ಜನಸ್ಪಂದನ ನ್ಯೂಸ್, ಮೂಡಲಗಿ : ಬೆಳಗಾವಿ (Belagavi) ಜಿಲ್ಲೆಯ ಮೂಡಲಗಿ ತಾಲೂಕಿನ ಶಿವಾಪೂರ(ಹ) ಗ್ರಾಮದ ಅಡವಿ ಸಿದ್ದೇಶ್ವರ ಮಠದ ಸ್ವಾಮೀಜಿಯ ಪ್ರಕರಣಕ್ಕೆ ಸಂಬಂದಿಸಿದಂತೆ ಮೂಡಲಗಿ ಪೊಲೀಸ್ ಠಾಣೆ ಮುಂದೆ ಕೆಲಕಾಲ ಗೊಂದಲ ಸೃಷ್ಟಿಯಾದ ಘಟನೆ ಮಂಗಳವಾರ ತಡರಾತ್ರಿ ಸಂಭವಿಸಿದೆ.
ಮೂಡಲಗಿ (Belagavi) ತಾಲ್ಲೂಕಿನ ಶಿವಾಪೂರ(ಹ) ಗ್ರಾಮದ ಅಡವಿ ಸಿದ್ದೇಶ್ವರ ಮಠದ ಸ್ವಾಮೀಜಿಯ ಪ್ರಕರಣದ ಹಿನ್ನಲೆ ಮಂಗಳವಾರದಂದು ಮಠದಲ್ಲಿ ದುರ್ಗಪ್ಪ ಎಂಬಾತ ಸ್ವಾಮೀಜಿ ಬೆಂಬಲಿಗರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಆರೋಪದ ಮೇಲೆ ಕೂಡಲೇ ಆತನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಪೊಲೀಸ್ ಠಾಣೆಗೆ ತಡರಾತ್ರಿ ಗ್ರಾಮಸ್ಥರು ಜಮಾಯಿಸಿದ್ದಾರೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜೂನ 24 ರ ದ್ವಾದಶ ರಾಶಿಗಳ ಫಲಾಫಲ.!
ಸುಮಾರು 200 ಜನ ಏಕಾಏಕಿ ಜಮಾಯಿಸಿದ ಗ್ರಾಮಸ್ಥರು, ಪೊಲೀಸ್ ಅಧಿಕಾರಿಗಳೊಂದಿಗೆ ವಾಗ್ವಾದ ಏರ್ಪಟ್ಟಿತು.
ಕೊಡಲೇ ಪಿಎಸ್ಐ ರಾಜು ಪೊಜೇರಿ ಗ್ರಾಮಸ್ಥರಿಗೆ ತಿಳಿ ಹೇಳಿ ಕಳುಹಿಸಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.
ಘಟನೆ ವಿವರ :
ಸ್ವಾಮೀಜಿ ವಿರೋಧ ಗುಂಪು ಮಂಗಳವಾರದಂದು ಶ್ರೀ ಮಠದಲ್ಲಿ ಸೇರಿದರು, ಆದರೆ ದುರ್ಗಪ್ಪ ಎಂಬಾತ ವ್ಯಕ್ತಿ ಸ್ವಾಮೀಜಿ ಬೆಂಬಲಿಗ ಮಹಿಳೆಯರಿಗೆ ಹಾಗೂ ಪುರುಷರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ. ಸ್ವಾಮೀಜಿ ಬೆಂಬಲಿಗರಿಗೆ ಮತ್ತಷ್ಟು ರೊಚ್ಚಿಗೆಬ್ಬಿಸಿದೆ.
ಶಾಸಕರ ಕಚೇರಿಯಲ್ಲಿ ಸಭೆ :
ಮಂಗಳವಾರದಂದು ಸ್ವಾಮೀಜಿ ಬೆಂಬಲಿಗರು ಗೋಕಾಕದ ಶಾಸಕರ ಕಚೇರಿಗೆ ಆಗಮಿಸಿದ ವೇಳೆ ಮೂಡಲಗಿ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಜೂ. 26ರಂದು ಗೋಕಾಕದ ಶೂನ್ಯ ಸಂಪಾದನ ಮಠದಲ್ಲಿ ಶ್ರೀಗಳ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ತೀರ್ಮಾನಿಸಲಾಗುವುದೆಂದು ತಿಳಿ ಹೇಳಿದ್ದಾರೆ.
Sexual : ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ ; ಆರೋಪಿಗೆ ಗುಂಡೇಟು.!
ಜನಸ್ಪಂದನ ನ್ಯೂಸ್, ಡೆಸ್ಕ್ : ಕೋಚಿಂಗ್‌ನಿಂದ ಮನೆಗೆ ಹಿಂತಿರುಗುತ್ತಿದ್ದ ಶಾಲಾ ವಿದ್ಯಾರ್ಥಿನಿಯ ಮೇಲೆ ಲೈಂಗಿಕ (Sexual) ದೌರ್ಜನ್ಯ ಎಸಗಿದ ಆರೋಪಿ ಯುವಕನನ್ನು ಪೊಲೀಸರು ಗುಂಡೇಟು ಕೊಟ್ಟು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಶಾಲಾ ವಿದ್ಯಾರ್ಥಿನಿಯ ಮೇಲೆ ಲೈಂಗಿಕ (Sexual) ದೌರ್ಜನ್ಯ ಎಸಗಿದ ಆರೋಪಿ ಯುವಕನನ್ನು ಹಾಲು ಮಾರಾಟ ಮಾಡುತ್ತಿರುವ ಮಠ್ ಕಮಲ್ ನಯನ್‌ಪುರ ನಿವಾಸಿಯಾದ ಮುಸಬ್ಬೀರ್ ಎಂದು ಗುರುತಿಸಲಾಗಿದೆ. ಕೋಚಿಂಗ್‌ನಿಂದ ಮನೆಗೆ ಹಿಂತಿರುಗುತ್ತಿದ್ದಾಗ ಈ ಘಟನೆ (Sexual harassment) ನಡೆದಿದೆ ಎಂದು ಹೇಳಲಾಗುತ್ತಿದೆ.
