Saturday, July 12, 2025

Janaspandhan News

HomeJobSilk : ಕರ್ನಾಟಕ ರೇಷ್ಮೆ ಇಲಾಖೆಯಲ್ಲಿ 2,400+ ಹುದ್ದೆಗಳಿಗೆ ನೇಮಕಾತಿ.!
spot_img
spot_img

Silk : ಕರ್ನಾಟಕ ರೇಷ್ಮೆ ಇಲಾಖೆಯಲ್ಲಿ 2,400+ ಹುದ್ದೆಗಳಿಗೆ ನೇಮಕಾತಿ.!

- Advertisement -

ಜನಸ್ಪಂದನ ನ್ಯೂಸ್‌, ನೌಕರಿ : ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗಾಗಿ ಕರ್ನಾಟಕ ರೇಷ್ಮೆ (Silk) ಇಲಾಖೆ ಒಂದು ಗುಡ್‌ ನ್ಯೂಸ್‌ ನೀಡಿದೆ.  ಕರ್ನಾಟಕ ರೇಷ್ಮೆ (Silk) ಇಲಾಖೆಯಲ್ಲಿ ಖಾಲಿ ಇರುವ 2,492 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ (Silk Deportment) ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

ಇದನ್ನು ಓದಿ : Reels : ಮಳೆ ನಿಂತ ಮೇಲೆ ರೀಲ್ಸ್‌ಗೆ ಮುಂದಾದ ಯುವತಿ ; ಮುಂದೆನಾಯ್ತು.?
ಕರ್ನಾಟಕ ರೇಷ್ಮೆ (Silk) ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಮಾಹಿತಿ :
  • ಇಲಾಖೆ ಹೆಸರು : ಕರ್ನಾಟಕ  ರೇಷ್ಮೆ (Silk) ಇಲಾಖೆ.
  • ಹುದ್ದೆಗಳ ಸಂಖ್ಯೆ : 2,492.
  • ಹುದ್ದೆಗಳ ಹೆಸರು : ರೇಷ್ಮೆ ನಿರೀಕ್ಷಕರುಪ್ರದರ್ಶಕರುಚಾಲಕರುಸಹಾಯಕರುಗ್ರೂಪ್ – D ಹುದ್ದೆಗಳು ಮತ್ತು ಇತರೇ.
  • ಉದ್ಯೋಗ ಸ್ಥಳ :  ಕರ್ನಾಟಕ
  • ಅಪ್ಲಿಕೇಶನ್ ಮೋಡ್ : Online ಮೋಡ್
ಹುದ್ದೆಗಳ ಹೆಸರು ಮತ್ತು ಸಂಖ್ಯೆ :
  •  ಸಹಾಯಕ ಇಂಜಿನಿಯರ್ (ಸಿವಿಲ್) / ಜೂನಿಯರ್ ಎಂಜಿನಿಯರ್ – 003
  • ರೇಷ್ಮೆ ಸಹಾಯಕ ನಿರ್ದೇಶಕರು – 154
  • ರೇಷ್ಮೆ ವಿಸ್ತರಣೆ ಅಧಿಕಾರಿ – 184
  • ರೇಷ್ಮೆ ನಿರೀಕ್ಷಕರು –  538
  • ಪ್ರಥಮ ದರ್ಜೆ ಸಹಾಯಕರು – 190
  • ಸ್ಟೆನೋಗ್ರಾಫರ್ – 010
  • ರೇಷ್ಮೆ ಪ್ರದರ್ಶಕರು –  642
