Sunday, September 8, 2024
spot_img
spot_img
spot_img
spot_img
spot_img
spot_img
spot_img

Special news : ಹುಬ್ಬುಗಳ ಆಕಾರದಿಂದ ತಿಳಿಯಬಹುದು ನಮ್ಮ ವ್ಯಕ್ತಿತ್ವ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಕಣ್ಣುಗಳು ಮಾನವನಲ್ಲಿ ಮೊದಲ ಆಕರ್ಷಣೆಯಾಗಿದೆ. ಆ ಕಣ್ಣುಗಳ ಮೇಲಿನ ಹುಬ್ಬುಗಳು (Eyebrow) ಎಲ್ಲರಿಗೂ ಒಂದೇ ರೀತಿಯಲ್ಲಿ ಇರುವುದಿಲ್ಲ. ಕೆಲವರಿಗೆ ಹುಬ್ಬುಗಳು ಕೂಡಿಕೊಂಡಿರುತ್ತವೆ. ಕೆಲವರಿಗೆ ದಪ್ಪ, ಇನ್ನೂ ಕೆಲವರಿಗೆ ನೇರವಾಗಿ ಇಲ್ಲವೇ ಬಾಗಿದ ರೀತಿಯಲ್ಲಿ ಇರುತ್ತವೆ.

ಕಣ್ಣಿನ ಹುಬ್ಬುಗಳಿಂದಲೂ ನಮ್ಮ ವ್ಯಕ್ತಿತ್ವವನ್ನು (personality) ತಿಳಿಯಬಹುದಂತೆ. ಇದು ಅಚ್ಚರಿ ಎನಿಸಿದರೂ ಸತ್ಯ ಎನ್ನುತ್ತವೆ ಅಧ್ಯಯನಗಳು. ಕಣ್ಣಿನ ಹುಬ್ಬುಗಳು ಮತ್ತು ವ್ಯಕ್ತಿತ್ವದ ನಡುವೆ ನೇರ ಸಂಬಂಧದ ಬಗ್ಗೆ ಸಂಶೋಧನೆಗಳನ್ನು ನಡೆಸಲಾಗಿದೆ.

ನಿಮ್ಮ ಇಷ್ಟಗಳು, ನೀವು ಇಷ್ಟ ಪಡೆದಿರುವುದು, ನಿಮ್ಮ ಆದ್ಯತೆಗಳು, ನೀವು ಹೇಗೆ ಯೋಚಿಸುತ್ತೀರಿ, ನಿಮ್ಮ ಭಾವನೆಗಳು, ಬುದ್ಧಿವಂತಿಕೆಯನ್ನು (wisdom) ಅಳೆಯಲು ನಿಮ್ಮ ಹುಬ್ಬಗಳು ಸೂಪರ್ ಸಾಧನವಾಗಿವೆ ಎನ್ನಬಹುದು.

ಇದನ್ನು ಓದಿ : ಪಬ್ಲಿಕ್‌ನಲ್ಲಿಯೇ ಜಾರಿತು ನಟಿಯ clothes ; ಮೂರು ಬಿಟ್ಟವರು ಊರಿಗೆ ದೊಡ್ಡವರೆಂದ ನೆಟ್ಟಿಗರು.!

* ದಪ್ಪ ಹುಬ್ಬು :
ನೀವು ದಪ್ಪ ಹುಬ್ಬುಗಳನ್ನು ಹೊಂದಿದ್ದರೆ ಪ್ರಾಕ್ಟಿಕಲ್ ಆಗಿ ನೀವು ವಿಷಯಗಳನ್ನು ಪ್ರಶಂಸಿಸುತ್ತೀರಿ. ಜನರು ನಿಮ್ಮ ಹೇಗೆ ನೋಡುತ್ತಾರೆ ಎಂಬುದರ ಬಗ್ಗೆ ನೀವು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ನಿಮ್ಮ ಆಲೋಚನೆಗಳು, ಆದರ್ಶಗಳಿಗೆ ಅನುಗುಣವಾಗಿ ಜೀವನವನ್ನು (Live according to ideals) ನಡೆಸುತ್ತೀರಿ.

