RRB-2026; ಭಾರತೀಯ ರೈಲ್ವೆಯಲ್ಲಿ ವಿಭಾಗ ನಿಯಂತ್ರಕ ಹುದ್ದೆಗಳಿಗೆ ನೇಮಕಾತಿ, ಪದವೀಧರರಿಗೆ ಅವಕಾಶ.

RRB-2026; ವಿಭಾಗ ನಿಯಂತ್ರಕ ಹುದ್ದೆಗಳಿಗೆ ನೇಮಕಾತಿ

ಉದ್ಯೋಗ ಮಾಹಿತಿ : ಭಾರತೀಯ ರೈಲ್ವೆ ಇಲಾಖೆಯು ಪದವೀಧರ ಯುವಕರಿಗೆ ಭರ್ಜರಿ ಅವಕಾಶ ಒಂದನ್ನು ನೀಡಿದೆ. ರೈಲ್ವೆ ನೇಮಕಾತಿ ಮಂಡಳಿ (Railway Recruitment Board – RRB-2026) 2026ನೇ ಸಾಲಿನ ನೇಮಕಾತಿ ಪ್ರಕ್ರಿಯೆದಡಿ “ವಿಭಾಗ ನಿಯಂತ್ರಕ (Section Controller)” ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ಸೂಚನಾ ಪ್ರಕಟಣೆ ಹೊರಡಿಸಿದೆ.

ದೇಶದ ವಿವಿಧ ಭಾರತೀಯ ರೈಲ್ವೆ ವಲಯಗಳಲ್ಲಿ ಒಟ್ಟು ಖಾಲಿ ಇರುವ 119 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಸರ್ಕಾರಿ ನೌಕರಿ ನಯಸುವವರು ಸಲ್ಲಿಸಬಹುದಾಗಿದೆ. ಈ ನೇಮಕಾತಿಯಡಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ದೇಶದ ವಿವಿಧ ರೈಲ್ವೆ ವಲಯಗಳಲ್ಲಿ ಕೆಲಸ ಮಾಡುವ ಅವಕಾಶ ಸಿಗಲಿದೆ.

ರೈಲ್ವೆ ಸಚಿವಾಲಯದ ಅಧೀನದಲ್ಲಿ ನಡೆಯುತ್ತಿರುವ ಈ ನೇಮಕಾತಿ ಪ್ರಕ್ರಿಯೆಯ ಸಂಕ್ಷಿಪ್ತ ಅಧಿಸೂಚನೆ (CEN 03/2026) ಜೂನ್ 23ರಂದು ಉದ್ಯೋಗ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಸಂಪೂರ್ಣ ವಿವರಗಳ ಅಧಿಸೂಚನೆ ಇದೇ ಜುಲೈ 14, 2026ರಂದು ಬಿಡುಗಡೆಯಾಗಲಿದೆ.

RRB-2026; ಒಟ್ಟು ಹುದ್ದೆಗಳ ವಿವರ :

ಭಾರತೀಯ ರೈಲ್ವೆಯ ವಿವಿಧ ವಲಯಗಳಲ್ಲಿ ಒಟ್ಟು 119 Section Controller ಹುದ್ದೆಗಳು ಖಾಲಿ ಇವೆ. ದಕ್ಷಿಣ ರೈಲ್ವೆ, ಪಶ್ಚಿಮ ರೈಲ್ವೆ, ಈಸ್ಟರ್ನ್ ರೈಲ್ವೆ, ಸೌತ್ ವೆಸ್ಟರ್ನ್ ರೈಲ್ವೆ ಸೇರಿದಂತೆ 15 ಪ್ರಮುಖ ವಲಯಗಳಿಗೆ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ.

ವೇತನ ಶ್ರೇಣಿ :

  • RRB-2026 ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಆರಂಭಿಕವಾಗಿ ತಿಂಗಳಿಗೆ ₹35,400/- ವೇತನ ನೀಡಲಾಗುತ್ತದೆ.

Note : ಇದು Level-6 Pay Scale ಅಡಿಯಲ್ಲಿ ಬರುವ ಹುದ್ದೆಯಾಗಿದ್ದು, ಉತ್ತಮ ಭವಿಷ್ಯ ಮತ್ತು ಸ್ಥಿರ ಸರ್ಕಾರಿ ಉದ್ಯೋಗದ ಅವಕಾಶ ಕಲ್ಪಿಸುತ್ತದೆ.

ಶೈಕ್ಷಣಿಕ ಅರ್ಹತೆ :

  • ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ (Graduation) ಪೂರ್ಣಗೊಳಿಸಿರಬೇಕು.

ಈ ವೈರಲ್‌ ವಿಡಿಯೋ ಸುದ್ದಿ ಓದಿ : ಮರಿ ಮಂಗನ ಕಿತಾಪತಿ ನೋಡಿ ನೆಟ್ಟಿಗರು ಫಿದಾ; ವೈರಲ್ ವಿಡಿಯೋಗೆ ಭಾರೀ ಪ್ರತಿಕ್ರಿಯೆ.

Note : ಯಾವುದೇ ಸ್ಟ್ರೀಮ್‌ನ ಪದವೀಧರರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ವಯೋಮಿತಿ :

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲಿಚ್ಚಿಸುವ ಅಭ್ಯರ್ಥಿಯ ವಯಸ್ಸು,

  • ಕನಿಷ್ಠ ವಯಸ್ಸು 20 ವರ್ಷ ಮತ್ತು
  • ಗರಿಷ್ಠ 33 ವರ್ಷ ಮೀರಬಾರದು.

Note : ಮೀಸಲು ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆ ಲಭ್ಯವಾಗಲಿದೆ.

ಪ್ರಮುಖ ದಿನಾಂಕ :

  • ಅರ್ಜಿ ಸಲ್ಲಿಕೆಯ ಆರಂಭಿಕ ದಿನಾಂಕ : ಜುಲೈ 15, 2026.
  • ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕ : ಆಗಸ್ಟ್ 14, 2026.

ಇದನ್ನು ಓದಿ : 10ನೇ, 12ನೇ / ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರುವರಿಗೆ ಬೆಂಗಳೂರು ಸಿವಿಲ್ ಕೋರ್ಟ್‌ನಲ್ಲಿ ನೇಮಕಾತಿ.

ಆಯ್ಕೆ ಪ್ರಕ್ರಿಯೆ ಹೇಗೆ?

ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಹಲವು ಹಂತಗಳಲ್ಲಿ ನಡೆಯಲಿದೆ. ಮೊದಲಿಗೆ,

  • Computer Based Test (CBT) ನಂತರ,
  • CBAT ಪರೀಕ್ಷೆ,
  • ದಾಖಲೆ ಪರಿಶೀಲನೆ (Document Verification) ಮತ್ತು
  • ವೈದ್ಯಕೀಯ ಪರೀಕ್ಷೆ (Medical Examination) ಮೂಲಕ ಅಂತಿಮ ಆಯ್ಕೆ ನಡೆಯಲಿದೆ.

ಅರ್ಜಿ ಶುಲ್ಕ :

  • ಸಾಮಾನ್ಯ / OBC ಅಭ್ಯರ್ಥಿಗಳು : ₹500/-
  • SC / ST / PwBD / ಮಹಿಳಾ ಅಭ್ಯರ್ಥಿಗಳು : ₹250/-

ಈ ಸುದ್ದಿಯನ್ನು ಓದಿ : ರಾಜ್ಯದಲ್ಲಿ ಇಂದಿನಿಂದ SIR ಪ್ರಕ್ರಿಯೆ ಆರಂಭ: ಮನೆ-ಮನೆಗೆ BLO ಭೇಟಿ, ಮತದಾರರು ತಿಳಿಯಲೇಬೇಕಾದ 10 ಸಂಗತಿಗಳು. 

ಅರ್ಜಿ ಸಲ್ಲಿಸುವ ವಿಧಾನ :

  1. ಮೊದಲು ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ನೇಮಕಾತಿಯ ಅಧಿಕೃತ ಅಧಿಸೂಚನೆ (Notification) ಡೌನ್‌ಲೋಡ್ ಮಾಡಿಕೊಳ್ಳಬೇಕು.
  2. ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯಲ್ಲಿ ನೀಡಿರುವ ಅರ್ಹತೆ, ವಯೋಮಿತಿ ಹಾಗೂ ಇತರ ನಿಯಮಗಳನ್ನು ಎಚ್ಚರಿಕೆಯಿಂದ ಓದಬೇಕು.
  3. ನಂತರ ಆನ್‌ಲೈನ್ ಅರ್ಜಿ ಸಲ್ಲಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನೋಂದಣಿ (Registration) ಪ್ರಕ್ರಿಯೆ ಪೂರ್ಣಗೊಳಿಸಬೇಕು.
  4. ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ವೈಯಕ್ತಿಕ ಮಾಹಿತಿ, ಶೈಕ್ಷಣಿಕ ವಿವರಗಳು ಹಾಗೂ ಅಗತ್ಯ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಬೇಕು.
  5. ಅಭ್ಯರ್ಥಿಗಳು ತಮ್ಮ ವರ್ಗಕ್ಕೆ ಅನುಗುಣವಾಗಿ ನಿಗದಿಪಡಿಸಿದ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.
  6. ಪಾಸ್‌ಪೋರ್ಟ್ ಸೈಸ್ ಫೋಟೋ, ಸಹಿ ಹಾಗೂ ಅಗತ್ಯ ದಾಖಲೆಗಳನ್ನು ಸೂಚಿಸಿದ ಮಾದರಿಯಲ್ಲಿ ಅಪ್‌ಲೋಡ್ ಮಾಡಬೇಕು.
  7. ಎಲ್ಲಾ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಅಂತಿಮವಾಗಿ ಅರ್ಜಿಯನ್ನು Submit ಮಾಡಬೇಕು.
  8. ಭವಿಷ್ಯದ ಅಗತ್ಯಕ್ಕಾಗಿ ಸಲ್ಲಿಸಿದ ಅರ್ಜಿಯ ಪ್ರಿಂಟ್‌ಔಟ್ ಅಥವಾ PDF ಪ್ರತಿಯನ್ನು ಸುರಕ್ಷಿತವಾಗಿ ಉಳಿಸಿಕೊಳ್ಳುವುದು ಉತ್ತಮ.

RRB-2026 ಅಧಿಕೃತ ವೆಬ್‌ಸೈಟ್: indianrailways.gov.in

ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಪದವೀಧರ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದ್ದು, ಆಸಕ್ತರು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸುವುದು ಸೂಕ್ತ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ  


Disclaimer: ಈ RRB-2026 ಲೇಖನದಲ್ಲಿರುವ ಉದ್ಯೋಗ ಸಂಬಂಧಿತ ಮಾಹಿತಿಯನ್ನು ಅಧಿಕೃತ ಅಧಿಸೂಚನೆ ಹಾಗೂ ಲಭ್ಯವಿರುವ ಮೂಲಗಳ ಆಧಾರದ ಮೇಲೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಸಂಬಂಧಿತ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿರುವ ಅಧಿಕೃತ Notification ಅನ್ನು ಪರಿಶೀಲಿಸಿ, ಅರ್ಹತೆ ಹಾಗೂ ನಿಯಮಗಳನ್ನು ಖಚಿತಪಡಿಸಿಕೊಳ್ಳುವುದು ಅಗತ್ಯ. ಮಾಹಿತಿ ಬದಲಾವಣೆ ಅಥವಾ ತಿದ್ದುಪಡಿ ಸಂಭವಿಸಿದಲ್ಲಿ ಅದಕ್ಕೆ ವೆಬ್‌ಸೈಟ್ ಹೊಣೆಗಾರರಾಗುವುದಿಲ್ಲ.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top