ಜನಸ್ಪಂದನ ನ್ಯೂಸ್, ಡೆಸ್ಕ್ : ಪ್ರತಿನಿತ್ಯವೂ ಎಲ್ಲರೂ ಬಳಸುವ ಆಹಾರ ಪದಾರ್ಥವೆಂದರೆ ಅದು ಹಾಲು. ಮಕ್ಕಳ ಆರೋಗ್ಯಕ್ಕೂ ಹಾಲು ಬಹಳ ಮುಖ್ಯವಾಗಿದೆ.
ಹಾಲಿನಲ್ಲಿ ಸಿಗುವ ಕ್ಯಾಲ್ಸಿಯಂ ದೇಹಕ್ಕೆ ಬಹಳ ಮುಖ್ಯ. ಅಷ್ಟೇ ಅಲ್ಲ ದೇಹಕ್ಕೆ ಹಾಲಿನಿಂದ ಬಹಳಷ್ಟು ಪ್ರಯೋಜನವಿದೆ. ಈಗ ಮನೆಯಲ್ಲಿ ದನಗಳಿಂದ ನೇರವಾಗಿ ನಾವು ಹಾಲು ಪಡೆಯುವುದು ಬಹಳ ಕಡಿಮೆ. ಹಳ್ಳಿಗಳಲ್ಲಿಯೂ ಈಗ ಪ್ಯಾಕೆಟ್ ಮಾಡಲಾದ ಹಾಲನ್ನೇ ಹೆಚ್ಚಾಗಿ ಉಪಯೋಗಿಸುತ್ತಿದ್ದಾರೆ.
ಇದನ್ನು ಓದಿ : Special news : ರಾತ್ರಿ ಮಲಗುವ ಮುನ್ನ ಒಂದು ಎಸಳು ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ.?
ಏವಿಯನ್ ಇನ್ಫ್ಲುಯೆನ್ಸ ವೈರಸ್, ಮೈಕೋಬ್ಯಾಕ್ಟೀರಿಯಂ, ಇ. ಕೋಲಿ, ಲಿಸ್ಟೇರಿಯಾ ಮತ್ತು ಕ್ಯಾಂಪಿಲೋಬ್ಯಾಕ್ಟರ್ ಅನ್ನು ಕೊಲ್ಲಲು ಹಾಲನ್ನು ಸಾಮಾನ್ಯವಾಗಿ 71 ಡಿಗ್ರಿ ಸೆಲ್ಸಿಯಸ್ನಲ್ಲಿ ಬಿಸಿ ಮಾಡಲಾಗುತ್ತದೆ. ಇವೆಲ್ಲವೂ ವಿವಿಧ ಕಾಯಿಲೆಗಳು ಮತ್ತು ರೋಗಗಳಿಗೆ ಕಾರಣವಾಗಬಹುದಾದ ಬ್ಯಾಕ್ಟೀರಿಯಾಗಳಾಗಿವೆ ಎಂಬುದು ತಜ್ಞರ ಅಭಿಪ್ರಾಯ.
ಪಾಶ್ಚರೀಕರಣವು ಲಿಸ್ಟೀರಿಯೊಸಿಸ್, ಟೈಫಾಯಿಡ್ ಜ್ವರ, ಕ್ಷಯ, ಡಿಫ್ತೀರಿಯಾ ಮತ್ತು ಬ್ರೂಸೆಲೋಸಿಸ್ ಹರಡುವಿಕೆ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಇದು ಆ ಹಾಲಿನ ಯಾವುದೇ ರುಚಿಯ ಮೇಲೆ ಪರಿಣಾಮ ಬೀರುವುದಿಲ್ಲ ಹೀಗಾಗಿ ಹಾಲನ್ನು ಹೆಚ್ಚು ಕುದಿಸಿಡುವುದು ಸರಿಯಲ್ಲ.
ಇದನ್ನು ಓದಿ : Health : ತಾಮ್ರದ ಬಾಟಲಿಯಲ್ಲಿ ನೀರು ಕುಡಿಯುವವರೇ ಈ ಸುದ್ದಿಯನ್ನೊಮ್ಮೆ ಓದಿ.
ಮನೆಯಲ್ಲಿ ಹಾಲನ್ನು ಬಳಸುವಾಗ ಈ ಹಾಲನ್ನು ಸರಿಯಾದ ತಾಪಮಾನದಲ್ಲಿ ಕುದಿಸದೇ ಇದ್ದರೆ ಹಾನಿಕಾರಕ ಬ್ಯಾಕ್ಟೀರಿಯಾ ಹಾಗೂ ವೈರಸ್‌ಗಳು ಬೆಳವಣಿಗೆಯಾಗುವ ಸಾಧ್ಯತೆ ಇರುತ್ತದೆ.
ಹಾಲನ್ನು ಕುದಿಸುವುದು ಅದರಲ್ಲಿರುವ ಮಧ್ಯಮ ಹಾಗೂ ಸಣ್ಣ ಫ್ಯಾಟಿ ಆಸಿಡ್‌ಗಳ ಹಾಜರಾತಿಯನ್ನು ಹೆಚ್ಚಿಸುತ್ತದೆ. ಈ ಫ್ಯಾಟಿ ಆಮ್ಲ ಅಥವಾ ಆಸಿಡ್ ಹಾಲಿನಿಂದ ಅಜೀರ್ಣ ಹಾಗೂ ಅಲರ್ಜಿ ಸಮಸ್ಯೆಯುಳ್ಳವರಿಗೆ ಉಪಯುಕ್ತವಾಗಿದೆ.
ಇನ್ನೂ ಹಾಲನ್ನು 100 ಅಥವಾ ಅದಕ್ಕಿಂತ ಹೆಚ್ಚಿನ ಡಿಗ್ರಿಯಲ್ಲಿ ಪ್ಯಾಶ್ಚರೈಸ್ ಮಾಡುವುದರಿಂದ ಹಾಲಿನಲ್ಲಿರುವ ಕೆಲವೊಂದು ವಿಟಮಿನ್ ಹಾಗೂ ಮಿನರಲ್‌ಗಳು ನಷ್ಟವಾಗುತ್ತವೆ. ಅಲ್ಲದೇ ಬಿ2, ಬಿ3, ಬಿ6 ಹಾಗೂ ಫೋಲಿಕ್ ಆಮ್ಲ ನಷ್ಟಗೊಳ್ಳಬಹುದು.
ಇದನ್ನು ಓದಿ : ಯುವತಿಯ ತಲೆ ಮೇಲೆ CCTV ಫಿಕ್ಸ್ ಮಾಡಿದ ಪೋಷಕರು ; ವಿಡಿಯೋ ವೈರಲ್.!
ತಜ್ಞರು ಸಹ ಸಾಕಷ್ಟು ಸಮಯದವರೆಗೆ ಹಾಲನ್ನು ಕುದಿಸುವುದು ವಿಟಮಿನ್ ಡಿ ಅಂಶವನ್ನು ಕಡಿಮೆ ಮಾಡುತ್ತದೆ. ಇದು ದೇಹದಲ್ಲಿರುವ ಕ್ಯಾಲ್ಸಿಯಂ ಹೀರುವಿಕೆಗೆ ಋಣಾತ್ಮಕ ಪರಿಣಾಮ ಬೀರುತ್ತದೆ. ನ್ಯೂಟ್ರಿಯಂಟ್ ನಷ್ಟವನ್ನು ಕಡಿಮೆ ಮಾಡಲು, ಹಾಲನ್ನು ನಾಲ್ಕರಿಂದ ಐದು ನಿಮಿಷ ಕುದಿಸಿದರೆ ಸಾಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಹಾಲನ್ನು ಯಾವಾಗಲೂ ದೊಡ್ಡದಾದ ಪಾತ್ರೆಯಲ್ಲಿ ಕುದಿಸಲು ಇಡಿ. ತಳ ಗಟ್ಟಿಯಾಗಿರುವ ಪಾತ್ರೆಯನ್ನು ಆಯ್ಕೆಮಾಡಿಕೊಳ್ಳಿ ಇದರಿಂದ ಹಾಲು ಉಕ್ಕದಂತೆ ತಡೆಯಬಹುದು. ತಳ ಗಟ್ಟಿ ಇದ್ದರೆ ಹಾಲು ಪಾತ್ರೆ ತಳ ಹಿಡಿದುಕೊಳ್ಳುವುದಿಲ್ಲ.
ಇದನ್ನು ಓದಿ : Health : ಬೆಳ್ಳಿಯ ಉಂಗುರ ಧರಿಸುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು.!
ಹಾಲನ್ನು ಕುದಿಸುವಾಗ ಪಾತ್ರೆಯ ಮೇಲ್ಭಾಗದಲ್ಲಿ ಅಡ್ಡಲಾಗಿ ಮರದ ಸೌಟನ್ನು ಇರಿಸಿ. ಇದರಿಂದ ಹಾಲು ಉಕ್ಕುವಾಗ ಅದು ಕೆಳಕ್ಕೆ ಹರಿಯದಂತೆ ಸೌಟು ತಡೆಯುತ್ತದೆ. ಇನ್ನು ಚಿಟಿಕೆ ಉಪ್ಪು ಸೇರಿಸುವುದು ಕೂಡ ಹಾಲು ಉಕ್ಕದಂತೆ ತಡೆಯುತ್ತದೆ.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.