ಬೆಂಗಳೂರು : ಕರ್ನಾಟಕದಲ್ಲಿ ರಾಜ್ಯದಲ್ಲಿ ಇಂದಿನಿಂದ SIR ಪ್ರಕ್ರಿಯೆ ಆರಂಭವಾಗಿದ್ದು ಪ್ರತಿ ಮನೆ-ಮನೆಗೆ ಬೂತ್ ಮಟ್ಟದ ಅಧಿಕಾರಿಗಳು (BLO) ಭೇಟಿ ನೀಡಲಿದ್ದಾರೆ. ಈ ಹಿನ್ನಲೆಯಲ್ಲಿ ಮತದಾರರ ಪಟ್ಟಿಯಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿರುವುದರಿಂದ ಮತದಾರರು ತಿಳಿಯಲೇಬೇಕಾದ ಪ್ರಮುಖ 10 ಸಂಗತಿಗಳು ಇಲ್ಲಿವೆ ನೋಡಿ.
ಮತದಾರರ ಪಟ್ಟಿಯನ್ನು ಮತ್ತಷ್ಟು ನಿಖರ ಹಾಗೂ ನವೀಕೃತಗೊಳಿಸುವ ಉದ್ದೇಶದಿಂದ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಗೆ ಇಂದು ಜೂನ್ 30ರಂದು ಚಾಲನೆ ನೀಡಲಾಗಿದೆ. ರಾಜ್ಯದಾದ್ಯಂತ ಈ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಜೂನ್ 30ರಿಂದ ಜುಲೈ 29ರವರೆಗೆ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ.
ಹೆಚ್ಚುತ್ತಿರುವ ನಗರೀಕರಣ, ಶಿಕ್ಷಣ, ಉದ್ಯೋಗ ಹಾಗೂ ವಲಸೆ ಪ್ರಮಾಣದ ಹಿನ್ನೆಲೆಯಲ್ಲಿ ಕಳೆದ ಎರಡು ದಶಕಗಳಲ್ಲಿ ಮತದಾರರ ಪಟ್ಟಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿರುವುದರಿಂದ ಈ ಸಮಗ್ರ ಪರಿಷ್ಕರಣೆ ಕೈಗೊಳ್ಳಲಾಗಿದೆ.
SIR ಅಂದ್ರೇನು? ಈಗಾಗಲೇ Voter ID ಇದ್ದರೂ ಫಾರಂ ಯಾಕೆ ತುಂಬಬೇಕು?
ಭಾರತೀಯ ಚುನಾವಣಾ ಆಯೋಗವು (ECI), ಮತದಾರರ ಪಟ್ಟಿಯನ್ನು ಪರಿಷ್ಕರಿಸಿ, ಹೊಸ ಅರ್ಹ ಮತದಾರರನ್ನು ಸೇರಿಸುವುದು, ಮೃತಪಟ್ಟವರು ಅಥವಾ ಬೇರೆಡೆ ಸ್ಥಳಾಂತರವಾದವರ ಹೆಸರು ತೆಗೆದುಹಾಕುವುದು ಹಾಗೂ ಮಾಹಿತಿಯ ದೋಷಗಳನ್ನು ಸರಿಪಡಿಸುವ ಉದ್ದೇಶದಿಂದ SIR ಪ್ರಕ್ರಿಯೆ ನಡೆಸುತ್ತದೆ.
ಈ ಸುದ್ದಿ ಓದಿ : ದಿಢೀರ್ ಓಪನ್ ಆದ ಚಲಿಸುತ್ತಿದ್ದ ಶಾಲಾ ವ್ಯಾನಿನ ಹಿಂಬಾಗಿಲು ; ರಸ್ತೆಗೆ ಬಿದ್ದ 5 ಮಕ್ಕಳು.
ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಇದು 10ನೇ ಬಾರಿ ನಡೆಯುತ್ತಿರುವ ಸಮಗ್ರ ಪರಿಷ್ಕರಣೆ. 2002ರಲ್ಲಿ ಕೊನೆಯ ಬಾರಿ ನಡೆದಿದ್ದು, ಅದರ ಬಳಿಕ ಈ ರೀತಿಯ ಪ್ರಕ್ರಿಯೆ ನಡೆದಿರಲಿಲ್ಲ. ಹೀಗಾಗಿ ಈಗಾಗಲೇ ವೋಟರ್ ಐಡಿ ಇದ್ದರೂ ಸಹ ಬಿಎಲ್‌ಒ ನೀಡುವ ಎನ್ಯೂಮರೇಷನ್ ಫಾರಂ ಭರ್ತಿ ಮಾಡುವುದು ಕಡ್ಡಾಯವಾಗಿದೆ.
ಯಾವ ದಾಖಲೆಗಳು ಬೇಕಾಗುತ್ತವೆ?
ಸಾಮಾನ್ಯವಾಗಿ ಆಧಾರ್ ಕಾರ್ಡ್, ಚಾಲನಾ ಪರವಾನಗಿ, ಪಾಸ್‌ಪೋರ್ಟ್ ಅಥವಾ ಇತರೆ ಗುರುತಿನ ಹಾಗೂ ವಿಳಾಸದ ದಾಖಲೆಗಳನ್ನು ಕೇಳಬಹುದು. ಒಂದು ವೇಳೆ 2002ರ ಮೂಲ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಪೋಷಕರು ಅಥವಾ ಅಜ್ಜ-ಅಜ್ಜಿ ಸಂಬಂಧಿತ ಮಾಹಿತಿ ನೀಡಿ ಸ್ಥಳೀಯ ವಿಳಾಸ ದೃಢೀಕರಿಸಬಹುದು. ಈ ಪ್ರಕ್ರಿಯೆಯಲ್ಲಿ ಸ್ಥಳೀಯ ಬಿಎಲ್‌ಒ ನೆರವು ಪಡೆಯಬಹುದು.
ಈ ಉದ್ಯೋಗ ಸುದ್ದಿ ಓದಿ : 10ನೇ, 12ನೇ / ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರುವರಿಗೆ ಬೆಂಗಳೂರು ಸಿವಿಲ್ ಕೋರ್ಟ್‌ನಲ್ಲಿ ನೇಮಕಾತಿ.
ಬೇರೆ ಊರು ಅಥವಾ ವಿದೇಶದಲ್ಲಿದ್ದರೆ ಏನು ಮಾಡಬೇಕು?
ಎಸ್‌ಐಆರ್ ಪ್ರಕ್ರಿಯೆ ನಡೆಯುವ ಸಮಯದಲ್ಲಿ ಮತದಾರರು ಬೇರೆ ನಗರ ಅಥವಾ ವಿದೇಶದಲ್ಲಿದ್ದರೆ, ಕುಟುಂಬದ 18 ವರ್ಷ ಮೇಲ್ಪಟ್ಟ ಸದಸ್ಯರು ಅಗತ್ಯ ದಾಖಲೆಗಳೊಂದಿಗೆ ಅವರ ಪರವಾಗಿ ಅರ್ಜಿ ಸಲ್ಲಿಸಬಹುದು. ಬಿಎಲ್‌ಒ ನೀಡುವ ಫಾರಂ ಭರ್ತಿ ಮಾಡಿ ನೀಡಿದರೆ ಸಾಕಾಗುತ್ತದೆ.
ಹೆಸರು ಪಟ್ಟಿಯಿಂದ ಕೈಬಿಟ್ಟರೆ ಏನು ಮಾಡಬೇಕು?
ಎಸ್‌ಐಆರ್ ಹಲವು ಹಂತಗಳಲ್ಲಿ ನಡೆಯುವ ಪ್ರಕ್ರಿಯೆಯಾಗಿದ್ದು, ಪ್ರಸ್ತುತ ಮನೆ-ಮನೆ ಭೇಟಿ ಮೊದಲ ಹಂತವಾಗಿದೆ. ಅರ್ಜಿಯನ್ನು ಸ್ವತಃ ಆನ್‌ಲೈನ್ ಮೂಲಕ ಸಲ್ಲಿಸಬಹುದು ಅಥವಾ ಬಿಎಲ್‌ಒ ಭೇಟಿ ವೇಳೆ ನೀಡಬಹುದು. ಬೂತ್ ಲೆವಲ್ ಏಜೆಂಟ್‌ಗಳ ಮೂಲಕವೂ ಸಲ್ಲಿಸುವ ಅವಕಾಶ ಇದೆ. ಒಂದು ವೇಳೆ ಹೆಸರು ಕರಡು ಪಟ್ಟಿಯಲ್ಲಿ ಇಲ್ಲದಿದ್ದರೆ ಹೊಸದಾಗಿ ಸೇರ್ಪಡೆಗೆ ಅವಕಾಶ ಇರುತ್ತದೆ.
ವಿಳಾಸ ಬದಲಾವಣೆ / ಬಹು ಕಡೆ ವೋಟರ್ ID ಇದ್ದರೆ?
ಹಿಂದೆ ಬಾಡಿಗೆ ಮನೆಯಲ್ಲಿದ್ದು ಈಗ ಬೇರೆಡೆ ವಾಸಿಸುತ್ತಿದ್ದರೆ, ವಿಳಾಸ ಬದಲಾವಣೆಗೆ ಸಂಬಂಧಿಸಿದ ಫಾರಂ ಸಲ್ಲಿಸಬೇಕು. ಮದುವೆಯಾದ ಬಳಿಕ ಗಂಡನ ಊರಿಗೆ ಹೋಗಿರುವ ಮಹಿಳೆಯರು ಮುಂದಿನ ಅವಧಿಯಲ್ಲಿ ಫಾರಂ 8 ಅಥವಾ ಫಾರಂ 6 ಮೂಲಕ ಬದಲಾವಣೆ ಮಾಡಿಕೊಳ್ಳಬಹುದು.
ಇದನ್ನು ಓದಿ : ಮದುವೆಯಾದ ಬಳಿಕವೂ ಒಂಟಿಯಾಗಿ ಬದುಕುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಳ; ಕರ್ನಾಟಕ ಸೇರಿ 5 ರಾಜ್ಯಗಳ ಶಾಕಿಂಗ್ ವರದಿ ಬಹಿರಂಗ.
ಒಂದು ವೇಳೆ ನಿಮ್ಮಲ್ಲಿ ಹಲವೆಡೆ ವೋಟರ್ ಐಡಿ ಇದ್ದರೆ, ನೀವು ಉಳಿಸಿಕೊಳ್ಳಬೇಕಾದ ಸ್ಥಳದಲ್ಲಿ ಮಾತ್ರ ಫಾರಂ ಸಲ್ಲಿಸಬೇಕು. ಇಲ್ಲದಿದ್ದರೆ ಎಲ್ಲೆಡೆ ಹೆಸರು ಡಿಲೀಟ್ ಆಗುವ ಸಾಧ್ಯತೆ ಇರುತ್ತದೆ.
2 ಸಲ ಮತ ಹಾಕಿಲ್ಲ ಅಂದರೆ ಹೆಸರು ಡಿಲೀಟ್ ಆಗುತ್ತಾ?
ಇಲ್ಲ. ಹಲವು ಜನರಲ್ಲಿ ಈ ಬಗ್ಗೆ ಗೊಂದಲ ಇದೆ. ಆದರೆ ಕಳೆದ ಚುನಾವಣೆಗಳಲ್ಲಿ ಮತದಾನ ಮಾಡಿಲ್ಲ ಎನ್ನುವುದರಿಂದ ಹೆಸರು ಮತದಾರರ ಪಟ್ಟಿಯಿಂದ ತೆಗೆದುಹಾಕುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ನಿಮ್ಮ ಪ್ರದೇಶದ BLO ಮಾಹಿತಿ ಹೇಗೆ ತಿಳಿಯುವುದು?
