ಜನಸ್ಪಂದನ ನ್ಯೂಸ್, ನೌಕರಿ : ನೀವೂ ಉದ್ಯೋಗಕ್ಕಾಗಿ ಹುಡುಕಾಟ ನಡೆಸಿದ್ದೀರಾ.? ಹಾಗಾದ್ರೆ, ಭಾರತೀಯ ರೈಲ್ವೆ ಇಲಾಖೆ (Indian Railway Department – RRB) ನಿಮಗೊಂದು ಭರ್ಜರಿ ಸಿಹಿಸುದ್ದಿ ನೀಡಿದೆ.
ಭಾರತೀಯ ರೈಲ್ವೆ ಇಲಾಖೆ (Indian Railway Department – RRB) ಯಲ್ಲಿ ಖಾಲಿ ಇರುವ 6,374 ಹುದ್ದೆಗಳಿಗೆ ಅನುಮೋದನೆ ಸಿಕ್ಕಿದೆ. ಈ ಹುದ್ದೆಗಳಲ್ಲಿ ತಂತ್ರಜ್ಞ ಗ್ರೇಡ್-1 ಮತ್ತು ಗ್ರೇಡ್-3 ನೇಮಕಾತಿ ಸೇರಿವೆ.
ಇದನ್ನು ಓದಿ : Prostitution racket busted : 6 ಮಹಿಳೆಯರ ರಕ್ಷಣೆ, 4 ಆರೋಪಿಗಳ ಬಂಧನ.!
ಭಾರತ ದೇಶಾದ್ಯಂತ 18 ವಲಯಗಳು ಮತ್ತು ವಿವಿಧ ಉತ್ಪಾದನಾ ಘಟಕಗಳನ್ನು ಈ ನೇಮಕಾತಿಯಲ್ಲಿ ಸೇರಿಸಲಾಗಿದೆ.
ಇನ್ನು ಈ 6,374 ಹುದ್ದೆಗಳಲ್ಲಿ ಅತಿ ಹೆಚ್ಚು ಹುದ್ದೆಗಳು ದಕ್ಷಿಣ ರೈಲ್ವೆ (SR) ಯಲ್ಲಿದ್ದು, ಇಲ್ಲಿ 1,215 ಹುದ್ದೆಗಳನ್ನು ಅನುಮೋದಿಸಲಾಗಿದೆ. ಹಾಗೆಯೇ ಅತೀ ಕಡಿಮೆ ಸಂಖ್ಯೆಯ ಹುದ್ದೆಗಳು ಪೂರ್ವ ಮಧ್ಯ ರೈಲ್ವೆ (ECR) ಯಲ್ಲಿದ್ದು, ಅಲ್ಲಿ ಕೇವಲ 31 ಹುದ್ದೆಗಳವೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 07 ರ ದ್ವಾದಶ ರಾಶಿಗಳ ಫಲಾಫಲ.!
RRB ವಲಯವಾರು ವಿವರಗಳು :
- ಪೂರ್ವ ರೈಲ್ವೆ (ER) : 1,119 ಹುದ್ದೆಗಳು.
- ಪಶ್ಚಿಮ ರೈಲ್ವೆ (WR) : 849 ಹುದ್ದೆಗಳು.
- ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) : 404 ಹುದ್ದೆಗಳು.
- ಉತ್ತರ ರೈಲ್ವೆ (NR) : 478 ಹುದ್ದೆಗಳು.
- ಉತ್ತರ ಮಧ್ಯ ರೈಲ್ವೆ (NCR) : 241 ಹುದ್ದೆಗಳು.
- ಮಧ್ಯ ರೈಲ್ವೆ (CR) : 305 ಹುದ್ದೆಗಳು ಮತ್ತು
- ವಲಯಗಳು ಸೇರಿ ಒಟ್ಟು 6,374 ಹುದ್ದೆಗಳು ಸೇರಿವೆ.
ಇದನ್ನು ಓದಿ : Sheetal : ಕತ್ತು ಸೀಳಿ ಖ್ಯಾತ ಮಾಡೆಲ್ ಹತ್ಯೆ ; ಕಾಲುವೆಯಲ್ಲಿ ಶವ ಪತ್ತೆ.!
