Friday, October 18, 2024
spot_img
spot_img
spot_img
spot_img
spot_img
spot_img
spot_img

ಮಕ್ಕಳಿದ್ದ ವೇಳೆ ಕುಸಿದ ಕ್ಲಾಸ್ ರೂಂ ಗೋಡೆ ; ಮುಂದೆನಾಯ್ತು? Video ನೋಡಿ.

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಶಾಲೆಯ ಕೊಠಡಿಯೊಂದರಲ್ಲಿ ಮಕ್ಕಳಿದ್ದ ವೇಳೆಯೇ ಶಾಲೆಯ ಗೋಡೆ ಕುಸಿದಿದೆ.

ಇದನ್ನು ಓದಿ : 3 ಅಡಿ ಕುಳ್ಳನಿಗೆ 7 ಅಡಿ ಎತ್ತರದ ಗರ್ಲ್‌ಫ್ರೆಂಡ್.! ಇವರ ಪ್ರಣಯದ ವಿಡಿಯೋ ಪುಲ್‌ Viral.!

ಗುಜರಾತಿನ ವಡೋದರಾದಲ್ಲಿ ಖಾಸಗಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದ್ದು, ಗೋಡೆ ಕುಸಿದ ಪರಿಣಾಮ ಓರ್ವ ವಿದ್ಯಾರ್ಥಿಗೆ ಗಂಭೀರ ಗಾಯವಾಗಿದೆ ಎಂದು ವರದಿಯಾಗಿದೆ.

ಘಟನೆಯ ಕುರಿತು ಪ್ರಾಂಶುಪಾಲ ರೂಪಲ್ ಶಾ ತಿಳಿಸಿದ್ದು, ಒಬ್ಬ ವಿದ್ಯಾರ್ಥಿ ತಲೆಗೆ ಪೆಟ್ಟಾಗಿದೆ. ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

ವಡೋದರದ ವಘೋಡಿಯಾ ರಸ್ತೆ ಸಮೀಪದ ಶ್ರೀ ನಾರಾಯಣ ಖಾಸಗಿ ಶಾಲೆಯ ಮೊದಲ ಮಹಡಿಯಲ್ಲಿದ್ದ ತರಗತಿಯ ಗೋಡೆ ಕುಸಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ : ಒಂದು ಸಾಂಗ್ ಗೆ ಅತಿಹೆಚ್ಚು ಸಂಭಾವನೆ ಪಡೆಯುವ Item girl ಈಕೆ ; ಅಬ್ಬಬ್ಬಾ ಇಷ್ಟು ಕೋಟಿ ರೂ..?

ತರಗತಿಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸಂಪೂರ್ಣ ಘಟನೆ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​​ ಆಗಿದೆ.

ಗಾಯಗೊಂಡ ವಿದ್ಯಾರ್ಥಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಮಾಹಿತಿ ಪಡೆದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ವೈರಲ್ ವಿಡಿಯೋದಲ್ಲಿ ಮಕ್ಕಳೆಲ್ಲ ಕ್ಲಾಸ್ ರೂಮ್ ನಲ್ಲಿ ಕುಳಿತುಕೊಂಡಿದ್ದು, ಗೋಡೆಯ ಬಳಿ ಓರ್ವ ವಿದ್ಯಾರ್ಥಿ ಕುಳಿತುಕೊಂಡಿದ್ದಾನೆ. ಏಕಾಏಕಿ ಗೋಡೆ ಕುಸಿದಿದ್ದು, ಆತನು ಸಹ ಕೆಳಗೆ ಬೀಳುವುದನ್ನು ಕಾಣಬಹುದು.

ಇದನ್ನು ಓದಿ : ನಡು ಬೀದಿಯಲ್ಲೇ ಪುಟ್ಟ ಬಾಲಕನ ಮೇಲೆ ಮಂಗಗಳ ದಾಳಿ : ಸಹಾಯಕ್ಕೆ ಬಾರದ ಮಹಿಳೆಯರ ನಡೆಗೆ ನೆಟ್ಟಿಗರ ಆಕ್ರೋಶ ; Video ವೈರಲ್.!

ಸದ್ಯ ವಿಡಿಯೋ ಎಲ್ಲೆಡೆ ವೈರಲ್​​ ಆಗಿದ್ದು, ಶಾಲಾ ಆಡಳಿತ ಮಂಡಳಿಯ ಬೇಜವಾಬ್ದಾರಿಯ ಬಗ್ಗೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img