ತಮಿಳುನಾಡಿನಲ್ಲಿ ಕಂದಕಕ್ಕೆ ಉರುಳಿ ಪ್ರವಾಸಿ ವ್ಯಾನ್

ತಮಿಳುನಾಡಿನಲ್ಲಿ ಕಂದಕಕ್ಕೆ ಉರುಳಿದ ಪ್ರವಾಸಿ ವ್ಯಾನ್; 9 ಮಂದಿ ಶಿಕ್ಷಕರ ದುರ್ಮರಣ.

ಜನಸ್ಪಂದನ ನ್ಯೂಸ್, ವಾಲ್ಪಾರೈ : ತಮಿಳುನಾಡಿನ ಪರ್ವತ ಪ್ರದೇಶವಾದ ವಾಲ್ಪಾರೈನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 9 ಮಂದಿ ಶಿಕ್ಷಕರು ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರವಾಸಕ್ಕೆ ತೆರಳಿದ್ದ ಕೇರಳ ಮೂಲದ ತಂಡದ ವ್ಯಾನ್ ಕಂದಕಕ್ಕೆ ಉರುಳಿದ ಪರಿಣಾಮ ಈ ದುರಂತ ಸಂಭವಿಸಿದೆ.

ಏನಿದು ಘಟನೆ :

ಲಭ್ಯ ಮಾಹಿತಿಯ ಪ್ರಕಾರ, ಕೇರಳ ರಾಜ್ಯದ ಶಾಲೆಯೊಂದರ ಶಿಕ್ಷಕರು ಹಾಗೂ ಸಿಬ್ಬಂದಿ ತಮ್ಮ ಕುಟುಂಬ ಸದಸ್ಯರೊಂದಿಗೆ ರಜಾ ದಿನಗಳ ಹಿನ್ನಲೆಯಲ್ಲಿ ಪ್ರವಾಸಕ್ಕೆ ತೆರಳಿದ್ದರು. ಈ ಶಿಕ್ಷಕರು ಹಾಗೂ ಸಿಬ್ಬಂದಿ ಮೊದಲು ಪ್ರಸಿದ್ಧ ಅತಿರಪಳ್ಳಿ ಜಲಪಾತ (Athirapalli Falls) ಕ್ಕೆ ಭೇಟಿ ನೀಡಿ ನಂತರ ವಾಲ್ಪಾರೈ ಕಡೆಗೆ ಪ್ರಯಾಣ ಮುಂದುವರೆಸಿತ್ತು.

Athirapalli Falls
Athirapalli Falls

ಇದೇ ವೇಳೆ ಮಾರ್ಗ ಮಧ್ಯೆ ಅವರ ಪ್ರವಾಸಿ ವ್ಯಾನ್ (TT Van) ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಉರುಳಿಬಿದ್ದಿದೆ. ಈ ದುರಂತದ ಪ್ರವಾಸಿ ವ್ಯಾನ್‌ನಲ್ಲಿ ಒಟ್ಟು 16 ಮಂದಿ ಪ್ರಯಾಣಿಸುತ್ತಿದ್ದು, ಅವರಲ್ಲಿ ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಮಹಿಳೆಯರು ಮತ್ತು ಒಬ್ಬ ಬಾಲಕ ಕೂಡ ಸೇರಿದ್ದಾರೆ.

ಈ ಸುದ್ದಿನೂ ಓದಿ : ಕಾಲೇಜು ಹೆಸರಿನಲ್ಲಿ OYOಗೆ ಹೋದ ಮಗಳು: ತಾಯಿ ಎಂಟ್ರಿ, ವಿಡಿಯೋ ವೈರಲ್.

ಗಾಯಗೊಂಡ ಕೆಲವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಯಮತ್ತೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಪ್ರವಾಸಿ ವ್ಯಾನ್ (TT Van) ಅಪಘಾತವಾದದ್ದು ಯಾವಾಗ :

ಘಟನೆ ಶುಕ್ರವಾರ ಸಂಜೆ ಸುಮಾರು 5.15ರಿಂದ 5.30ರ ನಡುವೆ ನಡೆದಿದೆ ಎಂದು ತಿಳಿದುಬಂದಿದೆ. ವಾಲ್ಪಾರೈ-ಪೊಲ್ಲಾಚಿ ರಸ್ತೆಯ ಘಾಟ್ ಪ್ರದೇಶದಲ್ಲಿ ಅನೇಕ ತಿರುವುಗಳು ಇರುವುದರಿಂದ ವಾಹನ ಸಂಚಾರ ಅಪಾಯಕಾರಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಪ್ರವಾಸಿ (ವಾಹನ) ವ್ಯಾನ್ ಅಪಘಾತದ ಸುದ್ದಿ ತಿಳಿದ ಕೂಡಲೇ ಸ್ಥಳೀಯರು ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಮೃತದೇಹಗಳನ್ನು ಹೊರತೆಗೆದು ಗುರುತಿಸುವ ಕಾರ್ಯ ಮುಂದುವರಿದಿದೆ.

ಕೇರಳ ಮತ್ತು ತಮಿಳುನಾಡು ಪೊಲೀಸರ ನಡುವೆ ಸಮನ್ವಯ ಸಾಧಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.

ಈ ದುರ್ಘಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಗಳಿಗೆ ಆತ್ಮಸ್ಥೈರ್ಯ ನೀಡುವಂತೆ ಪ್ರಾರ್ಥಿಸಿ, ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

ಇದನ್ನು ಓದಿ : ಮಂಗ ಓಡಿಸಲು ಹೋಗಿದ್ದ ಹೋಟೆಲ್ ರೂಂ ಬಾಯ್ ವಿದ್ಯುತ್ ಶಾಕ್‌ಗೆ ಬಲಿ; ಘಟನೆ ವಿಡಿಯೋ ವೈರಲ್.

ಈ ಘಟನೆ ರಸ್ತೆ ಸುರಕ್ಷತೆ ಮತ್ತು ಪರ್ವತ ಪ್ರದೇಶಗಳಲ್ಲಿ ವಾಹನ ಚಾಲನೆ ಮಾಡುವಾಗ ಅಗತ್ಯ ಮುನ್ನೆಚ್ಚರಿಕೆಗಳ ಮಹತ್ವವನ್ನು ಮತ್ತೊಮ್ಮೆ ಮನದಟ್ಟು ಮಾಡಿಸಿದೆ.


Disclaimer:ಈ ಸುದ್ದಿ ಸಾರ್ವಜನಿಕವಾಗಿ ಲಭ್ಯವಿರುವ ಪ್ರಾಥಮಿಕ ಮಾಹಿತಿಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಹೆಚ್ಚಿನ ವಿವರಗಳು ಅಧಿಕೃತ ಮೂಲಗಳಿಂದ ಬದಲಾಯಿಸಬಹುದಾಗಿದೆ.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top