HomeCrime Newsಸೆಲ್ಫಿ ವ್ಯಾಮೋಹದ ಬೆಲೆ: ಜಲಪಾತದಲ್ಲಿ ಮುಳುಗಿ 3 ಬಾಲಕಿಯರ ಸಾವು, ವಿಡಿಯೋ ವೈರಲ್.
spot_img
spot_img

ಸೆಲ್ಫಿ ವ್ಯಾಮೋಹದ ಬೆಲೆ: ಜಲಪಾತದಲ್ಲಿ ಮುಳುಗಿ 3 ಬಾಲಕಿಯರ ಸಾವು, ವಿಡಿಯೋ ವೈರಲ್.

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ರಜೆಯ ಮೋಜಿನಲ್ಲಿ ಪ್ರವಾಸಕ್ಕೆ ತೆರಳಿದ್ದ ಬಾಲಕಿ (ಕಿಶೋರಿ)ಯರ ಗುಂಪಿನಲ್ಲಿ ನಡೆದ ದುರಂತ ಘಟನೆ ಆತಂಕ ಮೂಡಿಸಿದೆ. ಜಲಪಾತದ ಬಳಿ ಸೆಲ್ಫಿ ಹಾಗೂ ಫೋಟೋ (Selfie and photo) ತೆಗೆದುಕೊಳ್ಳುವಾಗ ಮೂವರು ಬಾಲಕಿಯರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಆಂಧ್ರ ಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯಲ್ಲಿ ನಡೆದಿದೆ.

ಮಾಹಿತಿ ಪ್ರಕಾರ, ಹುಕುಂಪೇಟೆ ಮಂಡಲದ ಜಂಬುವಲಸ ಗ್ರಾಮದ ತ್ರಿಷಾ (17), ಪವಿತ್ರಾ (16), ರತ್ನಕುಮಾರಿ (16) ಹಾಗೂ ಅಂಜಲಿ ಎಂಬ ನಾಲ್ವರು ಸ್ನೇಹಿತೆಯರು ಗುರುವಾರ ಸಂಜೆ ಅನಂತಗಿರಿ ಭಾಗದ ಮಲುಂಗುಮ್ಮಿ ಜಲಪಾತಕ್ಕೆ ತೆರಳಿದ್ದರು.

ಬೇಸಿಗೆ ರಜೆಯ ಹಿನ್ನೆಲೆ ಈ ಸ್ಥಳಕ್ಕೆ ಭೇಟಿ ನೀಡಿದ ಅವರು, ಪ್ರಕೃತಿಯ ಸೌಂದರ್ಯವನ್ನು ಆನಂದಿಸುತ್ತಾ ಫೋಟೋ ಮತ್ತು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದರು.

ಈ ವೇಳೆ ಬಂಡೆಯ ಮೇಲೇರಿ ನಿಂತು ಫೋಟೋ (ಸೆಲ್ಫಿ ವ್ಯಾಮೋಹ) ಕ್ಲಿಕ್ಕಿಸುತ್ತಿದ್ದಾಗ ಅಕಸ್ಮಾತ್ ಒಬ್ಬಳು ಕಾಲು ಜಾರಿ ನೀರಿಗೆ ಬಿದ್ದಿದ್ದಾಳೆ. ಆಕೆಯನ್ನು ರಕ್ಷಿಸಲು ಮುಂದಾದ ಉಳಿದ ಸ್ನೇಹಿತೆಯರು ಕೂಡ ಕ್ರಮವಾಗಿ ನೀರಿನ ಆಳಕ್ಕೆ ಜಾರಿಬಿದ್ದಿದ್ದಾರೆ.

ಈ ಸುದ್ದಿನೂ ಓದಿ : ಅಪಘಾತದ ವೇಳೆ ಗಾಯಾಳು ನೀರು ಕೇಳಿದರೂ ಕೊಡಲೇಬೇಡಿ ; ವೈದ್ಯರ ಮಹತ್ವದ ಎಚ್ಚರಿಕೆ.!

ಸ್ಥಳೀಯರು ತಕ್ಷಣವೇ ನೆರವಿಗೆ ಧಾವಿಸಿ ರಕ್ಷಿಸಲು ಯತ್ನಿಸಿದರೂ, ನೀರಿನ ಹರಿವಿನ ತೀವ್ರತೆಯಿಂದ ಮೂವರು ಬಾಲಕಿಯರನ್ನು ಉಳಿಸಲು ಸಾಧ್ಯವಾಗಲಿಲ್ಲ.

ದುರಂತದಲ್ಲಿ ತ್ರಿಷಾ, ಪವಿತ್ರಾ ಹಾಗೂ ರತ್ನಕುಮಾರಿ ಮೃತಪಟ್ಟಿದ್ದು, ಅಂಜಲಿ ಗಾಯಗಳೊಂದಿಗೆ ಪಾರಾಗಿದ್ದಾಳೆ ಎಂದು ತಿಳಿದುಬಂದಿದೆ. ಮೃತರಲ್ಲಿ ಕೆಲವರು ಇತ್ತೀಚೆಗೆ ಶಿಕ್ಷಣ ಪೂರ್ಣಗೊಳಿಸಿ ರಜೆಗೆ ಬಂದಿದ್ದರು ಎಂದು ತಿಳಿದುಬಂದಿದ್ದು, ಈ ಘಟನೆ ಗ್ರಾಮದಲ್ಲಿ ಆಘಾತ ಮತ್ತು ಶೋಕವನ್ನು ಉಂಟುಮಾಡಿದೆ.

ಸ್ಥಳಕ್ಕೆ ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ.

ಸೆಲ್ಫಿ ವ್ಯಾಮೋಹದ ವಿಡಿಯೋ :

Courtesy : Social Media / Twitter

ಈ ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಮಹತ್ವದ ಎಚ್ಚರಿಕೆಯನ್ನು ನೀಡಿದ್ದಾರೆ. ಪ್ರವಾಸಿ ತಾಣಗಳು, ವಿಶೇಷವಾಗಿ ಜಲಪಾತಗಳು ಮತ್ತು ಆಳವಾದ ನೀರಿನ ಪ್ರದೇಶಗಳಲ್ಲಿ ಫೋಟೋ ಅಥವಾ ಸೆಲ್ಫಿ (ಸೆಲ್ಫಿ ವ್ಯಾಮೋಹ) ತೆಗೆಯುವಾಗ  ಹೆಚ್ಚಿನ ಜಾಗ್ರತೆ ವಹಿಸಬೇಕು ಎಂದು ತಿಳಿಸಿದ್ದಾರೆ.

ಈಜು ಬಾರದವರು ಅಪಾಯಕಾರಿ ಪ್ರದೇಶಗಳಿಗೆ ಇಳಿಯಬಾರದು ಹಾಗೂ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದ್ದಾರೆ.

ಇದನ್ನು ಓದಿ : ಪತಿ ನಾಪತ್ತೆ, ಮೈದುನನ ಜೊತೆ ಸಂಸಾರ: 25 ವರ್ಷಗಳ ಬಳಿಕ ವಾಪಸಾದ ಗಂಡ ; ಮುಂದೇನಾಯ್ತು?

ಇಂತಹ ದುರಂತಗಳು ಮರುಕಳಿಸದಂತೆ ಸಾರ್ವಜನಿಕರು ಜವಾಬ್ದಾರಿಯಿಂದ ವರ್ತಿಸಬೇಕು ಎಂಬುದು ಅಧಿಕಾರಿಗಳ ಮನವಿ. ಸಣ್ಣ ನಿರ್ಲಕ್ಷ್ಯವೇ ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು ಎಂಬುದು ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ.


Disclaimer: ಈ ಸುದ್ದಿಯಲ್ಲಿರುವ (ಸೆಲ್ಫಿ ವ್ಯಾಮೋಹದ) ಮಾಹಿತಿ ಸಾರ್ವಜನಿಕವಾಗಿ ಲಭ್ಯವಿರುವ ಮೂಲಗಳು ಮತ್ತು ವರದಿಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಘಟನೆಯ ಕುರಿತು ನೀಡಿರುವ ವಿವರಗಳು ಪ್ರಾಥಮಿಕ ಮಾಹಿತಿಯಾಗಿರಬಹುದು. ಸಂಪೂರ್ಣ ನಿಖರತೆಗಾಗಿ ಸಂಬಂಧಿಸಿದ ಅಧಿಕೃತ ಮೂಲಗಳನ್ನು ಪರಿಶೀಲಿಸುವುದು ಒಳಿತು. ಈ ಸುದ್ದಿ ಜಾಗೃತಿ ಉದ್ದೇಶಕ್ಕಾಗಿ ಮಾತ್ರ ಪ್ರಕಟಿಸಲಾಗಿದೆ.

Janaspandhan News
Janaspandhan Newshttp://WWW.janaspandhan.com
Janaspandana News is a digital news platform that reports crime and local news from Karnataka.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments