ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾನ್ಯವಾಗಿ ಒಂದು ಬೈಕ್ ನಲ್ಲಿ 2-3 ಜನ ಪ್ರಯಾಣಿಸುವುದನ್ನು ನೋಡಿದ್ದೇವೆ. ಒಮ್ಮೋಮ್ಮೆ ಅಪರೂಪಕ್ಕೆ 3-4 ಜನರೂ ಸಹ ಒಂದೇ ಬೈಕ್‌ನಲ್ಲಿ ಪ್ರಯಾಣಿಸುವುದನ್ನು ನೋಡಿದ್ದೇನೆ. ನೀವೇನಾದರೂ ‘ಫುಲ್ ಫ್ಯಾಮಿಲಿ ಟ್ರಿಪ್’ (Full Family Trip) ಗಾಗಿ ಬೈಕ್ ಅಲ್ಟ್‌ರೇಷನ್ (Alteration) ಮಾಡಿರುವುದನ್ನು ಎಲ್ಲಾದರೂ ನೋಡಿದ್ದೀರಾ.? ನೋಡದಿದ್ದರೇ ಇಲ್ಲಿದೆ ನೋಡಿ ವಿಡಿಯೋ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ. ಇದರಲ್ಲಿ ಒಂದು ಸಾಮಾನ್ಯ ಬೈಕ್‌ನಲ್ಲಿ 8ಕ್ಕೂ ಹೆಚ್ಚು ಮಂದಿ ಕುಳಿತುಕೊಂಡಿದ್ದು, ‘ಒಟ್ಟು ಕುಟುಂಬದ ಸಫರೀ’ (Full Family Trip) ಎನ್ನುವಂತಾಗಿದೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜೂನ 24 ರ ದ್ವಾದಶ ರಾಶಿಗಳ ಫಲಾಫಲ.!
ವಿಡಿಯೋದಲ್ಲಿ ಕಂಡು ಬರುವ ದೃಶ್ಯದಲ್ಲಿ ಯಾವುದೇ ಭದ್ರತಾ ಕ್ರಮಗಳಿಲ್ಲದೇ ಮುಖ್ಯ ರಸ್ತೆ ಮೇಲೆ ಪ್ರಯಾಣಿಸುತ್ತಿರುವುದು ಸ್ಪಷ್ಟವಾಗಿದೆ. ಹೆಲ್ಮೆಟ್ ಧರಿಸದ ಚಾಲಕ, ಮಕ್ಕಳಿಗೆ ಯಾವುದೇ ಭದ್ರತಾ ಸೀಟುಗಳಿಲ್ಲದ ಸ್ಥಿತಿ ಹಾಗೂ ಎಷ್ಟೋ ಮಂದಿ ಬೈಕ್‌ನಲ್ಲಿ (Full Family Trip) ಹತ್ತಿರುವುದು – ಇವೆಲ್ಲವೂ ಅಪಾಯಕಾರಿ ನಡವಳಿಕೆಯಾಗಿದ್ದು, ಯಾವುದೇ ಕ್ಷಣದಲ್ಲಿ ಅಪಘಾತಕ್ಕೆ ದಾರಿ ನೀಡಬಹುದಾದ ಸ್ಥಿತಿಯಾಗಿದೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರೋ ಈ (Full Family Trip) ವಿಡಿಯೋ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ್ದು ಎಂದು ಹೇಳಲಾಗುತ್ತಿದೆ. ಈ ರೀತಿ ರಸ್ತೆಯಲ್ಲಿ ಬೈಕ್ ಸವಾರ ಸಂಚರಿಸುತ್ತಿರಬೇಕಾದರೆ, ಆಟೋದಲ್ಲಿ ಕುಳಿತಿದ್ದ ಪ್ರಯಾಣಿಕರೊಬ್ಬರು ಇದನ್ನು ರೆಕಾರ್ಡ್ ಮಾಡಿದ್ದಾರೆ.
