HomeViral Videoಚಲಿಸುವ ಆಂಬ್ಯುಲೆನ್ಸ್‌ನಲ್ಲಿ ಅಸಭ್ಯ ವರ್ತನೆ: 5 ಕಿಮೀ ಬೆನ್ನಟ್ಟಿ ಯುವತಿ, ಯುವಕರನ್ನು ಹಿಡಿದ ಸಾರ್ವಜನಿಕರು!
spot_img
spot_img

ಚಲಿಸುವ ಆಂಬ್ಯುಲೆನ್ಸ್‌ನಲ್ಲಿ ಅಸಭ್ಯ ವರ್ತನೆ: 5 ಕಿಮೀ ಬೆನ್ನಟ್ಟಿ ಯುವತಿ, ಯುವಕರನ್ನು ಹಿಡಿದ ಸಾರ್ವಜನಿಕರು!

ಜನಸ್ಪಂದನ ನ್ಯೂಸ್‌, ಛತ್ತರ್‌ಪುರ (ಮ.ಪ್ರ) : ಮಧ್ಯಪ್ರದೇಶದ ಭೋಪಾಲ್ ವ್ಯಾಪ್ತಿಯ ಛತ್ತರ್‌ಪುರ ಜಿಲ್ಲೆಯಲ್ಲಿ ಚಲಿಸುತ್ತಿದ್ದ ಆಂಬ್ಯುಲೆನ್ಸ್ ಒಳಗೆ ನಡೆದ ಆಕ್ಷೇಪಾರ್ಹ ಘಟನೆಯೊಂದು ನಡೆದಿದ್ದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ತುರ್ತು ಸೇವೆಗೆ ಬಳಸುವ ಚಲಿಸುವ ಆಂಬ್ಯುಲೆನ್ಸ್‌ನಲ್ಲಿ ಅಸಭ್ಯ ವರ್ತನೆ / ಚಟುವಟಿಕೆಗಳು ನಡೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ವರದಿಗಳ ಪ್ರಕಾರ, ಗುರುವಾರ ರಸ್ತೆ ಮೇಲೆ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಆಂಬ್ಯುಲೆನ್ಸ್ ಒಳಗಿನ ಅನುಮಾನಾಸ್ಪದ ಚಲನವಲನವನ್ನು ಗಮನಿಸಿದ್ದಾರೆ. ನಂತರ ಅವರು ಕಿಟಕಿಯ ಮೂಲಕ ಇಣುಕಿ ನೋಡಿದಾಗ ಒಳಗೆ ಯುವತಿ ಮತ್ತು ಇಬ್ಬರು ಯುವಕರು ಇದ್ದುದು ತಿಳಿದುಬಂದಿದೆ.

ಈ ದೃಶ್ಯ ನೋಡಿ ಆತ ತಕ್ಷಣವೇ ವಾಹನವನ್ನು ಹಿಂಬಾಲಿಸಲು ಆರಂಭಿಸಿದ್ದಾನೆ. ಸುಮಾರು 5 ಕಿಲೋಮೀಟರ್‌ಗಳವರೆಗೆ ಸಾರ್ವಜನಿಕರು ಆಂಬ್ಯುಲೆನ್ಸ್ ಅನ್ನು ಬೆನ್ನಟ್ಟಿದ್ದು, ಪಕ್ಕದಲ್ಲಿ ಸಾಗುತ್ತಿದ್ದ ವಾಹನದ ಚಾಲಕರ ಸಹಾಯದಿಂದ ಆಂಬ್ಯುಲೆನ್ಸ್ ನಿಲ್ಲಿಸಲಾಗಿದೆ.

