ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರಿನ ಹುಳಿಮಾವು ಅಕ್ಷಯ ನಗರದಲ್ಲಿ ನಿತ್ಯ ಅಶ್ಲೀಲ ವೀಡಿಯೋ ತೋರಿಸಿ ಕಿರುಕುಳ ನೀಡುತ್ತಿದ್ದ ಗಂಡನ ನಡೆಗೆ ಬೇಸತ್ತು ಮಹಿಳೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಅನುಷಾ ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : Health : ಸೊಂಟದ ಸುತ್ತಮುತ್ತಲಿನ ಕೊಬ್ಬು ಕರಗಬೇಕಾ? ವಾಕ್ ಮಾಡುವಾಗ ಈ ವಿಧಾನ ಅನುಸರಿಸಿ.
ಶ್ರೀಹರಿ ಹಾಗೂ ಅನುಷಾಗೆ ಮದುವೆಯಾಗಿ 5 ವರ್ಷ ಆಗಿದೆ. ಒಂದು ಮಗು ಕೂಡ ಇತ್ತು. ಪತಿ ಶ್ರೀಹರಿ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ತೋರಿಸಿ ಹೀಗೆ ಸಹಕರಿಸು ಎಂದು ಟಾರ್ಚರ್ ಕೊಡುತ್ತಿದ್ದ. ಶ್ರೀಹರಿಗೆ ಬೇರೆ ಹುಡುಗಿಯರ ಸಹವಾಸ ಇತ್ತು ಎನ್ನಲಾಗಿದೆ. ಅಲ್ಲದೇ ಆಕೆಯ ಮುಂದೆಯೇ ಇನ್ನೊಂದು ಹುಡುಗಿಯ ಜೊತೆ ಸಲುಗೆ ಬೆಳೆಸಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ಹೆಂಡತಿಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ.
ಸಾಲದೆಂಬಂತೆ ಎರಡು ತಿಂಗಳಿಂದ ಡಿವೋರ್ಸ್ ಕೊಡುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತು ಅನುಷಾ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮನೆಯ ವಾಶ್ ರೂಂನಿಂದ ಗಂಡನಿಗೆ ವಿಡಿಯೋ ಕಾಲ್ ಮಾಡುತ್ತಲೇ ಅನುಷಾ ಬೆಂಕಿ ಹಚ್ಚಿಕೊಂಡಿದ್ದಾರೆ. ಬೆಂಕಿ ಹಚ್ಚಿಕೊಳ್ಳುವುದು ನೋಡಿದರೂ ಶ್ರೀಹರಿ ಸುಮ್ಮನಿದ್ದ ಎನ್ನಲಾಗಿದೆ.
ಇದನ್ನು ಓದಿ : ದ್ವಿತೀಯ PUC ಪಾಸಾಗಿದ್ದೀರಾ.? ಗ್ರಾ. ಪಂ.ಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಬೆಂಕಿ ಕೆನ್ನಾಲಿಗೆ ಸುಟ್ಟು ಕರಕಲಾಗಿದ್ದ ಅನುಷಾ ಸಾವು-ಬದುಕಿನ ಮಧ್ಯೆ ಹೋರಾಡಿ ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.