ನೀವು ಸ್ವತಂತ್ರ ಮನೋಭಾವವನ್ನು ಹೊಂದಿರುತ್ತೀರಿ ಎಂಬುದನ್ನು ಇದು ತಿಳಿಸುತ್ತದೆ. ಜೀವನವನ್ನು ಪೂರ್ಣವಾಗಿ ಜೀವಿಸುವುದು ನಿಮ್ಮ ಪ್ರಧಾನ ಕಾಳಜಿಯಾಗಿರುತ್ತದೆ (care).

* ತೆಳು ಹುಬ್ಬು :
ತೆಳ್ಳಗಿನ ಹುಬ್ಬುಗಳನ್ನು ಹೊಂದಿದ್ದರೆ ನಿಮ್ಮಲ್ಲಿ ಆತ್ಮವಿಶ್ವಾಸದ ಕೊರತೆ (Lack of confidence) ಇದೆ ಎಂದರ್ಥ. ಹಾಗಾಗಿ ನಿರ್ಧಾರ ಕೈಗೊಳ್ಳುವಾಗ ಹೊಯ್ದಾಟ ಉಂಟಾಗುತ್ತದೆ, ಆಗ ಇತರರ ಸಹಾಯ ಪಡೆಯಲು ಇಚ್ಛಿಸುತ್ತೀರಿ.

ಧೈರ್ಯವೂ ಕಡಿಮೆ ಇರುವುದರಿಂದ, ಒಂದು ನಿರ್ದಿಷ್ಟ ಸನ್ನಿವೇಶಕ್ಕೆ ತೆರೆದುಕೊಳ್ಳಲು ಕೂಡ ಬಹಳಷ್ಟು ಯೋಚಿಸುತ್ತೀರಿ. ಆದರೆ ಈ ಅತಿಯಾದ ಆಲೋಚನೆಯಿಂದಾಗಿಯೇ ನಿಮಗೆ ಒತ್ತಡ ಉಂಟಾಗುತ್ತಿರುತ್ತದೆ.

* ಕಮಾನು ಹುಬ್ಬು :
ಕಮಾನಿನಾಕಾರದ ಹುಬ್ಬುಗಳು ಇದ್ದರೆ ಯಾರನ್ನಾದರೂ ಹೃದಯಕ್ಕೆ ಹತ್ತಿರವಾಗಿಸಿಕೊಳ್ಳಲು ನಿಮಗೆ ಸಾಕಷ್ಟು ಸಮಯ ಬೇಕು. ಅಲ್ಲದೆ, ನಿಮ್ಮ ಭಾವನಾತ್ಮಕ ಸ್ಪಂದನೆ ಸಶಕ್ತ ಮತ್ತು ಪ್ರಭಾವಶಾಲಿಯಾಗಿರುತ್ತದೆ (Impressive). ನೀವು ಮಹತ್ವಾಕಾಂಕ್ಷೆ, ತಾಳ್ಮೆ ಮತ್ತು ನಾಯಕತ್ವದ ಗುಣಗಳನ್ನು (Leadership qualities) ಹೊಂದಿದ್ದೀರಿ.

ನೀವು ಯಾವ ವಿಷಯವನ್ನು ನೇರವಾಗಿ ತಿಳಿಸದೆ ಸಿಹಿಲೇಪಿಸಿ ಹೇಳಿಕೆಯ ಮೂಲಕ ಇತರರಿಗೆ ತಲುಪಿಸಲು ಇಷ್ಟಪಡುತ್ತೀರಿ.

ಇದನ್ನು ಓದಿ : Health : ಒಂದು ತಿಂಗಳು ಅನ್ನ ಸೇವಿಸುವುದನ್ನು ಬಿಟ್ಟರೆ ಏನಾಗುವುದು.?

* ನೇರ ಹುಬ್ಬು :
ನಿಮ್ಮ ಹೃದಯವು ಭಾವನೆಗಳೆಡೆಗೆ ಜಾರುವುದು ನಿಮಗೆ ಸ್ಪಷ್ಟವಾಗಿ ಅನುಭವಕ್ಕೆ ಬರುತ್ತಿರುತ್ತದೆ, ಅದನ್ನು ಮೀರಲೆಂದೇ ನೀವು ಎಚ್ಚರಿಕೆಯಿಂದ ಈ ನಡೆಯನ್ನು ರೂಢಿಸಿಕೊಂಡಿರುತ್ತೀರಿ. ಆದರೂ ನೀವು ಭಾವನೆಗಳಿಗೆ ಪ್ರಾಧಾನ್ಯ ಕೊಡುವಂಥ ಬೌದ್ಧಿಕ ಶಕ್ತಿಯುಳ್ಳ ವ್ಯಕ್ತಿ (A man of intellectual power).

ನಿಮ್ಮಲ್ಲಿರುವ ಹಠ, ನೇರವಂತಿಕೆ ನಿಮ್ಮನ್ನು ಕಾಪಾಡುವುದು. ನಿಮ್ಮಂತೆಯೇ ಭಾವನಾತ್ಮಕ ಸ್ಥಿರತೆಯುಳ್ಳ (Emotionally stable) ವ್ಯಕ್ತಿಗಳಿಗೆ ಆದ್ಯತೆ ಕೊಡುತ್ತೀರಿ. ನಿಂತಕಾಲಮೇಲೆ ನಿರ್ಧಾರ ತೆಗೆದುಕೊಳ್ಳುವುದು ನಿಮ್ಮ ಸ್ವಭಾವ ಅಲ್ಲ.

ಕೂಡಿದ ಹುಬ್ಬು :
ನೀವು ಕೂಡಿದ ಹುಬ್ಬುಗಳು ಹೊಂದಿದ್ದರೆ, ನಿಮ್ಮ ಕಲ್ಪನೆ, ಸೃಜನಶೀಲತೆಯಿಂದಾಗಿ (creativity) ಜನರು ನಿಮ್ಮೆಡೆ ಆಕರ್ಷಿತರಾಗುತ್ತಾರೆ ಜಗತ್ತು ನಿಮ್ಮನ್ನು ಹೇಗೆ ಗ್ರಹಿಸುತ್ತದೆ ಎನ್ನುವುದರ ಬಗ್ಗೆ ನೀವು ಹೆಚ್ಚು ಯೋಚಿಸಲಾರಿರಿ.

ಮುಕ್ತಸ್ವಭಾವದಿಂದಾಗಿ ಮತ್ತು ಓತಪ್ರೇತವಾಗಿ ಹರಿಯುವ ಆಲೋಚನೆಗಳನ್ನು ಒಂದು ಆಕಾರಕ್ಕೆ ಹಿಡಿದಿಡುವಲ್ಲಿ ನಿಮಗೆ ಸಾಧ್ಯವಾಗಲಾರದು. ಪ್ರಕ್ಷುಬ್ಧ ಭಾವನೆ ಉಂಟುಮಾಡುವಂಥ ಕಾರ್ಯಾಲೋಚನೆಗಳನ್ನು ನೀವು ರೂಪಿಸುತ್ತೀರಿ.

ಅಂತರದ ಹುಬ್ಬು :
ನಿಮ್ಮ ಹುಬ್ಬುಗಳ ನಡುವೆ ಅಂತರ ಹೊಂದಿದ್ದರೆ, ನೀವು ಇತರರಿಗೆ ಬಲುಬೇಗ ಪ್ರಿಯ ವ್ಯಕ್ತಿಗಳಾಗಿ ಬಿಡುತ್ತೀರಿ. ನಿಮ್ಮಲ್ಲಿರುವ ಆಲಿಸುವಿಕೆಯ ಗುಣದಿಂದ ಜನರ ನಂಬಿಕೆಗೆ ಪಾತ್ರವಾಗುತ್ತೀರಿ.

ಇದನ್ನು ಓದಿ : ಮುಂದಿನ 4 ದಿನ ರಾಜ್ಯದ 18ಕ್ಕೂ ಅಧಿಕ ಜಿಲ್ಲೆಗಳಲ್ಲಿ ಭಾರಿ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ.!

ಕೆಲವೊಮ್ಮೆ ನೀವು ಕೈಗೊಂಡ ನಿರ್ಧಾರಗಳು ತಪ್ಪು ಹಾದಿ ಹಿಡಿಯಬಹುದು. ಅದಕ್ಕೆ ಕಾರಣ, ನಿಮ್ಮಲ್ಲಿರುವ ಅತೀಭಾವುಕತನ. ಮುಂದಾಲೋಚನೆ (Forethought) ಇಲ್ಲದೆ ವರ್ತಿಸುವ ಸ್ವಭಾವವೇ ನಿಮ್ಮ ಬದುಕಿನ ಚಲನೆಗೂ ಕಾರಣವಾಗುತ್ತದೆ.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img