ಜನಸ್ಪಂದನ ನ್ಯೂಸ್, ಮೈಸೂರು : ಹನಿಟ್ರ್ಯಾಪ್ (Honeytrap) ಪ್ರಕರಣಕ್ಕೆ ಸಂಬಂಧಿಸಿದಂತೆ 5 ಜನರನ್ನು ಪೊಲೀಸರು ಬಂಧಿಸಿರುವ ಘಟನೆ ಮೈಸೂರಿನ ಪಿರಿಯಾಪಟ್ಟಣ ತಾಲೂಕಿನಲ್ಲಿ ನಡೆದಿದೆ. ವಿಚಿತ್ರ ಏನೆಂದರೆ ಹನಿಟ್ರ್ಯಾಪ್ ಪ್ರಕರಣಕ್ಕೆ ಸ್ವತಃ ಪೊಲೀಸ್ ಪೇದೆಯೇ ಸಾಥ್ ನೀಡಿರುವುದು.
ಹನಿಟ್ರ್ಯಾಪ್ (Honeytrap) ಪ್ರಕರಣದಲ್ಲಿ ಪೊಲೀಸ್ ಸಾಥ್ ನೀಡಿರುವುದು ಸ್ವತಃ ಪೊಲೀಸ್ ಇಲಾಖೆಗೆಯೇ ಶಾಕ್ ಆಗಿದ್ದು, ಯುವತಿ ಸೇರಿ ಒಟ್ಟು 5 ಜನರನ್ನು ಬಂಧಿಸಲಾಗಿದ್ದು, ಅದರಲ್ಲಿ ಪೊಲೀಸ್ ಸಿಬ್ಬಂದಿ ಕೂಡ ಇದ್ದಾನೆ.
ಇದನ್ನು ಓದಿ : BSF : ಸಹೋದ್ಯೋಗಿಯಿಂದ ಬಿಎಸ್‌ಎಫ್ ಯೋಧನ ಹತ್ಯೆ.!
ಕಂಪಲಾಪುರದ ಓರ್ವ ಬಟ್ಟೆ ವ್ಯಾಪಾರಿಯನ್ನು ಈ ಹನಿಟ್ರ್ಯಾಪ್‌ನಲ್ಲಿ ಸಿಲುಕಿಸಿ ಲಕ್ಷಾಂತರ ರೂಪಾಯಿ ಸುಲಿಗೆ ನಡೆಸಲು ಪ್ರಯತ್ನಿಸಲಾಗಿದ್ದು, ಹನಿಟ್ರ್ಯಾಪ್ (Honeytrap) ಪ್ರಕರಣಕ್ಕೆ ಸಂಬಂಧಿಸಿದಂತೆ 5 ಆರೋಪಿಗಳನ್ನು ಬಂಧಿಸಲಾಗಿದೆ.
ಕಂಪಲಾಪುರದ ದಿನೇಶ್ ಕುಮಾರ್ ಎಂಬವರು ತಮ್ಮ ಊರಿನಲ್ಲಿ ಬಟ್ಟೆ ಅಂಗಡಿಯನ್ನು ನಡೆಸುತ್ತಿದ್ದಾರೆ. 3-4 ದಿನಗಳ ಹಿಂದೆ ಅವರ ಅಂಗಡಿಗೆ ಬಂದಿದ್ದ ಯುವತಿಯೊಬ್ಬರು ಬಟ್ಟೆ ಖರೀದಿಯ ನೆಪದಲ್ಲಿ ಪರಿಚಯ ಬೆಳೆಸಿ, ಬಳಿಕ ಮೊಬೈಲ್ ನಂಬರ್ ಪಡೆದು ವಾಟ್ಸಾಪ್ ಚಾಟಿಂಗ್ ಮಾಡುತ್ತಿದ್ದರು.
ಇದನ್ನು ಓದಿ : Breakfast : ಬೆಳಗ್ಗೆ ನೀವು ಉಪಾಹಾರ ಸೇವಿಸದೇ ಇರ್ತೀರಾ.? ಈ ಸುದ್ದಿ ಓದಿ.!
ಕಳೆದ ಜೂನ್ 14ರಂದು ಮಧ್ಯಾಹ್ನ ನಮ್ಮ ಮನೆಯಲ್ಲಿ ಯಾರೂ ಇಲ್ಲ, ನೀವೂ ನಾನು ಕಳುಹಿಸುವ ಲೋಕೇಷನ್ ಮೂಲಕ ನಮ್ಮ ಚಿಕ್ಕಮ್ಮನ ಮನೆಗೆ ಬನ್ನಿ ಎಂದು ಯುವತಿ, ವ್ಯಾಪಾರಿಯನ್ನು ಮನೆಗೆ ಬರುವಂತೆ ಆಹ್ವಾನ ನೀಡಿದ್ದಾಳೆ.
ಯುವತಿಯ ಮಾತನ್ನು ನಂಬಿದ ವ್ಯಾಪಾರಿ, ಯುವತಿ ಹೇಳಿದ ಸ್ಥಳಕ್ಕೆ ಕಾರಿನಲ್ಲಿ ತೆರಳಿದ್ದಾರೆ. ಮನೆಗೆ ಬಂದ ವ್ಯಾಪಾರಿಯನ್ನು ಆಹ್ವಾನಿಸಿದ ಯುವತಿ ಡೋರ್ ಲಾಕ್ ಮಾಡಿ ಬರುವುದಾಗಿ ಹೇಳಿ, ಲಾಕ್ ಮಾಡದೆ (Honeytrap ಉದ್ದೇಶಕ್ಕಾಗಿ) ಬಂದು ವ್ಯಾಪಾರಿ ಜೊತೆ ಆತ್ಮೀಯವಾಗಿ ಕುಳಿತ್ತಿದ್ದಾಳೆ.
ಇದನ್ನು ಓದಿ : Witchcraft : ಮಹಿಳೆಯ ‘ಬೆತ್ತಲೆ ವೀಡಿಯೋ’ ಮಾಡಿ ಬ್ಲ್ಯಾಕ್ ಮೇಲ್ : ಕಾಮುಕ ಅರ್ಚಕ ಅರೆಸ್ಟ್..!
ಆಗ ಸ್ಥಳಕ್ಕೆ ಅಪರಿಚಿತರಿಬ್ಬರು ಬಂದು ಇಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂಬಂತೆ ದಾಳಿ ನಡೆಸಿ ದಿನೇಶ್ ಅವರನ್ನು ಹಿಗ್ಗಾಮುಗ್ಗ ಥಳಿಸಿ ಅದನ್ನು Honeytrap ಮಾಡಲು ವಿಡಿಯೋ ಶೂಟ್ ಮಾಡಿದ್ದಾರೆ. ಕೆಲ ಸಮಯದ ನಂತರ ಪೊಲೀಸ್ ಪೇದೆ (Honeytrap ಗುಂಪಿನ ಸದಸ್ಯ) ಶಿವಣ್ಣ ಅಲಿಯಾಸ್ ಪಾಪಣ್ಣ, ಇದೇ ರೂಮಿಗೆ ಬಂದು “ನಿನ್ನನ್ನು ಬಿಟ್ಟು ಕಳಿಸಲು ನಾವು ಇವರೊಂದಿಗೆ ಮಾತನಾಡುತ್ತೇವೆ” ಎಂದು ದಿನೇಶ್ ಕುಮಾರ್ ಅವರಿಗೆ ನಂಬಿಸಿ, 10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.”
ಆಗ ವ್ಯಾಪಾರಿ ದಿನೇಶ್ ಅವರು ತಮ್ಮ ಸಹೋದರನಿಗೆ 10 ಲಕ್ಷ ರೂ. ಹಣವನ್ನು ತಾನು ಹೇಳುವ ಸ್ಥಳಕ್ಕೆ ಬರುವಂತೆ ಹೇಳಿದ್ದಾರೆ. ಆದರೆ ದಿನೇಶ್ ಅವರ ಮಾತಿನಿಂದ ಸಂಶಯಗೊಂಡು ಹಣವನ್ನು ತೆಗೆದುಕೊಂಡು ಹೋಗುವ ಮುನ್ನ ದಿನೇಶನ ಸಹೋದರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನು ಓದಿ : Sheetal : ಕತ್ತು ಸೀಳಿ ಖ್ಯಾತ ಮಾಡೆಲ್ ಹತ್ಯೆ ; ಕಾಲುವೆಯಲ್ಲಿ ಶವ ಪತ್ತೆ.!
ತಮ್ಮ ಚಾಲಾಕಿ ಕೆಲಸ ಪೊಲೀಸರಿಗೆ ತಿಳಿದ ಹನಿಟ್ಯ್ರಾಪ್ ಗ್ಯಾಂಗ್ ವ್ಯಾಪಾರಿ ದಿನೇಶ್ ಕುಮಾರ ಅವರನ್ನು ಬಿಟ್ಟು ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಪಿರಿಯಾಪಟ್ಟಣ ಪೊಲೀಸರು ಪೊಲೀಸ್, ಯುವತಿ ಸೇರಿ 5 ಜನರನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
Sheetal : ಕತ್ತು ಸೀಳಿ ಖ್ಯಾತ ಮಾಡೆಲ್ ಹತ್ಯೆ ; ಕಾಲುವೆಯಲ್ಲಿ ಶವ ಪತ್ತೆ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಖ್ಯಾತ ಮಾಡೆಲ್ ಶೀತಲ್ (Sheetal) ಅವರ ಕತ್ತು ಸೀಳಿ ಹತ್ಯೆ ಮಾಡಿ ನಂತರ ಕಾಲುವೆಯಲ್ಲಿ ಶವ ಎಸೆದಿರುವ ಬಗ್ಗೆ ವರದಿಯಾಗಿದೆ.
ಪ್ರಸಿದ್ಧ ಹರ್ಯಾಣವಿ ಮಾಡೆಲ್ ಶೀತಲ್ (Sheetal) ಅಕಾ ಸಿಮ್ಮಿ ಚೌಧರಿ ಅವರ ಮೃತದೇಹ ಸೋನಿಪತ್‌ನ ಖಾರ್ಖೋಡಾದಲ್ಲಿರುವ ಕಾಲುವೆಯಲ್ಲಿ ಮೃತದೇಹ ಪತ್ತೆಯಾಗಿದೆ. ಕಾಲುವೆಯಲ್ಲಿ ಬಿದ್ದ ಶವದ ಕೈಗಳು ಮತ್ತು ಎದೆಯ ಮೇಲಿನ ಹಚ್ಚೆಗಳಿಂದ ಅವರನ್ನು ಮಾಡೆಲ್ ಶೀತಲ್ (Sheetal) ಗುರುತಿಸಲಾಗಿದೆ.
ಇದನ್ನು ಓದಿ : Romance : ಕಾಲೇಜ್ ಕ್ಲಾಸ್ ಬಿಟ್ಟು, ನಡುಬೀದಿಯಲ್ಲಿ ವಿದ್ಯಾರ್ಥಿಗಳ ಲವ್ ಕ್ಲಾಸ್.!
ಮಾಡೆಲ್ ಶೀತಲ್ ಅಕಾ ಸಿಮ್ಮಿ ಚೌಧರಿ ಮೂಲತಃ ಪಾಣಿಪತ್‌ನವರು. ಶೀತಲ್ (Sheetal) ಶೂಟಿಂಗ್‌ಗೆ ಎಂದು ಮನೆಯಿಂದ ಶನಿವಾರ (ಜೂನ್ 14) ಹೊರಟಿದ್ದರು. ಈ ಮಧ್ಯೆ ತಮ್ಮ ಗೆಳೆಯ ತನ್ನನ್ನು ಹೊಡೆದಿದ್ದಾನೆ ಎಂದು ಮಾಡೆಲ್ ಶೀತಲ್ (Sheetal) ತಮ್ಮ ಸಹೋದರಿ ನೇಹಾ ಅವರಿಗೆ ಕರೆ ಮಾಡಿ ಹೇಳಿದ್ದಾರಂತೆ.
ಇದಾದ ನಂತರ ಕರೆ ಸಂಪರ್ಕ ಕಡಿತಗೊಂಡಿತು. ಸೋಮವಾರ ದಿನವಾದ ಇಂದು (ಜೂನ್.16) ಬೆಳಿಗ್ಗೆ ಸೋನಿಪತ್‌ನಿಂದ ಶೀತಲ್ (Sheetal) ಅವರ ಮೃತದೇಹ ಪತ್ತೆಯಾಗಿದ್ದು, ಮೃತದೇಹ ಮಾಡೆಲ್ ಶೀತಲ್ ಅವರದೇ ಎಂದು ಸೋನಿಪತ್ ಪೊಲೀಸರು ದೃಢಪಡಿಸಿದ್ದಾರೆ.
ಇದನ್ನು ಓದಿ : Indrayani : ನದಿಯ ಸೇತುವೆ ಕುಸಿದು 15 ರಿಂದ 20 ಪ್ರವಾಸಿಗರು ನೀರುಪಾಲು.!
ಏತನ್ಮಧ್ಯೆ, ಆರೋಪಿ ಗೆಳೆಯನ ಕಾರು ಭಾನುವಾರ ಬೆಳಿಗ್ಗೆ ದೆಹಲಿ ಪ್ಯಾರಲಲ್ ಕಾಲುವೆಯಲ್ಲಿ ಪತ್ತೆಯಾಗಿದೆ. ಜನರು ಯುವಕನನ್ನು ಅದರಿಂದ ಹೊರತೆಗೆದರು ಆದರೆ ಮಾಡೆಲ್ ಕಾಣೆಯಾಗಿದ್ದರು. ಇದರ ನಂತರ, ಸಹೋದರಿ ಕಾಣೆಯಾದ ವ್ಯಕ್ತಿಯ ವರದಿಯನ್ನು ಸಲ್ಲಿಸಿದ್ದರು. ಅವರು ಕೊಲೆಯ ಅನುಮಾನ ವ್ಯಕ್ತಪಡಿಸಿದ್ದಾರೆ.
ಹರಿಯಾಣವಿ ಸಂಗೀತ ಉದ್ಯಮದಲ್ಲಿ ಅವರು ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದರು. ಈ ಬಗ್ಗೆ ಅವರ ಕುಟುಂಬ ಮತ್ತು ಪಾಣಿಪತ್ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಈ ಬಗ್ಗೆ ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ.
ಶೀತಲ್ (Sheetal) ಹತ್ಯೆ ಕುರಿತು ಮಾಹಿತಿ :
https://twitter.com/i/status/1934518641384374751





