ಗೃಹ ಜ್ಯೋತಿ ಯೋಜನೆ ಹೊಸ ಅಪ್‌ಡೇಟ್: ಮನೆ-ಮನೆಗೆ ಬರುವ ESCOM ಸಿಬ್ಬಂದಿಗೆ ಈ 6 ಮಾಹಿತಿ ನೀಡುವುದು ಕಡ್ಡಾಯ.!

ಗೃಹ ಜ್ಯೋತಿ ಯೋಜನೆ : ಮನೆ-ಮನೆಗೆ ಬರುವ ESCOM ಸಿಬ್ಬಂದಿಗೆ ಈ 6 ಮಾಹಿತಿ ನೀಡುವುದು ಕಡ್ಡಾಯ.!

ಬೆಂಗಳೂರು : ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ “ಗೃಹ ಜ್ಯೋತಿ ಯೋಜನೆ (Gruha Jyothi Scheme)” ಫಲಾನುಭವಿಗಳಿಗೆ “ಹೊಸ ಅಪ್‌ಡೇಟ್”. ಇಂದಿನಿಂದ (ಜುಲೈ 01) ಎಸ್ಕಾಂ (ESCOM) ಸಿಬ್ಬಂದಿ ಮನೆ-ಮನೆಗೆ ಭೇಟಿ ನೀಡಲಿದ್ದು, ಭೇಟಿ ವೇಳೆ ಕಡ್ಡಾಯವಾಗಿ ಈ 6 ಪ್ರಮುಖ ಮಾಹಿತಿಯನ್ನು ಫಲಾನುಭವಿಗಳು ನೀಡಬೇಕು.

ಗೃಹ ಜ್ಯೋತಿ ಯೋಜನೆ (Gruha Jyothi Scheme) ಮೂಲಕ ರಾಜ್ಯದ ಕೋಟ್ಯಂತರ ಕುಟುಂಬಗಳು “ಉಚಿತ ವಿದ್ಯುತ್ ಸೌಲಭ್ಯ” ಪಡೆಯುತ್ತಿವೆ. ಇದೀಗ ಈ ಯೋಜನೆಗೆ ಸಂಬಂಧಿಸಿದಂತೆ ಇಂಧನ ಇಲಾಖೆ ಮಹತ್ವದ ಹೊಸ ಕ್ರಮ ಕೈಗೊಂಡಿದೆ.

ಸದ್ಯ ಯೋಜನೆಯ ಪಾರದರ್ಶಕತೆ ಮತ್ತು ಅರ್ಹ ಫಲಾನುಭವಿಗಳಿಗೆ ಈ ಯೋಜನೆಯ ಪ್ರಯೋಜನ ಸಿಗಲಿ ಅನ್ನೋ ದೃಷ್ಟಿಯಿಂದ ಮನೆ-ಮನೆಗೆ ಭೇಟಿ ನೀಡಿ,  ನವೀನ ಮಾಹಿತಿ ಸಂಗ್ರಹಿಸಲು ತೀರ್ಮಾನಿಸಲಾಗಿದೆ.

ರಾಜ್ಯದ ವಿವಿಧ ಎಸ್ಕಾಂ ಸಂಸ್ಥೆಗಳು (BESCOM, HESCOM, MESCOM, GESCOM, CESC) ತಮ್ಮಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಮತ್ತು ಮೀಟರ್ ರೀಡರ್‌ಗಳು ಇನ್ಮುಂದೆ ನೇರವಾಗಿ ಫಲಾನುಭವಿಗಳ ಮನೆಗೆ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ಪರಿಶೀಲಿಸಲಿದ್ದಾರೆ.

ಈ ಸುದ್ದಿ ಓದಿ : ನೇರಳೆ ಹಣ್ಣು ತಿಂದ ತಕ್ಷಣ ಯಾವುದೇ ಕಾರಣಕ್ಕೂ ಈ 5 ಆಹಾರ ಪದಾರ್ಥ ಸೇವಿಸಲೇಬೇಡಿ.

