ಜನಸ್ಪಂದನ ನ್ಯೂಸ್, ಡೆಸ್ಕ್ : ರಕ್ತ ದಾನಿಯಂತೆ ಪೋಸ್ ನೀಡಿದ ಮೊರಾದಾಬಾದ್ ನ ಮೇಯರ್ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ.
ಸದ್ಯ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ವೈರಲ್ ಆಗಿದೆ. ನೆಟ್ಟಿಗರು ಇದನ್ನು ಟೀಕಿಸಿದ್ದಾರೆ.
ಇದನ್ನು ಓದಿ : Health : ಆರೋಗ್ಯವಾಗಿರಲು ದಿನಕ್ಕೆ ಎಷ್ಟು ಸ್ಪೂನ್ ತುಪ್ಪ ತಿನ್ನಬೇಕು.? ಜಾಸ್ತಿ ತಿಂದ್ರೆ ಏನಾಗುತ್ತೆ ಗೊತ್ತಾ.?
ಇನ್ನು ಮೊರಾದಾಬಾದ್‌ನಲ್ಲಿ ಬಿಜೆಪಿ ಯುವ ಮೋರ್ಚಾ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ (ಸೆಪ್ಟೆಂಬರ್17) ಮೇಯರ್ ವಿನೋದ್ ಅಗರ್ವಾಲ್ ಅವರು ಪಾಲ್ಗೊಂಡಿದ್ದರು.
ಈ ವೇಳೆ ರಕ್ತದಾನ ಮಾಡಲೆಂದು ಬೆಡ್ ಮೇಲೆ ಮಲಗಿದ್ದು ವೈದ್ಯರು ರಕ್ತ ತೆಗೆಯಲು ಸೂಜಿಯನ್ನು ಹಾಕಲು ಮುಂದಾಗುತ್ತಿದ್ದಂತೆ ಮೇಯರ್ ವಿನೋದ್ ಅಗರ್ವಾಲ್ ಕೊನೆಯ ಕ್ಷಣದಲ್ಲಿ ಮೇಲಕ್ಕೆದ್ದಿರುವುದನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದು.
ವಿಡಿಯೋ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತ್ವರಿತವಾಗಿ ಹರಿದಾಡಿದೆ. ಅನೇಕರು ಮೇಯರ್ ಅವರನ್ನು ಅಪಹಾಸ್ಯ ಮಾಡಿದ್ದಾರೆ.
ಇದನ್ನು ಓದಿ : ಕಾಗೆಯ ಜೊತೆ ನಾಯಿಯ ಫ್ರೆಂಡ್ ಶಿಪ್ ; Video ನೋಡಿದ್ರೆ ಸೂಪರ್ ಅಂತೀರಾ.!
ಕೇವಲ ಫೋಟೋ ಮತ್ತು ವಿಡಿಯೋಗಾಗಿ ಅಮೂಲ್ಯವಾದ ರಕ್ತದಾನವನ್ನು ಉಪಯೋಗಿಸಿಕೊಂಡಿದ್ದಕ್ಕಾಗಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನೇಕರು ಮೇಯರ್ ಅವರ ನಡವಳಿಕೆಯನ್ನು ಅಪಹಾಸ್ಯ ಮಾಡಿದರು. ಕೆಲವರು ಇದು ರೀಲ್‌ಗಳ ಯುಗ. ಯಾರಾದರೂ ಫೋಟೋಗಳು ಮತ್ತು ರೀಲ್‌ಗಳೊಂದಿಗೆ ಸರ್ಕಾರವನ್ನು ನಡೆಸಬಹುದಾದರೆ, ಅವರಂತಹ ಶಿಷ್ಯರು ಇರುವುದು ಸಹಜ ಎಂದು ಕಮೆಂಟ್ ಮಾಡಿದ್ದಾರೆ.
ये मुरादाबाद BJP मेयर विनोद अग्रवाल हैं PM के जन्मदिन पर रक्तदान करने गए थे। खून देने के लिए मेयर साहब बेड पर तो लेटे लेकिन जैसे ही डॉक्टर ने खून निकालने का प्रयास किया, नेता जी हाथ खड़े कर दिये। बोले हम सिर्फ़ फ़ोटो खिंचाने आये थे। मोदी जी इन्हें दिल माफ नहीं करेंगे #Moradabad pic.twitter.com/RISqTfMIuU
— Arun (आज़ाद) Chahal 🇮🇳 (@arunchahalitv) September 20, 2024