ರಾಜ್ಯ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯಾಪ್ತಿಯ ಬಿಎಲ್‌ಒ ಮಾಹಿತಿ ಲಭ್ಯವಿದ್ದು, ಅಲ್ಲಿಂದ ನೇರವಾಗಿ ಪರಿಶೀಲಿಸಬಹುದು.
ಈ ಸುದ್ದಿಯನ್ನು ಓದಿ : ಈ 6 ರಾಶಿಯ ಹೆಂಡ್ತಿಯರ ಮುಂದೆ ಗಂಡಂದಿರು ಗಪ್‌ಚುಪ್; ಜ್ಯೋತಿಷ್ಯದಲ್ಲಿದೆ ಅಚ್ಚರಿಯ ವಿವರಣೆ!
ಪ್ರಮುಖ ದಿನಾಂಕಗಳು ಗಮನಿಸಿ :
- ಜೂನ್ 30 ರಿಂದ ಜುಲೈ 29 : ಬಿಎಲ್‌ಒ ಮನೆ-ಮನೆ ಭೇಟಿ.
- ಆಗಸ್ಟ್ 5 : ಕರಡು ಮತದಾರರ ಪಟ್ಟಿ ಬಿಡುಗಡೆ.
- ಆಗಸ್ಟ್ 5ರಿಂದ ಸೆಪ್ಟೆಂಬರ್ 4 : ಆಕ್ಷೇಪಣೆ ಮತ್ತು ಸಲಹೆ ಸಲ್ಲಿಕೆ.
- ಆಗಸ್ಟ್ 5 ರಿಂದ ಅಕ್ಟೋಬರ್ 3 : ಹಕ್ಕು ಮತ್ತು ಆಕ್ಷೇಪಣೆಗಳ ವಿಚಾರಣೆ.
- ಅಕ್ಟೋಬರ್ 7 : ಅಂತಿಮ ಮತದಾರರ ಪಟ್ಟಿ ಪ್ರಕಟ.
ಅಪರ ಜಿಲ್ಲಾಧಿಕಾರಿ ವಿ. ಅಭಿಷೇಕ್ ಅವರ ಪ್ರಕಾರ, ಈ SIR ಪ್ರಕ್ರಿಯೆ ಸಂಪೂರ್ಣ ಸರಳವಾಗಿದ್ದು ನಾಗರಿಕರು ಯಾವುದೇ ಗೊಂದಲಕ್ಕೊಳಗಾಗುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ಸಂಪೂರ್ಣ ಮತದಾರರ ಮಾಹಿತಿ ಡಿಜಿಟಲ್ ರೂಪದಲ್ಲಿ ಲಭ್ಯವಾಗಲಿದ್ದು, ಒಂದು ವೇಳೆ ಹೆಸರು ಕೈಬಿಟ್ಟರೂ ಮರು ಸೇರ್ಪಡೆಗೆ ಅವಕಾಶ ಇರುತ್ತದೆ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಪ್ರತಿಯೊಬ್ಬ ಮತದಾರರೂ ಬಿಎಲ್‌ಒ ಭೇಟಿ ವೇಳೆ ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಂಡು ಈ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಭಾಗವಹಿಸುವುದು ಅಗತ್ಯವಾಗಿದೆ.
Courtesy : Vijay Karnataka
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Disclaimer: ಈ ಲೇಖನವು ಭಾರತೀಯ ಚುನಾವಣಾ ಆಯೋಗ (Election Commission of India) ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಅಧಿಕೃತ ಮಾಹಿತಿಯ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ, SIR ಪ್ರಕ್ರಿಯೆ ಹಾಗೂ ಅರ್ಜಿ ಸಂಬಂಧಿತ ನಿಯಮಗಳಲ್ಲಿ ಬದಲಾವಣೆಗಳಿದ್ದರೆ ಸಂಬಂಧಿತ ಅಧಿಕಾರಿಗಳ ಅಧಿಕೃತ ಪ್ರಕಟಣೆ ಅಂತಿಮವಾಗಿರುತ್ತದೆ. ನಾಗರಿಕರು ಮಾಹಿತಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದು ಸೂಕ್ತ.







