Monday, October 7, 2024
spot_img
spot_img
spot_img
spot_img
spot_img
spot_img
spot_img

ತಂದೆ ಇಲ್ಲದ ಮಕ್ಕಳಿಗೆ ಸಿಗುತ್ತೆ 24 ಸಾವಿರ ರೂ. ಸ್ಕಾಲರ್‌ಶಿಪ್; ಮಾನದಂಡಗಳೇನು ಗೊತ್ತಾ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ತಂದೆ ಇಲ್ಲದ ಎಲ್ಲಾ ಮಕ್ಕಳಿಗೂ ಕೇಂದ್ರ ಪುರಸ್ಕೃತ ಪ್ರಾಯೋಜಕತ್ವ ಯೋಜನೆ ಸ್ಕಾಲರ್‌ಶಿಪ್ ಅನ್ವಯವಾಗುವುದಿಲ್ಲ. ನಿರ್ದಿಷ್ಟ ಮಾನದಂಡಗಳ ಮೂಲಕ ಮಾತ್ರ ಈ ಯೋಜನೆಯ ಫಲಾನುಭವಿಯಾಗಲು ಸಾಧ್ಯ.

ಈ ಯೋಜನೆಯ ಮೂಲಕ ತಂದೆಯಿಲ್ಲದ ಮಕ್ಕಳ ಬ್ಯಾಂಕ್ ಖಾತೆಗೆ‌ ಪ್ರತಿ ವರ್ಷ 24,000 ರೂಪಾಯಿಗಳ ಸ್ಕಾಲರ್‌ಶಿಪ್ ಸೌಲಭ್ಯವಿರುತ್ತದೆ. ಆದರೆ ಈ ವಿಷಯದ ಬಗ್ಗೆ ಅನೇಕ ಜನರಿಗೆ ತಿಳಿದೇ ಇಲ್ಲ.

ಇದನ್ನು ಓದಿ : Health : ಆರೋಗ್ಯವಾಗಿರಲು ದಿನಕ್ಕೆ ಎಷ್ಟು ಸ್ಪೂನ್ ತುಪ್ಪ ತಿನ್ನಬೇಕು.? ಜಾಸ್ತಿ ತಿಂದ್ರೆ ಏನಾಗುತ್ತೆ ಗೊತ್ತಾ.?

ತಂದೆ ಇಲ್ಲದಂತಹ ಮಕ್ಕಳಿದ್ದಲ್ಲಿ ಅವರ ಪೋಷಕರಿಗೆ ಈ ತಕ್ಷಣ ಅರ್ಜಿಯನ್ನು ಸಲ್ಲಿಸಲು ತಿಳಿಸಿ ಎಂದು ಅಧಿಕೃತ ಸಹಿ ಇಲ್ಲದ ಅರ್ಜಿಯು ಸಾಮಾಜಿಕ ಜಾಲತಾಣದ ಮುಖಾಂತರ ಹರಿದಾಡುತ್ತಿದ್ದು, ಈ ಸುದ್ದಿಯು ಸುಳ್ಳುಸುದ್ದಿಯಾಗಿದೆ.

ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟದ ಅಧ್ಯಕ್ಷರು, ಈ ಯೋಜನೆಯಡಿಯಲ್ಲಿ ನಿರ್ದಿಷ್ಟ ಮಾನದಂಡಗಳು ಅನ್ವಯವಾಗುವ ಮಕ್ಕಳಿಗೆ ಮಾತ್ರವೇ ಸ್ಕಾಲರ್‌ಶಿಪ್ ಸಿಗಲಿದೆ ಎಂದು ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ.

ಈ ಯೋಜನೆಯಲ್ಲಿ ಮಕ್ಕಳ ಪಾಲನಾ ಸಂಸ್ಥೆಗಳಿಂದ (ಬಾಲಕರ/ ಬಾಲಕಿಯರ ಬಾಲಮಂದಿರ ಮತ್ತು ವೀಕ್ಷಣಾಲಯ) ಇಬ್ಬರೂ ಪೋಷಕರನ್ನು ಕಳೆದುಕೊಂಡ ಮಕ್ಕಳು ಅನಾಥರಾಗಿದ್ದರೆ ಹಾಗೂ ವಿಸ್ತ್ರತ ಕುಟುಂಬದಲ್ಲಿ ಜೀವಿಸುತ್ತಿದ್ದರೆ, ಹೊರ ಹೋಗಿ ವಿದ್ಯಾಭ್ಯಾಸ ಮುಂದುವರೆಸುತ್ತಿರುವ ಮಕ್ಕಳು, ಕಾರಾಗೃಹದಲ್ಲಿರುವ ಪೋಷಕರ ಮಕ್ಕಳು, ಪಿಎಂ ಕೇರ್ ಫಾರ್ ಚಿಲ್ಡ್ರನ್ ಯೋಜನೆಯಡಿ ಬರುವ ಮಕ್ಕಳು, ಕಾನೂನಿನೊಂದಿಗೆ ಸಂಘರ್ಷಕ್ಕೊಳಪಟ್ಟ ಮಕ್ಕಳು, ಪೋಷಕರು ಗಂಭೀರ ಸ್ವರೂಪದ ಕಾಯಿಲೆಯ ಸಂತ್ರಸ್ಥರ ಮಕ್ಕಳು, ಪೋಕ್ಸೋ ಸಂತ್ರಸ್ಥ ಮಕ್ಕಳು, ಬಾಲಸ್ವರಾಜ್ ಪೋರ್ಟಲ್‌ನಲ್ಲಿ ನೋಂದಾಯಿಸಿದ ಮಕ್ಕಳು.

ಇದನ್ನು ಓದಿ : Video : ಯೂನಿಫಾರ್ಮ್ ಬಿಚ್ಚಿಸ್ತೀನಿ ಎಂದು BJP ಮುಖಂಡನಿಂದ ಬೆದರಿಕೆ; ಸಮವಸ್ತ್ರವನ್ನೇ ಹರಿದು ಹಾಕಿದ ASI.!

ಬಾಲ ಕಾರ್ಮಿಕರು, ಬಾಲ್ಯ ವಿವಾಹ ಸಂತ್ರಸ್ತ ಮಕ್ಕಳು, ಕಳ್ಳ ಸಾಗಾಣೆಗೊಳಗಾದ ಮಕ್ಕಳು, ಯಾವುದೇ ನೈಸರ್ಗಿಕ ವಿಕೋಪಕ್ಕೆ ಒಳಗಾದವರು, ಹೆಚ್‌ಐವಿ/ ಏಡ್ಸ್ ಬಾಧಿತ (ಪೀಡಿತ) ಮಕ್ಕಳು, ದೈಹಿಕ ಅಂಗವಿಕಲತೆಯುಳ್ಳ ಮಕ್ಕಳು, ಬಾಲ ಬಿಕ್ಷುಕರು ಅಥವಾ ಬೀದಿಬದಿ ಮಕ್ಕಳು, ಚಿತ್ರಹಿಂಸೆ ಅಥವಾ ನಿಂದನೆ ಅಥವಾ ಬೆಂಬಲ ಮತ್ತು ಪುನರ್ವಸತಿ ಅಗತ್ಯವಿರುವ ಶೋಷಿತ ಮಕ್ಕಳು, ಅನಾಥ, ಕಾಣೆಯಾದ ಅಥವಾ ಓಡಿಹೋದ ಮಕ್ಕಳು, ನಿರ್ಗತಿಕರಾಗುವುದು. ಸಂಕಷ್ಟಕ್ಕೆ ಈಡಾಗುವ ಸಂಭವವಿರುವ ಕುಟುಂಬದ ತಾಯಿ ಕುಟುಂಬದಿಂದ ಪರಿತ್ಯಜಿಸಲ್ಪಟ್ಟಿದ್ದರೆ ಅಥವಾ ವಿಧವೆ. ವಿಚ್ಛೇದಿತೆ ಮಗು ಜೈವಿಕ ಕುಟುಂಬದಲ್ಲೇ (ವಿಸ್ತ್ರತ ಕುಟುಂಬ ಹಾಗೂ ರಕ್ತ ಸಂಬಂಧ ಒಳಗೊಂಡಂತೆ) ಮುಂದುವರೆಯುವ ಮಕ್ಕಳಿಗೆ ಈ ಯೋಜನೆಯ ಪ್ರಯೋಜನ ಲಭ್ಯ.

ವಾರ್ಷಿಕ 24 ಸಾವಿರ ಸ್ಕಾಲರ್‌ ಶಿಪ್ ಸಿಗುತ್ತಿದೆ ಎಂದೂ ವೈರಲ್ ಸಂದೇಶದಲ್ಲಿದೆ. ಆದರೆ, ಅದು ತಪ್ಪು ಮಾಹಿತಿ, ಅಧಿಕಾರಿಗಳು ಹೇಳಿರುವಂತೆ ಮಾಸಿಕ 4 ಸಾವಿರ ರೂಪಾಯಿಯಂತೆ ವಾರ್ಷಿಕ 48 ಸಾವಿರ ರೂಪಾಯಿ ಧನ ಸಹಾಯ ಸಿಗುತ್ತದೆ. 18 ವರ್ಷದೊಳಗಿನ ಗಂಡು ಮತ್ತು ಹೆಣ್ಣು ಮಕ್ಕಳು ಈ ಯೋಜನೆಗೆ ಅರ್ಹರು. ಅರ್ಹರು ಅವರಾಗಿಯೇ ಅರ್ಜಿ ಸಲ್ಲಿಸಬಹುದು ಅಥವಾ ಸಿಬ್ಬಂದಿಯ ಮೂಲಕ ಇಲಾಖೆಯೇ ಅರ್ಹರನ್ನು ಪತ್ತೆ ಮಾಡುತ್ತದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img