ಡೆಸ್ಕ್ : ಇರುವೆ ಕಚ್ಚಿರಬೇಕು ಎಂದು ಭಾವಿಸಿ ಹಾವಿನ ಕಡಿತ (Snake bite) ದಿಂದ ವಿದ್ಯಾರ್ಥಿಯೋರ್ವಳು ಸಾವಿಗೀಡಾಗಿರುವ ಘಟನೆ ಕೇರಳದಲ್ಲಿ ನಡೆದಿರುವ ಬಗ್ಗೆ ತಿಳಿದು ಬಂದಿದೆ. ವಿದ್ಯಾರ್ಥಿನಿಯ ಈ ದುರಂತ ಸಾವಿನಿಂದ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಹೀಗೆ ಅಕಾಲಿಕ ಮರಣಕ್ಕೆ ತುತ್ತಾದ ವಿದ್ಯಾರ್ಥಿನಿಯನ್ನು 13 ವರ್ಷ ನಿಯಾ ಲೆನಿನ್ ಎಂದು ಗುರುತಿಸಲಾಗಿದೆ. ಮೃತ ವಿದ್ಯಾರ್ಥಿನಿ ಖಾಸಗಿ ಶಾಲೆಯಲ್ಲಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಓದುತ್ತಿದಳೆಂದು ತಿಳಿದು ಬಂದಿದೆ.
ವಿಷಕಾರಿ ಹಾವಿನ ಕಡಿತದಿಂದ ಸಾವಿಗೀಡಾದ ಹಿನ್ನಲೆಯಲ್ಲಿ ಇಡೀ ಗ್ರಾಮ, ಶಾಲಾ ಮತ್ತು ಸಮುದಾಯದಲ್ಲಿ ಆಘಾತ ಉಂಟಾಗಿ ಶೋಕ ಸಾಗರದಲ್ಲಿ ಮುಳುಗಿದೆ. ಮಥರ ವಿದ್ಯಾರ್ಥಿನಿಯ ಪಾಲಕರು ಸ್ಥಳೀಯ ದೇವಸ್ಥಾನದ ಅರ್ಚಕ ವೃತ್ತಿಯಲ್ಲಿ ಮಾಡಿ ಜೀವನ ಸಾಗಿಸುತ್ತಿದ್ದರು.
ಹಿನ್ನಲೆ :
ಈ ಮೃತ ವಿದ್ಯಾರ್ಥಿನಿ ಅರ್ಚಕರ ಕಿರಿಯ ಮಗಳಾಗಿದ್ದು, ನೃತ್ಯ ಅಂದರೆ ಈತಳಿಗೆ ತುಂಬಾ ಖುಷಿ. ಕಳೆದ ಮೇ 7ರ ಸಂಜೆ 7.30ರ ಸುಮಾರಿಗೆ ನಿವಾಸಿಗಳ ಸಂಘದ ವಾರ್ಷಿಕ ದಿನಾಚರಣೆಗಾಗಿ ಸ್ನೇಹಿತರೊಂದಿಗೆ ನೃತ್ಯ ಅಭ್ಯಾಸ ಮುಗಿಸಿ ಮನೆಗೆ ಮರಳುತ್ತಿದ್ದಳು.
ಆಗ ಅವಳ ಕಾಲಿಗೆ ಏನೋ ಕಚ್ಚಿದಂತೆ ಭಾಸವಾಗಿ ತೀಕ್ಷ್ಣವಾದ ನೋವು ಕಾಣಿಸಿಕೊಂಡಿತ್ತು. ಕಚ್ಚಿದ ಜಾಗವನ್ನು ಸರಿಯಾಗಿ ಪರೀಕ್ಷಿಸದೇ ದೊಡ್ಡ ಕಪ್ಪು ಇರುವೆ ಕಚ್ಚಿರಬಹುದೆಂದು ಭಾವಿಸಿದ್ದಾಳೆ ವಿದ್ಯಾರ್ಥಿನಿ.
