ಜನಸ್ಪಂದನ ನ್ಯೂಸ್, ಡೆಸ್ಕ್ : ಪತ್ನಿಯೋರ್ವಳು, ಪ್ರಿಯಕರನೊಂದಿಗೆ ಹೋಟೆಲ್‌ನ ರೂಂ (Room) ನಲ್ಲಿ ಮೋಜು ಮಾಡುತ್ತಿರುವ ವೇಳೆ ಸಡನ್ ಆಗಿ ಆಕೆಯ ಪತಿಯ ಆಗಮನದಿಂದ ಆಘಾತಗೊಳಗಾದ ಪತ್ನಿ ತಕ್ಷಣವೇ ಹೋಟೆಲ್‌ನ ಛಾವಣಿಯಿಂದ ಹಾರಿ ಅಲ್ಲಿಂದ ಪರಾರಿಯಾಗಿದ್ದಾಳೆ.
ಇಂತಹ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ನಡೆದಿದ್ದು, ಪತ್ನಿ ಹೋಟೆಲ್ (Room) ನ ಹಿಂಬದಿಯ ಛಾವಣಿಯಿಂದ ಹಾರಿ ಪರಾರಿಯಾಗಿಗುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಾಗ್‌ಪತ್‌ನಲ್ಲಿ ಮಹಿಳೆ (ಪತ್ನಿ) ಯೊಬ್ಬರು ತನ್ನ ಪ್ರಿಯಕರನೊಂದಿಗೆ ಮೋಜು ಮಾಡಲು ಹೋಟೆಲ್ (Room) ಗೆ ತಲುಪಿದ್ದರು. ಆದರೆ ಆಕೆಯ ಪತಿ ಪೊಲೀಸರೊಂದಿಗೆ ಆಕೆಯ ಹಿಂದಿನಿಂದ ಬರುತ್ತಿರುವುದು ಅವಳ ಗಮನಕ್ಕೆ ಬಂದಿರಲಿಲ್ಲ.
ಯಾವಾಗ ತನ್ನ ಪತಿ ಪೊಲೀಸರೊಂದಿಗೆ ಬರುತ್ತಿರುವುದನ್ನು ಮಹಿಳೆ ನೋಡಿದಲೋ ಆಗ ತಕ್ಷಣವೇ ಹೋಟೆಲ್ (Room) ನ ಹಿಂಬದಿಯ ಛಾವಣಿಯಿಂದ ಹಾರಿ ಅಲ್ಲಿಂದ ಪರಾರಿಯಾಗಿದ್ದಾರೆ.
ಯಾರೋ ದಾರಿಹೋಕರೊಬ್ಬರು ಹೀಗೆ ಮಹಿಳೆಯೊಬ್ಬಳು ಹೋಟೆಲ್ (Room) ನ ಹಿಂಬದಿಯ ಛಾವಣಿಯಿಂದ ಜಿಗಿಯುವ ವೀಡಿಯೊವನ್ನು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದು, ಸದ್ಯ ಅದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ವೀಡಿಯೊದಲ್ಲಿ ನೀವೂ ಮಹಿಳೆಯೋರ್ವಳು ಹೋಟೆಲ್‌ನ ಹಿಂಬದಿಯ ಛಾವಣಿಯಿಂದ ಹಾರಿ ಓಡಿಹೋಗುವುದನ್ನು ಕಾಣಬಹುದು.
ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯ ಸದ್ಯ ಚರ್ಚೆಗೆ ಗ್ರಾಸವಾಗಿದ್ದು, ಈ ಘಟನೆಯು ಉತ್ತರ ಪ್ರದೇಶದ ಬಾಗ್‌ಪತ್‌ನ ಬರೌತ್ ಕೊಟ್ವಾಲಿ ಪ್ರದೇಶದಿಂದ ಬಂದಿದೆ. ವಿಡಿಯೋದಲ್ಲಿರುವ ಮಹಿಳೆಯನ್ನು ಆಕೆಯ ಪತಿ ಅವಳನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಪೊಲೀಸರೊಂದಿಗೆ ಆಗಮಿಸಿ ಪ್ರಯತ್ನಿಸಿದನು.
ಆದರೆ ಮಹಿಳೆ ಹೋಟೆಲ್ ಛಾವಣಿಯಿಂದ ಹಾರಿ ಎಸ್ಕೇಫ್ ಆಗಿದ್ದಾಳೆ. ಮೂಲಗಳ ಪ್ರಕಾರ, ಮಹಿಳೆ ಬಾಗ್‌ಪತ್‌ನ ಛಪ್ರೌಲಿ ಪೊಲೀಸ್ ಠಾಣೆ ಪ್ರದೇಶದ ನಿವಾಸಿಯಾಗಿದ್ದು, ಎಸ್‌ಪಿ ಕಚೇರಿಯ ಮಹಿಳಾ ಸೆಲ್‌ನಲ್ಲಿ ಆಕೆಯ ಪತಿಯೊಂದಿಗೆ ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಕೌನ್ಸೆಲಿಂಗ್ ನಡೆಯುತ್ತಿದೆ ಎನ್ನಲಾಗಿದೆ.
ಮಹಿಳೆ ಹೋಟೆಲ್ ರೂಂ (Room) ಗೆ ಹೋಗುವ ದಿನದಂದು ಮೂರನೇ ಬಾರಿಗೆ ಪತಿ-ಪತ್ನಿ ನಡುವಿನ ಸಂಧಾನದ ನಂತರ ಮಹಿಳೆ ಎಸ್‌ಪಿ ಕಚೇರಿಯಿಂದ ಹಿಂತಿರುಗುತ್ತಿದ್ದರು. ಈ ವೇಳೆ ಮಹಿಳೆ ಬಾಗ್‌ಪತ್‌ನಿಂದ ಬರೌತ್‌ಗೆ ಹೋಗುವ ಬಸ್ ಹತ್ತಿದರು ಮತ್ತು ಬರೌತ್ ತಲುಪಿದ ನಂತರ ಆಕೆ ತನ್ನ ಪ್ರೇಮಿಯೊಂದಿಗೆ ಬೈಕ್‌ನಲ್ಲಿ ಕುಳಿತು ಹೋಟೆಲ್‌ಗೆ ತಲುಪಿದರು.
ಯಾವಾಗ ಮಹಿಳೆ ಮೋಜು ಮಾಡಲು ತನ್ನ ಪ್ರೇಮಿಯೊಂದಿಗೆ ಹೋಟೆಲ್ (Room) ಗೆ ತಲುಪಿದ್ದಳೋ, ಆಗ ಆಕೆಯ ಪತಿ ಅವಳನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರೊಂದಿಗೆ ತನ್ನ ಪತಿ ಹೋಟೆಲ್ ಕಡೆ ಬರುವುದನ್ನು ನೋಡಿದ ಮಹಿಳೆ ಭಯಭೀತರಾಗಿ ಸಿಕ್ಕಿಬೀಳುವ ಭಯದಿಂದ ಸುಮಾರು 12-13 ಅಡಿ ಎತ್ತರದ ಹೋಟೆಲ್‌ನ ಛಾವಣಿಯಿಂದ ಹಾರಿ ಸ್ಥಳದಿಂದ ಪರಾರಿಯಾಗಿದ್ದಾಳೆ.
ಹೋಟೆಲ್ (Room) ನ ಹಿಂಬದಿಯ ಛಾವಣಿಯಿಂದ ಜಿಗಿದು ಪರಾರಿಯಾಗುವ ವೇಳೆ ಮಹಿಳೆ ಮುಖಕ್ಕೆ ವಸ್ತ್ರ ಕಟ್ಟಿಕೊಂಡಿರುವುದನ್ನು ನೀವೂ ವಿಡಿಯೋದಲ್ಲಿ ಕಾಣಬಹುದಾಗಿದೆ.
ಪ್ರಸ್ತುತ ಈ ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಮತ್ತು ವೈರಲ್ ವೀಡಿಯೊದ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ. ಇನ್ನು ಈ ಘಟನೆಯು ಸ್ಥಳೀಯ ಪ್ರದೇಶದಲ್ಲಿ ಸಂಚಲನ ಮೂಡಿಸಿದೆ ಮತ್ತು ಹೋಟೆಲ್‌ನ ಪಾತ್ರದ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.
ಹೋಟೆಲ್ ರೂಂ (Room) ನಿಂದ ಪರಾರಿಯಾಗು ಮಹಿಳೆಯ ವಿಡಿಯೋ :
ससुरालियों ने विवाहित महिला को होटल में प्रेमी के साथ पकड़ा
होटल की पिछली खिड़की से कूदकर महिला हुई मौके से फरार
होटल की दीवार से कूदते हुए ससुरालियों ने बनाया वीडियो
मौके पर पुलिस बुलाकर ससुरालियों ने की मामले की शिकायत
पति ने पत्नी से जान का खतरा होने की कही बात… pic.twitter.com/dP76rmovgr
— News1India (@News1IndiaTweet) June 17, 2025
Honeytrap-case : ಯುವತಿ, ಪೊಲೀಸ್ ಕಾನ್ಸ್‌ಟೇಬಲ್ ಸೇರಿ 5 ಜನರ ಬಂಧನ.!
ಜನಸ್ಪಂದನ ನ್ಯೂಸ್, ಮೈಸೂರು : ಹನಿಟ್ರ್ಯಾಪ್ (Honeytrap) ಪ್ರಕರಣಕ್ಕೆ ಸಂಬಂಧಿಸಿದಂತೆ 5 ಜನರನ್ನು ಪೊಲೀಸರು ಬಂಧಿಸಿರುವ ಘಟನೆ ಮೈಸೂರಿನ ಪಿರಿಯಾಪಟ್ಟಣ ತಾಲೂಕಿನಲ್ಲಿ ನಡೆದಿದೆ. ವಿಚಿತ್ರ ಏನೆಂದರೆ ಹನಿಟ್ರ್ಯಾಪ್ ಪ್ರಕರಣಕ್ಕೆ ಸ್ವತಃ ಪೊಲೀಸ್ ಪೇದೆಯೇ ಸಾಥ್ ನೀಡಿರುವುದು.
ಹನಿಟ್ರ್ಯಾಪ್ (Honeytrap) ಪ್ರಕರಣದಲ್ಲಿ ಪೊಲೀಸ್ ಸಾಥ್ ನೀಡಿರುವುದು ಸ್ವತಃ ಪೊಲೀಸ್ ಇಲಾಖೆಗೆಯೇ ಶಾಕ್ ಆಗಿದ್ದು, ಯುವತಿ ಸೇರಿ ಒಟ್ಟು 5 ಜನರನ್ನು ಬಂಧಿಸಲಾಗಿದ್ದು, ಅದರಲ್ಲಿ ಪೊಲೀಸ್ ಸಿಬ್ಬಂದಿ ಕೂಡ ಇದ್ದಾನೆ.
ಇದನ್ನು ಓದಿ : BSF : ಸಹೋದ್ಯೋಗಿಯಿಂದ ಬಿಎಸ್‌ಎಫ್ ಯೋಧನ ಹತ್ಯೆ.!
ಕಂಪಲಾಪುರದ ಓರ್ವ ಬಟ್ಟೆ ವ್ಯಾಪಾರಿಯನ್ನು ಈ ಹನಿಟ್ರ್ಯಾಪ್‌ನಲ್ಲಿ ಸಿಲುಕಿಸಿ ಲಕ್ಷಾಂತರ ರೂಪಾಯಿ ಸುಲಿಗೆ ನಡೆಸಲು ಪ್ರಯತ್ನಿಸಲಾಗಿದ್ದು, ಹನಿಟ್ರ್ಯಾಪ್ (Honeytrap) ಪ್ರಕರಣಕ್ಕೆ ಸಂಬಂಧಿಸಿದಂತೆ 5 ಆರೋಪಿಗಳನ್ನು ಬಂಧಿಸಲಾಗಿದೆ.
ಕಂಪಲಾಪುರದ ದಿನೇಶ್ ಕುಮಾರ್ ಎಂಬವರು ತಮ್ಮ ಊರಿನಲ್ಲಿ ಬಟ್ಟೆ ಅಂಗಡಿಯನ್ನು ನಡೆಸುತ್ತಿದ್ದಾರೆ. 3-4 ದಿನಗಳ ಹಿಂದೆ ಅವರ ಅಂಗಡಿಗೆ ಬಂದಿದ್ದ ಯುವತಿಯೊಬ್ಬರು ಬಟ್ಟೆ ಖರೀದಿಯ ನೆಪದಲ್ಲಿ ಪರಿಚಯ ಬೆಳೆಸಿ, ಬಳಿಕ ಮೊಬೈಲ್ ನಂಬರ್ ಪಡೆದು ವಾಟ್ಸಾಪ್ ಚಾಟಿಂಗ್ ಮಾಡುತ್ತಿದ್ದರು.
ಇದನ್ನು ಓದಿ : Breakfast : ಬೆಳಗ್ಗೆ ನೀವು ಉಪಾಹಾರ ಸೇವಿಸದೇ ಇರ್ತೀರಾ.? ಈ ಸುದ್ದಿ ಓದಿ.!
ಕಳೆದ ಜೂನ್ 14ರಂದು ಮಧ್ಯಾಹ್ನ ನಮ್ಮ ಮನೆಯಲ್ಲಿ ಯಾರೂ ಇಲ್ಲ, ನೀವೂ ನಾನು ಕಳುಹಿಸುವ ಲೋಕೇಷನ್ ಮೂಲಕ ನಮ್ಮ ಚಿಕ್ಕಮ್ಮನ ಮನೆಗೆ ಬನ್ನಿ ಎಂದು ಯುವತಿ, ವ್ಯಾಪಾರಿಯನ್ನು ಮನೆಗೆ ಬರುವಂತೆ ಆಹ್ವಾನ ನೀಡಿದ್ದಾಳೆ.