RRB ವಯೋಮಿತಿ :
ಗ್ರೇಡ್ – I (Grade-I) ರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು,
- ಕನಿಷ್ಠ 18 ವಯಸ್ಸು ಮತ್ತು
- ಗರಿಷ್ಠ 36 ವರ್ಷಗಳು, ಹಾಗೆಯೇ
ಗ್ರೇಡ್ – III (Grade-III) ರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು,
- ಕನಿಷ್ಠ 18 ವಯಸ್ಸು ಮತ್ತು
- ಗರಿಷ್ಠ 33 ವರ್ಷಗಳು ಎಂದು ನಿಗದಿಪಡಿಸಲಾಗಿದೆ.
ಇದನ್ನು ಓದಿ : ಯುವತಿ ಸ್ನಾನ ಮಾಡುವುದನ್ನು ರಹಸ್ಯ Camera ಇಟ್ಟು ಲೈವ್ ವೀಕ್ಷಿಸುತ್ತಿದ್ದ ಮನೆ ಮಾಲೀಕ.!
RRB ಶೈಕ್ಷಣಿಕ ಅರ್ಹತೆ ಮತ್ತು ಹುದ್ದೆಯ ವಿವರಗಳು :
ಹುದ್ದೆಗಳ ಹೆಸರು | ಸಂಖ್ಯೆ | ವಿದ್ಯಾರ್ಹತೆ |
---|---|---|
Technician Grade-I Signal | 180 | ಮಾನ್ಯತೆ ಪಡೆದ ಸಂಸ್ಥೆಯಿಂದ ಭೌತಶಾಸ್ತ್ರ/ಎಲೆಕ್ಟ್ರಾನಿಕ್ಸ್/ಕಂಪ್ಯೂಟರ್ ಸೈನ್ಸ್/ಐಟಿ/ಇನ್ಸ್ಟ್ರುಮೆಂಟೇಶನ್‌ನಲ್ಲಿ ಬಿ.ಎಸ್ಸಿ ಅಥವಾ ಸಂಬಂಧಿತ ವಿಭಾಗಗಳಲ್ಲಿ (ಉದಾ. ಎಲೆಕ್ಟ್ರಾನಿಕ್ಸ್, ಐಟಿ, ಇನ್ಸ್ಟ್ರುಮೆಂಟೇಶನ್) 3 ವರ್ಷಗಳ ಡಿಪ್ಲೊಮಾ/ಎಂಜಿನಿಯರಿಂಗ್ ಪದವಿ. |
Technician Grade-III | 6,000 | NCVT/SCVT-ಮಾನ್ಯತೆ ಪಡೆದ ಸಂಸ್ಥೆಗಳಿಂದ ಸಂಬಂಧಿತ ವ್ಯಾಪಾರದಲ್ಲಿ 10 ನೇ ತರಗತಿ ಪಾಸ್ + ITI (ಉದಾ. ಫೋರ್ಜರ್ ಮತ್ತು ಹೀಟ್ ಟ್ರೀಟರ್, ಫೌಂಡ್ರಿಮ್ಯಾನ್, ಪ್ಯಾಟರ್ನ್ ಮೇಕರ್, ಮೌಲ್ಡರ್). |
RRB ವೇತನ ಶ್ರೇಣಿ :
- ಗ್ರೇಡ್ – I (Grade-I) ರ ಹುದ್ದೆಗಳಿಗೆ : ರೂ.29,200/-
- ಗ್ರೇಡ್ – III (Grade-III) ರ ಹುದ್ದೆಗಳಿಗೆ : ರೂ.19,900/-
ಇದನ್ನು ಓದಿ : ಈ ಲಕ್ಷಣಗಳಿದ್ದರೆ ದೇಹದಲ್ಲಿ ಕೆಟ್ಟ Cholesterol ಹೆಚ್ಚಾಗಿದೆ ಅಂತನೇ ಅರ್ಥ.!
RRB ಅರ್ಜಿ ಶುಲ್ಕ :
- General/OBC/EWS : ರೂ.500/- (ಸಿಬಿಟಿ ನಂತರ ರೂ.400/- ಮರುಪಾವತಿಸಲಾಗಿದೆ).
- SC/ST/EBC/ESM/ಮಹಿಳೆಯರು/ಅಲ್ಪಸಂಖ್ಯಾತರು/ಮೂರನೇ ಲಿಂಗ : ರೂ.250/- (ಸಿಬಿಟಿ ನಂತರ ಸಂಪೂರ್ಣವಾಗಿ ಮರುಪಾವತಿಸಲಾಗಿದೆ).
- ದೋಷ ತಿದ್ದುಪಡಿ ಶುಲ್ಕಗಳು : ಪ್ರತಿ ಮಾರ್ಪಾಡಿಗೆ ರೂ.250/-
- ಪಾವತಿ ವಿಧಾನ : ಆನ್‌ಲೈನ್ (ಡೆಬಿಟ್/ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಯುಪಿಐ).
- ಮರುಪಾವತಿ ಪ್ರಕ್ರಿಯೆ : RRB ಮಾನದಂಡಗಳ ಪ್ರಕಾರ, ಸಿಬಿಟಿ ಹಾಜರಾದ ನಂತರ ಅಭ್ಯರ್ಥಿಯ ಬ್ಯಾಂಕ್ ಖಾತೆಗೆ ಮರುಪಾವತಿಯನ್ನು ಜಮಾ ಮಾಡಲಾಗುತ್ತದೆ.
RRB ಆಯ್ಕೆ ಪ್ರಕ್ರಿಯೆ :
- ಆಯ್ಕೆ ಪ್ರಕ್ರಿಯೆಯಲ್ಲಿ, ಅಭ್ಯರ್ಥಿಗಳು ಮೊದಲು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಯನ್ನು ಎದುರಿಸಬೇಕಾಗುತ್ತದೆ. ನಂತರ,
- ದಾಖಲೆ ಪರಿಶೀಲನೆ ಜೊತೆಗೆ ವೈದ್ಯಕೀಯ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ.
ಇದನ್ನು ಓದಿ : Fake SI : 2 ವರ್ಷಗಳಿಂದ ಅಸಲಿ ಪೊಲೀಸರನ್ನೇ ಯಾಮಾರಿಸಿದ್ದ ನಕಲಿ SI.!
RRB ಪ್ರಮುಖ ದಿನಾಂಕಗಳು :
- ಅಧಿಸೂಚನೆ ಬಿಡುಗಡೆ : 16 ಜೂನ್, 2025.
- ಅರ್ಜಿ ಸಲ್ಲಿಕೆ ಆರಂಭ : 28 ಜೂನ್, 2025.
- ಕೊನೆಯ ದಿನಾಂಕ : 28 ಜುಲೈ, 2025 (ರಾತ್ರಿ 11:59).
- ಪರೀಕ್ಷಾ ದಿನಾಂಕ : ಪ್ರಕಟಿಸಲಾಗುವುದು.
- ಪ್ರವೇಶ ಪತ್ರ ಬಿಡುಗಡೆ : ಪರೀಕ್ಷೆಗೆ 15–20 ದಿನಗಳ ಮೊದಲು.
RRB ಪ್ರಮುಖ ಲಿಂಕ್‌ಗಳು :
- ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು : ಇಲ್ಲಿ ಕ್ಲಿಕ್ ಮಾಡಿ.
- ಅಧಿಕೃತ ವೆಬ್ಸೈಟ್ : ಇಲ್ಲಿ ಕ್ಲಿಕ್ ಮಾಡಿ.
Rape : ಬಾಯ್ ಫ್ರೆಂಡ್ ಜೊತೆಯಲ್ಲಿದ್ದ ಯುವತಿ ಮೇಲೆ 10 ಯುವಕರಿಂದ ಅತ್ಯಾಚಾರ.!
ಜನಸ್ಪಂದನ ನ್ಯೂಸ್, ಡೆಸ್ಕ್ : 20 ವರ್ಷದ ಕಾಲೇಜು ವಿದ್ಯಾರ್ಥಿನಿ ಮೇಲೆ ವಿದ್ಯಾರ್ಥಿನಿಯ ಸ್ನೇಹಿತನ ಮುಂದೆಯೇ ಸಾಮೂಹಿಕ ಅತ್ಯಾಚಾರ (Rape) ಎಸಗಿರುವ ಪೈಶಾಚಿಕ ಕೃತ್ಯ ನಡೆದಿದೆ.
ಈ ಆಘಾತಕಾರಿ ಘಟನೆ ಒಡಿಶಾ ರಾಜ್ಯದ ಭುವನೇಶ್ವರದ ಗೋಪಾಲ್‌ಪುರ ಬೀಚ್‌ನಲ್ಲಿ ನಡೆದಿದ್ದು, 10 ಜನ ದುರುಳರು ವಿದ್ಯಾರ್ಥಿನಿಯ ಸ್ನೇಹಿತನ ಮುಂದೆಯೇ ಸಾಮೂಹಿಕ ಅತ್ಯಾಚಾರ (Rape) ಎಸಗಿದ್ದಾರೆಂದು ತಿಳಿದು ಬಂದಿದೆ.
