೇವಿಸುವುದರಿಂದ ಕೂದಲು ಕಿರುಚೀಲಗಳ ಬೆಳವಣಿಗೆಗೆ ಸಹಾಯವಾಗುತ್ತದೆ. ವಿಮರ್ಶಾತ್ಮಕವಾಗಿ ಕಡಿಮೆ ಮಟ್ಟದ ಪ್ರೋಟೀನ್ ಹೊಂದಿರುವ ಆಹಾರ ಸೇವಿಸುವುದರಿಂದ ದೇಹದಲ್ಲಿ ಕೆರಾಟಿನ್ ಮಟ್ಟಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.

ಕೆರಾಟಿನ್ ಒಂದು ಪ್ರಮುಖ ಅಂಶವಾಗಿದ್ದು ಅದು ಕೂದಲು ಉದುರುವಿಕೆಯನ್ನು ಪ್ರಚೋದಿಸುತ್ತದೆ. ಕೂದಲಿನ ಬೆಳವಣಿಗೆಯನ್ನು ನಿಲ್ಲಿಸುತ್ತದೆ. ಆದ್ದರಿಂದ, ಕೂದಲು ಉದುರುವುದನ್ನು ತಪ್ಪಿಸಲು ನೀವು ಪ್ರೋಟೀನ್‌ನಲ್ಲಿ ಸಮೃದ್ಧವಾಗಿರುವ ಆರೋಗ್ಯಕರ ಉಪಹಾರವನ್ನು ಪ್ರತಿದಿನ ಸೇವಿಸುವುದು ಒಳ್ಳೆಯದು.

ಬೆಳಗ್ಗಿನ ಉಪಹಾರ (Breakfast) ಬಿಡುವುದರಿಂದ ಚಯಾಪಚಯ ಕ್ರಿಯೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ನಮ್ಮ ದೇಹವು ಬೆಳಿಗ್ಗೆ ಕಾರ್ಯನಿರ್ವಹಿಸಲು ಶಕ್ತಿ ಅಗತ್ಯವಿದೆ. ಹಾಗಾಗಿ ದಿನದ ಮೊದಲ ಆಹಾರ ಬಿಟ್ಟುಬಿಟ್ಟರೆ, ಅದು ಚಯಾಪಚಯ (Metabolism) ಚಟುವಟಿಕೆಯನ್ನು ತಡೆಯುತ್ತದೆ ಹಾಗೂ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.

ಇದನ್ನು ಓದಿ : Indrayani : ನದಿಯ ಸೇತುವೆ ಕುಸಿದು 15 ರಿಂದ 20 ಪ್ರವಾಸಿಗರು ನೀರುಪಾಲು.!

ಬೆಳಗಿನ ಉಪಾಹಾರ (Breakfast) ವು ತೀವ್ರವಾದ, ದೀರ್ಘಕಾಲದ ಅಥವಾ ಹಸ್ತಕ್ಷೇಪದ ಅಧ್ಯಯನಗಳ ಮೂಲಕ ವರ್ಧಿತ ಗಮನ ಮತ್ತು ಅರಿವಿನ ಕಾರ್ಯಕ್ಕೆ ಲಿಂಕ್‌ಗಳನ್ನು ಸಹ ಪ್ರದರ್ಶಿಸಿದೆ. ಬೆಳಗಿನ ಉಪಾಹಾರವು ಅರಿವಿನ ಕಾರ್ಯವನ್ನು ಬೆಂಬಲಿಸುತ್ತದೆ. ಇದು ಏಕಾಗ್ರತೆ, ಸ್ಮರಣಶಕ್ತಿ ಮತ್ತು ಸಮಸ್ಯೆ-ಪರಿಹರಿಸುವ ಸಾಮರ್ಥ್ಯಗಳನ್ನು ಸುಧಾರಿಸುತ್ತದೆ, ಕೆಲಸದಲ್ಲಿ ಅಥವಾ ಶಾಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸುಲಭವಾಗುತ್ತದೆ.

ಬೆಳಿಗ್ಗೆ ತಿಂಡಿ (Breakfast) ಮಾಡುವ ಸಮಯ :

ಸಾಮಾನ್ಯವಾಗಿ ಬೆಳಿಗ್ಗೆ 7 ಗಂಟೆಗೆ ನಿಮ್ಮ ಉಪಹಾರವನ್ನು ತಿನ್ನಲು ಸೂಚಿಸಲಾಗುತ್ತದೆ.

ಬೆಚ್ಚಗಿನ ಉಪಹಾರಗಳಾದ ರಾಗಿ ರೊಟ್ಟಿ, ಬೆಚ್ಚಗಿನ ಓಟ್ ಮೀಲ್, ಗಂಜಿ ಅಥವಾ ಬೇಯಿಸಿದ ಮೊಟ್ಟೆಗಳಂತಹ ಬೆಚ್ಚಗಿನ ಉಪಹಾರಗಳು ಸುಲಭವಾಗಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

- Advertisement -
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments