Monday, October 7, 2024
spot_img
spot_img
spot_img
spot_img
spot_img
spot_img
spot_img

Health : ಗೆಣಸು ಸೇವನೆಯಿಂದ ಆಗುವ ಆರೋಗ್ಯ ಪ್ರಯೋಜನಗಳು.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಸಿಹಿ ಗೆಣಸು ಎಲ್ಲರಿಗೂ ಇಷ್ಟವಾಗುವ ಗಡ್ಡೆ. ತಿಳಿ ಗುಲಾಬಿ, ಕಂದು, ತಿಳಿ ಹಳದಿ, ನೇರಳೆ ಮುಂತಾಗಿ ಒಂದಕ್ಕಿಂತ ಹೆಚ್ಚು ಬಣ್ಣಗಳಲ್ಲಿರುವ ಈ ಗೆಣಸಿನ ಎಲ್ಲ ಬಣ್ಣಗಳೂ ಆರೋಗ್ಯಕ್ಕೆ ಒಳ್ಳೆಯವೆ. ಇದರ ಬಣ್ಣ ಗಾಢವಾದಷ್ಟೂ ಇದರಲ್ಲಿರುವ ಉತ್ಕರ್ಷಣ ನಿರೋಧಕಗಳ ಸಾಂದ್ರತೆ ಹೆಚ್ಚು ಎಂದು ತಿಳಿಯಬಹುದು

ಮಾರುಕಟ್ಟೆಯಲ್ಲಿ ಯಾವಾಗಲೂ ಸಿಗುವ ಸಿಹಿ ಗೆಣಸು ಒಂದು ತರಹ ಆರೋಗ್ಯಕ್ಕೆ ಧನ್ವಂತರಿ ಎಂದು ಹೇಳಬಹುದು. ಏಕೆಂದರೆ ಇದರಲ್ಲಿ ಅಂತಹ ಆರೋಗ್ಯಕರ ಗುಣಗಳು ಅಡಗಿವೆ.

ಇದನ್ನು ಓದಿ : Video : ಯೂನಿಫಾರ್ಮ್ ಬಿಚ್ಚಿಸ್ತೀನಿ ಎಂದು BJP ಮುಖಂಡನಿಂದ ಬೆದರಿಕೆ; ಸಮವಸ್ತ್ರವನ್ನೇ ಹರಿದು ಹಾಕಿದ ASI.!

ಹೃದಯದ ಆರೋಗ್ಯಕ್ಕೆ ಇವುಗಳು ಅದ್ಭುತವಾಗಿ ಕೆಲಸ ಮಾಡುತ್ತವೆ. ರಕ್ತದ ಒತ್ತಡದ ನಿರ್ವಹಣೆಯಲ್ಲೂ ಕೂಡ ನೆರವಾಗುತ್ತವೆ. ಆಗಾಗ ಸಿಹಿ ಗೆಣಸು ಸೇವನೆ ಮಾಡುವವರಲ್ಲಿ ಹೃದಯ ರಕ್ತ ನಾಳದ ಕಾಯಿಲೆಗಳು ಸಹ ಇರುವುದಿಲ್ಲ ಎಂದು ಹೇಳಲಾಗುತ್ತದೆ.

ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿದ ಭಾವವನ್ನು ನೀಡುವ ಇವು, ತಿಂದ ತೃಪ್ತಿಯನ್ನು ಹೆಚ್ಚಿಸುತ್ತವೆ. ಕರಗಬಲ್ಲ ನಾರುಗಳು ದೇಹದಲ್ಲಿ ಅಡಗಿರುವ ಕೊಬ್ಬಿನಂಶವನ್ನು ಕರಗಿಸಿದರೆ, ಕರಗದಿರುವ ನಾರು ಮಲಬದ್ಧತೆಯನ್ನು ನಿವಾರಿಸುತ್ತದೆ.

