ಸೋಮವಾರ, ಫೆಬ್ರವರಿ 2, 2026

Janaspandhan News

HomeGeneral NewsAlcohol : ಎಣ್ಣೆ ಹೊಡೆದು ಪುಲ್‌ ಟೈಟಾಗಿ ಬಂದು, "ಇದು ನನ್ನ ಶಾಲೆ" ಎಂದ ಶಿಕ್ಷಕಿ...
spot_img
spot_img

Alcohol : ಎಣ್ಣೆ ಹೊಡೆದು ಪುಲ್‌ ಟೈಟಾಗಿ ಬಂದು, “ಇದು ನನ್ನ ಶಾಲೆ” ಎಂದ ಶಿಕ್ಷಕಿ ಸಸ್ಪೆಂಡ್.!

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಎಣ್ಣೆ (Alcohol) ಹೊಡೆದು ಪುಲ್‌ ಟೈಟಾಗಿ ಶಾಲೆಗೆ ಬಂದು, ಇದು ನನ್ನ ಶಾಲೆ, ಬಾಳ್‌ ಜಾಣನಾಗಿ ಮಾತನಾಡಬೇಡ ಎಂದ ಆವಾಜ್‌ ಹಾಕಿದ ಸರ್ಕಾರಿ ಶಾಲಾ ಶಿಕ್ಷಕಿ ಸಸ್ಪೆಂಡ್ ಆದ ಘಟನೆಯೊಂದು ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದಿದೆ.

ಶಿಕ್ಷಕಿಯ ಈ ವರ್ತನೆಯ ವಿಡಿಯೋದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.‌ ಇನ್ನು ಎಣ್ಣೆ ಹೊಡೆದ (Alcohol) ಶಿಕ್ಷಕಿಯ ವಿಚಾರ ತಿಳಿಯುತ್ತಿದ್ದಂತೆ ಪೋಷಕರು ಶಾಲೆಗೆ ಆಗಮಿಸಿ ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಶಿಕ್ಷಕಿ ಪೋಷಕರೊಂದಿಗೆ ಕೂಡ ವಾಗ್ವಾದ ನಡೆಸುವುದನ್ನು ನೋಡಬಹುದು.

ಇದನ್ನು ಓದಿ : First Night ದಿನವೇ “ಮುಟ್ಟಿದ್ರೆ 35 ಪೀಸ್‌ ಮಾಡ್ತೀನಿ” ಎಂದ ವಧು ; ಬೆಚ್ಚಿಬಿದ್ದ ವರ.!

ಧಾರ್ ಜಿಲ್ಲೆಯ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರು ಕುಡಿದ (Alcohol) ಮತ್ತಿನಲ್ಲಿ ಶಾಲೆಗೆ ಬಂದು, ಸಿಬ್ಬಂದಿ ಮತ್ತು ಕಾರ್ಮಿಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವುದನ್ನು ತೋರಿಸುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಬೆನ್ನಲ್ಲೇ ಶಿಕ್ಷಕಿಯನ್ನು ಬುಧವಾರ ಅಮಾನತುಗೊಳಿಸಲಾಗಿದೆ.

ಕವಿತಾ ಕವ್ಚೆ ಎಂದು ಗುರುತಿಸಲಾದ ಶಿಕ್ಷಕಿ ಸಿಂಘಾನಾ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಅವರು ಶಾಲಾ ಅವಧಿಯಲ್ಲಿ ಮದ್ಯ (Alcohol) ಸೇವಿಸಿ ಬಂದು ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು ಹಾಗೂ ಬೆದರಿಕೆ ಹಾಕುವುದು ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜೂನ 25 ರ ದ್ವಾದಶ ರಾಶಿಗಳ ಫಲಾಫಲ.!

ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯ ಯಾವಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಯಿತೋ, ತಕ್ಷಣವೇ ಧಾರ್ ಜಿಲ್ಲಾಧಿಕಾರಿ (ಬುಡಕಟ್ಟು ಕಲ್ಯಾಣ) ಕಚೇರಿ ಅಧಿಕೃತವಾಗಿ ಅಮಾನತು ಆದೇಶದ ಹೊರಡಿಸಿದೆ.

ಈ ಘಟನೆ ಜೂನ್ 23 ರಂದು ನಡೆದಿದ್ದು, ಕೌಚೆ ಮದ್ಯ (Alcohol) ದ ಅಮಲಿನಲ್ಲಿ ಶಾಲೆಗೆ ಬಂದು, ಆಕ್ಷೇಪಾರ್ಹ ಭಾಷೆಯನ್ನು ಬಳಸಿ ಶಾಲಾ ದುರಸ್ತಿ ಕೆಲಸದಲ್ಲಿ ತೊಡಗಿರುವ ಕಾರ್ಮಿಕರೊಂದಿಗೆ ಅನುಚಿತವಾಗಿ ವರ್ತಿಸಿದರು ಎಂದು ಆರೋಪಿಸಲಾಗಿದೆ.

