ಉದ್ಯೋಗ ಮಾಹಿತಿ : 10ನೇ, 12ನೇ, ಡಿಪ್ಲೊಮಾ ಪಾಸಾದ ಅಭ್ಯರ್ಥಿಗಳಿಗೆ ಒಂದು ಗುಡ್ ನ್ಯೂಸ್, ಬೆಂಗಳೂರು ಸಿವಿಲ್ ಕೋರ್ಟ್ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. 10ನೇ, 12ನೇ ಅಥವಾ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಮತ್ತೊಂದು ಉತ್ತಮ ಅವಕಾಶ ದೊರೆತಿದೆ. ಬೆಂಗಳೂರು ಸಿವಿಲ್ ಕೋರ್ಟ್ 2026ನೇ ಸಾಲಿನ ನೇಮಕಾತಿಗೆ ಸಂಬಂಧಿಸಿದಂತೆ ಹೊಸ ಅಧಿಸೂಚನೆ ಪ್ರಕಟಿಸಿದ್ದು, ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಬೆಂಗಳೂರು ಸಿವಿಲ್ ಕೋರ್ಟ್ನಲ್ಲಿರುವ ಹುದ್ದೆಗಳ ಮಾಹಿತಿ :
ಈ ನೇಮಕಾತಿ ಪ್ರಕ್ರಿಯೆಯಡಿ ಒಟ್ಟು 22 ಹುದ್ದೆಗಳು ಭರ್ತಿಯಾಗಲಿದ್ದು, ಉದ್ಯೋಗ ಸ್ಥಳ ಬೆಂಗಳೂರು ಆಗಿರುತ್ತದೆ. ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಉದ್ಯೋಗ ಹುಡುಕುತ್ತಿರುವ ಯುವಕರಿಗೆ ಇದೊಂದು ಉತ್ತಮ ಅವಕಾಶ ಎಂದು ಹೇಳಬಹುದು.
ಹುದ್ದೆಗಳು :
ಅಧಿಸೂಚನೆಯ ಪ್ರಕಾರ ವಿವಿಧ ಹುದ್ದೆಗಳ ವಿವರ ಹೀಗಿದೆ.
ಈ ಸುದ್ದಿ ಓದಿ : ಮದುವೆಯಾದ ಬಳಿಕವೂ ಒಂಟಿಯಾಗಿ ಬದುಕುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಳ; ಕರ್ನಾಟಕ ಸೇರಿ 5 ರಾಜ್ಯಗಳ ಶಾಕಿಂಗ್ ವರದಿ ಬಹಿರಂಗ.
- ಸ್ಟೆನೋಗ್ರಾಫರ್ ಗ್ರೇಡ್-3 : 6 ಹುದ್ದೆಗಳು,
- ಬೆರಳಚ್ಚುಗಾರ (Typist) : 7 ಹುದ್ದೆಗಳು,
- ಚಾಲಕ : 1 ಹುದ್ದೆ,
- ಪ್ರೊಸೆಸ್ ಸರ್ವರ್ : 1 ಹುದ್ದೆ ಹಾಗೂ
- ಪಿಯೂನ್ : 7 ಹುದ್ದೆಗಳು ಸೇರಿ ಒಟ್ಟು 22 ಹುದ್ದೆಗಳು ಖಾಲಿ ಇವೆ.
ವೇತನ ಶ್ರೇಣಿ :
- ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.27,000 ರಿಂದ ರೂ.83,700ರವರೆಗೆ ವೇತನ ನೀಡಲಾಗುತ್ತದೆ.
ವಯೋಮಿತಿ :
ವಯೋಮಿತಿಯ ವಿಷಯಕ್ಕೆ ಬಂದರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ,
- ಕನಿಷ್ಠ 18 ವರ್ಷ ಮತ್ತು
- ಗರಿಷ್ಠ 40 ವರ್ಷ ವಯಸ್ಸು ನಿಗದಿಪಡಿಸಲಾಗಿದೆ.
ಈ ಸುದ್ದಿಯನ್ನು ಓದಿ : ದಿಢೀರ್ ಓಪನ್ ಆದ ಚಲಿಸುತ್ತಿದ್ದ ಶಾಲಾ ವ್ಯಾನಿನ ಹಿಂಬಾಗಿಲು ; ರಸ್ತೆಗೆ ಬಿದ್ದ 5 ಮಕ್ಕಳು.
Note : ಸರ್ಕಾರದ ನಿಯಮಾನುಸಾರ ಮೀಸಲಾತಿ ವರ್ಗಗಳಿಗೆ ವಯೋಮಿತಿ ಸಡಿಲಿಕೆ ಕೂಡ ಅನ್ವಯವಾಗಲಿದೆ.
ಶೈಕ್ಷಣಿಕ ಅರ್ಹತೆ :
ಶೈಕ್ಷಣಿಕ ಅರ್ಹತೆಯಾಗಿ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ, 12ನೇ ಅಥವಾ ಡಿಪ್ಲೊಮಾ ಪಾಸಾಗಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
Note : ಕೆಲವು ಹುದ್ದೆಗಳಿಗೆ ಸಂಬಂಧಿತ ಕೌಶಲ್ಯ ಅಥವಾ ಅನುಭವಕ್ಕೂ ಆದ್ಯತೆ ಇರಬಹುದು.
ಅರ್ಜಿ ಶುಲ್ಕ :
ಅಭ್ಯರ್ಥಗಳಿಗೆ ಅರ್ಜಿ ಶುಲ್ಕ ಹೀಗಿದೆ,
- ಸಾಮಾನ್ಯ ವರ್ಗದ ಅಭ್ಯರ್ಥಿಗಳು ರೂ.300/-,
- ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳು ರೂ.150/- ಪಾವತಿಸಬೇಕು ಮತ್ತು
- SC/ST, PWD ಹಾಗೂ Cat-1 ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಇದನ್ನು ಓದಿ : 10ನೇ, 12ನೇ, ಡಿಪ್ಲೊಮಾ ಹಾಗೂ ಪದವೀಧರರಿಗೆ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಉದ್ಯೋಗಾವಕಾಶ.
ಆಯ್ಕೆ ಪ್ರಕ್ರಿಯೆ :
ಆಯ್ಕೆ ಪ್ರಕ್ರಿಯೆ ಮುಖ್ಯವಾಗಿ ಸಂದರ್ಶನ (Interview) ಮೂಲಕ ನಡೆಯಲಿದೆ. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳುವುದು ಮುಖ್ಯ.
ಪ್ರಮುಖ ದಿನಾಂಕಗಳು :
- ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭ : ಜುಲೈ 1, 2026.
- ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ : ಜುಲೈ 30, 2026 .
Note : ಇದೇ ದಿನಾಂಕದೊಳಗೆ ಅರ್ಜಿ ಶುಲ್ಕ ಪಾವತಿ ಕೂಡ ಪೂರ್ಣಗೊಳಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು Bengaluru District Courts Official Website ಗೆ ಭೇಟಿ ನೀಡಿ ಅಧಿಕೃತ ಅಧಿಸೂಚನೆ ಹಾಗೂ ಅರ್ಜಿ ಲಿಂಕ್ ಪರಿಶೀಲಿಸಬಹುದು. ಸರ್ಕಾರಿ ಉದ್ಯೋಗ ಕನಸು ಕಾಣುತ್ತಿರುವವರಿಗೆ ಇದು ಕೈ ತಪ್ಪಿಸಿಕೊಳ್ಳದ ಅವಕಾಶವಾಗಿದೆ.
ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ







