ಜನಸ್ಪಂದನ ನ್ಯೂಸ್, ಡೆಸ್ಕ್ : ಮಹಿಳೆಯೋರ್ವಳು ತನಗಿಂತ ಕಿರಿಯ ವಯಸ್ಸಿನ ಯುವಕನೊಂದಿಗೆ ಏಕಾಂತದಲ್ಲಿ ಸಮಯ ಕಳೆಯಲು ಓಯೋ ರೂಮ್ಗೆ ಹೋಗಿದ್ದ ಮಹಿಳೆ ಅಲ್ಲಿಯೇ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಪೊಲೀಸ್ ಕಮಿಷನರೇಟ್‌ನ ಗಂಗಾನಗರ ವಲಯದ ಸೊರಾನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : Special news : ಈ ನಾಲ್ಕು ರಾಶಿಯವರು ಪ್ರೀತಿಯಲ್ಲಿ ನೋವು ಅನುಭವಿಸುತ್ತಾರಂತೆ.!
ಮೃತ ಮಹಿಳೆ 35 ವರ್ಷದ ಸುಮನ್ ದೇವಿ ಎಂದು ವರದಿಯಾಗಿದ್ದು, ಆಕೆಯ ಪ್ರಿಯಕರ 24 ವರ್ಷದ ವಿವೇಕ್ ಕುಮಾರ್ ಆಕೆಯನ್ನು ಕೊಲೆ ಮಾಡಿ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾನೆ.
ವಿವೇಕ್ ತನ್ನ ಗೆಳತಿಯನ್ನು ಕೊಲೆ ಮಾಡಿ ಮೃತ ದೇಹವನ್ನು ಓಯೋ ಹೋಟೆಲ್‌ನಲ್ಲಿ ಇಟ್ಟಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ.
ಇದನ್ನು ಓದಿ : ಮಧ್ಯರಾತ್ರಿಯಲ್ಲಿ ಬೈಕ್ ನಲ್ಲಿ ಪ್ರೇಮಿಗಳ ರೊಮ್ಯಾನ್ಸ್; ವಿಡಿಯೋ Viral.!
ಯುವಕನ ಮಾತು ಕೇಳಿದ ಪೊಲೀಸ್ ಠಾಣೆ ಪ್ರಭಾರಿ ಸೊರವಾನ್ ಅವರು ಆರೋಪಿ ಯುವಕ ವಿವೇಕ್ ಕುಮಾರ್ ನನ್ನು ತಕ್ಷಣ ವಶಕ್ಕೆ ಪಡೆದುಕೊಂಡು ಓಯೋ ರೂಮ್ಗೆ ದೌಡಾಯಿಸಿದ್ದರು
ಇನ್ನೂ ಹೋಟೆಲ್ ರೂಮ್ ತೆರೆದು ನೋಡಿದರೆ ಮಹಿಳೆಯ ಮೃತದೇಹವು ಹೋಟೆಲ್‌ನ ಹಾಸಿಗೆಯ ಮೇಲೆ ಬಿದ್ದಿತ್ತು.
ಇದನ್ನು ಓದಿ : Belagavi : ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಮೂವರು ವಿದ್ಯಾರ್ಥಿಗಳಿಗೆ ಚಾಕು ಇರಿತ.!
ಇನ್ನೂ ಸುಮನ್ ದೇವಿ ಸೊರವಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಸಾರಾಯಿ ಗೋಪಾಲ್ ಭದ್ರಿ ಗ್ರಾಮದ ನಿವಾಸಿಯಾಗಿದ್ದು, ಸುಮಾರು 10 ವರ್ಷಗಳ ಹಿಂದೆ ಮದುವೆಯಾಗಿದ್ದಳು.
ಮದುವೆಯ ನಂತರ ಪತಿಯಿಂದ ದೂರವಾಗಿ, ತವರು ಮನೆಯಲ್ಲಿ ಉಳಿದಿದ್ದಳು. ಈ ವೇಳೆ ವಿವೇಕ್ ಕುಮಾರ್ ಪರಿಚಯ ಆಗಿದೆ. ಈ ಪರಿಚಯ ಪ್ರೇಮಕ್ಕೆ ತಿರುಗಿತ್ತಂತೆ.
ಇದನ್ನು ಓದಿ : ಅಶ್ಲೀಲ ಕಮೆಂಟ್ ಮಾಡಿದಾತನ ಮನೆಗೆ ನುಗ್ಗಿ ಹಿಗ್ಗಾಮುಗ್ಗಾ ಥಳಿಸಿದ ಯುವತಿ; ವಿಡಿಯೋ Viral.!
ವಿವೇಕ್ ಕುಮಾರ್ ನೊಂದಿಗೆ ಶಿವಗಢ ಉಸ್ರಾಹಿಯಲ್ಲಿರುವ ಓಯೋ ಹೋಟೆಲ್‌ಗೆ ಇಬ್ಬರು ಬಂದಿದ್ದರಂತೆ. ಪತಿ- ಪತ್ನಿಯಂತೆ ಡ್ರಾಮಾ ಮಾಡಿ ರೂಮ್ ಪಡೆದಿದ್ದರಂತೆ. ರೂಮ್ನಲ್ಲಿ ವಿವೇಕ್ ಹಾಗೂ ಸುಮನ್ ದೇವಿ ನಡುವೆ ಮದುವೆ ವಿಚಾರವಾಗಿ ಜಗಳ ಶುರುವಾಗಿದೆ. ಈ ವೇಳೆ ಮಹಿಳೆ 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಳು. ಒಂದು ವೇಳೆ ಹಣ ಕೊಡದಿದ್ದರೆ ಪೊಲೀಸ್ ಠಾಣೆ ಮೆಟ್ಟಿಲೇರುವುದಾಗಿ ಬೆದರಿಕೆ ಹಾಕಿದ್ದಳು ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ.
ಆರೋಪಿ ವಿವೇಕ್ ಕುಮಾರ್ ಮಹಿಳೆಗಿಂತ 10 ವರ್ಷ ಚಿಕ್ಕವನಾಗಿದ್ದು, ಇಬ್ಬರ ನಡುವೆ ಹಲವು ವರ್ಷಗಳಿಂದ ಸಂಬಂಧವಿತ್ತು ಎಂದು ತಿಳಿದು ಬಂದಿದೆ.