ಈಗಾಗಲೇ ಲಕ್ಷಾಂತರ ಗ್ರಾಹಕರು ಸೇವಾ ಸಿಂಧು (Seva Sindhu) ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಂಡಿದ್ದರೂ, ಮನೆ ಬದಲಾವಣೆ, ಮಾಲೀಕರ ಮರಣ, ಬಾಡಿಗೆದಾರರ ಬದಲಾವಣೆ ಅಥವಾ ಆಸ್ತಿ ಖರೀದಿ-ಮಾರಾಟದಂತಹ ಮಾಹಿತಿ ಸಮಯಕ್ಕೆ ಸರಿಯಾಗಿ ಅಪ್‌ಡೇಟ್ ಆಗದೇ ಇರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ಮನೆಗೆ ಬರುವ ಸಿಬ್ಬಂದಿಗಳಿಗೆ ನೀಡಬೇಕಾದ 6 ಪ್ರಮುಖ ಮಾಹಿತಿ :

ಸರ್ಕಾರದ ಹೊಸ ಆದೇಶದ ಪ್ರಕಾರ, ಎಸ್ಕಾಂ ಸಿಬ್ಬಂದಿ ಮನೆಗೆ ಭೇಟಿ ನೀಡಿದಾಗ ಫಲಾನುಭವಿಗಳು ಈ ಕೆಳಗಿನ ವಿವರಗಳನ್ನು ನೀಡಬೇಕಾಗುತ್ತದೆ:

1. ಪಡಿತರ ಚೀಟಿ ಮಾಹಿತಿ :

ನೀವು ಎಪಿಎಲ್ (APL), ಬಿಪಿಎಲ್ (BPL) ಅಥವಾ ಪಡಿತರ ಚೀಟಿ ಇಲ್ಲದ ವರ್ಗಕ್ಕೆ ಸೇರುತ್ತೀರಾ ಎಂಬ ಮಾಹಿತಿ. ಬಿಪಿಎಲ್ ಕಾರ್ಡ್ ಇದ್ದರೆ ಅದರ ಸಂಖ್ಯೆಯನ್ನು ನೀಡಬೇಕು.

2. ಮತದಾರರ ಗುರುತಿನ ಚೀಟಿ (Voter ID) :

ಕರ್ನಾಟಕ ರಾಜ್ಯದ ನೋಂದಾಯಿತ ಮತದಾರರೇ ಎಂಬುದನ್ನು ಖಚಿತಪಡಿಸಲು EPIC ಸಂಖ್ಯೆ ಕೇಳಲಾಗುತ್ತದೆ. ಕಾರಣ ಅದನ್ನು ನೀವು ಕೊಡಬೇಕು.

3. ಫಲಾನುಭವಿಯ ಫೋಟೋ :

ಅರ್ಜಿದಾರರ ಲೈವ್ ಫೋಟೋ ಅಥವಾ ಇತ್ತೀಚಿನ ಭಾವಚಿತ್ರವನ್ನು ESCOM ಸಿಬ್ಬಂದಿ ಸಂಗ್ರಹಿಸಬಹುದು.

ಇದನ್ನು ಓದಿ : ರಾಜ್ಯಾದ್ಯಂತ 4.50 ಲಕ್ಷ ಅನರ್ಹ BPL ಕಾರ್ಡ್ ರದ್ದು; ಗೃಹಲಕ್ಷ್ಮಿಯೂ ಸ್ಥಗಿತ?

4. ಸಾಮಾಜಿಕ ವರ್ಗದ ವಿವರ :

ನೀವು SC, ST, OBC, ಅಲ್ಪಸಂಖ್ಯಾತ ಅಥವಾ ಇತರೆ ವರ್ಗಕ್ಕೆ ಸೇರಿದವರೇ ಎಂಬ ಮಾಹಿತಿ ನೀಡಬೇಕು.

5. ಆದಾಯ ತೆರಿಗೆ ಪಾವತಿ ಮಾಹಿತಿ :

ನೀವು ಆದಾಯ ತೆರಿಗೆ ಪಾವತಿದಾರರಾಗಿದ್ದರೆ PAN Card ಸಂಖ್ಯೆ ನೀಡುವುದು ಕಡ್ಡಾಯವಾಗಬಹುದು.

6. ವೃತ್ತಿಯ ಮಾಹಿತಿ :

ನೀವು ಸರ್ಕಾರಿ ಉದ್ಯೋಗಿ, ಖಾಸಗಿ ಉದ್ಯೋಗಿ, ವ್ಯಾಪಾರಿ, ರೈತ ಅಥವಾ ದಿನಗೂಲಿ ಕಾರ್ಮಿಕರೇ ಎಂಬ ವಿವರವನ್ನು ದಾಖಲಿಸಲಾಗುತ್ತದೆ.

ಮಾಹಿತಿ ಸಂಗ್ರಹ ಕಾರ್ಯಾಚರಣೆ ಯಾವಾಗ?

ಇಂಧನ ಇಲಾಖೆ ನೀಡಿರುವ ಸೂಚನೆಯಂತೆ ಈ ಮಾಹಿತಿ ಸಂಗ್ರಹ ಪ್ರಕ್ರಿಯೆ ಇಂದಿನಿಂದ ಅಂದರೆ ಜುಲೈ 1ರಿಂದ ಆರಂಭವಾಗಿದ್ದು, ಮುಂದಿನ ಎರಡು ತಿಂಗಳ ಒಳಗೆ ಪೂರ್ಣಗೊಳಿಸುವ ಗುರಿ ಇಡಲಾಗಿದೆ. ಅಧಿಕಾರಿಗಳು ಸ್ಥಳದಲ್ಲೇ “Seva Sindhu App” ಮೂಲಕ ಮಾಹಿತಿಯನ್ನು ಅಪ್‌ಲೋಡ್ ಮಾಡಲಿದ್ದಾರೆ.

ಈ ಸುದ್ದಿಯನ್ನು ಓದಿ : RRB-2026; ಭಾರತೀಯ ರೈಲ್ವೆಯಲ್ಲಿ ವಿಭಾಗ ನಿಯಂತ್ರಕ ಹುದ್ದೆಗಳಿಗೆ ನೇಮಕಾತಿ, ಪದವೀಧರರಿಗೆ ಅವಕಾಶ.

ಗೃಹ ಜ್ಯೋತಿ ಯೋಜನೆ ಫಲಾನುಭವಿಗಳಿಗೆ ಸರ್ಕಾರದ ಸೂಚನೆ :

ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳು ಮನೆಗೆ ಬರುವ ಅಧಿಕೃತ ಮೀಟರ್ ರೀಡರ್ ಅಥವಾ ಎಸ್ಕಾಂ ಪ್ರತಿನಿಧಿಗಳಿಗೆ ಅಗತ್ಯ ದಾಖಲೆ ಮತ್ತು ಮಾಹಿತಿ ನೀಡಿ ಸಹಕರಿಸಬೇಕು.

ಇದು ಕೇವಲ ಡೇಟಾ ಪರಿಷ್ಕರಣೆ ಪ್ರಕ್ರಿಯೆ ಆಗಿದ್ದು, ಅರ್ಹ ಫಲಾನುಭವಿಗಳು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಈ ಕ್ರಮದಿಂದ ಯೋಜನೆಯ ಲಾಭ ನಿಜವಾದ ಅರ್ಹರಿಗೆ ತಲುಪುವಂತೆ ಸರ್ಕಾರ ಕ್ರಮ ಕೈಗೊಂಡಿದೆ.

ಈ ಕುರಿತು ಹೆಚ್ಚಿನ ಮಾಹಿತಿ ಬೇಕಾದರೆ ನಿಮ್ಮ ವ್ಯಾಪ್ತಿಯ ಎಸ್ಕಾಂ ಕಚೇರಿ ಅಥವಾ ಸಹಾಯವಾಣಿ ಸಂಪರ್ಕಿಸಬಹುದು.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ  


Disclaimer: ಈ ಗೃಹ ಜ್ಯೋತಿ ಯೋಜನೆ ಲೇಖನವು ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿ ಹಾಗೂ ಸರ್ಕಾರದ ಯೋಜನೆಗೆ ಸಂಬಂಧಿಸಿದ ವರದಿಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಯೋಜನೆ ನಿಯಮಗಳು ಮತ್ತು ಮಾಹಿತಿ ಕಾಲಾನುಗುಣವಾಗಿ ಬದಲಾಗಬಹುದು. ಹೆಚ್ಚಿನ ಮಾಹಿತಿಗಾಗಿ ಸಂಬಂಧಿತ ESCOM ಕಚೇರಿ ಅಥವಾ ಅಧಿಕೃತ ಸರ್ಕಾರಿ ಮೂಲಗಳನ್ನು ಸಂಪರ್ಕಿಸುವುದು ಸೂಕ್ತ.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top