ಇದನ್ನು ಓದಿ : BPCL : ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ ಉದ್ಯೋಗವಕಾಶ.!

ವೈರಲ್ ವಿಡಿಯೋದಲ್ಲಿ ಶಿಕ್ಷಕಿ “ಇದು ನನ್ನ ಶಾಲೆ” ಎಂದು ಹೇಳುತ್ತಿರುವುದನ್ನು ಕಾಣಬಹುದಾಗಿದೆ. ವೈರಲ್‌ ವಿಡಿಯೋದ ಸತ್ಯಾಸತ್ಯತೆಯನ್ನು ತಿಳಿಯಲು ಬ್ಲಾಕ್ ಸಂಪನ್ಮೂಲ ಸಂಯೋಜಕ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಶಾಲೆಗೆ ಕಳುಹಿಸಲಾಯಿತು. ಶಿಕ್ಷಕಿ (Alcohol) ಕುಡಿದು ಶಾಲೆಯ ದುರಸ್ತಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮತ್ತು ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವುದು ಕಂಡುಬಂದಿದೆ ಎಂದು ಬುಡಕಟ್ಟು ಕಲ್ಯಾಣ ಇಲಾಖೆಯ ಸಹಾಯಕ ಆಯುಕ್ತ ತಿಳಿಸಿದರು.

ಈ ಹಿಂದೆಯೂ ಸಹ ಇದೇ ರೀತಿಯ ಘಟನೆಗಳು ಸಂಭವಿಸಿವೆ, ಆದರೆ ಘಟನಾ ನಂತರ ಆಪಾದಿತರು ಕ್ಷಮೆಯಾಚಿಸಿದ ಹಿನ್ನಲೆಯಲ್ಲಿ ಅವುಗಳನ್ನು ಕೈಬಿಡಲಾಗಿತ್ತು. ಈ ಸಂದರ್ಭದಲ್ಲಿ, ಶಿಕ್ಷಕಿಯ ವಿರುದ್ಧ ಮುಂದಿನ ಕ್ರಮವನ್ನು ನಿರ್ಧರಿಸಲು ಇಲಾಖಾ ವಿಚಾರಣೆಯನ್ನು ನಡೆಸಲಾಗುವುದು” ಎಂದು ಅವರು ಹೇಳಿದರು.

ಎಣ್ಣೆ (Alcohol) ಹೊಡೆದ ಶಿಕ್ಷಕಿಯ ವಿಡಿಯೋ ಇಲ್ಲದೆ :

https://twitter.com/i/status/1937520218533659035

SSC ಯಲ್ಲಿ ಉದ್ಯೋಗವಕಾಶ ; 3,131 ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಜನಸ್ಪಂದನ ನ್ಯೂಸ್‌, ನೌಕರಿ : ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ನಲ್ಲಿ ಹೊಸ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕೆಂದು ಅಧಿಸೂಚನೆ ಬಿಡುಗಡೆ ಮಾಡಿದ್ದಾರೆ. ಈ ಹುದ್ದೆಗಳು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜೂನ 25 ರ ದ್ವಾದಶ ರಾಶಿಗಳ ಫಲಾಫಲ.!
ಸಿಬ್ಬಂದಿ ಆಯ್ಕೆ ಆಯೋಗ (Staff Selection Commission – SSC) ಹುದ್ದೆಗಳ ಕುರಿತು ಮಾಹಿತಿ :
  • ಇಲಾಖೆ ಹೆಸರು : ಸಿಬ್ಬಂದಿ ಆಯ್ಕೆ ಆಯೋಗ (SSC).
  • ಹುದ್ದೆಗಳ ಸಂಖ್ಯೆ : 3,131.
  • ಹುದ್ದೆಗಳ ಹೆಸರು : ಎಲ್‌ಡಿಸಿ/ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ ಮತ್ತು ಡಿಇಒ (CHSL).
  • ಉದ್ಯೋಗ ಸ್ಥಳ : ಅಖಿಲ ಭಾರತ.
  • ಅಪ್ಲಿಕೇಶನ್ ಮೋಡ್ : Online ಮೋಡ್
ವೇತನ ಶ್ರೇಣಿ :
  • ಸಿಬ್ಬಂದಿ ಆಯ್ಕೆ ಆಯೋಗ (SSC) ನೇಮಕಾತಿ ಅಧಿಸೂಚನೆಯ ಪ್ರಕಾರ ರೂ.19,900 – ರೂ.91,100/- ಪ್ರತಿ ತಿಂಗಳು ವೇತನ ನೀಡಲಾಗುವುದು.
ಇದನ್ನು ಓದಿ : Crocodile : ನದಿಯಲ್ಲಿ ಎಮ್ಮೆಗೆ ಸ್ನಾನ ಮಾಡಿಸುತ್ತಿದ್ದಾಗ ಬಾಲಕನ ಎಳೆದೊಯ್ದಿ ಮೊಸಳೆ.!
ವಯೋಮಿತಿ :

ಸಿಬ್ಬಂದಿ ಆಯ್ಕೆ ಆಯೋಗ (SSC) ನೇಮಕಾತಿ ಅಧಿಸೂಚನೆಯ ಪ್ರಕಾರ,

  • ಅಭ್ಯರ್ಥಿಯ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು
  • ಗರಿಷ್ಠ 27 ವರ್ಷ  ಮೀರಬಾರದು.