ಇದನ್ನು ಓದಿ : Silk : ಕರ್ನಾಟಕ ರೇಷ್ಮೆ ಇಲಾಖೆಯಲ್ಲಿ 2,400+ ಹುದ್ದೆಗಳಿಗೆ ನೇಮಕಾತಿ.!
ಈ ವೀಡಿಯೊವನ್ನು @soo_funny_memes ಎಂಬ ಹೆಸರಿನ ಖಾತೆಯಲ್ಲಿ Instagram ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಜನರು ಇದಕ್ಕೆ ಸಾರ್ವಜನಿಕರು ತೀವ್ರವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋಗೆ 20,501 likes ದೊರೆತಿವೆ.
Full Family Trip ವಿಡಿಯೋದಲ್ಲೇನಿದೆ :
ಮುಖ್ಯ ರಸ್ತೆಯಲ್ಲಿ ಆಟೋ ಒಂದು ಸಾಗುತ್ತಿದೆ, ಈ ವೇಳೆ ಆಟೋದ ಎಡ ಬದಿಯಿಂದ ಬೈಕ್ ಒಂದು ಸೈಡ್ ಹೊಡೆದು ಮುಂದೆ ಸಾಗುತ್ತಿದೆ. ಆ ಬೈಕ್‌ನಲ್ಲಿ ಸವಾರ, ಇಬ್ಬರು ಮಹಿಳೆಯರು ಮತ್ತು ಒಂದು ಮಗು ಸೇರಿದಂತೆ ನಾಲ್ಕು ಜನರು ಬೈಕ್‌ನಲ್ಲಿ (Full Family Trip) ಸವಾರಿ ಮಾಡುವುದನ್ನು ಸ್ಪಷ್ಟವಾಗಿ ಕಾಣಬಹುದು.
ಇದನ್ನು ಓದಿ : ಆರೋಪಿಗಳು ಪರಾರಿಯಾಗಲು ಸಹಕರಿಸಿದ ಆರೋಪ ; PSI ಸೇರಿ ಇಬ್ಬರು Suspended.!
ಇದು ಇಷ್ಟೆ ನಿಲ್ಲುತ್ತಿಲ್ಲ, ಸವಾರ ತಮ್ಮ ಬೈಕ್‌ನ ಹಿಂಭಾಗದಲ್ಲಿ ಒಂದು ಎರಡು ಚಕ್ರದ ಟ್ರಾಲಿಯಂತಹ ದೇಸಿ ಬಂಡಿಯನ್ನು ಸಹ ಅಳವಡಿಸಿದೆ, ಅದರ ಮೇಲೆ ಮನೆಯ ಇತರ ಆರು ಮಕ್ಕಳನ್ನು ಸಹ ಕೂರಿಸಲಾಗಿದೆ. ಹೀಗೆ ಒಟ್ಟು ಹತ್ತು ಜನರು ಒಂದೇ ಬೈಕ್‌ನಲ್ಲಿ (Full Family Trip) ಸವಾರಿ ಮಾಡುತ್ತಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದಾಗಿದೆ.
ವಿಡಿಯೋ ನೋಡಿದರೆ ಪಾಕಿಸ್ತಾನಿ ವ್ಯಕ್ತಿಯ ಈ ಅದ್ಭುತ ದೇಸಿ ಬೈಕ್ ಸವಾರಿ ಅದ್ಬುತ್ ಎನ್ನಬಹುದು, ಆದರೆ ಈ ರೀತಿ ರಸ್ತೆಯಲ್ಲಿ ಸಂಚರಿಸುವುದು “ಸಂಚಾರ ನಿಯಮಗಳ” ಗಂಭೀರ ಉಲ್ಲಂಘನೆಯಾಗಿದೆ. ಅಷ್ಟೆ ಅಲ್ಲಾ. ಸ್ವಲ್ಪ ಹೆಚ್ಚು ಕಮ್ಮಿಯಾದರೂ ಸಹ ಪ್ರಾಣಕ್ಕೆ ಸಂಚಕಾರ ತಪ್ಪಿದ್ದಲ್ಲ. ಅಷ್ಟೆ ಏಕೆ ಈ ರೀತಿಯ ಸವಾರಿ ಇತರರಿಗೂ ಅಪಾಯವನ್ನುಂಟುಮಾಡುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
Full Family Trip ವಿಡಿಯೋ :
View this post on Instagram
ಇದನ್ನು ಓದಿ : Crocodile : ನದಿಯಲ್ಲಿ ಎಮ್ಮೆಗೆ ಸ್ನಾನ ಮಾಡಿಸುತ್ತಿದ್ದಾಗ ಬಾಲಕನ ಎಳೆದೊಯ್ದಿ ಮೊಸಳೆ.!
