Wednesday, May 22, 2024
spot_img
spot_img
spot_img
spot_img
spot_img
spot_img

Health : ಒಂದು ತಿಂಗಳು ಅನ್ನ ಸೇವಿಸುವುದನ್ನು ಬಿಟ್ಟರೆ ಏನಾಗುವುದು.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಬಹುತೇಕ ಜನರು ಆಹಾರ ಪ್ರಿಯರಿಗೆ ನಿಮ್ಮ ಇಷ್ಟದ ಆಹಾರ ಯಾವುದು ಅಂತ ಕೇಳಿದರೆ ಅನ್ನ (Rice) ಅಂತ ಹೇಳ್ತಾರೆ.

ಅನ್ನಕ್ಕಿಂತ ಉತ್ತಮ ಹಾಗೂ ಆರಾಮದಾಯಕ ಊಟ ಮತ್ತೊಂದಿಲ್ಲ. ಏಷ್ಯಾದಲ್ಲಿ ಅಕ್ಕಿ ಪ್ರಧಾನವಾಗಿರುವುದರಿಂದ ಇಲ್ಲಿ ಅನ್ನವನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಇದನ್ನು ಓದಿ : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ದಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ ; ನಾಳೆಯೇ (ದಿ.25) ಕೊನೆಯ ದಿನ.!

ತುಂಬಾ ಜನರು ಅನ್ನ ತಿನ್ನಲು ಬಯಸುತ್ತಾರೆ. ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್‌ಗಳು ಸಮೃದ್ಧವಾಗಿವೆ. ಇದರಲ್ಲಿ ಪ್ರೊಟೀನ್, ಕೊಬ್ಬು ಹಾಗೂ ಕ್ಯಾಲ್ಸಿಯಂ ಕೂಡ ಇರುತ್ತದೆ.

ಅತಿಯಾಗಿ ಅನ್ನ (Rice) ತಿನ್ನುವುದರಿಂದ ದೇಹದಲ್ಲಿ ಕಾರ್ಬೋಹೈಡ್ರೇಟ್ ಹೆಚ್ಚಾಗುತ್ತದೆ. ಇದರಿಂದಾಗಿ ನಿದ್ರಾಹೀನತೆ (Insomnia) ಮತ್ತು ಆಲಸ್ಯ ಕಾಡುತ್ತದೆ. ಅನ್ನವನ್ನು ಅತಿಯಾಗಿ ತಿನ್ನುವುದ್ರಿಂದ ನಿಮ್ಮ ತೂಕ (Weight) ಕೂಡ ಹೆಚ್ಚಾಗುತ್ತದೆ. ಪ್ರತಿಯೊಬ್ಬರು ಅನ್ನ ಸೇವನೆ ಮಾಡುವುದಲ್ಲ ಎನ್ನುತ್ತಾರೆ ವೈದ್ಯರು.

ಒಂದು ತಿಂಗಳು ಅನ್ನ ಬಿಟ್ಟರೆ ಏನಾಗುವುದು.?

* ಹೆಚ್ಚು ಕಾರ್ಬೋಹೈಡ್ರೇಟ್ ಸೇವನೆ ಮಾಡಿದಾಗ ಅದನ್ನು ಜೀರ್ಣಿಸಿಕೊಳ್ಳಲು (digest) ಹೆಚ್ಚು ಸಕ್ಕರೆ ಅಗತ್ಯವಿರುತ್ತದೆ. ಆಗ ದೇಹದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಇದರಿಂದ ಮಧುಮೇಹ ಸಮಸ್ಯೆ ಕಾಡುತ್ತದೆ.

* ಇದಲ್ಲದೆ ಥೈರಾಯ್ಡ್ ಮತ್ತು ಪಿಸಿಒಡಿ ಇರುವವರಿಗೂ ಇದು ಒಳ್ಳೆಯದಲ್ಲ. ದೇಹದಲ್ಲಿ ಸಕ್ಕರೆ ಮಟ್ಟ ನಿಯಂತ್ರಣಕ್ಕೆ (For sugar level control) ಬರಬೇಕು ಅಂದ್ರೆ ಯಾವುದೇ ಖಾಯಿಲೆಯಿಂದ ಬಳಲುವ ಜನರು ಅಕ್ಕಿಯನ್ನು ಕಡಿಮೆ ಪ್ರಮಾಣದಲ್ಲಿ ತಿನ್ನಬೇಕು. ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು.

* ತೂಕ ನಿಯಂತ್ರಣ ಈಗಿನ ದಿನಗಳಲ್ಲಿ ದೊಡ್ಡ ಸವಾಲಾಗಿದೆ. ಜನರು ತೂಕ ಕಡಿಮೆ ಮಾಡಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಾರೆ. ಆಹಾರದಲ್ಲೂ ಕಂಟ್ರೋಲ್ ಮಾಡುವುದು ಬಹಳ ಮುಖ್ಯವಾಗುತ್ತದೆ. ತೂಕ ಕಡಿಮೆ ಮಾಡಿಕೊಳ್ತೇನೆ ಎನ್ನುವವರು ಒಂದು ತಿಂಗಳ ಕಾಲ ಅನ್ನವನ್ನು ಬಿಟ್ಟುಬಿಡಿ.

* ಅಕ್ಕಿ ವೇಗವಾಗಿ ಕ್ಯಾಲೊರಿಗಳನ್ನು ಹೆಚ್ಚಿಸುತ್ತದೆ. ಚಯಾಪಚಯವನ್ನು (metabolism) ನಿಧಾನಗೊಳಿಸುತ್ತದೆ. ಇದರಿಂದಾಗಿ ಹೊಟ್ಟೆಯ ಕೊಬ್ಬು ಮತ್ತು ಬೊಜ್ಜು ಹೆಚ್ಚಾಗುತ್ತದೆ. ತೂಕ ಕಡಿಮೆ ಮಾಡಿಕೊಳ್ಳಬೇಕು ಅಂದ್ರೆ ಎಷ್ಟೇ ಇಷ್ಟವಿದ್ರೂ ಒಂದು ತಿಂಗಳು ಅನ್ನವನ್ನು ಬಿಟ್ಟು ಬಿಡಬೇಕು.

* ಅನ್ನ ಸೇವನೆ ಮಾಡುವುದ್ರಿಂದ ಆಲಸ್ಯ ಹೆಚ್ಚಾಗುತ್ತದೆ. ನಿದ್ರೆ ಹೆಚ್ಚಾಗಿ ಬರುತ್ತದೆ. ಇದ್ರಿಂದಾಗಿ ಕೆಲಸ ಮಾಡಲು ಆಸಕ್ತಿ ಇರೋದಿಲ್ಲ. ಆದ್ರೆ ಅನ್ನ ಸೇವನೆಯನ್ನು ಬಿಟ್ಟಲ್ಲಿ ನಿಮ್ಮ ದೇಹ ಮೊದಲಿಗಿಂತ ಸಕ್ರಿಯವಾಗುತ್ತದೆ (active). ಆಲಸ್ಯ ಕಡಿಮೆಯಾಗುತ್ತದೆ. ಕುಳಿತಲ್ಲಿ ನಿಂತಲ್ಲಿ ನಿದ್ರೆ ಬರುವುದಿಲ್ಲ. ಈ ಹಿಂದೆ ಅನುಭವಿಸಿರದ ಅನೇಕ ಬದಲಾವಣೆಗಳನ್ನು ನೀವು ಕಾಣಬಹುದು.

* ಇನ್ನೂ ದೇಹದ ಭಾರ ಕಡಿಮೆಯಾದಂತೆ ಭಾಸವಾಗುತ್ತದೆ. ಇದ್ರಿಂದ ನೀವು ಹೆಚ್ಚು ವ್ಯಾಯಾಮ (exercise) ಮಾಡಬಹುದು. ನಿಮ್ಮ ಮೆದುಳು ಹೆಚ್ಚು ಆಕ್ಟಿವ್ ಆಗುವ ಕಾರಣ ವೇಗವಾಗಿ ನೀವು ಕೆಲಸ ಮಾಡುತ್ತೀರಿ.

ಇದನ್ನು ಓದಿ : Belagavi : ಮಹಿಳೆ ವಿವಸ್ತ್ರ ಗೊಳಿಸಿ ಹಲ್ಲೆ ನಡೆಸಿದ ಪ್ರಕರಣ ; ಆರೋಪಿಗಳ ಬಿಡುಗಡೆ, ಪಟಾಕಿ ಸಿಡಿಸಿ ಸಿಹಿ ತಿನ್ನಿಸಿ ಸಂಭ್ರಮಾಚರಣೆ .!

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
spot_img
- Advertisment -spot_img