ನೋವು ಹೆಚ್ಚಿರುವ ಕಾರಣ ನೆರೆ ಮನೆಯವರು ಮತ್ತು ಸ್ನೇಹಿತರು ಹಾವು ಕಚ್ಚಿರಬಹುದು ಎಂದು ಶಂಕಿಸಿ ಪರಿಶೀಲಿಸಲು ಕುಳಿತುಕೊಳ್ಳುವಂತೆ ಹೇಳಿದ್ದಾರೆ. ಆದರೆ ನೃತ್ಯದಲ್ಲಿರುವ ಅತಿಯಾದ ಉತ್ಸಾಹ ಪರಿಣಾಮ ಅವರ ಹೇಳಿಕೆಯನ್ನು ನಿರ್ಲಕ್ಷಿಸಿ, ಕಚ್ಚಿದ ಸ್ಥಳಕ್ಕೆ ಅರಿಶಿನ ಪುಡಿ ಹಚ್ಚಿಕೊಂಡು ಬಿಟ್ಟುಬಿಟ್ಟಿದ್ದಾಳೆ.
ಐಸಿಯುಗೆ ದಾಖಲು :
ಹಾವು ಕಚ್ಚಿದ ಸುಮಾರು ಒಂದು ಗಂಟೆಯ ನಂತರ ವಿದ್ಯಾರ್ಥಿನಿ ನಿಯಾಳ ಕಣ್ಣುಗಳು ಮಂಜಾಗಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾಳೆ. ಪ್ರಜ್ಞೆ ತಪ್ಪಿ ಕುಸಿದು ಬೀಳುತ್ತಿದಂತೆಯೇ ಆಕೆಯನ್ನು ಮೊದಲು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ನಂತರ ಅಂದರೆ ಮರುದಿನ ಎರ್ನಾಕುಲಂನ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಯಿತು. ಅಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ತಿಳಿದು ಬಂದ ಸತ್ಯದಿಂದ ಎಲ್ಲರೂ ಶಾಕ್ ಆಗಿದ್ದು, ಆಕೆಗೆ ಕಚ್ಚಿದ್ದು ಅತ್ಯಂತ ವಿಷಪೂರಿತ ‘ಅನಾಲಿ’ (ರಸೆಲ್ಸ್ ವೈಪರ್) ಹಾವು.
ಆ ಹಾವು ವಿದ್ಯಾರ್ಥಿನಿಗೆ ಒಂದಲ್ಲ, ಎರಡು ಬಾರಿ ಕಚ್ಚಿರುವುದು ದೃಢಪಟ್ಟಿತ್ತು. ಹಾವು ಕಡಿತಕ್ಕೊಳಗಾದ ನಂತರವೂ ವಿದ್ಯಾರ್ಥಿನಿ ಪುನಃ ನೃತ್ಯ ಮಾಡಿದ್ದರಿಂದ ದೈಹಿಕವಾಗಿ ಹೆಚ್ಚು ಕ್ರಿಯಾಶೀಲವಾದ ಪರಿಣಾಮ ವಿಷ ಅತ್ಯಂತ ವೇಗವಾಗಿ ಇಡೀ ದೇಹದ ತುಂಬೆಲ್ಲಾ ಹರಡಿತ್ತು.
ಇದನ್ನು ಓದಿ : ಮರಿ ಮಂಗನ ಕಿತಾಪತಿ ನೋಡಿ ನೆಟ್ಟಿಗರು ಫಿದಾ; ವೈರಲ್ ವಿಡಿಯೋಗೆ ಭಾರೀ ಪ್ರತಿಕ್ರಿಯೆ.
ಚೇತರಿಸಿಕೊಳ್ಳುವ ಭರವಸೆಯಲ್ಲಿದ್ದ ವಿದ್ಯಾರ್ಥಿನಿ ಶನಿವಾರ ರಾತ್ರಿ ಹಠಾತ್ತನೆ ತೀವ್ರ ಅಸ್ವಸ್ಥಗೊಂಡು ಭಾನುವಾರ ಬೆಳಿಗ್ಗೆ 7.30ಕ್ಕೆ ಕೊನೆಯುಸಿರೆಳೆದಳು. ಕಳೆದ 24 ದಿನಗಳ ಕಾಲ ಸಾವು ಬದುಕಿನ ಮಧ್ಯ ಹೋರಾಡಿದ ಈ ಪುಟ್ಟ ಜೀವ ಕೊನೆಗೆ ಬದುಕುಳಿಯಲ್ಲೇ ಇಲ್ಲ.
ಹಾವಿನ ಕಡಿತದ ಬಗ್ಗೆ ಮುನ್ನೆಚ್ಚರಿಕೆ :
- ಮಳೆಗಾಲ ಹಾಗೂ ಗಿಡಗಂಟಿಗಳಿರುವ ಪ್ರದೇಶಗಳಲ್ಲಿ ಸಂಚರಿಸುವಾಗ ವಿಶೇಷ ಎಚ್ಚರಿಕೆ ವಹಿಸುವುದು ಅಗತ್ಯ.
- ರಾತ್ರಿ ವೇಳೆ ಹೊರಗೆ ಹೋಗುವಾಗ ಟಾರ್ಚ್ (Torch) ಬಳಸುವುದು ಹಾಗೂ ಕಾಲಿಗೆ ಶೂ ಅಥವಾ ಬೂಟು ಧರಿಸುವುದು ಸುರಕ್ಷಿತ.
- ಹಾವು ಕಡಿದರೆ (Snake bite) ಗಾಬರಿಯಾಗದೆ ಗಾಯಗೊಂಡ ವ್ಯಕ್ತಿಯನ್ನು ಸಾಧ್ಯವಾದಷ್ಟು ಶಾಂತವಾಗಿರಿಸಿ ತಕ್ಷಣ ಸಮೀಪದ ಆಸ್ಪತ್ರೆಗೆ ಕರೆದೊಯ್ಯಬೇಕು.
- ಹಾವು ವಿಷವನ್ನು ಹೀರುವ ಪ್ರಯತ್ನ, ಗಾಯದ ಜಾಗವನ್ನು ಕತ್ತರಿಸುವುದು ಅಥವಾ ಬಿಗಿಯಾಗಿ ಕಟ್ಟಿ ಹಾಕುವುದು ಮುಂತಾದ ಕ್ರಮಗಳನ್ನು ಮಾಡಬಾರದು.
ಸರಿಯಾದ ಸಮಯದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುವುದರಿಂದ ಜೀವಾಪಾಯದ ಸಾಧ್ಯತೆಯನ್ನು ಬಹಳಷ್ಟು ಕಡಿಮೆ ಮಾಡಬಹುದು.
ಹೆಚ್ಚಿನ ಬ್ರೇಕಿಂಗ್ ನ್ಯೂಸ್‌ಗಳಿಗೆ ಇಲ್ಲಿ ಕ್ಲಿಕ್ ಮಾಡಿ
Disclaimer: ಈ ಹಾವಿನ ಕಡಿತ ಸುದ್ದಿಯಲ್ಲಿನ ಮಾಹಿತಿ ಲಭ್ಯ ವರದಿಗಳಿಂದ ದೊರೆತ ವಿವರಗಳ ಆಧಾರದ ಮೇಲೆ ಪ್ರಕಟಿಸಲಾಗಿದೆ. ಹಾವು ಕಡಿತದಂತಹ ತುರ್ತು ವೈದ್ಯಕೀಯ ಪರಿಸ್ಥಿತಿಗಳಲ್ಲಿ ತಕ್ಷಣ ವೈದ್ಯಕೀಯ ನೆರವು ಪಡೆಯುವುದು ಅತ್ಯಂತ ಮುಖ್ಯ. ಘಟನೆಯ ಕುರಿತು ಅಧಿಕಾರಿಗಳ ಅಧಿಕೃತ ಮಾಹಿತಿ ಅಥವಾ ತನಿಖೆಯ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಹೆಚ್ಚಿನ ವಿವರಗಳು ಲಭ್ಯವಾಗಬಹುದು.





