ಜನಸ್ಪಂದನ ನ್ಯೂಸ್, ಡೆಸ್ಕ್ : ಕಾರು, ಬೈಕ್ ಮನೆ ಬಾಡಿಗೆಗೆ ಕೊಡುವುದನ್ನು ಕೇಳಿರ್ತೀರಾ. ಆದರೆ ಹೆಂಡತಿಯನ್ನು ಬಾಡಿಗೆಗೆ ಕೊಡುವ ಬಗ್ಗೆ ಕೇಳಿದ್ದೀರಾ? ಹೌದು, ಮದುವೆ ಆಗದೆ ಇರುವ ಶ್ರೀಮಂತರಿಗೆ ಹೆಂಡತಿಯರನ್ನು ಎಷ್ಟು ದಿನ ಬೇಕಾದರೂ ಬಾಡಿಗೆ ಕೊಡುತ್ತಾರೆ.
ಇಂತದ್ದೊಂದು ವಿಚಿತ್ರ ಸಂಸ್ಕೃತಿ ಮಧ್ಯಪ್ರದೇಶದ ಶಿವಪುರಿಯಲ್ಲಿದೆ. ಇಲ್ಲಿ ಪತ್ನಿಯರನ್ನು ಪುರುಷರಿಗೆ ಬಾಡಿಗೆಗೆ ನೀಡಲಾಗುತ್ತದೆ.
ಇದನ್ನು ಓದಿ : ನೀವು ಸಮೋಸಾ ಪ್ರಿಯರೇ? ಹಾಗಿದ್ರೆ ಈ Viral ವಿಡಿಯೋವನ್ನು ನೀವು ನೋಡಲೇಬೇಕು.!
ಬೇರೆಯವರ ಹೆಣ್ಣು ಮಕ್ಕಳನ್ನು ಬಾಡಿಗೆಗೆ ಕೊಂಡುಕೊಂಡು ಹೋಗುವ ಸ್ಥಳವಿದೆ. ಈ ಅನಿಷ್ಟ ಪದ್ಧತಿಯನ್ನು ‘ಧಾಡಿಚಾ’ ಎಂದು ಕರೆಯಲಾಗುತ್ತದೆ. ಇದಕ್ಕಾಗಿ ನಿಯಮಿತ ಮಾರುಕಟ್ಟೆ ಇದೆ. ಜನರು ಈ ಮಾರುಕಟ್ಟೆಗೆ ಬಂದು ಒಪ್ಪಂದದ ಪ್ರಕಾರ ಬಾಡಿಗೆಗೆ ಮಹಿಳೆಯರನ್ನು ತೆಗೆದುಕೊಳ್ಳುತ್ತಾರೆ.
ಒಂದು ತಿಂಗಳು ಅಥವಾ ಒಂದು ವರ್ಷಕ್ಕೆ ಬಾಡಿಗೆ ನೀಡಲಾಗುತ್ತದೆ. ಶ್ರೀಮಂತರಿಗೆ ವಧು ಸಿಗದಿದ್ದರೆ ಬೇರೆಯವರ ಹೆಂಡತಿಯನ್ನು ಹೀಗೆ ಬಾಡಿಗೆಗೆ ಕರೆದುಕೊಂಡು ಹೋಗ್ತಾರಂತೆ.
ಇದನ್ನು ಓದಿ : ಹೆಡ್ ಕಾನ್ಸ್‌ಟೇಬಲ್ ನಿಂದ ಮೊಬೈಲ್ ನಂಬರ್, ಟವರ್ ಲೋಕೇಶನ್ ಮಾಹಿತಿ ಸೋರಿಕೆ.!
ಇದಕ್ಕಾಗಿ ಸಂತೆ ನಡೆಸಲಾಗುತ್ತದೆ. ಆ ಸಂತೆಯಲ್ಲಿ ಬಾಡಿಗೆಗೆ ಹುಡುಗಿಯರು ಮತ್ತು ಮಹಿಳೆಯರನ್ನು ಮಾರಾಟ ಮಾಡುತ್ತಾರೆ. ಅಪರಿಚಿತರಿಂದ ಹಣ ಪಡೆದ ಪತಿ ತನ್ನ ಹೆಂಡತಿಯನ್ನು ಆ ವ್ಯಕ್ತಿಯೊಂದಿಗೆ ಒಪ್ಪಂದದ ಮೇಲೆ ಕಳುಹಿಸುತ್ತಾನೆ.
ಈ ವೇಳೆ ಸ್ಟಾಂಪ್ ಪೇಪರ್ ನಲ್ಲಿ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಆ ಸ್ಟ್ಯಾಂಪ್ ಪೇಪರ್ ಒಪ್ಪಂದದ ಮೂಲಕ ಬಾಡಿಗೆಗೆ ಕೊಡುವ ಮೂಲಕ ಮಾಲೀಕರು ಅವಳನ್ನು ಖರೀದಿಸುವ ಅವಕಾಶವಿದೆ.
ಇದನ್ನು ಓದಿ : Special news : ರಾತ್ರಿ ಮಲಗುವ ಮುನ್ನ ಒಂದು ಎಸಳು ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ.?
ಒಪ್ಪಂದದ ಅವಧಿಯ ಕೊನೆಯಲ್ಲಿ, ಮೊದಲು ಬಾಡಿಗೆಗೆ ಪಡೆದವರು ಹೆಚ್ಚಿನ ಹಣ ಪಾವತಿಸಿ ಒಪ್ಪಂದವನ್ನು ನವೀಕರಿಸಬಹುದು. ಇಲ್ಲವೆ ಹಣವನ್ನು ಕೊಟ್ಟು ಒಪ್ಪಂದವನ್ನು ಅಂತ್ಯಗೊಳಿಸಬಹುದಂತೆ.
ಇನ್ನೂ ಮಾರಾಟವಾದ ಮಹಿಳೆ ಯಾವುದೇ ಸಮಯದಲ್ಲಿ ಒಪ್ಪಂದವನ್ನು ರದ್ದುಗೊಳಿಸಬಹುದು. ಅದಕ್ಕೆ ಮಹಿಳೆ ಅಫಿಡವಿಟ್ ನೀಡಬೇಕು. ಅದರ ನಂತರ ಆಕೆಯನ್ನು ಪತಿಗೆ ಹಿಂತಿರುಗಿಸಲಾಗುತ್ತದೆ.
ಮದುವೆಯಾದ ಹೆಣ್ಣುಮಕ್ಕಳು ಮಾತ್ರವಲ್ಲ, ಮದುವೆಯಾಗದ ಹೆಣ್ಣುಮಕ್ಕಳನ್ನೂ ಅವರ ಪೋಷಕರು ಬಾಡಿಗೆಗೆ ನೀಡುತ್ತಾರೆ. ಅಪ್ರಾಪ್ತ ಬಾಲಕಿಯರು ಮತ್ತು ಅವಿವಾಹಿತ ಹುಡುಗಿಯರಿಗೆ ಅಲ್ಲಿ ಹೆಚ್ಚಿನ ಬೇಡಿಕೆಯಿದೆ. ವಿವಾಹಿತರಿಗಿಂತ 8 ರಿಂದ 15 ವರ್ಷದೊಳಗಿನ ಹುಡುಗಿಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ಇದನ್ನು ಓದಿ : ಬಾಯ್‌ಫ್ರೆಂಡ್ ಜೊತೆ ಓಡಿಹೋಗುತ್ತಿದ್ದ ಯುವತಿಗೆ ನೆನಪಾದ ತಂದೆ ; ಮುಂದೆನಾಯ್ತು? ಈ Video ನೋಡಿ.
ಹುಡುಗಿ ಸುಂದರಿಯಾಗಿದ್ದರೆ ಕೆಲವೊಮ್ಮೆ ಅವಳ ಬೆಲೆ 2 ಲಕ್ಷಕ್ಕೆ ಏರುತ್ತದೆ. ಅದು ಕನ್ಯೆಯಾಗಿದ್ದರೂ ಸಹ. ಕನ್ಯೆಯಲ್ಲದ ಹುಡುಗಿಯಾದರೆ 10,000 ರಿಂದ 15,000 ರು. ಇದು ಅವರ ಚರ್ಮದ ಬಣ್ಣ ಎಷ್ಟು ಉತ್ತಮವಾಗಿದೆ, ಅವರು ಎಷ್ಟು ಕಡಿಮೆ ಜನರೊಂದಿಗೆ ಸಮಯ ಕಳೆದಿದ್ದಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.