  • ದ್ವಿತೀಯ ದರ್ಜೆ ಸಹಾಯಕರು – 072
  • ರೇಷ್ಮೆ ಪ್ರಚಾರಕರು – 240
  • ಚಾಲಕರು – 084
  • ಅಟೆಂಡಂಟ್ –  025
  • ಗ್ರೂಪ್ – D (ಸೈನಿಕ ಹುದ್ದೆಗಳು) – 350
ಇದನ್ನು ಓದಿ : Belagavi : ರಾಸಲೀಲೆ ಆರೋಪ ; ಸ್ವಾಮೀಜಿಯನ್ನು ಮಠದಿಂದ ಹೊರ ಹಾಕಿದ ಭಕ್ತರು.!
ವೇತನ ಶ್ರೇಣಿ :
  • ಹುದ್ದೆಗಳಿಗೆ ಅನುಗುಣವಾಗಿ ಕರ್ನಾಟಕ ರೇಷ್ಮೆ (Silk) ಇಲಾಖೆ ಅಧಿಕೃತ ಅಧಿಸೂಚನೆಗಳ ಪ್ರಕಾರ  ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ವೇತನ ನೀಡಲಾಗುವುದು.
  • ಸಹಾಯಕ ಎಂಜಿನಿಯರ್ (ಸಿವಿಲ್) / ಜೂನಿಯರ್ ಎಂಜಿನಿಯರ್ – ತಿಂಗಳಿಗೆ ರೂ. 69250/- ರಿಂದ ರೂ. 1,34,200/-
  • ರೇಷ್ಮೆ ಸಹಾಯಕ ನಿರ್ದೇಶಕರು : ತಿಂಗಳಿಗೆ ರೂ. 69,250/- ರಿಂದ ರೂ. 1,34,200/-
  • ರೇಷ್ಮೆ ವಿಸ್ತರಣೆ ಅಧಿಕಾರಿ : ತಿಂಗಳಿಗೆ ರೂ. 65,950/- ರಿಂದ ರೂ. 1,24,900/-
  • ರೇಷ್ಮೆ ನಿರೀಕ್ಷಕರು : ತಿಂಗಳಿಗೆ ರೂ. 44,425/- ರಿಂದ ರೂ. 83,700/-
  • ಪ್ರಥಮ ದರ್ಜೆ ಸಹಾಯಕ : ತಿಂಗಳಿಗೆ ರೂ. 44,425/- ರಿಂದ ರೂ. 83,700/-
  • ಸ್ಟೆನೋಗ್ರಾಫರ್ : ತಿಂಕ್ಕೆ ರೂ. 44,425/- ರಿಂದ ರೂ. 83,700/-
  • ರೇಶ್ಮೆ ಪ್ರದರ್ಶಕರು : ತಿಂಗಳಿಗೆ ರೂ. 37,500/- ರಿಂದ ರೂ. 76,100/-
  • ದ್ವಿತೀಯ ದರ್ಜೆ ಸಹಾಯಕ : ತಿಂಗಳಿಗೆ ರೂ. 34,100/- ರಿಂದ ರೂ. 67,600/-
  • ರೇಶ್ಮೆ ಪ್ರಚಾರಕರು : ತಿಂಗಳಿಗೆ ರೂ. 34,100/- ರಿಂದ ರೂ. 67,600/-
  • ಚಾಲಕರು : ತಿಂಗಳಿಗೆ ರೂ. 34,100/- ರಿಂದ ರೂ. 67,600/-
  • ಅಟೆಂಡಂಟ್ : ತಿಂಗಳಿಗೆ ರೂ. 31,775/- ರಿಂದ ರೂ. 61,300/-
  • ಗ್ರೂಪ್ – D (ಸೈನಿಕ ಹುದ್ದೆ) : ತಿಂಗಳಿಗೆ ರೂ. 27,000/- ರಿಂದ ರೂ. 46,675/-
ವಯೋಮಿತಿ :