ಆಂಬ್ಯುಲೆನ್ಸ್ ನಿಲ್ಲಿಸಿದ ನಂತರ ಚಾಲಕನನ್ನು ಪ್ರಶ್ನಿಸಿದಾಗ ಆತ “ಆಕೆ ನಮ್ಮ ಸಹೋದರಿ” ಎಂದು ಹೇಳಿದ್ದಾನೆ. ಆದರೆ ವೇಗವಾಗಿ ವಾಹನ ಚಲಾಯಿಸಿದ್ದಕ್ಕೆ ಸ್ಪಷ್ಟ ಉತ್ತರ ನೀಡಲು ಸಾಧ್ಯವಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಆಂಬ್ಯುಲೆನ್ಸ್‌ನಲ್ಲಿ ಅಸಭ್ಯ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ತುರ್ತು ಸೇವಾ ವಾಹನದ ದುರ್ಬಳಕೆಯನ್ನು ಖಂಡಿಸಿದ್ದು, ಕೆಲವು ಬಳಕೆದಾರರು ವ್ಯಂಗ್ಯವಾಗಿ ‘ಚಲಿಸುವ ಓಯೋ’ ಎಂದು ಪ್ರತಿಕ್ರಿಯಿಸಿದ್ದಾರೆ.

ಚಲಿಸುವ ಆಂಬ್ಯುಲೆನ್ಸ್‌ನಲ್ಲಿ ಅಸಭ್ಯ ವರ್ತನೆಯ ವಿಡಿಯೋ :

Courtesy : Social Media / Twitter

ಅಧಿಕಾರಿಗಳು ಈ ಚಲಿಸುವ ಆಂಬ್ಯುಲೆನ್ಸ್‌ನಲ್ಲಿ ಅಸಭ್ಯ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಆಂಬ್ಯುಲೆನ್ಸ್ ಸೇವೆಯ ದುರ್ಬಳಕೆ ಮತ್ತು ಒಳಗಿನ ಘಟನೆಗಳ ಬಗ್ಗೆ ತನಿಖೆ ನಡೆಸುವ ಸಾಧ್ಯತೆ ಇದೆ. ತುರ್ತು ವಾಹನಗಳ ಮೇಲ್ವಿಚಾರಣೆಗೆ ಕಟ್ಟುನಿಟ್ಟಿನ ಕ್ರಮಗಳ ಅಗತ್ಯವಿದೆ ಎಂಬ ಚರ್ಚೆಯೂ ಆರಂಭವಾಗಿದೆ.

ಇದನ್ನು ಓದಿ : ಕೆಲಸದಿಂದ ತೆಗೆದುಹಾಕಿದ್ದಕ್ಕೆ ಅಧಿಕಾರಿಯ 22 ವರ್ಷದ ಪುತ್ರಿ ಮೇಲೆ ಅತ್ಯಾಚಾರ; ಆರೋಪಿ ಬಂಧನ.

ocean jain (@ocjain4) ಎಂಬುವವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, “एंबुलेंस बनी चलता फिरता OYO. राहगीरों ने एंबुलेंस की विंडो से देखी गलत हरकत है, जिसके बाद लोगों ने किया पीछा. तकरीबन 5 किलोमीटर बाद एक लड़की और दो लड़कों को पकड़ा गया”. ಎಂದು ಬರೆದುಕೊಂಡಿದ್ದಾರೆ.

Apr 23, 2026 ರಂದು ಹಂಚಿಕೊಂಡ ಈ ವಿಡಿಯೋ 418.7K Views ಪಡೆದುಕೊಂಡಿದ್ದು, 1.6 K ಜನರು Repost mAwidŗe 4.3 K ಜನರು like ಮಾಡಿದ್ದಾರೆ.

ಆಂಬ್ಯುಲೆನ್ಸ್ ಸೇವೆಯ ಅವಶ್ಯಕತೆ ಮತ್ತು ಅದರ ದುರ್ಬಳಿಕೆ :

ಆಂಬ್ಯುಲೆನ್ಸ್ ಸೇವೆ ತುರ್ತು ವೈದ್ಯಕೀಯ ಪರಿಸ್ಥಿತಿಗಳಲ್ಲಿ ಜೀವ ಉಳಿಸುವ ಅತ್ಯಂತ ಪ್ರಮುಖ ವ್ಯವಸ್ಥೆಯಾಗಿದೆ.
ಗಂಭೀರ ಅಪಘಾತಗಳು, ಹೃದಯಾಘಾತ ಅಥವಾ ತಕ್ಷಣದ ಚಿಕಿತ್ಸೆ ಅಗತ್ಯವಿರುವ ಸಂದರ್ಭಗಳಲ್ಲಿ ರೋಗಿಯನ್ನು ವೇಗವಾಗಿ ಆಸ್ಪತ್ರೆಗೆ ಸಾಗಿಸಲು ಇದು ಸಹಾಯಕವಾಗುತ್ತದೆ.

