ದೇಶಾದ್ಯಂತ ಮತ್ತೆ ಚುರುಕಾದ ಮುಂಗಾರು ಮಳೆ

ದೇಶಾದ್ಯಂತ ಮತ್ತೆ ಚುರುಕಾದ ಮುಂಗಾರು ಮಳೆ: ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಭಾರಿ ಮಳೆ ಮುನ್ಸೂಚನೆ!

ಡೆಸ್ಕ್‌ : ದೇಶಾದ್ಯಂತ ದೇಶಾದ್ಯಂತ ಮಾಯವಾಗಿದ್ದ ನೈಋತ್ಯ ಮುಂಗಾರು ಮಳೆ (Monsoon) ಮತ್ತೆ ಚುರುಕಾದಂತೆ ಕಾಣುತ್ತಿದ್ದು, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಭಾರಿ ಮಳೆ ಮುನ್ಸೂಚನೆ ಸಿಕ್ಕಿದೆ. ಪುನಃ ಮುಂಗಾರು ಚುರುಕಾದ ಪರಿಣಾಮ ದೇಶದ ಬೆನ್ನೆಲುಬಾದ ರೈತರ ಮುಖದಲ್ಲಿ ಕೊಂಚ ನೆಮ್ಮದಿ ಮೂಡಿದೆ. ಈ ಚುರುಕುತನ ಮುಂದುವರೆದರೆ ಸಂಭವಿಸಬಹುದಾಗ ಬರದ ಛಾಯೆಯನ್ನು ನಿವಾರಿಸಬಹುದು.

ದೇಶದ ಹಲವು ಭಾಗಗಳಲ್ಲಿ ಕಳೆದ ಅನೇಕ ದಿನಗಳಿಂದ ಮುಂಗಾರು ಮಳೆ ದುರ್ಬಲಗೊಂಡಿದ್ದರಿಂದ ರೈತರು ಹಾಗೂ ಸಾಮಾನ್ಯ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಮತ್ತೆ ಚುರುಕಾದ ಮುಂಗಾರು ಮಳೆ :

ಆದರೆ ಇದೀಗ ನೈಋತ್ಯ ಮಾನ್ಸೂನ್ ಮತ್ತೆ ಚುರುಕುಗೊಳ್ಳುವ ಲಕ್ಷಣಗಳು ಕಾಣಿಸತೊಡಗಿದ್ದು, ಮುಂದಿನ ಕೆಲ ದಿನಗಳಲ್ಲಿ ದೇಶದ ಹಲವು ರಾಜ್ಯಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಳೆದ ಕೆಲವು ವಾರಗಳಿಂದ ಮಧ್ಯ ಭಾರತ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆಯ ಕೊರತೆ ಸ್ಪಷ್ಟವಾಗಿ ಕಂಡುಬಂದಿತ್ತು. ಇದರಿಂದ ದೇಶದಲ್ಲಿ ಸುಮಾರು 64% ರಷ್ಟು ಕೃಷಿ ಚಟುವಟಿಕೆಗಳು ನಿಧಾನಗೊಂಡಿದ್ದು, ರೈತರು ಬಿತ್ತನೆ ಕಾರ್ಯಗಳ ಬಗ್ಗೆ ಗೊಂದಲಕ್ಕೆ ಸಿಲುಕಿದ್ದರು.

ಇದನ್ನು ಓದಿ : ಮೂಡಲಗಿಯಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಾಟ ಪತ್ತೆ; 4 ಟನ್ ಅಕ್ಕಿ ವಶಕ್ಕೆ.

ಈಗ ಹವಾಮಾನ ಮುನ್ಸೂಚನೆಗಳ ಪ್ರಕಾರ, ಮುಂಗಾರು ಮಳೆಯ ಮೋಡಗಳು ಮತ್ತೆ ಸಕ್ರಿಯವಾಗುತ್ತಿದ್ದು, ಪರಿಸ್ಥಿತಿ ಕ್ರಮೇಣ ಬದಲಾಗುವ ನಿರೀಕ್ಷೆ ಮೂಡಿಸಿದೆ.

ಜೂನ್ 21ರಿಂದ ಕರ್ನಾಟಕದಲ್ಲಿ ಮಳೆ :

ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ “ಜೂನ್ 19ರಿಂದ ಜೂನ್ 25ರವರೆಗೆ ಛತ್ತೀಸ್‌ಗಢ, ಪೂರ್ವ ಮತ್ತು ಪಶ್ಚಿಮ ಮಧ್ಯಪ್ರದೇಶ ಹಾಗೂ ವಿದರ್ಭ ಭಾಗಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ” ಇದೆ. ಈ ಪ್ರದೇಶಗಳು ಇತ್ತೀಚಿನ ದಿನಗಳಲ್ಲಿ ಮುಂಗಾರು ದುರ್ಬಲತೆಯಿಂದ ಹೆಚ್ಚು ತೊಂದರೆ ಅನುಭವಿಸಿದ್ದ ಪ್ರದೇಶಗಳಾಗಿವೆ.

ಕರ್ನಾಟಕದಲ್ಲೂ ಮಳೆಯ ಚಟುವಟಿಕೆ ಹೆಚ್ಚಾಗಲಿದ್ದು, “ಜೂನ್ 21ರಿಂದ 25ರವರೆಗೆ ಕರಾವಳಿ” ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಜೊತೆಗೆ “ಜೂನ್ 22 ಮತ್ತು 23ರಂದು ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು” ಜಿಲ್ಲೆಗಳಲ್ಲೂ ಉತ್ತಮ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಇದರಿಂದ ಮಳೆಯ ಕೊರತೆಯಿಂದ ಸಂಕಷ್ಟದಲ್ಲಿದ್ದ ರೈತರಿಗೆ ಕೊಂಚ ನಿರಾಳತೆ ಸಿಗುವ ಸಾಧ್ಯತೆ ಹೆಚ್ಚಾಗಿದೆ.