ಕರ್ನಾಟಕ ರೇಷ್ಮೆ (Silk) ಇಲಾಖೆ  ನೇಮಕಾತಿ ಅಧಿಸೂಚನೆಯ ಪ್ರಕಾರ,

  • ಕನಿಷ್ಠ 18 ವರ್ಷ ಮತ್ತು
  • ಗರಿಷ್ಠ 40 ವರ್ಷ ಮೀರಬಾರದು.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜೂನ 23 ರ ದ್ವಾದಶ ರಾಶಿಗಳ ಫಲಾಫಲ.!
ವಯೋಮಿತಿ ಸಡಿಲಿಕೆ :
  • OBC ಅಭ್ಯರ್ಥಿಗಳಿಗೆ : 3 ವರ್ಷ.
  • SC/ST ಅಭ್ಯರ್ಥಿಗಳಿಗೆ : 5 ವರ್ಷ ಮತ್ತು
  • ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ : 10 ವರ್ಷ ಸಡಿಲಿಕೆ.
ಶೈಕ್ಷಣಿಕ ಅರ್ಹತೆ :
  • ಸಹಾಯಕ ಎಂಜಿನಿಯರ್ (ಸಿವಿಲ್)/ಜೂನಿಯರ್ ಎಂಜಿನಿಯರ್ : ಸಿವಿಲ್ ಎಂಜಿನಿಯರಿಂಗ್ ಪದವಿ (Degree) , ಬಿಇ ಅಥವಾ ಬಿ.ಟೆಕ್.
  • ರೇಷ್ಮೆ ಸಹಾಯಕ ನಿರ್ದೇಶಕರು : ಎಂ.ಎಸ್ಸಿ (M̤Sc)
  • ರೇಷ್ಮೆ ವಿಸ್ತರಣಾ ಅಧಿಕಾರಿ : ಪದವಿ (Degree), B.Sc, ಸ್ನಾತಕೋತ್ತರ ಡಿಪ್ಲೊಮಾ
  • ರೇಷ್ಮೆ ನಿರೀಕ್ಷಕ : ಪದವಿ (Degree), ಸ್ನಾತಕೋತ್ತರ ಡಿಪ್ಲೊಮಾ
  • ಪ್ರಥಮ ದರ್ಜೆ ಸಹಾಯಕ (FDA) : ಪದವಿ (Degree).
  • ಸ್ಟೆನೋಗ್ರಾಫರ್ : ಪದವಿ (Degree).
  • ರೇಷ್ಮೆ ಪ್ರದರ್ಶಕ : ಪದವಿ (Degree).
  • ಎರಡನೇ ವಿಭಾಗ ಸಹಾಯಕ (SDA):
  • ರೇಷ್ಮೆ ಪ್ರವರ್ತಕ : ಪದವಿ (Degree).
  • ವಾಹನ ಚಾಲಕ : ಅಧಿಸೂಚನೆ ನಿಯಮಗಳ ಪ್ರಕಾರ
  • ಪರಿಚಾರಕ : SSLC.
  • ಗುಂಪು-ಡಿ (ಸೈನಿಕ) : SSLC.
ಆಯ್ಕೆ ವಿಧಾನ :
  • ಲಿಖಿತ ಪರೀಕ್ಷೆ ಮತ್ತು ಸಂದರ್ಶನ (Written test and interview) – ರೇಷ್ಮೆ (Silk) ಇಲಾಖೆಯ ನಿಯಮನುಸಾರ.
ಅರ್ಜಿ ಶುಲ್ಕ :
  • ಈ ಹುದ್ದೆಗಳಿಗೆ ಎಲ್ಲಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.
ಇದನ್ನು ಓದಿ : Crocodile : ನದಿಯಲ್ಲಿ ಎಮ್ಮೆಗೆ ಸ್ನಾನ ಮಾಡಿಸುತ್ತಿದ್ದಾಗ ಬಾಲಕನ ಎಳೆದೊಯ್ದಿ ಮೊಸಳೆ.!
ಅರ್ಜಿ ಸಲ್ಲಿಸುವುದು ಹೇಗೆ?
  • ಕೆಳಗಿನ ಅಧಿಕೃತ Website ಗೆ ಭೇಟಿ ನೀಡಿ ಮತ್ತು ಸೂಚನೆಯನ್ನು Download ಮಾಡಿ.
  • ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ.
  • ಕೆಳಗಿನ ಆನ್‌ಲೈನ್ ಅಪ್ಲಿಕೇಶನ್‌ಗಳ Link ನ್ನು ಕ್ಲಿಕ್ ಮಾಡಿ.
  • ಕೊಟ್ಟಿರುವ Form ನ್ನು ಸರಿಯಾಗಿ ಭರ್ತಿ ಮಾಡಿ.
  • ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.
  • ಮತ್ತೊಮ್ಮೆ ಪರಿಶೀಲಿಸಿ ಮತ್ತು Formನ್ನು ಸಲ್ಲಿಸಿ.
  • ಕೊನೆಯದಾಗಿ ಅರ್ಜಿಯನ್ನು ಮುದ್ರಿಸಲು (Print) ಮರೆಯಬೇಡಿ.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ಶೀಘ್ರದಲ್ಲಿ ಪ್ರಕಟ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಶೀಘ್ರದಲ್ಲಿ ಪ್ರಕಟ
ಪ್ರಮುಖ ಲಿಂಕ್‌ಗಳು :
ನೋಟಿಫಿಕೇಶನ್ (ಅಧಿಸೂಚನೆ):  ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: sericulture.karnataka.gov.in