ರಕ್ತದ ಹರಿವಿನಲ್ಲಿ ಹೆಚ್ಚಾಗದಂತೆ ರಕ್ಷಣೆ ಮಾಡಿ ಬ್ಲಡ್ ಶುಗರ್ ಲೆವೆಲ್ ಏರಿಕೆ ಆಗದಂತೆ ತಡೆಯುತ್ತದೆ. ಹೀಗಾಗಿ ಮಧುಮೇಹ ಹೊಂದಿರುವವರು ಆಗಾಗ ಸಿಹಿ ಗೆಣಸು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಬೇಕು.

ಇದನ್ನು ಓದಿ : ಅಶ್ಲೀಲ ಕಮೆಂಟ್ ಮಾಡಿದಾತನ ಮನೆಗೆ ನುಗ್ಗಿ ಹಿಗ್ಗಾಮುಗ್ಗಾ ಥಳಿಸಿದ ಯುವತಿ; ವಿಡಿಯೋ Viral.!

ಚರ್ಮದ ಹೊಳಪಿಗೆ, ದೃಷ್ಟಿಯ ಪೋಷಣೆಗೆ ಅಗತ್ಯವಾದ ಸತ್ವಗಳು ಇದರಲ್ಲಿವೆ. ಗೆಣಸು ತಿನ್ನುವಾಗ ಅದರ ಸಿಪ್ಪೆ ಸಮೇತ ತಿನ್ನಿ. ಇದರಿಂದ ವಿಟಮಿನ್‌ ಎ ಅಂಶ ಸಮೃದ್ಧವಾಗಿ ದೇಹಕ್ಕೆ ದೊರೆಯುತ್ತದೆ.

ಸಿಹಿಗೆಣಸು ತನ್ನಲ್ಲಿ ಬೀಟಾ ಕ್ಯಾರೋಟಿನ್ ಪ್ರಮಾಣವನ್ನು ಹೇರಳವಾಗಿ ಹೊಂದಿದ್ದು, ಇದರ ಸೇವನೆಯಿಂದ ಬೀಟಾ ಕ್ಯಾರೋಟಿನ್ ನಮ್ಮ ದೇಹದಲ್ಲಿ ವಿಟಮಿನ್ ಎ ಆಗಿ ಬದಲಾಗುತ್ತದೆ ಮತ್ತು ಅದು ಕಣ್ಣುಗಳ ದೃಷ್ಟಿಯನ್ನು ಹೆಚ್ಚಿಸುತ್ತದೆ. ಇದರಿಂದ ರಾತ್ರಿ ಕುರುಡು ಸಮಸ್ಯೆ ಕೂಡ ದೂರವಾಗುತ್ತದೆ.

ನಾರಿನಂಶ ಹೆಚ್ಚಿರುವುದರಿಂದ ಬೇಗ ಹಸಿವಾಗುವುದಿಲ್ಲ. ಆಗಾಗ ತಿನ್ನು ಬೇಡಿಕೆಯನ್ನು ಮಟ್ಟ ಹಾಕಬಹುದು ಜೊತೆಗೆ ದೇಹದಲ್ಲಿನ ಹೆಚ್ಚುವರಿ ನೀರನ್ನು ತೆಗೆದು ಹೊಟ್ಟೆಯೆಲ್ಲ ಸಪೂರ ಆದಂತೆ ಕಾಣಿಸುತ್ತದೆ.

ಇದನ್ನು ಓದಿ : ಈ ಹಳ್ಳಿಯ ಪ್ರತಿಯೊಬ್ಬರ ಬಳಿ ಇದೆ ಜೆಟ್; ತರಕಾರಿ ತರಲು ಸಹ Jet ನಲ್ಲೇ ಪ್ರಯಾಣಿಸ್ತಾರೆ.!

ದೀರ್ಘಕಾಲದ ಮಲಬದ್ಧತೆ ಸಮಸ್ಯೆಯನ್ನು ಇಲ್ಲವಾಗಿಸುತ್ತದೆ. ಹೀಗಾಗಿ ಆರೋಗ್ಯಕರ ಜೀರ್ಣ ಶಕ್ತಿ ನಿಮಗೆ ಸಿಕ್ಕಂತೆ ಆಗುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img