ಆಂಬ್ಯುಲೆನ್ಸ್‌ನಲ್ಲಿ ಆಕ್ಸಿಜನ್, ಪ್ರಾಥಮಿಕ ಚಿಕಿತ್ಸೆ ಸಾಧನಗಳು ಮತ್ತು ತರಬೇತಿ ಪಡೆದ ಸಿಬ್ಬಂದಿ ಇರುತ್ತಾರೆ. ಇದರಿಂದ ರೋಗಿಗೆ ಆಸ್ಪತ್ರೆಗೆ ತಲುಪುವ ಮೊದಲು ಅಗತ್ಯವಾದ ತುರ್ತು ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ.

ಆದರೆ ಇತ್ತೀಚೆಗೆ ಕೆಲವು ಕಡೆಗಳಲ್ಲಿ ಈ ಸೇವೆಯ ದುರ್ಬಳಕೆ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ವಿಷಯವಾಗಿದೆ.
ತುರ್ತು ಸೇವೆಗೆ ಮೀಸಲಾಗಿರುವ ವಾಹನವನ್ನು ವೈಯಕ್ತಿಕ ಅಥವಾ ಅಕ್ರಮ ಚಟುವಟಿಕೆಗಳಿಗೆ ಬಳಸುವುದು ಕಾನೂನುಬಾಹಿರವಾಗಿದೆ.

ಇಂತಹ ದುರ್ಬಳಕೆಯಿಂದ ನಿಜವಾಗಿಯೂ ತುರ್ತು ನೆರವಿಗೆ ಅಗತ್ಯವಿರುವ ರೋಗಿಗಳಿಗೆ ವಿಳಂಬವಾಗಬಹುದು.
ಇದು ಅವರ ಜೀವಕ್ಕೆ ನೇರ ಅಪಾಯವನ್ನುಂಟುಮಾಡುವ ಸಾಧ್ಯತೆ ಇದೆ.

ಇಂದಿನ ಎಲ್ಲಾ ತಾಜಾ ಸುದ್ದಿಗಳನ್ನು ಇಲ್ಲಿ ಓದಿ

ಹೀಗಾಗಿ ಆಂಬ್ಯುಲೆನ್ಸ್ ಸೇವೆಯನ್ನು ಕೇವಲ ವೈದ್ಯಕೀಯ ತುರ್ತು ಸಂದರ್ಭಗಳಿಗಷ್ಟೇ ಬಳಸುವುದು ಅಗತ್ಯ.
ಸರ್ಕಾರ ಮತ್ತು ಸಾರ್ವಜನಿಕರು ಸೇರಿ ಈ ವ್ಯವಸ್ಥೆಯ ಶುದ್ಧತೆ ಮತ್ತು ಹೊಣೆಗಾರಿಕೆಯನ್ನು ಕಾಯ್ದುಕೊಳ್ಳಬೇಕು.


Disclaimer: ಈ ಲೇಖನವು (ಚಲಿಸುವ ಆಂಬ್ಯುಲೆನ್ಸ್‌ನಲ್ಲಿ ಅಸಭ್ಯ ವರ್ತನೆ) ಲಭ್ಯವಿರುವ ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಜಾಲತಾಣ ಮಾಹಿತಿಯ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಘಟನೆಯ ಕುರಿತು ಅಧಿಕಾರಿಗಳ ಅಧಿಕೃತ ತನಿಖೆ ಮುಂದುವರಿಯುತ್ತಿರುವುದರಿಂದ ವಿವರಗಳಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇದೆ.

Janaspandhan News
Janaspandhan Newshttp://WWW.janaspandhan.com
Janaspandana News is a digital news platform that reports crime and local news from Karnataka.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments