ಜನಸ್ಪಂದನ ನ್ಯೂಸ್, ಬೆಂಗಳೂರು : ಕರ್ನಾಟಕ ಹೈಕೋರ್ಟ್ ಜಡ್ಜ್, ಕೋರ್ಟ್ ವಿಚಾರಣೆಯ ವೇಳೆ ಬಾಡಿಗೆ ಆಟೋ ಓಡಿಸುವವರ ಸಮಸ್ಯೆಯ ಬಗ್ಗೆ ತಿಳಿಸುತ್ತಿದ್ದ ವೇಳೆ ಶೆಡ್ಡಿಗ್ ಬಾ ಎಂಬ ಪದವನ್ನು ಬಳಸಿದ್ದು, ಈ ಕುರಿತ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ನ್ಯಾಯಾಧೀಶರು ಹೈಕೋರ್ಟ್‌ನಲ್ಲಿ ಕಲಾಸಿಪಾಳ್ಯದ ಸುತ್ತಮುತ್ತ ನಡೆಯುವ ಬಡ್ಡಿ ದಂಧೆಯ ಬಗ್ಗೆ ವಿಚಾರಣೆ ನಡೆಸುತ್ತಿದ್ದರು.
ಇದನ್ನು ಓದಿ : Health : ಆರೋಗ್ಯವಾಗಿರಲು ದಿನಕ್ಕೆ ಎಷ್ಟು ಸ್ಪೂನ್ ತುಪ್ಪ ತಿನ್ನಬೇಕು.? ಜಾಸ್ತಿ ತಿಂದ್ರೆ ಏನಾಗುತ್ತೆ ಗೊತ್ತಾ.?
ಈ ವೇಳೆ ಬಾಡಿಗೆ ಆಟೋ ಓಡಿಸುವವರ ಸಮಸ್ಯೆಯ ಬಗ್ಗೆ ಹೇಳುವ ಸಂದರ್ಭದಲ್ಲಿ ಶೆಡ್ಡಿಗ್ ಬಾ ಎಂಬ ಪದವನ್ನು ಬಳಸಿದ್ದಾರೆ. ಜಡ್ಜ್ ಬಾಯಲ್ಲಿ ಈ ಪದ ಕೇಳಿ ಅಲ್ಲಿದ್ದವರೆಲ್ಲರೂ ನಕ್ಕಿದ್ದಾರೆ.
ಟ್ರಾಫಿಕ್ ಸಮಸ್ಯೆಗಳಿಂದ ಬಾಡಿಗೆ ಆಟೋ ಓಡಿಸುವವರು ಕಡಿಮೆ ಸಂಪಾದನೆ ಮಾಡಿದ್ರೂ ಸಂಜೆಯ ಹೊತ್ತಿಗೆ ಆಟೋ ಬಾಡಿಗೆ ಇಂತಿಷ್ಟು ಅಂತ ಕೊಡಲೇ ಬೇಕು. ಇದ್ರ ಬಗ್ಗೆ ಮಾತನಾಡುತ್ತಾ ಬೆಳಗ್ಗೆ ಬಂದು ಆಟೋ ರಿಕ್ಷಾಗಳನ್ನು ತೆಗೆದುಕೊಂಡು ಹೋಗ್ಬೇಕು, ಸಾಯಂಕಾಲಕ್ಕೆ 250 ಬಾಡಿಗೆ ತಂದು ಕೊಡ್ಬೇಕು.
ನೀನು ಎಷ್ಟಾದ್ರೂ ಸಂಪಾದನೆ ಮಾಡು, ಎಷ್ಟಾದ್ರೂ ಫೈನ್ ಕಟ್ಟು ನನಗೆ ಸಾಯಂಕಾಲಕ್ಕೆ 250 ಸಿಗ್ಬೇಕು ಇಲ್ಲಾಂದ್ರೆ ಶೆಡ್ಡಿಗ್ ಬಾ ಎಂದು ಬಾಡಿಗೆ ಆಟೋ ಚಾಲಕರು ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ನ್ಯಾಯಾಧೀಶರು ಹಾಸ್ಯ ರೂಪದ ವಿವರಣೆಯನ್ನು ನೀಡಿದ್ದಾರೆ.
ಇದನ್ನು ಓದಿ : Belagavi : ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಮೂವರು ವಿದ್ಯಾರ್ಥಿಗಳಿಗೆ ಚಾಕು ಇರಿತ.!
ಈ ಕುರಿತ ವಿಡಿಯೋವೊಂದನ್ನು Yasir Arfath Shorts ಯೂಟ್ಯೂಬ್ ಚಾನೆಲ್ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಶೆಡ್ಡಿಗೆ ಬಾ reached Karnataka High Court 😅🤣 pic.twitter.com/80zg0WTLfv
— 👑Che_ಕೃಷ್ಣ🇮🇳💛❤️ (@ChekrishnaCk) September 18, 2024