Disclaimer : The above given information is available On online, candidates should check it properly before applying. This is for information only.

ಆರೋಪಿಗಳು ಪರಾರಿಯಾಗಲು ಸಹಕರಿಸಿದ ಆರೋಪ ; PSI ಸೇರಿ ಇಬ್ಬರು Suspended.!

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಆರೋಪಿಗಳು ಪರಾರಿಯಾಗಲು ಜೂನ್ 12ರಂದು ಸಹಕರಿಸಿದ ಹಿನ್ನಲೆಯಲ್ಲಿ ಇಬ್ಬರು ಪೊಲೀಸರನ್ನು ಅಮಾನತು (Suspended) ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಇಬ್ಬರು ಆರೋಪಿಗಳು ಪೊಲೀಸರ ಕಣ್ಣೆದುರೇ ಅದರಲ್ಲೂ ಒಬ್ಬಾತ ಸೂಟ್​ಕೇಸ್​ ಹಿಡಿದು ಪರಾರಿಯಾಗುತ್ತಾನೆ. ಈ ಘಟನೆ ನಡೆಯುವಾಗ ಆರೋಪಿಗಳು ಕಣ್ಮುಂದಿದ್ದರೂ ಸಹ ಅವರನ್ನು ಹಿಡಿಯದೇ ಅವರಿಗೆ ಓಡಿ ಹೋಗಲು ಅವಕಾಶ ಮಾಡಿಕೊಟ್ಟ ಹಿನ್ನಲೆಯಲ್ಲಿ ಇಬ್ಬರು ಪೊಲೀಸರನ್ನು ಸೇವೆಯಿಂದ ಅಮಾನತು (Suspended) ಮಾಡಲಾಗಿದೆ.

ಜೂನ್ 12ರಂದು ಆರೋಪಿಗಳಿಬ್ಬರು ಬೈಕ್​​ನಲ್ಲಿ ಕುಳಿತು ಮಾತನಾಡುತ್ತಿರುತ್ತಾರೆ ಅದೇ ಸಮಯದಲ್ಲಿ ಗಸ್ತು ಬಂದ ಇಬ್ಬರು ಪೊಲೀಸರು ಆರೋಪಿಗಳನ್ನು ನೋಡಿಯೂ ನೋಡದಂತೆ ಇರುತ್ತಾರೆ. ಈ ದೃಶ್ಯ ಸ್ಥಳದಲ್ಲಿದ್ದ CCTV ಕ್ಯಾಮರಾದಲ್ಲಿ ಸೆರೆಯಾಗಿದೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜೂನ 23 ರ ದ್ವಾದಶ ರಾಶಿಗಳ ಫಲಾಫಲ.!

ಜೂನ್ 12, 2025 ರಂದು ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ನಂತರ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು (Suspended) ಗೊಳಿಸಲಾಗಿದೆ. ವಿಡಿಯೋದಲ್ಲಿ ಕೆಲವೇ ಕ್ಷಣಗಳ ಮೊದಲು ಬೇಕಾಗಿರುವ ಶಂಕಿತ ವ್ಯಕ್ತಿಗೆ ಸ್ಥಳದಿಂದ ಹೊರಹೋಗಲು ಅವಕಾಶ ನೀಡುತ್ತಿರುವುದನ್ನು ಈ ಘಟನೆ ತೋರಿಸಿದೆ. ಈ ಘಟನೆಯು ಆಂತರಿಕ ತನಿಖೆಗೆ ನಾಂದಿ ಹಾಡಿದ್ದು, ಔಪಚಾರಿಕ ಪ್ರಕರಣ ದಾಖಲಿಸಲಾಗಿದೆ.

ಬೇಕಾಗಿರುವ ಶಂಕಿತ ಅನೂಪ್ ಶುಕ್ಲಾ ಮತ್ತು ಇನ್ನೋರ್ವ ಬೈಕ್‌ ಒಂದರ ಮೇಲೆ ಕುಳಿತು ನಗುತ್ತಾ ಸಂಭಾಷಣೆಯಲ್ಲಿ ತೋಡಗಿರುತ್ತಾರೆ. ಈ ವೇಳೆ ಗಸ್ತು ಬೈಕ್‌ನಲ್ಲಿ ಬಂದ ಇಬ್ಬರು ಪೊಲೀಸ್ ಸಿಬ್ಬಂದಿಗಳು ಅವರನ್ನು ನೋಡಿಯೂ ನೋಡದ ಹಾಗೆ ಇರುತ್ತಾರೆ.

ಈ ವೇಳೆ ಶುಕ್ಲಾ ಟ್ರಾಲಿ ಬ್ಯಾಗ್‌ನೊಂದಿಗೆ ಇದ್ದ ಸ್ಥಳದಿಂದ ಹೊರಟು ಹೊಗುವುದನ್ನು ದೃಶ್ಯದಲ್ಲಿ ಕಾಣಬಹುದಾಗಿದೆ. ಇದೇ ಸಮಯಕ್ಕೆ ಅಂದರೆ ಆರೋಪಿತರು ಹೋದ ಕೆಲವೇ ಸೆಕೆಂಡುಗಳ ನಂತರ, ನವಾಬ್‌ಗಂಜ್ ಮತ್ತು ಕೊಹ್ನಾ ಪೊಲೀಸ್ ಠಾಣೆಗಳ ಅಧಿಕಾರಿಗಳು ಅದೇ ಸ್ಥಳಕ್ಕೆ ಆಗಮಿಸಿ ಹೊರಟುಹೋದ ಶಂಕಿತನನ್ನು ಬೆನ್ನಟ್ಟುತ್ತಿದ್ದಾರೆ ಎಂದು ದೃಶ್ಯ ತೋರುತ್ತದೆ.

ಪೊಲೀಸ್ ಕೇಂದ್ರ ಉಪ ಆಯುಕ್ತ ಶ್ರವಣ್ ಕುಮಾರ್ ಸಿಂಗ್, ವಿಡಿಯೋ ತ್ವರಿತ ಕ್ರಮಕ್ಕೆ ಕಾರಣವಾಯಿತು ಎಂದು ದೃಢಪಡಿಸಿದರು. “ಮೊದಲ ನೋಟಕ್ಕೆ, ವೈರಲ್ ವಿಡಿಯೋದಲ್ಲಿ ಸಬ್-ಇನ್‌ಸ್ಪೆಕ್ಟರ್ ಮತ್ತು ಕಾನ್‌ಸ್ಟೆಬಲ್ ಪಾತ್ರ ಅನುಮಾನಾಸ್ಪದವಾಗಿ ಕಾಣುತ್ತದೆ” ಎಂದು ಸಿಂಗ್ ಹೇಳಿದರು.

- Advertisement -
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments