Saturday, September 21, 2024
spot_img
spot_img
spot_img
spot_img
spot_img
spot_img
spot_img

Health : ಪುದೀನಾ ಸೇವಿಸುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಪುದೀನಾ ಹಲವಾರು ಆಹಾರದ ಉಪಯೋಗಗಳು ಮತ್ತು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ಸಾಮಾನ್ಯ ಶೀತ, ಕೆಮ್ಮು, ಬಾಯಿ ಮತ್ತು ಗಂಟಲಿನ ಉರಿಯೂತ, ಸೈನಸ್ ಸೋಂಕುಗಳು ಮತ್ತು ಉಸಿರಾಟದ ಸೋಂಕುಗಳಿಗೆ ಉಪಯುಕ್ತವಾಗಿದೆ.

ಪುದೀನಾದಲ್ಲಿರುವ ಔಷಧೀಯ ಗುಣಗಳು ಸಾಕಷ್ಟು ಅನಾರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತವೆ. ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ಅನ್ನು ಹೊಂದಿರುವುದು‌

* ಪುದೀನಾ ಎಲೆಗಳನ್ನು ಜಜ್ಜಿ ವಾಸನೆ ತಗೊಂದ್ರೆ, ತಲೆನೋವು, ತಲೆ ಸುತ್ತುವಿಕೆ ಶಮನವಾಗುತ್ತದೆ.

* ಪುದೀನದಲ್ಲಿ ಇರುವ ಸಾರಭೂತ ತೈಲ ಮತ್ತು ಪಿತ್ತರಸವು ಜೀರ್ಣ ಕ್ರಿಯೆಯನ್ನು ಉತ್ತೇಜಿಸುತ್ತದೆ. ಜೀರ್ಣಕಾರಿ ಕಿಣ್ವಗಳು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದಾಗಿ ಚಯಾಪಚಯ ಕ್ರಿಯೆಯು ಉತ್ತಮವಾಗುತ್ತದೆ. ಉತ್ತಮ ಜೀರ್ಣ ಕ್ರಿಯೆಯಿಂದ ಸುಲಭವಾಗಿ ತೂಕ ಇಳಿಸಬಹುದು.

ಇದನ್ನು ಓದಿ : Strange tradition : ಭಾರತದ ಈ ಸಂತೆಯಲ್ಲಿ ಹುಡುಗಿಯರು ಮತ್ತು ಮಹಿಳೆಯರ ಮಾರಾಟ.!

* ಪುದೀನಾ ಕಷಾಯಕ್ಕೆ ಜೇನುತುಪ್ಪ ಕಲಸಿ ಸೇವಿಸುತ್ತಿದ್ದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

* ಪುದೀನವನ್ನು ನಿಯಮಿತವಾಗಿ ಸೇವಿಸುವಾಗ ಮಿತವಾಗಿ ಹಾಗೂ ಹಿತವಾಗಿ ಸೇವಿಸಬೇಕು. ಆಗ ಮಿದುಳಿನ ಆರೋಗ್ಯ ಉತ್ತಮವಾಗಿ ಸುಧಾರಿಸುತ್ತದೆ.

* ಪುದೀನದಲ್ಲಿ ಇರುವ ಸಾರಭೂತ ತೈಲಗಳು ಬಲವಾದ ಆಂಟಿಬ್ಯಾಕ್ಟೀರಿಯಾ ಮತ್ತು ನಂಜು ನಿರೋಧಕ ಪರಿಣಾಮಗಳನ್ನು ಹೊಂದಿರುತ್ತವೆ.

* ಪುದೀನ ರಸವನ್ನು ಹಣೆಯ ಮೇಲೆ ಅನ್ವಯಿಸಿಕೊಂಡರೆ ತಲೆನೋವು ನಿವಾರಣೆಯಾಗುವುದು. ತಲೆನೋವು ನಿವಾರಣೆಗೆ ಪುದೀನವನ್ನು ಬಳಸಿ ತಯಾರಿಸಲಾದ ಮುಲಾಮು ಅಥವಾ ಎಣ್ಣೆಯನ್ನು ಸಹ ಹಣೆ ಮತ್ತು ಪೀಡಿತ ಪ್ರದೇಶದಲ್ಲಿ ಅನ್ವಯಿಸಿಕೊಳ್ಳಬಹುದು.