ಸಂಸ್ರಸ್ತೆ ಅಪ್ರಾಪ್ತ ಬಾಲಕಿ ಕೋಚಿಂಗ್‌ನಿಂದ ಶಾಲಾ ಡ್ರೆಸ್‌ನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ಎದುರಿನಿಂದ ಬಂದ ಬೈಕ್ ಸವಾರನೊಬ್ಬ ಆಕೆಯ ಖಾಸಗಿ ಭಾಗವನ್ನು ಮುಟ್ಟಿ ಲೈಂಗಿಕ (Sexual) ದೌರ್ಜನ್ಯ ಎಸಗಿದ್ದಾನೆ. ನಂತರ ಅಶ್ಲೀಲ ಕೃತ್ಯಗಳನ್ನು ಮಾಡುತ್ತಾ ಅಶ್ಲೀಲ ಹೇಳಿಕೆಗಳನ್ನು ನೀಡಿ ಪರಾರಿಯಾಗಿದ್ದಾನೆ. ರಸ್ತೆಯಲ್ಲಿರುವ ಮನೆಯ ಹೊರಗೆ ಅಳವಡಿಸಿರುವ CCTV ಕ್ಯಾಮರಾದಲ್ಲಿ ಇಡೀ ಘಟನೆಯ ದೃಶ್ಯ ಸೆರೆಯಾಗಿದೆ.
ಇದನ್ನು ಓದಿ : Crocodile : ನದಿಯಲ್ಲಿ ಎಮ್ಮೆಗೆ ಸ್ನಾನ ಮಾಡಿಸುತ್ತಿದ್ದಾಗ ಬಾಲಕನ ಎಳೆದೊಯ್ದಿ ಮೊಸಳೆ.!
ಮನೆಗೆ ಬಂದು ಬಾಲಕಿ ನಡೆದ ಘಟನೆಯ (Sexual harassment) ಬಗ್ಗೆ ಪಾಲಕರಿಗೆ ತಿಳಿಸಿದ್ದಾಳೆ. ವಿಷಯ ತಿಳಿದ ಪಾಲಕರು ತಕ್ಷಣವೇ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾರೆ. ಸಂಪೂರ್ಣ ವಿಷಯ (Sexual harassment) ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಆರ್ಯ ಅವರ ಗಮನಕ್ಕೆ ಬಂದಾಗ, ಅವರು ತಕ್ಷಣ ಇಜ್ಜತ್‌ನಗರ ಪೊಲೀಸ್ ಠಾಣೆ ಮತ್ತು ವಿಶೇಷ ಕಾರ್ಯಾಚರಣೆ ಗುಂಪಿನ ಎಸ್‌ಒಜಿ ಜಂಟಿ ತಂಡಗಳನ್ನು ರಚಿಸಿದರು.
ತಂಡಗಳು CCTV ದೃಶ್ಯಾವಳಿಗಳನ್ನು ಸರಿಯಾಗಿ ಪರಿಶೀಲಿಸಿದ ನಂತರ ಆರೋಪಿತನು ಇಜ್ಜತ್‌ನಗರದ ಮಠ್ ಕಮಲ್ ನಯನ್‌ಪುರದ ನಿವಾಸಿ ಮುಸಬ್ಬೀರ್ ಎಂದು, ಆತ ವೃತ್ತಿಯಲ್ಲಿ ಹಾಲು ಮಾರಾಟಗಾರನಾಗಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿದೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜೂನ 24 ರ ದ್ವಾದಶ ರಾಶಿಗಳ ಫಲಾಫಲ.!
ಆರೋಪಿಯನ್ನು ಹುಡುಕುವಾಗ ಪೊಲೀಸ್ ತಂಡ ಕರ್ಮಚಾರಿ ನಗರ ಚೌಕಿ ಪ್ರದೇಶದ ಕಾಶ್ಮೀರಿ ಕೋಥಿಯ ಹಿಂಭಾಗದಲ್ಲಿರುವ ತೋಟವನ್ನು ತಲುಪಿದಾಗ ಮುಸಬ್ಬೀರ್ ಅಲ್ಲಿ ಕಂಡುಬಂದನು. ಆತನನ್ನು (Sexual harassment ಮಾಡಿದ ವ್ಯಕ್ತಿ) ಬಂಧಿಸಲು ತೆರಳಿದ ಪೊಲೀಸರ ಮೇಲೆಯೇ ಗುಂಡು ಹಾರಿಸಿ ಪರಾರಿಯಾಗಲು ಪ್ರಯತ್ನಿಸಿದ್ದಾನೆ.
ಈ ವೇಳೆ ಪ್ರತಿದಾಳಿಯಾಗಿ ಪೊಲೀಸರು ಆತನ ಬಲಗಾಲಿಗೆ ಗುಂಡು ಹಾರಿಸಿ ಬಂದಿಸಿದ್ದು, ಸದ್ಯ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.