ಬಾಲ್ಕನಿಯಿಂದ ಜಾರುತ್ತಿದ್ದ ಪುಟ್ಟ ಮಗುವನ್ನು ರಕ್ಷಿಸಿದ ಮಂಗ

ಬಾಲ್ಕನಿಯಿಂದ ಜಾರುತ್ತಿದ್ದ ಪುಟ್ಟ ಮಗುವನ್ನು ರಕ್ಷಿಸಿದ ಮಂಗ ; ವೈರಲ್ ವಿಡಿಯೋ.

ಜನಸ್ಪಂದನ ನ್ಯೂಸ್ ಡೆಸ್ಕ್ : ಬಹುಮಹಡಿಯ ಬಾಲ್ಕನಿಯಿಂದ ಜಾರು ಬೀಳುತ್ತಿದ್ದ ಪುಟ್ಟ ಮಗುವನ್ನು ಸಮಯೋಚಿತವಾಗಿ ಮಂಗವೊಂದು ರಕ್ಷಿಸಿದ ಹೃದಯಸ್ಪರ್ಶಿ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳ ಬುದ್ಧಿವಂತಿಕೆ ಮತ್ತು ಸಹಜ ರಕ್ಷಣಾ ಸ್ವಭಾವವನ್ನು ತೋರಿಸುವ ಅನೇಕ ವಿಡಿಯೋಗಳು ಈಗಾಗಲೇ ಸಾಕಷ್ಟು ವೈರಲ್ ಆಗುತ್ತಲೇ ಇರುತ್ತವೆ.

ಇದೀಗ ಇಂತಹ ಘಟನೆಗಳಲ್ಲೊಂದು ಮತ್ತೆ ಜನರ ಗಮನ ಸೆಳೆದಿದ್ದು, ಇದರಲ್ಲಿ ಬಹುಮಹಡಿ ಕಟ್ಟಡದಿಂದ ಕೆಳಗೆ ಬೀಳುವ ಸ್ಥಿತಿಯಲ್ಲಿದ್ದ ಪುಟ್ಟ ಮಗುವನ್ನು ಮಂಗವೊಂದು ಸಮಯೋಚಿತವಾಗಿ ರಕ್ಷಿಸಿರುವ ಘಟನೆ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.

ಘಟನೆಗೆ ಸಂಬಂಧಿಸಿದ ವಿಡಿಯೋದಲ್ಲಿ ಕಾಣಿಸಿರುವಂತೆ, ಒಂದು ಪುಟ್ಟ ಮಗು ಮನೆಯ ಬಾಲ್ಕನಿಯಲ್ಲಿ ಆಟವಾಡುತ್ತಿದ್ದಾಗ ಅದ್ಯಾಗೋ ಅಚಾನಕ್‌ವಾಗಿ ಸಮತೋಲನ ಕಳೆದುಕೊಂಡು ಜಾರಿ ಬೀಳುವ ಸ್ಥಿತಿಗೆ ಬಂದಿರುವುದು ಕಂಡುಬರುತ್ತದೆ.

ಆದರೆ ಮಗು ಮಾತ್ರ ಬಾಲ್ಕನಿಯ ಕಂಬಿಯನ್ನು ಹಿಡಿದು ಕ್ಷಣಕ್ಷಣಕ್ಕೂ ಜಾರುವ ಸ್ಥಿತಿಯಲ್ಲಿತ್ತು. ದುರುದೃಷ್ಟ ಎನೆಂದರೆ ಆ ಸಮಯದಲ್ಲಿ ಮನೆಯವರು ಯಾರು ಕೂಡ ಗಮನಿಸದಿರುವುದರಿಂದ ಮಾತ್ರ ವಿಪರ್ಯಾಸ. ಆದರೆ ಈ ದೃಶ್ಯ ಹತ್ತಿರದಲ್ಲಿದ್ದ ಮಂಗನ ಕಣ್ಣಿಗೆ ಬಿದ್ದಿದೆ.

ಆ ಕ್ಷಣದಲ್ಲಿಯೇ ಮಂಗವು ಪರಿಸ್ಥಿತಿಯನ್ನು ಅರಿತು ಯಾವುದೇ ವಿಳಂಬವಿಲ್ಲದೆ ಅದು ವೇಗವಾಗಿ ಸ್ಥಳಕ್ಕೆ ಹಾರಿ ಹೋಗಿ, ಬಾಲ್ಕನಿಯ ಅಂಚಿನಲ್ಲಿ ನೇತಾಡುತ್ತಿದ್ದ ಮಗುವನ್ನು ಹಿಡಿದುಕೊಂಡಿದೆ. ನಂತರ ಅತ್ಯಂತ ಜಾಗರೂಕತೆಯಿಂದ ಮಗುವನ್ನು ಮತ್ತೆ ಸುರಕ್ಷಿತವಾಗಿ ಬಾಲ್ಕನಿಯ ಒಳಭಾಗಕ್ಕೆ ತಂದು ಇಟ್ಟಿರುವ ದೃಶ್ಯವು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ.

ಈ ಸುದ್ದಿನೂ ಓದಿ : ಇನ್‌ಸ್ಟಾಗ್ರಾಮ್ ಲೈಕ್ ವಿವಾದದಲ್ಲಿ ಮತ್ತೆ ಸುದ್ದಿಯಾದ ವಿರಾಟ್ ಕೊಹ್ಲಿ.

ಈ ಘಟನೆ ನೋಡಿದ ನೆಟ್ಟಿಗರು ಅಚ್ಚರಿಗೊಳಗಾಗಿದ್ದಾರೆ. ಕೆಲವರು ಈ ಮಂಗನ ಸಮಯೋಚಿತ ಪ್ರತಿಕ್ರಿಯೆಯನ್ನು “ಹೀರೋಿಕ್ ಆಕ್ಷನ್” ಎಂದು ಹೊಗಳಿದ್ದಾರೆ. ಇನ್ನೂ ಕೆಲವರು ಮನುಷ್ಯರಿಗಿಂತ ಕೆಲವೊಮ್ಮೆ ಪ್ರಾಣಿಗಳಲ್ಲಿ ಹೆಚ್ಚು ಸಹಜ ಸಂವೇದನೆ ಮತ್ತು ಅಪಾಯ ಗುರುತಿಸುವ ಶಕ್ತಿ ಇರುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪುಟ್ಟ ಮಗುವನ್ನು ರಕ್ಷಿಸಿದ ಮಂಗ, ವಿಡಿಯೋ :

Courtesy : Social Media / Twitter   

ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೋಡಿದ ಅನೇಕರು, ಈ ಘಟನೆಯನ್ನು ಅದ್ಭುತ ರಕ್ಷಣಾ ಕ್ಷಣವೆಂದು ವರ್ಣಿಸುತ್ತಿದ್ದಾರೆ. ಮಗುವಿನ ಜೀವ ಉಳಿದಿರುವುದು ಅದೃಷ್ಟ ಮತ್ತು ಸಮಯೋಚಿತ ಕ್ರಮದ ಫಲವೆಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್‌ಗಳು ಹರಿದು ಬರುತ್ತಿವೆ.

ಇಂತಹ ಘಟನೆಗಳು ಮನೆಗಳಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಮತ್ತೊಮ್ಮೆ ಎಚ್ಚರಿಕೆಯನ್ನು ನೀಡುತ್ತಿವೆ. ವಿಶೇಷವಾಗಿ ಬಹುಮಹಡಿ ಕಟ್ಟಡಗಳಲ್ಲಿ ಮಕ್ಕಳನ್ನು ನಿರಂತರವಾಗಿ ಗಮನಿಸುವ ಅಗತ್ಯವಿದೆ ಎಂಬ ಸಂದೇಶವನ್ನು ಈ ಘಟನೆ ಸ್ಪಷ್ಟಪಡಿಸಿದೆ. ಘಟನೆಯ ಬಗ್ಗೆ ಯಾವುದೇ ಸ್ಪಷ್ಟ ಸ್ಥಳ ಮತ್ತು ಯಾವಾಗ ಎನ್ನುವ ಬಗ್ಗೆ ವಿವರ ತಿಳಿದು ಬಂದಿಲ್ಲ.

ಇದನ್ನು ಓದಿ : ಕಾಲೇಜು ಹೆಸರಿನಲ್ಲಿ OYOಗೆ ಹೋದ ಮಗಳು: ತಾಯಿ ಎಂಟ್ರಿ, ವಿಡಿಯೋ ವೈರಲ್.

ಪ್ರಸ್ತುತ ಈ ವಿಡಿಯೋ ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ವೇಗವಾಗಿ ಹರಡುತ್ತಿದ್ದು, Apr 17, 2026 ರಂದು ಹಂಚಿಕೊಂಡ ಈ ವಿಡಿಯೋ 56.5K Views ಹಾಗೂ ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ.


Disclaimer: ಈ ಲೇಖನದಲ್ಲಿ ಉಲ್ಲೇಖಿಸಿರುವ ವಿಡಿಯೋ ಮತ್ತು ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಈ ವಿಡಿಯೋ ಯಾವಾಗ ಮತ್ತು ಎಲ್ಲಲ್ಲಿ ಚಿತ್ರೀಕರಿಸಲಾಗಿದೆ ಎಂಬುದನ್ನು Janaspandhan News ಸ್ವತಂತ್ರವಾಗಿ ದೃಢೀಕರಿಸಿಲ್ಲ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದ ಮಾತ್ರ ಈ ಸುದ್ದಿ ಪ್ರಕಟಿಸಲಾಗಿದೆ. ವಿಡಿಯೋಗೆ ಸಂಬಂಧಿಸಿದ ಎಲ್ಲಾ ಹಕ್ಕುಗಳು ಅದರ ಮೂಲ ನಿರ್ಮಾಪಕರು ಅಥವಾ ಸಂಬಂಧಿತ ಸೋಶಿಯಲ್ ಮೀಡಿಯಾ ಖಾತೆಗೆ ಸೇರಿವೆ.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top