ಈ ಸುದ್ದಿಯನ್ನು ಓದಿ : ಬಿಯರ್ ಕುಡಿಯುವುದರಿಂದ ಕಿಡ್ನಿ ಸ್ಟೋನ್ ಕರಗುತ್ತಾ? ವೈದ್ಯರು ಹೇಳೋ ಸತ್ಯವೇನು?

ಇದೇ ವೇಳೆ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲೂ ಮಳೆ ಪ್ರಮಾಣ ಹೆಚ್ಚಾಗುವ ಸೂಚನೆ ಸಿಕ್ಕಿದೆ. “ತಮಿಳುನಾಡು, ಪುದುಚೇರಿ ಹಾಗೂ ಕಾರೈಕಲ್ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ” ಇದ್ದು, “ಕೇರಳದಲ್ಲಿ ಕೂಡ ಹಲವು ದಿನಗಳ ಕಾಲ ವ್ಯಾಪಕ ಮಳೆಯಾಗುವ ಮುನ್ಸೂಚನೆ” ನೀಡಲಾಗಿದೆ.

ಮುಂಗಾರು ದುರ್ಬಲವಾಗಿದ್ದ ಕಾರಣ ಭತ್ತ ಸೇರಿದಂತೆ ಹಲವು ಕೃಷಿ ಬೆಳೆಗಳ ಮೇಲೆ ಪರಿಣಾಮ ಬೀಳುವ ಆತಂಕ ಹೆಚ್ಚಾಗಿತ್ತು. ಮಳೆ ಮುಂದುವರಿದರೆ ಕೃಷಿ ಚಟುವಟಿಕೆಗಳಿಗೆ ವೇಗ ಸಿಗಲಿದ್ದು, ರೈತರಲ್ಲಿ ಹೊಸ ಭರವಸೆ ಮೂಡಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಕ್ರೈಂ ಓದಿ : ಕಾಕಿನಾಡ: ಇನ್‌ಸ್ಟಾಗ್ರಾಮ್ ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಂದ ಪತ್ನಿ; 3 ತಿಂಗಳ ಬಳಿಕ ಸಿಕ್ಕಿಬಿದ್ದಿದ್ದು ಹೇಗೆ?

ಕರ್ನಾಟಕದಲ್ಲಿ ಜೂನ್ ತಿಂಗಳ ಸರಾಸರಿ ಮುಂಗಾರು ಮಳೆ (ಪ್ರಾಂತವಾರು) :

ಪ್ರದೇಶಜೂನ್ ತಿಂಗಳ ಸರಾಸರಿ ಮಳೆ
ಕರಾವಳಿ ಕರ್ನಾಟಕ (ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ)700 – 1000 ಮಿ.ಮೀ.
ಮಲೆನಾಡು (ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ ಭಾಗ)300 – 600 ಮಿ.ಮೀ.
ದಕ್ಷಿಣ ಒಳನಾಡು (ಬೆಂಗಳೂರು, ಮೈಸೂರು, ಮಂಡ್ಯ, ತುಮಕೂರು, ರಾಮನಗರ)100 – 180 ಮಿ.ಮೀ.
ಉತ್ತರ ಒಳನಾಡು (ಬೆಳಗಾವಿ, ವಿಜಯಪುರ, ಕಲಬುರಗಿ, ಬಾಗಲಕೋಟೆ, ರಾಯಚೂರು)80 – 150 ಮಿ.ಮೀ.

ಸಂಪಾದಕೀಯ :

ಜೂನ್ ತಿಂಗಳು ಕರ್ನಾಟಕ ರೈತರಿಗೆ ಅತ್ಯಂತ ಮಹತ್ವದ ಕಾಲ. ಈ ಅವಧಿಯಲ್ಲಿ ಮಳೆ ಕಡಿಮೆಯಾದರೆ ಭತ್ತ, ಜೋಳ, ಮೆಕ್ಕೆಜೋಳ ಸೇರಿದಂತೆ ಹಲವು ಬೆಳೆಗಳ ಬಿತ್ತನೆ ಮೇಲೆ ನೇರ ಪರಿಣಾಮ ಬೀರುತ್ತದೆ. ಆದ್ದರಿಂದ ಮುಂಗಾರು ಚಟುವಟಿಕೆಗಳ ಮೇಲೆ ರಾಜ್ಯದ ಕೃಷಿ ವಲಯದ ಕಣ್ಣು ಸದಾ ನೆಟ್ಟಿರುತ್ತದೆ.

ಪ್ರಮುಖ ಸುದ್ದಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ.


Disclaimer : ಈ ಲೇಖನವು ಭಾರತೀಯ ಹವಾಮಾನ ಇಲಾಖೆ (India Meteorological Department) ಮುನ್ಸೂಚನೆಗಳು, ಸಾರ್ವಜನಿಕವಾಗಿ ಲಭ್ಯವಿರುವ ಹವಾಮಾನ ವರದಿಗಳು ಹಾಗೂ ಲಭ್ಯ ಮಾಹಿತಿಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಹವಾಮಾನ ಪರಿಸ್ಥಿತಿ ಸ್ಥಳೀಯವಾಗಿ ಅಥವಾ ಸಮಯಾನುಸಾರ ಬದಲಾಗುವ ಸಾಧ್ಯತೆ ಇರುವುದರಿಂದ ಅಧಿಕೃತ ಮಾಹಿತಿಯನ್ನು ಪರಿಶೀಲಿಸುವುದು ಸೂಕ್ತ.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top