ಈ ದೃಶ್ಯವು ಮಜಾಕಾಗಿ ಕಂಡರೂ, ಇದು ಗಂಭೀರ ಸಂದೇಶವನ್ನು ನೀಡುತ್ತದೆ. ರಸ್ತೆ ಸುರಕ್ಷತೆಗೆ ನಾವು ಎಷ್ಟು ನಿರ್ಲಕ್ಷ್ಯ ವಹಿಸುತ್ತಿದ್ದೇವೆ ಎನ್ನುವುದಕ್ಕೆ ಜ್ವಲಂತ ಉದಾಹರಣೆಯಂತಿದೆ ಈ ಸವಾರಿ.
Sexual : ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ ; ಆರೋಪಿಗೆ ಗುಂಡೇಟು.!
ಜನಸ್ಪಂದನ ನ್ಯೂಸ್, ಡೆಸ್ಕ್ : ಕೋಚಿಂಗ್‌ನಿಂದ ಮನೆಗೆ ಹಿಂತಿರುಗುತ್ತಿದ್ದ ಶಾಲಾ ವಿದ್ಯಾರ್ಥಿನಿಯ ಮೇಲೆ ಲೈಂಗಿಕ (Sexual) ದೌರ್ಜನ್ಯ ಎಸಗಿದ ಆರೋಪಿ ಯುವಕನನ್ನು ಪೊಲೀಸರು ಗುಂಡೇಟು ಕೊಟ್ಟು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಶಾಲಾ ವಿದ್ಯಾರ್ಥಿನಿಯ ಮೇಲೆ ಲೈಂಗಿಕ (Sexual) ದೌರ್ಜನ್ಯ ಎಸಗಿದ ಆರೋಪಿ ಯುವಕನನ್ನು ಹಾಲು ಮಾರಾಟ ಮಾಡುತ್ತಿರುವ ಮಠ್ ಕಮಲ್ ನಯನ್‌ಪುರ ನಿವಾಸಿಯಾದ ಮುಸಬ್ಬೀರ್ ಎಂದು ಗುರುತಿಸಲಾಗಿದೆ. ಕೋಚಿಂಗ್‌ನಿಂದ ಮನೆಗೆ ಹಿಂತಿರುಗುತ್ತಿದ್ದಾಗ ಈ ಘಟನೆ (Sexual harassment) ನಡೆದಿದೆ ಎಂದು ಹೇಳಲಾಗುತ್ತಿದೆ.
ಸಂಸ್ರಸ್ತೆ ಅಪ್ರಾಪ್ತ ಬಾಲಕಿ ಕೋಚಿಂಗ್‌ನಿಂದ ಶಾಲಾ ಡ್ರೆಸ್‌ನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ಎದುರಿನಿಂದ ಬಂದ ಬೈಕ್ ಸವಾರನೊಬ್ಬ ಆಕೆಯ ಖಾಸಗಿ ಭಾಗವನ್ನು ಮುಟ್ಟಿ ಲೈಂಗಿಕ (Sexual) ದೌರ್ಜನ್ಯ ಎಸಗಿದ್ದಾನೆ. ನಂತರ ಅಶ್ಲೀಲ ಕೃತ್ಯಗಳನ್ನು ಮಾಡುತ್ತಾ ಅಶ್ಲೀಲ ಹೇಳಿಕೆಗಳನ್ನು ನೀಡಿ ಪರಾರಿಯಾಗಿದ್ದಾನೆ. ರಸ್ತೆಯಲ್ಲಿರುವ ಮನೆಯ ಹೊರಗೆ ಅಳವಡಿಸಿರುವ CCTV ಕ್ಯಾಮರಾದಲ್ಲಿ ಇಡೀ ಘಟನೆಯ ದೃಶ್ಯ ಸೆರೆಯಾಗಿದೆ.
ಇದನ್ನು ಓದಿ : Crocodile : ನದಿಯಲ್ಲಿ ಎಮ್ಮೆಗೆ ಸ್ನಾನ ಮಾಡಿಸುತ್ತಿದ್ದಾಗ ಬಾಲಕನ ಎಳೆದೊಯ್ದಿ ಮೊಸಳೆ.!
ಮನೆಗೆ ಬಂದು ಬಾಲಕಿ ನಡೆದ ಘಟನೆಯ (Sexual harassment) ಬಗ್ಗೆ ಪಾಲಕರಿಗೆ ತಿಳಿಸಿದ್ದಾಳೆ. ವಿಷಯ ತಿಳಿದ ಪಾಲಕರು ತಕ್ಷಣವೇ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾರೆ. ಸಂಪೂರ್ಣ ವಿಷಯ (Sexual harassment) ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಆರ್ಯ ಅವರ ಗಮನಕ್ಕೆ ಬಂದಾಗ, ಅವರು ತಕ್ಷಣ ಇಜ್ಜತ್‌ನಗರ ಪೊಲೀಸ್ ಠಾಣೆ ಮತ್ತು ವಿಶೇಷ ಕಾರ್ಯಾಚರಣೆ ಗುಂಪಿನ ಎಸ್‌ಒಜಿ ಜಂಟಿ ತಂಡಗಳನ್ನು ರಚಿಸಿದರು.
ತಂಡಗಳು CCTV ದೃಶ್ಯಾವಳಿಗಳನ್ನು ಸರಿಯಾಗಿ ಪರಿಶೀಲಿಸಿದ ನಂತರ ಆರೋಪಿತನು ಇಜ್ಜತ್‌ನಗರದ ಮಠ್ ಕಮಲ್ ನಯನ್‌ಪುರದ ನಿವಾಸಿ ಮುಸಬ್ಬೀರ್ ಎಂದು, ಆತ ವೃತ್ತಿಯಲ್ಲಿ ಹಾಲು ಮಾರಾಟಗಾರನಾಗಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿದೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜೂನ 24 ರ ದ್ವಾದಶ ರಾಶಿಗಳ ಫಲಾಫಲ.!
ಆರೋಪಿಯನ್ನು ಹುಡುಕುವಾಗ ಪೊಲೀಸ್ ತಂಡ ಕರ್ಮಚಾರಿ ನಗರ ಚೌಕಿ ಪ್ರದೇಶದ ಕಾಶ್ಮೀರಿ ಕೋಥಿಯ ಹಿಂಭಾಗದಲ್ಲಿರುವ ತೋಟವನ್ನು ತಲುಪಿದಾಗ ಮುಸಬ್ಬೀರ್ ಅಲ್ಲಿ ಕಂಡುಬಂದನು. ಆತನನ್ನು (Sexual harassment ಮಾಡಿದ ವ್ಯಕ್ತಿ) ಬಂಧಿಸಲು ತೆರಳಿದ ಪೊಲೀಸರ ಮೇಲೆಯೇ ಗುಂಡು ಹಾರಿಸಿ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಈ ವೇಳೆ ಪ್ರತಿದಾಳಿಯಾಗಿ ಪೊಲೀಸರು ಆತನ ಬಲಗಾಲಿಗೆ ಗುಂಡು ಹಾರಿಸಿ ಬಂದಿಸಿದ್ದು, ಸದ್ಯ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಲೈಂಗಿಕ (Sexual) ಕಿರುಕುಳದ CCTV ದೃಶ್ಯಾವಳಿ :
Location: इज्जतनगर, बरेली (यूपी) pic.twitter.com/D2ISmSgFDZ
— Piyush Rai (@Benarasiyaa) June 23, 2025