ಕರ್ನಾಟಕ ಅರಣ್ಯ ಇಲಾಖೆಯಲ್ಲಿ 750 ಅರಣ್ಯ ವೀಕ್ಷಕರ ನೇಮಕಾತಿ; SSLC ಪಾಸ್ ಅಭ್ಯರ್ಥಿಗಳಿಗೆ ಭರ್ಜರಿ ಅವಕಾಶ!

ಕರ್ನಾಟಕ ಅರಣ್ಯ ಇಲಾಖೆಯಲ್ಲಿ 750 ಅರಣ್ಯ ವೀಕ್ಷಕರ ನೇಮಕಾತಿ

ಉದ್ಯೋಗ ಮಾಹಿತಿ : ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಕ / ಯುವತಿಯರಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಸಿಹಿಸುದ್ದಿ ಸಿಕ್ಕಿದೆ. ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 750 ಅರಣ್ಯ ವೀಕ್ಷಕರ ನೇಮಕಾತಿ (Forest Watcher) ಗೆ ಸರ್ಕಾರ ಅಧಿಕೃತ ಅನುಮೋದನೆ ನೀಡಿದ್ದು, ಈ ಕುರಿತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಿಂದ ಆದೇಶ ಹೊರಡಿಸಲಾಗಿದೆ.

ಈ ಹುದ್ದೆಗಳ ನೇಮಕಾತಿಯ ಕುರಿತು ಶೀಘ್ರದಲ್ಲೇ ಅಧಿಕೃತ ಅಧಿಸೂಚನೆ ಪ್ರಕಟವಾಗಲಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಪಡೆಯಲಿದ್ದಾರೆ.

ಈ ನೇಮಕಾತಿ ಪ್ರಕ್ರಿಯೆಯು ಕರ್ನಾಟಕ ಅರಣ್ಯ ಇಲಾಖೆ ಸೇವೆಗಳ ನೇಮಕಾತಿ ನಿಯಮಗಳು-2019 ಹಾಗೂ ನಂತರದ ತಿದ್ದುಪಡಿ ನಿಯಮಾವಳಿಗಳ ಅನುಸಾರ ನಡೆಯಲಿದ್ದು, ರಾಜ್ಯದ ವಿವಿಧ ಅರಣ್ಯ ವೃತ್ತಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶ ಹೊಂದಿದೆ. ಅರಣ್ಯ ಸಂರಕ್ಷಣೆ ಹಾಗೂ ಪರಿಸರ ಕಾಪಾಡುವ ಕಾರ್ಯದಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.

ಅರಣ್ಯ ವೀಕ್ಷಕರ ನೇಮಕಾತಿ ಮಾಹಿತಿ :

ಸರ್ಕಾರದ ಆದೇಶದ ಪ್ರಕಾರ, ಒಟ್ಟು 750 ಹುದ್ದೆಗಳಲ್ಲಿ 700 ಸಾಮಾನ್ಯ ಅರಣ್ಯ ವೀಕ್ಷಕರ ಹುದ್ದೆಗಳು ಹಾಗೂ 50 ಹುದ್ದೆಗಳು ಸ್ಥಳೀಯ ಅರಣ್ಯ ಬುಡಕಟ್ಟು (Local Forest Dwelling Tribes – LFDT) ಅಭ್ಯರ್ಥಿಗಳಿಗಾಗಿ ಮೀಸಲಿಡಲಾಗಿದೆ. ಈ ಮೀಸಲು ಹುದ್ದೆಗಳ ಆಯ್ಕೆ ವಿಧಾನ ಹಾಗೂ ಅರ್ಹತೆಯನ್ನು ಸರ್ಕಾರದ ನಿಯಮಾನುಸಾರ ಪ್ರತ್ಯೇಕವಾಗಿ ಪ್ರಕಟಿಸಲಾಗುತ್ತದೆ.

ಇದನ್ನು ಓದಿ : ಟಿವಿ ನೋಡಿದ್ರೆ ಮಾತ್ರ ಹಾಲು ಕೊಡುತ್ತೆ ಈ ಎಮ್ಮೆ; ವೈರಲ್ ವಿಡಿಯೋ ನೋಡಿ ನೆಟ್ಟಿಗರು ಶಾಕ್.!

ಜಿಲ್ಲಾವಾರು ಹುದ್ದೆಗಳ ಹಂಚಿಕೆ :

ರಾಜ್ಯದ ವಿವಿಧ ಅರಣ್ಯ ವೃತ್ತಗಳಿಗೆ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ:

* ಬೆಂಗಳೂರು ವೃತ್ತ – 70
* ಬೆಳಗಾವಿ ವೃತ್ತ – 42
* ಬಳ್ಳಾರಿ ವೃತ್ತ – 63 (Non-HK 17, HK 46)
* ಚಾಮರಾಜನಗರ ವೃತ್ತ – 169
* ಚಿಕ್ಕಮಗಳೂರು ವೃತ್ತ – 56
* ಧಾರವಾಡ ವೃತ್ತ – 12
* ಹಾಸನ ವೃತ್ತ – 30
* ಕನರಾ ವೃತ್ತ – 60
* ಕೊಡಗು ವೃತ್ತ – 32
* ಕಲಬುರಗಿ ವೃತ್ತ – 4 (HK)
* ಮಂಗಳೂರು ವೃತ್ತ – 54
* ಮೈಸೂರು ವೃತ್ತ – 120
* ಶಿವಮೊಗ್ಗ ವೃತ್ತ – 38

ಒಟ್ಟು ಹುದ್ದೆಗಳು: 750 (700 ಸಾಮಾನ್ಯ + 50 LFDT ಮೀಸಲು)

ಶೈಕ್ಷಣಿಕ ಅರ್ಹತೆ :

  • ಅಭ್ಯರ್ಥಿಗಳು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ SSLC ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ
  • CBSE, ICSE ಅಥವಾ NIOS ವತಿಯಿಂದ ನಡೆಸುವ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವವರೂ ಅರ್ಜಿ ಸಲ್ಲಿಸಲು ಅರ್ಹರು.

Note : ಆದರೆ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದ ವೇಳೆಗೆ ಫಲಿತಾಂಶ ಪ್ರಕಟವಾಗಿರಬೇಕು. ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.

ಅರಣ್ಯ ವೀಕ್ಷಕರ ನೇಮಕಾತಿಯ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

ಅಭ್ಯರ್ಥಿಗಳ ಆಯ್ಕೆ ಮೂರು ಹಂತಗಳಲ್ಲಿ ನಡೆಯಲಿದೆ.

SSLC ಅಂಕಗಳ ಆಧಾರದ ಮೇಲೆ ಶಾರ್ಟ್‌ಲಿಸ್ಟ್ :

  • ಮೊದಲ ಹಂತದಲ್ಲಿ SSLC ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ 1:20 ಅನುಪಾತದಲ್ಲಿ ಅಭ್ಯರ್ಥಿಗಳನ್ನು ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ.

ಈ ಸುದ್ದಿ ಓದಿ : RRB-2026; ಭಾರತೀಯ ರೈಲ್ವೆಯಲ್ಲಿ ವಿಭಾಗ ನಿಯಂತ್ರಕ ಹುದ್ದೆಗಳಿಗೆ ನೇಮಕಾತಿ, ಪದವೀಧರರಿಗೆ ಅವಕಾಶ.

ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆ :

  • ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳಿಗೆ Physical Standard Test (PST), Physical Endurance Test (PET) ಹಾಗೂ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ.

ಅಂತಿಮ ಮೆರಿಟ್ ಪಟ್ಟಿ :

  • ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳ SSLC ಅಂಕಗಳನ್ನು ಆಧರಿಸಿ ಅಂತಿಮ ಮೆರಿಟ್ ಪಟ್ಟಿ ಸಿದ್ಧಪಡಿಸಿ ನೇಮಕಾತಿ ಆದೇಶ ನೀಡಲಾಗುತ್ತದೆ.
  • ಕೊನೆಯ ಹಂತದಲ್ಲಿ ಮೂಲ ದಾಖಲಾತಿಗಳ ಪರಿಶೀಲನೆ ನಡೆಯಲಿದೆ.

ದೈಹಿಕ ಮಾನದಂಡಗಳು :

ಪುರುಷ ಅಭ್ಯರ್ಥಿಗಳು :

  • ಕನಿಷ್ಠ ಎತ್ತರ – 163 ಸೆಂ.ಮೀ.
  • ಎದೆ ಸುತ್ತಳತೆ – 79 ಸೆಂ.ಮೀ.
  • ಎದೆ ವಿಸ್ತರಣೆ – ಕನಿಷ್ಠ 5 ಸೆಂ.ಮೀ.

ಮಹಿಳಾ ಅಭ್ಯರ್ಥಿಗಳು :

  • ಕನಿಷ್ಠ ಎತ್ತರ – 150 ಸೆಂ.ಮೀ.
  • ಕನಿಷ್ಠ ತೂಕ – 40 ಕೆ.ಜಿ.

ಇದನ್ನು ಓದಿ : ಪದೇ ಪದೇ ಮೂತ್ರ ವಿಸರ್ಜನೆ ಮಾಡುತ್ತಿದ್ದೀರಾ? 50 ವರ್ಷ ಮೇಲ್ಪಟ್ಟ ಪುರುಷರು ಈ ಲಕ್ಷಣವನ್ನು ನಿರ್ಲಕ್ಷಿಸಬೇಡಿ!

ಬುಡಕಟ್ಟು ಪುರುಷರಿಗೆ :

  • ಎತ್ತರ – 152 ಸೆಂ.ಮೀ.
  • ಎದೆ ಸುತ್ತಳತೆ – 74 ಸೆಂ.ಮೀ.
  • ವಿಸ್ತರಣೆ – 5 ಸೆಂ.ಮೀ.

ಬುಡಕಟ್ಟು ಮಹಿಳೆಯರಿಗೆ :

  • ಎತ್ತರ – 145 ಸೆಂ.ಮೀ.
  • ತೂಕ – 38 ಕೆ.ಜಿ.

ವೈದ್ಯಕೀಯ ಮಾನದಂಡಗಳು :

ಅಭ್ಯರ್ಥಿಗಳಿಗೆ ಉತ್ತಮ ದೃಷ್ಟಿ ಸಾಮರ್ಥ್ಯ (6/6 ಅಥವಾ 6/9), ಶ್ರವಣ ಸಾಮರ್ಥ್ಯ ಸಮರ್ಪಕವಾಗಿರಬೇಕು. ತಾಗು ಮಂಡಿ, ಬಾಗಿದ ಕಾಲುಗಳು, ಚಪ್ಪಟೆ ಪಾದ, ನರ ಊತ, ಮಾತನಾಡಲು ಅಥವಾ ಕೇಳಲು ತೊಂದರೆ ಸೇರಿದಂತೆ ನೇಮಕಾತಿ ನಿಯಮಗಳಲ್ಲಿ ಉಲ್ಲೇಖಿಸಿರುವ ದೈಹಿಕ ನ್ಯೂನತೆಗಳು ಇರಬಾರದು.

ಈ ಸುದ್ದಿಯನ್ನು ಓದಿ : ರೈಲು ನಿಲ್ದಾಣದ ಹಳಿ ಮೇಲೆಯೇ ಮಹಿಳೆಗೆ ಕ್ರೂರ ಹಲ್ಲೆ; ನಿಂತು ನೋಡಿದ ಪಬ್ಲಿಕ್‌, ವಿಡಿಯೋ ವೈರಲ್.!

ಅರ್ಜಿ ಸಲ್ಲಿಕೆ ದಿನಾಂಕಗಳು :

ಅರಣ್ಯ ವೀಕ್ಷಕರ ನೇಮಕಾತಿಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳನ್ನು ಈಗಾಗಲೇ ಪ್ರಕಟಿಸಲಾಗಿದೆ.

  • ಅಧಿಸೂಚನೆ ಪ್ರಕಟಣೆ: 20 ಜುಲೈ 2026.
  • ಅರ್ಜಿ ಸಲ್ಲಿಕೆ ಆರಂಭ: 21 ಜುಲೈ 2026.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಆಗಸ್ಟ್ 2026.

Note : ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳಿಗೆ ಇಲಾಖೆ ಸಲಹೆ :

ಅಧಿಕೃತ ಅಧಿಸೂಚನೆ ಪ್ರಕಟವಾದ ಬಳಿಕ ಅರಣ್ಯ ವೀಕ್ಷಕರ ನೇಮಕಾತಿಗೆ ಬೇಕಾದ ವಯೋಮಿತಿ, ಮೀಸಲಾತಿ, ಅರ್ಜಿ ಶುಲ್ಕ, ಪರೀಕ್ಷಾ ವಿಧಾನ ಹಾಗೂ ಇತರೆ ಎಲ್ಲಾ ನಿಯಮಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ, ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸುವಂತೆ ಅರಣ್ಯ ಇಲಾಖೆ ಸೂಚಿಸಿದೆ.

ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಮುಂಚಿತವಾಗಿ ಸಿದ್ಧಪಡಿಸಿಕೊಂಡರೆ ಅರ್ಜಿ ಸಲ್ಲಿಕೆ ವೇಳೆ ಯಾವುದೇ ತೊಂದರೆ ಉಂಟಾಗುವುದಿಲ್ಲ.

ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ


Disclaimer: ಈ ಅರಣ್ಯ ವೀಕ್ಷಕರ ನೇಮಕಾತಿ ಲೇಖನವು ಕರ್ನಾಟಕ ಅರಣ್ಯ ಇಲಾಖೆಯ ನೇಮಕಾತಿಗೆ ಸಂಬಂಧಿಸಿದ ಅಧಿಕೃತ ಪ್ರಕಟಣೆಯಲ್ಲಿ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಶೈಕ್ಷಣಿಕ ಅರ್ಹತೆ, ವಯೋಮಿತಿ, ಮೀಸಲಾತಿ, ದೈಹಿಕ ಮಾನದಂಡಗಳು, ಆಯ್ಕೆ ಪ್ರಕ್ರಿಯೆ ಹಾಗೂ ಇತರೆ ನಿಯಮಗಳನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿ. ಯಾವುದೇ ಬದಲಾವಣೆ ಅಥವಾ ತಿದ್ದುಪಡಿಗಳಿಗೆ ಇಲಾಖೆಯ ಅಧಿಕೃತ ಪ್ರಕಟಣೆಯೇ ಅಂತಿಮವಾಗಿರುತ್ತದೆ. 

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top