ಯುವತಿಯ ಮಾತನ್ನು ನಂಬಿದ ವ್ಯಾಪಾರಿ, ಯುವತಿ ಹೇಳಿದ ಸ್ಥಳಕ್ಕೆ ಕಾರಿನಲ್ಲಿ ತೆರಳಿದ್ದಾರೆ. ಮನೆಗೆ ಬಂದ ವ್ಯಾಪಾರಿಯನ್ನು ಆಹ್ವಾನಿಸಿದ ಯುವತಿ ಡೋರ್ ಲಾಕ್ ಮಾಡಿ ಬರುವುದಾಗಿ ಹೇಳಿ, ಲಾಕ್ ಮಾಡದೆ (Honeytrap ಉದ್ದೇಶಕ್ಕಾಗಿ) ಬಂದು ವ್ಯಾಪಾರಿ ಜೊತೆ ಆತ್ಮೀಯವಾಗಿ ಕುಳಿತ್ತಿದ್ದಾಳೆ.
ಇದನ್ನು ಓದಿ : Witchcraft : ಮಹಿಳೆಯ ‘ಬೆತ್ತಲೆ ವೀಡಿಯೋ’ ಮಾಡಿ ಬ್ಲ್ಯಾಕ್ ಮೇಲ್ : ಕಾಮುಕ ಅರ್ಚಕ ಅರೆಸ್ಟ್..!
ಆಗ ಸ್ಥಳಕ್ಕೆ ಅಪರಿಚಿತರಿಬ್ಬರು ಬಂದು ಇಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂಬಂತೆ ದಾಳಿ ನಡೆಸಿ ದಿನೇಶ್ ಅವರನ್ನು ಹಿಗ್ಗಾಮುಗ್ಗ ಥಳಿಸಿ ಅದನ್ನು Honeytrap ಮಾಡಲು ವಿಡಿಯೋ ಶೂಟ್ ಮಾಡಿದ್ದಾರೆ. ಕೆಲ ಸಮಯದ ನಂತರ ಪೊಲೀಸ್ ಪೇದೆ (Honeytrap ಗುಂಪಿನ ಸದಸ್ಯ) ಶಿವಣ್ಣ ಅಲಿಯಾಸ್ ಪಾಪಣ್ಣ, ಇದೇ ರೂಮಿಗೆ ಬಂದು “ನಿನ್ನನ್ನು ಬಿಟ್ಟು ಕಳಿಸಲು ನಾವು ಇವರೊಂದಿಗೆ ಮಾತನಾಡುತ್ತೇವೆ” ಎಂದು ದಿನೇಶ್ ಕುಮಾರ್ ಅವರಿಗೆ ನಂಬಿಸಿ, 10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.”
ಆಗ ವ್ಯಾಪಾರಿ ದಿನೇಶ್ ಅವರು ತಮ್ಮ ಸಹೋದರನಿಗೆ 10 ಲಕ್ಷ ರೂ. ಹಣವನ್ನು ತಾನು ಹೇಳುವ ಸ್ಥಳಕ್ಕೆ ಬರುವಂತೆ ಹೇಳಿದ್ದಾರೆ. ಆದರೆ ದಿನೇಶ್ ಅವರ ಮಾತಿನಿಂದ ಸಂಶಯಗೊಂಡು ಹಣವನ್ನು ತೆಗೆದುಕೊಂಡು ಹೋಗುವ ಮುನ್ನ ದಿನೇಶನ ಸಹೋದರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನು ಓದಿ : Sheetal : ಕತ್ತು ಸೀಳಿ ಖ್ಯಾತ ಮಾಡೆಲ್ ಹತ್ಯೆ ; ಕಾಲುವೆಯಲ್ಲಿ ಶವ ಪತ್ತೆ.!
ತಮ್ಮ ಚಾಲಾಕಿ ಕೆಲಸ ಪೊಲೀಸರಿಗೆ ತಿಳಿದ ಹನಿಟ್ಯ್ರಾಪ್ ಗ್ಯಾಂಗ್ ವ್ಯಾಪಾರಿ ದಿನೇಶ್ ಕುಮಾರ ಅವರನ್ನು ಬಿಟ್ಟು ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಪಿರಿಯಾಪಟ್ಟಣ ಪೊಲೀಸರು ಪೊಲೀಸ್, ಯುವತಿ ಸೇರಿ 5 ಜನರನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.