ವಯೋಮಿತಿ ಸಡಿಲಿಕೆ :

  • OBC (NCL) ಅಭ್ಯರ್ಥಿಗಳಿಗೆ : 03 ವರ್ಷಗಳು.
  • SC/ST ಅಭ್ಯರ್ಥಿಗಳಿಗೆ : 05 ವರ್ಷಗಳು.
  • PwBD (UR & EWS) ಅಭ್ಯರ್ಥಿಗಳಿಗೆ : 10 ವರ್ಷಗಳು.
  • PwBD (OBC-NCL) ಅಭ್ಯರ್ಥಿಗಳಿಗೆ : 13 ವರ್ಷಗಳು.
  • PwBD (SC/ST) ಅಭ್ಯರ್ಥಿಗಳಿಗೆ : 15 ವರ್ಷಗಳು. 
ಇದನ್ನು ಓದಿ : Sexual : ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ ; ಆರೋಪಿಗೆ ಗುಂಡೇಟು.!
ವಿದ್ಯಾರ್ಹತೆ :

ಸಿಬ್ಬಂದಿ ಆಯ್ಕೆ ಆಯೋಗ (SSC) ನೇಮಕಾತಿ ಅಧಿಸೂಚನೆಯ ಪ್ರಕಾರ,

  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಗಳಿಂದ 12ನೇ ತರಗತಿ (PUC) ಪಾಸ್ ಆಗಿರಬೇಕು.
ಅರ್ಜಿ ಶುಲ್ಕ :
  • General/OBC/EWS ಅಭ್ಯರ್ಥಿಗಳು : ರೂ.100/-
  • SC/ST/PwBD ಅಭ್ಯರ್ಥಿಗಳು : ಇಲ್ಲ.
ಆಯ್ಕೆ ಪ್ರಕ್ರಿಯೆ :
  • ಲಿಖಿತ ಪರೀಕ್ಷೆ (ಶ್ರೇಣಿ-1+ಶ್ರೇಣಿ-2) Written Test (Grade-1+Grade-2).
  • ಕೌಶಲ್ಯ ಪರೀಕ್ಷೆ (Skill Test).
  • ದಾಖಲೆಗಳ ಪರಿಶೀಲನೆ (Document Verification).
  • ವೈದ್ಯಕೀಯ ಪರೀಕ್ಷೆ (Medical Examination.)
ಇದನ್ನು ಓದಿ : Kidnap : ಪತಿಗೆ ಗುಂಡು ಹಾರಿಸಿ, ಪತ್ನಿ ಮತ್ತು ಮಕ್ಕಳನ್ನು ಅಪಹರಿಸಿದ ಶಸ್ತ್ರಸಜ್ಜಿತ ಗುಂಪು.!
ಅರ್ಜಿ ಸಲ್ಲಿಸುವುದು ಹೇಗೆ?
  • ಅಧಿಕೃತ WEbsite ಗೆ ಭೇಟಿ ನೀಡಿ ಮತ್ತು ಸೂಚನೆಯನ್ನು Download ಮಾಡಿ.
  • ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ.
  • ಕೊಟ್ಟಿರುವ Form ನ್ನು ಸರಿಯಾಗಿ ಭರ್ತಿ ಮಾಡಿ.
  • ಅರ್ಜಿ ಶುಲ್ಕದ ಪಾವತಿ.
  • ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.
  • ತುಂಬಿದ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಮತ್ತು Form ನ್ನು Submit ಮಾಡಿ.
  • ಕೊನೆಯದಾಗಿ ಅರ್ಜಿಯನ್ನು ಮುದ್ರಿಸಲು (Print) ಮರೆಯಬೇಡಿ.
ಪ್ರಮುಖ ದಿನಾಂಕಗಳು :
  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ಜೂನ್‌ 23, 2025.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜುಲೈ 18, 2025.
  •  ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : ಜುಲೈ 19, 2025.
  • ಅರ್ಜಿ ನಮೂನೆ ತಿದ್ದುಪಡಿ ಮತ್ತು ತಿದ್ದುಪಡಿ ಶುಲ್ಕವನ್ನು ಆನ್‌ಲೈನ್ ಪಾವತಿಗೆ ದಿನಾಂಕಗಳು : 23-07-2025 ರಿಂದ 24-07-2025.
ಪ್ರಮುಖ ಲಿಂಕ್ ಗಳು :

Disclaimer : The above given information is available On online, candidates should check it properly before applying. This is for information only.

Janaspandhan News
Janaspandhan Newshttp://WWW.janaspandhan.com
Janaspandana News is a digital news platform that reports crime and local news from Karnataka.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments