ಜನಸ್ಪಂದನ ನ್ಯೂಸ್, ಡೆಸ್ಕ್ : ಹಿರಿಯರು ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ ಮೇಲೆ ಕೆಲ ಜೋಡಿಗಳು ಕುಟುಂಬಸ್ಥರನ್ನು ತೊರೆದು ಓಡಿ ಹೋಗಿ ಬದುಕು ಕಟ್ಟಿಕೊಳ್ಳುತ್ತಾರೆ.
ಇದನ್ನು ಓದಿ : ಬೆಕ್ಕು, ನಾಯಿ ಸಾಕುವುದಿಲ್ಲ ಈ ಗ್ರಾಮದಲ್ಲಿ; ವಿಷ ಸರ್ಪಗಳೇ ಇಲ್ಲಿ ಸಾಕು ಪ್ರಾಣಿಗಳು.!
ಕೆಲ ಪೋಷಕರು ಮಾತ್ರ ಪ್ರೀತಿಸಿ ಮದುವೆಯಾದ ಮಕ್ಕಳನ್ನು ಮಾತ್ರ ಎಂದಿಗೂ ಒಪ್ಪಿಕೊಳ್ಳಲ್ಲ. ಆದರೆ ಕೆಲವು ಪೋಷಕರು ಆರಂಭದಲ್ಲಿ ಪ್ರೀತಿಯನ್ನು ವಿರೋಧಿಸಿ ಬಳಿಕ ಮಕ್ಕಳ ಬದುಕನ್ನು ಕಂಡು ಮೆಚ್ಚುಗೆ ಸೂಚಿಸಿ ಹತ್ತಿರವಾಗುತ್ತಾರೆ.
ಇನ್ನೂ ಪ್ರೀತಿಗೆ ಸಂಬಂಧಿಸಿದ ಕಥೆಗಳನ್ನಾಧರಿಸಿದ ಹಲವು ಸಿನಿಮಾಗಳು ಹೊರ ಬಂದಿವೆ. ದುರಂತದಲ್ಲಿ ಅಂತ್ಯವಾದ, ಸಂತೋಷದಲ್ಲಿ ಕೊನೆಯಾದ ಸಿನಿಮಾಗಳಿವೆ. ಆದರೆ ಈಗಂತೂ ಯಾರ ಬಳಿಯೂ ಮೂರು ಗಂಟೆ ಕುಳಿತು ಸಿನಿಮಾ ನೋಡಲು ಸಮಯವೂ ಇಲ್ಲ.
ಇದನ್ನು ಓದಿ : ಮೊಬೈಲ್ ಬಳಸಿದ್ರೆ ಬರುತ್ತದೆಯೇ ಬ್ರೈನ್ Cancer.?
30 ರಿಂದ 40 ಸೆಕೆಂಡ್ ರೀಲ್ಸ್‌ಗಳೇ ಟ್ರೆಂಡ್ ಆಗುತ್ತಿರುತ್ತವೆ. ಈ ನಡುವೆ ಶಾರ್ಟ್ಸ್ ಮೂವಿ ಕಾನ್ಸೆಪ್ಟ್ ಸಹ ವೀಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತವೆ.
ವೈರಲ್ ವಿಡಿಯೋದಲ್ಲಿರುವ ದೃಶ್ಯ :
ರೈಲ್ವೆ ನಿಲ್ದಾಣದ ಮೇಲ್ಸೇತುವೆ ಮೇಲೆ ಯುವಕ ಮತ್ತು ಯುವತಿ ಕೈ ಕೈ ಹಿಡಿದು ಓಡಿಕೊಂಡು ಬರುತ್ತಿರುತ್ತಾರೆ. ಮೆಟ್ಟಿಲು ಇಳಿದು ಇಬ್ಬರು ಹೋಗಬೇಕಿರುವ ರೈಲು ಪ್ಲಾಟ್‌ಫಾರಂನಲ್ಲಿ ಬರುತ್ತಾರೆ.
ಇದನ್ನು ಓದಿ : ದ್ವಿತೀಯ PUC ಪಾಸಾಗಿದ್ದೀರಾ.? ಗ್ರಾ. ಪಂ.ಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಹುಡುಗ ರೈಲು ಹತ್ತಿ, ಯುವತಿಗೆ ನೀನು ಒಳಗೆ ಬಾ ಎಂದು ಹೇಳುತ್ತಾನೆ. ಆದ್ರೆ ಯುವತಿ ಒಂದು ಕ್ಷಣ ಏನೋ ನೆನಪಾಗಿ ಅಲ್ಲಿಯೇ ನಿಂತು ಬಿಡುತ್ತಾಳೆ. ಆಗ ಯುವತಿಗೆ ಬಾಲ್ಯದಲ್ಲಿ ತಂದೆ ಹೆಗಲ ಮೇಲೆ ಕುಳಿತು ಹೋಗುವ ನೆನಪು ಕಣ್ಮುಂದೆ ಬರುತ್ತದೆ.
ಎಲ್ಲರನ್ನೂ ಬಿಟ್ಟು ತಾನೂ ಈ ರೀತಿ ಪ್ರೀತಿಸಿದವನ ಜೊತೆ ಹೋಗುತ್ತಿರುವುದು ತಪ್ಪು ಎಂದು ತಿಳಿದು ಕಣ್ಣೀರು ಹಾಕುತ್ತಾ ಅಲ್ಲಿಂದ ಹೋಗುತ್ತಾಳೆ. ಹುಡುಗ ಎಷ್ಟೇ ಕೂಗಿದರೂ ಹಿಂದಿರುಗಿಯೋ ನೋಡದೇ ಯುವತಿ ನಿಲ್ದಾಣದಿಂದ ಹೊರಡುತ್ತಾಳೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.
ಇದನ್ನು ಓದಿ : Video : ಅಪಹರಿಸಿದವನ ಬಿಟ್ಟು ಬರಲ್ಲೊಪ್ಪದ ಮಗು : ಆತ ಕಿಡ್ನ್ಯಾಪರ್ ಅಲ್ಲ, ಹಾಗಾದ್ರೆ ಮತ್ಯಾರು.?
@tourwithvikas ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ವಿಡಿಯೋದಲ್ಲಿ ತೆಗೆದುಕೊಳ್ಳುವ ನಿರ್ಧಾರ ಎಲ್ಲ ಅಪ್ಪಂದಿರ ಹೃದಯಕ್ಕೆ ಇಷ್ಟವಾಗಿದೆ. ಅಪ್ಪ-ಮಗಳ ಬಾಂಧವ್ಯ ತುಂಬಾ ವಿಭಿನ್ನ.
ಆ ಪ್ರೀತಿಯನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು. ಪ್ರೀತಿ ಎಂದು ಪೋಷಕರನ್ನು ಬಿಟ್ಟು ಹೋಗುವ ಮುನ್ನ ಒಮ್ಮೆ ಈ ವಿಡಿಯೋ ನೋಡಿ ಎಂದು ಇನ್‌ಸ್ಟಾಗ್ರಾಂ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಈ ವಿಡಿಯೋವನ್ನು 40 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ.
View this post on Instagram