ಇದನ್ನು ಓದಿ : Helicopter crash : ಪೈಲಟ್ ಸೇರಿ 6 ಮಂದಿ ಸಾವು.!
ಸಂತ್ರಸ್ತೆ ವಿದ್ಯಾರ್ಥಿನಿ ತನ್ನ ಸಹಪಾಠಿಯೊಂದಿಗೆ ಸಂಜೆ 6.30 ರ ಸುಮಾರಿಗೆ ಬೀಚ್‌ನಲ್ಲಿ ಕುಳಿತು ಮಾತನಾಡುತ್ತಿದ್ದಾಗ, ಸುಮಾರು 10 ಪುರುಷರು ಮೂರು ಮೋಟಾರ್ ಸೈಕಲ್‌ಗಳಲ್ಲಿ ಬಂದಿದ್ದಾರೆ. ಅದರಲ್ಲಿಯ ಇಬ್ಬರು ಫೋಟೋ ತೆಗೆಯಲು ಪ್ರಾರಂಭಿಸಿ, ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ನಂತರ ಯುವಕರು ಹುಡುಗಿಯ ಸ್ನೇಹಿತನ ಕೈಗಳನ್ನು ಕಟ್ಟಿ, ವಿದ್ಯಾರ್ಥಿನಿಯನ್ನು ಹತ್ತಿರದ ಪಾಳುಬಿದ್ದ ಮನೆಗೆ ಎಳೆದೊಯ್ದು, ಅಲ್ಲಿ ಮೂವರು ಸರದಿಯಲ್ಲಿ ಅತ್ಯಾಚಾರ (Rape) ಎಸಗಿದ್ದಾರೆ ಎಂದು ಆರೋಪಿಸಲಾಗಿದ್ದು, ಕಾಲೇಜಿನ ವಿದ್ಯಾರ್ಥಿನಿಯ ಮೇಲೆ ಸರದಿಯಂತೆ ಎರಡು ಗಂಟೆಗಳಿಗೂ ಹೆಚ್ಚು ಸಮಯ ಲೈಂಗಿಕ ದೌರ್ಜನ್ಯ (Rape) ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನು ಓದಿ : Sheetal : ಕತ್ತು ಸೀಳಿ ಖ್ಯಾತ ಮಾಡೆಲ್ ಹತ್ಯೆ ; ಕಾಲುವೆಯಲ್ಲಿ ಶವ ಪತ್ತೆ.!
ಈ ಸಮಯದಲ್ಲಿ ಅತ್ಯಾಚಾರ (Rape) ಸಂತ್ರಸ್ತೆ ಎಷ್ಟೇ ಕೂಗಿ ಬೇಡಿಕೊಂಡರೂ ಕಾಮುಕರು ಬಿಡಲಿಲ್ಲ. ದುಷ್‌ಕೃತ್ಯದ ನಂತರ ಅಪರಾಧಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಸಂದರ್ಭದಲ್ಲಿ ಧೈರ್ಯ ತೋರಿಸಿದ ಅತ್ಯಾಚಾರ (Rape) ಸಂತ್ರಸ್ತೆ ರಾತ್ರಿ 11 ಗಂಟೆಗೆ ದೂರು ನೀಡಲು ಗೋಪಾಲಪುರ ಪೊಲೀಸ್ ಠಾಣೆಗೆ ಹೋದರು.
ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ತ್ವರಿತವಾಗಿ ಕ್ರಮ ಕೈಗೊಂಡಿದ್ದು, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಎಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಎಲ್ಲಾ ಅತ್ಯಾಚಾರ (Rape) ಶಂಕಿತ ಆರೋಪಿಗಳು 19 ರಿಂದ 23 ವರ್ಷ ವಯಸ್ಸಿನವರಾಗಿದ್ದು, ಇವರಲ್ಲಿ ಶಾಲೆ ಮತ್ತು ಕಾಲೇಜು ಬಿಟ್ಟವರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ : ಈ ಲಕ್ಷಣಗಳಿದ್ದರೆ ದೇಹದಲ್ಲಿ ಕೆಟ್ಟ Cholesterol ಹೆಚ್ಚಾಗಿದೆ ಅಂತನೇ ಅರ್ಥ.!
ಆರೋಪಿಗಳಾರು ಸ್ಥಳೀಯರಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಪಡೆಯಲಾಗಿದೆ.