ಇದನ್ನು ಓದಿ : Special news : ರಾತ್ರಿ ಮಲಗುವ ಮುನ್ನ ಒಂದು ಎಸಳು ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ.?

* ಹೊಟ್ಟೆಯ ಸೆಳೆತವನ್ನು ಶಾಂತಗೊಳಿಸುತ್ತದೆ. ಆಮ್ಲೀಯತೆ ಮತ್ತು ವಾಯುವನ್ನು ಹಿಡಿತದಲ್ಲಿ ಇಡಲು ಸಹಾಯ ಮಾಡುವುದು.

* ಶ್ವಾಸಕೋಶದಲ್ಲಿ ಸಂಗ್ರಹಿಸಿದ ಲೋಳೆಯನ್ನು ಸಡಿಲಗೊಳಿಸಲು ಸಹಾಯ ಮಡುತ್ತದೆ. ಮೂಗಿನಲ್ಲಿ ಕಟ್ಟಿಕೊಂಡ ಪೊರೆಗಳನ್ನು ಕುಗ್ಗಿಸಿ ಸುಲಭವಾಗಿ ಉಸಿರಾಡಲು ಸಹಾಯವಾಗುವಂತೆ ಮಾಡುವುದು.

* ಪುದೀನಾ ರಸಕ್ಕೆ ಅರಿಶಿಣವನ್ನು ಕಲಸಿ ಮೈಗೆ ಲೇಪನ ಮಾಡಿಕೊಂಡು ಅರ್ಧಗಂಟೆಯ ನಂತರ ಸ್ನಾನ ಮಾಡುವುದರಿಂದ ತುರಿಕೆ, ಉರಿ ಮುಂತಾದ ಚರ್ಮ ವ್ಯಾಧಿಗಳು ನಿವಾರಣೆಯಾಗುತ್ತವೆ. ದೇಹದಲ್ಲಿನ ಉಷ್ಣ ಕಡಿಮೆಯಾಗುತ್ತದೆ.

ಇದನ್ನು ಓದಿ : Health : ನೀವು ಪ್ಯಾಕೆಟ್ ಹಾಲನ್ನು ಬಳಸುತ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.

* ಪುದೀನಾದ ರಸ ಮತ್ತು ಅದರ ಪರಿಮಳವು ಮಾನಸಿಕ ಒತ್ತಡ ಹಾಗೂ ಖಿನ್ನತೆಯ ಭಾವನೆಯನ್ನು ಬಹುಬೇಗ ನಿವಾರಿಸುವುದು.

* ಪುದೀನಾ ಉಲ್ಲಾಸಕರವಾದ ವಾಸನೆಯನ್ನು ಒಳಗೊಂಡಿರುವುದರಿಂದ ಅದು ಬಹುಬೇಗ ಶಾಂತ ಹಾಗೂ ಉಲ್ಲಾಸದ ಭಾವನೆಯನ್ನು ನೀಡುತ್ತವೆ.

* ಪುದೀನ ರಸವನ್ನು ಮುಖಕ್ಕೆ ಅನ್ವಯಿಸುವುದರಿಂದ ಚರ್ಮ ಸಂಬಂಧಿ ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸುವುದು.

ಇದನ್ನು ಓದಿ : Health : ಬೆಳ್ಳಿಯ ಉಂಗುರ ಧರಿಸುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು.!

* ಬ್ಯಾಕ್ಟೀರಿಯಾ ಕೊಲ್ಲಲು, ಆರೋಗ್ಯಕರ ಒಸಡುಗಳು ಮತ್ತು ಹಲ್ಲುಗಳನ್ನು ಹೊಂದಲು ಸಹಾಯವಾಗುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img